ವಿಷಯದ ವಿವರಗಳಿಗೆ ದಾಟಿರಿ

Posts tagged ‘ರೇಡಿಯೋ’

15
ಮೇ

ಹ್ಯಾಮ್ ರೇಡಿಯೋ

– ಭರತೇಶ ಅಲಸಂಡೆಮಜಲು

Radioಜೀವನವೆಷ್ಟೇ ಸುಖ ನೆಮ್ಮದಿಯಿಂದಿದ್ದರೂ ಜೀವನದ ಸೃಜನಾತ್ಮಕತೆಗೆ ಗೊಬ್ಬರವ ನೀಡಿ ಸಮಯದ ಸದುಪಯೋಗದ ಜೊತೆಗೆ ಮನೋಚೈತನ್ಯ, ಮನೋವಿಕಾಸಕ್ಕೆ ದ್ರವ್ಯವಾಗಿ ಪೋಷಿಸುವುದು ನಮ್ಮ ಹವ್ಯಾಸಗಳು. ಹೌದು ವೈಜ್ಞಾನಿಕ ಹವ್ಯಾಸಗಳಲ್ಲಿ ಹ್ಯಾಮ್ ರೇಡಿಯೋವು ಒಂದು. ಇದು ರೇಡಿಯೋ ಸಾಧನದ ಮೂಲಕ ವಿಶ್ವ ಗೆಳೆತನವನ್ನು ಸಾಧಿಸುವುದು, ಭಾಷೆ, ದೇಶ, ಲಿಂಗ, ಧರ್ಮ,ಅಂತಸ್ತು ಮೀರಿ ಸಭಿರುಚಿಯ ಅಪರಿಚಿತರನ್ನು ಸ್ನೇಹಿತರನ್ನಾಗಿಸುವುದು. ವ್ಯಕ್ತಿಗತ, ಸಮೂಹ ಅಥವಾ ಸಂಸ್ಥೆಯೊಂದು ತನ್ನ ಸ್ವಂತ ಸ್ಥಾಪಿತ ರೇಡಿಯೋ ನೆಲೆಯಿಂದ ಮತ್ತೊಂದು ರೇಡಿಯೋ ಹವ್ಯಾಸಿಯೊಂದಿಗೆ ಸಂಪರ್ಕ ಸಾಧಿಸಿ ಸ್ನೇಹ ಬಯಸುವ ಹವ್ಯಾಸಿಗಳ ಬಳಗ ಅಂದರೆ ನಮ್ಮ ರೇಡಿಯೋದಿಂದ ಗೆಳೆಯನ ರೇಡಿಯೋಗೆ ಕರೆ ಮಾಡುವುದು.
ಇದು ದ್ವಿಮುಖಿ ಸಂವಹನ ಮಾಧ್ಯಮ ಇದರಲ್ಲಿ ಒಂದು ಪ್ರಸರಕವಾದರೆ(Transmitter) ಮತ್ತೊಂದು ಪಡೆಯಕ(Receiver) ಪ್ರತಿಯೊಬ್ಬ ಹವ್ಯಾಸಿಯು ತನ್ನದೇ ಅದ ಕರೆ ಗುರುತು ಸಂಖ್ಯೆ ಹೊಂದಿರುತ್ತಾನೆ.  ಇದು ವ್ಯಕ್ತಿಗತ ಮನರಂಜನೆ, ಹಾಸ್ಯ, ವಾಣಿಜ್ಯೇತರ ಸಂದೇಶ, ನಿಸ್ತಂತು ಪ್ರಯೋಗ, ನಿಶ್ಚಿತವರದಿಗಾರಿಕೆ, ಹವಾಮಾನ, ವಾಹನ ಒತ್ತಡ, ತುರ್ತು ಸಂದೇಶ ರವಾನೆ, ಸ್ವತರಬೇತಿ, ಚರ್ಚೆ, ಸಂವಾದ ಮೂಲಕ ಸ್ವಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ಹವ್ಯಾಸಗಳಲ್ಲೊಂದು. ಇತರ ಎಲ್ಲಾ ದೂರ ಸಂಪರ್ಕ ಮಾಧ್ಯಮಗಳು ನಿಷ್ಕ್ರಿಯಗೊಂಡಾಗ ಅತ್ಯುಪಯೋಗವಾಗುವ ಎಕೈಕ ಸಂಪರ್ಕ ಸಾಧನವೆಂಬ ಹೆಗ್ಗಳಿಕೆಯು ಇದಕ್ಕಿದೆ.

ಭೂಪಂಕ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಗಘಗಳ ಸಂದರ್ಭದಲ್ಲಿ ಎಲ್ಲ ಸಂಪರ್ಕ ಸಾಧನಗಳು ನೆಲಕಚ್ಚಿದಾಗ ಯಾವುದೇ ಮಾಧ್ಯಮಗಳ ಹಂಗಿಲ್ಲದೇ ಪೋಲಿಸ್, ಮಿಲಿಟರಿ ವ್ಯವಸ್ಥೆಗಳ ಜೊತೆ ಕೈಜೋಡಿಸಿ ಮಾಹಿತಿ ಕಲೆಹಾಕಿ ಸಾಮಾನ್ಯರ ಪಾಲಿನ ಬಂಧುವಾಗಿ ಸಹಾಯ ಮಾಡಬಲ್ಲುದು.

Read more »

26
ಮಾರ್ಚ್

ರೇಡಿಯೋ ಪುರಾಣ

– ಭರತೇಶ ಅಲಸಂಡೆಮಜಲು

ರೇಡಿಯೋರೇಡಿಯೋ ಅದೆನೋ ಆಯಾತಕಾರದ ಮಾತನಾಡುವ ಪೆಟ್ಟಿಗೆ. ನಮ್ಮ ಮನೆಯ ಸುರಕ್ಷಿತ ಜಾಗದಲ್ಲಿ ಪುಟಾಣಿಗಳಾದ ನಮಗೆ ಎಟುಕದ ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಾಗಿ ಕಪಾಟಿನ ಮೇಲೆ ತಪಸ್ಸು ಮಾಡುತ್ತಾ ಕುಳಿತಿರುತಿತ್ತು. ಮನೆಯಲ್ಲಿ ಯಾರು ಮೊದಲು ಎದ್ದೇಳುತ್ತಾರೋ ಅವರು ರೇಡಿಯೊವನ್ನು ಚಾಲಿಸುವವರು. ಸಮಯ ಬೆಳಗ್ಗೆ 6 ಗಂಟೆ ಮೊದಲು ಕೊಯೋ ಎಂದು ಅರೆದುತ್ತಾ ಸದ್ದು ಮಾಡಿದರೆ 5:55 ಮಿನಿಟಿಗಾಗುವಾಗ ಅದೆನೋ ವಿಶೇಷ ಗುರುತು ಸಂಗೀತ(Signature ಟ್ಯೂನ್) ಕಾರ್ಯಕ್ರಮ  ಮುನ್ಸೂಚನೆಗಿರುವ ವಾದ್ಯಪ್ರಕಾರದ ಧ್ವನಿ ಬದಲಾಗುವುದು. ಸಮಯ 6 ಭಜಿಸಿತೆಂದರೆ ವಂದೇ ಮಾತರಂನೊಂದಿಗೆ ದಿನಚರಿ ಶುರು…

ಅಜ್ಜನಿಂದ ಬಳುವಳಿಯಾಗಿ ಬಂದಿದ್ದ ರೇಡಿಯೋ ನಮ್ಮದು, ಅದರ ಕೈಗೊಂದು ಉದ್ದ ಲಾಡಿ ಅಲ್ಲಿ ಇಲ್ಲಿ ನೇತಾಡಿಸಲು… ಅಪರೂಪಕ್ಕೆ ನನ್ನ ತಮ್ಮ ಬೀರ್ಯದಿಂದ ಬೊಂಡ ತೆಗೆದುಕೊಡುವುದ್ದಕ್ಕಾಗಿಯೋ, ಭರಣಿಯಲ್ಲಿ ಇದ್ದ ತಿಂಡಿ ನೋಡಿಯೋ ಹಠದಿಂದ ಅರಚುವುದು… ಮತ್ತೆ ಸಮಾಧಾನವಾಗಲು ಅಜ್ಜನ ರೇಡಿಯೋವೇ ಬೇಕಿತ್ತು. ತನ್ನ ಕುತ್ತಿಗೆಗೆ ಕಟ್ಟಿಕೊಂಡು ಮನೆಯೊಳಗೆ ಹೊರಗೆ ಓಡಾಡಿ ಮಂಕಟವಾಗುತ್ತಿದ್ದ ,ಅಗಾಗ ಕೋಪದಿಂದ ಉಂಬಿ ಕೆಳಗೆ ಹಾಕಿ, ಕೇಳದಂತೆಯು ಮಾಡುತಿದ್ದ.  ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ಪೀಟಿಲು,

Read more »

13
ಜುಲೈ

ಫೀವರ್ ಗೆ ಹಿಂದಿ ಜ್ವರ – ಎಚ್ಚೆತ್ತುಕೊಳ್ಳಲು ಸಕಾಲ !

-ವಸಂತ್ ಶೆಟ್ಟಿ

ಎಂದಿನಂತೆ ಕಚೇರಿಗೆ ಹೋಗ್ತಾ ಎಫ್.ಎಮ್ ಹಾಕಿದ್ರೆ ಅವಕ್ಕಾದೆ. 104% ಬೊಂಬಾಟ್ ಕನ್ನಡ ಹಾಡುಗಳು ಅಂತೆಲ್ಲ ನಮ್ಮ ಮೆಚ್ಚುಗೆ ಗಳಿಸಿದ್ದ ಫೀವರ್ ಎಫ್.ಎಮ್ ಕನ್ನಡ ಹಾಡಿಗೆ ಸೋಡಾ ಚೀಟಿ ಕೊಟ್ಟು ಕೇವಲ ಹಿಂದಿ ಹಾಡುಗಳನ್ನು ಹಾಕೋಕೆ ಶುರು ಮಾಡಿದ್ರು. ಒಂದ್ ಸಲಿ ಹಾಕಿರೋ ಸ್ಟೇಶನ್ ಸರಿಗಿದೆಯಾ ಅಂತ ನೋಡ್ಕೊಂಡೆ. ಸರಿಯಾಗೇ ಇದೆ, ಆದರೆ ಬೊಂಬಾಟ್ ಕನ್ನಡ ವಾಹಿನಿಯಲ್ಲಿ ಹಿಂದಿ ದೇವತೆಯನ್ನು ಪ್ರತಿಷ್ಟಾಪಿಸಿಯಾಗಿತ್ತು. ಸರಿ ಯಾವುದಕ್ಕೂ ಒಂದ್ ಸಲಿ ಫೀವರ್ ಎಫ್.ಎಮ್ ಅನ್ನೇ ಸಂಪರ್ಕಿಸಿ ಯಾಕ್ರಪ್ಪ ಹೀಗೆ ಅಂತ ಕೇಳೊಣ ಅಂತ ಅವರ ಫೇಸ್ ಬುಕ್ ಪುಟದಲ್ಲಿ ಒಬ್ಬ ಕೇಳುಗನಾಗಿ ವಿಚಾರಿಸಿದ್ರೆ ಸಿಕ್ಕ ಉತ್ತರ: “We have changed the sound of the station”, “Music has no language” “Hindi is our national language” ಅನ್ನೋ ಹಸಿ ಸುಳ್ಳಿನ ಕಾಗಕ್ಕ-ಗುಬ್ಬಕ್ಕನ ಕತೆಗಳು. ಇದನ್ನು ಪ್ರತಿಭಟಿಸಿ ಗ್ರಾಹಕರಾಗಿ ನಮ್ಮ ಆಯ್ಕೆ ಕನ್ನಡ, ಅದನ್ನು ಕೊಡದ ವಾಹಿನಿಗೆ ಬೆಂಗಳೂರಿನ ಮಾರುಕಟ್ಟೆಯೇ ಬುದ್ದಿ ಕಲಿಸುತ್ತೆ ಅಂತ ಹೇಳಿದೆ. ಅದಿರಲಿ, ಫೀವರ್ ಎಫ್.ಎಮ್ ನದ್ದು ಒಂದು ಉದಾಹರಣೆಯಷ್ಟೇ. ಇವತ್ತು ನಮ್ಮ ನಾಡಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಈ ನೆಲದ ನುಡಿಯನ್ನು ಬದಿಗೊತ್ತಿ ಪ್ರತಿ ಹಂತದಲ್ಲೂ ವಲಸೆ ಬಂದ ಯಾರೋ ನಾಲ್ಕು ಜನರಿಗಾಗಿ ವ್ಯವಸ್ಥೆಯೆಲ್ಲ ಕಟ್ಟಬೇಕು, ವ್ಯವಸ್ಥಯೆಲ್ಲ ಇರಬೇಕು ಅನ್ನುವಂತೆ ವರ್ತಿಸುವ ವಲಸಿಗರಿಗೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಈ ವ್ಯವಸ್ಥೆಗೆ ಏನೆನ್ನಬೇಕು. ಯಾಕೆ ಹಾಗ್ ಹೇಳಿದೆ ಅನ್ನೋದನ್ನ ಒಂದ್ ನಾಲ್ಕು ಉದಾಹರಣೆ ಜೊತೆ ಹೇಳ್ತಿನಿ.

  • ಬೆಂಗಳೂರಿನ ಟ್ರಾಫಿಕ್ ಪೋಲಿಸರಿಗೆ (ಬಿಟಿಪಿ) ಹಿಂದಿ/ಇಂಗ್ಲಿಷ್ ಬರಲ್ಲ. ಅದರಿಂದ ಎಷ್ಟು ತೊಂದರೆಯಾಯ್ತು ಗೊತ್ತಾ ಅಂತ ಒಂದಿಷ್ಟು ಜನ ಬಿಟಿಪಿಯ ಫೇಸ್ ಬುಕ್ ತಾಣದಲ್ಲಿ ಹೋಗಿ ಗೋಳು ತೋಡಿಕೊಳ್ಳುತ್ತಾರೆ. ಯಾರಪ್ಪ ಈ ನಾಲ್ಕು ಜನರು ಅಂದ್ರೆ ಅದೇ ಅನ್ನ ಅರಸಿ ಬೆಂಗಳೂರಿಗೆ ವಲಸೆ ಬಂದ ಮಹನೀಯರು. ವಲಸೆ ಬಂದ ನಾಡಿನ ವ್ಯವಸ್ಥೆ ತನಗೆ ಅನುಕೂಲವಾಗುವಂತಿರಬೇಕು, ತನಗೆ ಚೂರೇ ಚೂರು ಕಷ್ಟವಾದರೂ ಅದನ್ನು ಸಹಿಸಲು ಆಗದು ಅನ್ನುವ ಈ ಜನರ ಮನಸ್ಥಿತಿ ಎಂತದ್ದು? ವಲಸಿಗರಿಗಾಗಿಯೇ ನಾಡಿನ ಎಲ್ಲ ವ್ಯವಸ್ಥೆಗಳನ್ನು ಜಗತ್ತಿನಲ್ಲಿ ಎಲ್ಲಿಯಾದರೂ ಕಟ್ಟಿದ್ದಾರಾ?

Read more »