ವಿಷಯದ ವಿವರಗಳಿಗೆ ದಾಟಿರಿ

Posts tagged ‘ಲಿಂಗಾಯತ’

27
ಏಪ್ರಿಲ್

ಮಹಾತ್ಮ ಬಸವಣ್ಣನವರು

 – ಡಾ.ಸಂಗಮೇಶ ಸವದತ್ತಿಮಠ    

(ಕಳೆದ ವರ್ಷ (2019) ನಾನು ಕೆನಡಾ ದೇಶದ ಟೊರೊಂಟೊ ನಗರದಲ್ಲಿ ವೀರಶೈವ ಸಮಾಜ ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಡಿದ ಭಾಷಣದ update ಮಾಡಿದ ಲೇಖನ ಪ್ರಸ್ತುತ ಬಸವಜಯಂತಿ ಸಂದರ್ಭದಲ್ಲಿ ಆಸಕ್ತ ಓದುಗರಿಗಾಗಿ ಇಲ್ಲಿದೆ)  

ಆತ್ಮೀಯ ನಾರ್ತ್ ಅಮೇರಿಕಾ ಟೋರೊಂಟೊ ಚಾಪ್ಟರ್‍ನ ವೀರಶೈವ ಸಮಾಜ ಬಾಂಧವರೆ,

ತಮಗೆಲ್ಲ ಬಸವಜಯಂತಿಯ ಹಾರ್ದಿಕ ಶುಭಾಶಯಗಳು.

ಕನ್ನಡನಾಡಿನ ಸೌಭಾಗ್ಯ ಎಂಬಂತೆ ಬಸವಣ್ಣನವರು ನಮ್ಮ ನಾಡಿನಲ್ಲಿ ಜನ್ಮತಳೆದರು. ಬಸವಣ್ಣನವರ ವ್ಯಕ್ತಿತ್ವ ಅಗಾಧವಾದದು, ಅದ್ಭುತವಾದದ್ದು, ಪರಿಪೂರ್ಣವಾದದ್ದು, ಬಹುಮುಖಿಯಾದದ್ದು. ಅವರನ್ನು ಒಬ್ಬೊಬ್ಬರೂ ಒಂದೊಂದು ದೃಷ್ಟಿಯಿಂದ ನೋಡಿದಾಗ ಅವರವರ ಭಾವದಂತೆ ಅವರು ಗೋಚರಿಸುತ್ತಾರೆ. ಅದೇ ಅವರÀ ವ್ಯಕ್ತಿತ್ವದ ವೈಶಿಷ್ಟ್ಯ.

1.ಒಬ್ಬನೆಂದ – ಬಸವಣ್ಣ ಒಬ್ಬ ರಾಜಕಾರಣಿ. ಹೌದು ಬಿಜ್ಜಳನ ಆಸ್ಥಾನದಲ್ಲಿದ್ದುದರಿಂದ ಅವರು political thinker .

  1. ಒಬ್ಬನೆಂದ – ರಾಜಕಾರಣಿಗಿಂತ ಅವರು ಒಬ್ಬ ಶ್ರೇಷ್ಠ ಅಧಿಕಾರಿ, ಆಡಳಿತಗಾರ. ಹೌದು ಅವರು Prime minister
  2. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ಅಧಿಕಾರಿ ಎನ್ನುವುದಕ್ಕಿಂತ ಅವರೊಬ್ಬ ದಾರ್ಶನಿಕರು. ಹೌದು ಅವರು philosopher. ತತ್ತ್ವಜ್ಞಾನಿ.
  3. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ ಎನ್ನುವುದಕ್ಕಿಂತ ಅವರೊಬ್ಬ ಅಧ್ಯಾತ್ಮಜೀವಿ. ಹೌದು ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು ಅಧ್ಯಾತ್ಮದ ಬೆಳಸು ತೆಗೆದವರು ಬಸವಣ್ಣನವರು.
  4. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ ಎನ್ನುವುದಕ್ಕಿಂತ ಅವರೊಬ್ಬ ಸಮಾಜ ಸುಧಾರಕ. ಹೌದು Social reformer. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಬೇಕಾದುದೆಲ್ಲವನ್ನೂ ಅವರು ಮಾಡಿತೋರಿಸಿದ ಧೀಮಂತ ಸಮಾಜೋದ್ಧಾರಕರು.
  5. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ, ಸಮಾಜ ಸುಧಾರಕ ಎನ್ನುವುದಕ್ಕಿಂತ ಅವರೊಬ್ಬ ಕ್ರಾಂತಿಪುರುಷ. ಹೌದು ತನ್ನ ಕಾಲದಲ್ಲಿ ಇದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಿ ಜನರ ಬದುಕಿನಲ್ಲಿ ಬದಲಾವಣೆಗಳನ್ನು ತಂದವರು.

ಹೀಗೆಯೇ ಜಂಗಮಪ್ರೇಮಿ, ಭಕ್ತಾನುಕಂಪಿ, ಬಾಗಿದ ತಲೆಯ ಮುಗಿದ ಕೈಯ ವಿನಯಶೀಲ, ಸಿಟ್ಟು, ಸೆಡವು, ದ್ವೇಷ, ಅಸೂಯೆ, ಈರ್ಷೆ ಇಲ್ಲದ ಎಲ್ಲರನ್ನೂ ಸಮಾನ ಗೌರವದಿದ ಕಾಣುವವ ಇತ್ಯಾದಿ ಇತ್ಯಾದಿ ಹೇಳುತ್ತಲೇ ಹೋಗಬಹುದು. ಒಂದೊಂದೇ ಮಗ್ಗಲುಗಳನ್ನು ಬಿಡಿಸುತ್ತ ಹೋದಂತೆ ಬಸವಣ್ಣನವರ ಒಟ್ಟು ವ್ಯಕ್ತಿತ್ವದ ಪದರು ಪದರುಗಳು ಬಿಚ್ಚಿಕೊಳ್ಳುತ್ತಲೇ ಹೋಗುತ್ತವೆ. ಎಂತಹ ಅದ್ಭುತ ! ಜಗದ ಅಚ್ಚರಿ ಅಲ್ಲವೆ?

ಮತ್ತಷ್ಟು ಓದು »

7
ಏಪ್ರಿಲ್

ಬುದ್ಧಿಜೀವಿಗಳ ಐಡಿಯಾಲಜಿ ಹಾಗೂ ಭಾರತೀಯ ಸಾಧಕರ ಸಹಜತರ್ಕ

– ವಿನಾಯಕ ಹಂಪಿಹೊಳಿ

“ಕಡಲೆಯು ಬಡವರ ಗೋಡಂಬಿ” ಎಂಬ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಇದರ ಅರ್ಥವೇನು ಎಂಬುದು ಏನೂ ಕಲಿಯದ ಮನುಷ್ಯನಿಗೂ ಬೇಗನೇ ಅರ್ಥವಾಗುತ್ತದೆ. ಈ ಮಾತನ್ನು ನಮ್ಮ ಅಜ್ಜನಿಗೋ, ಅಜ್ಜಿಗೋ ಹೇಳಿ, ಇದರ ಅರ್ಥವೇನು ಎಂದು ಕೇಳಿದರೆ ಅವರು ಏನು ಹೇಳಬಹುದು? “ಗೋಡಂಬಿಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆಯೋ, ಆ ಪ್ರಯೋಜನವನ್ನು ಕಡಲೆಯಿಂದಲೂ ಪಡೆಯಬಹುದು; ಅದೂ ಕೂಡ ಕಡಿಮೆ ಖರ್ಚಿನಲ್ಲಿ.” ಎಂಬ ವಿವರಣೆ ಅವರಿಂದ ಬರಬಹುದು.

ಈಗ ನಾವು ನಮ್ಮ ಹಿರಿಯರ ಬಳಿ, “ಈ ಮಾತಿನಲ್ಲಿ ಬಹಳ ಗಹನ ಅರ್ಥವಿದೆ, ಇದು ಗೋಡಂಬಿಯ ಶ್ರೇಷ್ಠತೆಯನ್ನು ಧಿಕ್ಕರಿಸಿ, ಆಹಾರಗಳೆಲ್ಲವೂ ಸಮಾನ ಎಂಬುದನ್ನು ಸಾರುವ ಅರ್ಥವು ಇದರಲ್ಲಿ ಅಡಗಿದೆ” ಎಂದರೆ ಅವರಿಗೇನು ಅರ್ಥವಾಗಲು ಸಾಧ್ಯ? “ಏನೋಪ್ಪಾ! ಅಷ್ಟೆಲ್ಲ ಗೊತ್ತಿಲ್ಲ” ಎಂದು ನುಣುಚಿಕೊಳ್ಳುತ್ತಾರೆ. ಆಗ ನಮಗೆ “ನಮ್ಮ ಪೂರ್ವಜರಲ್ಲಿ ತಾರ್ಕಿಕ ಸಾಮರ್ಥ್ಯವೇ ಇರಲಿಲ್ಲ. ತರ್ಕಮಾಡಿ ವಿಚಾರಿಸುವ ಬುದ್ಧಿಯೇ ಇಲ್ಲದೇ ಮೌಢ್ಯದಲ್ಲಿ ಇದ್ದರು. ತರ್ಕಬದ್ಧವಾಗಿ ಯೋಚಿಸುವದನ್ನು ನಾವು ರೂಢಿಸಿಕೊಂಡು ಮೌಢ್ಯದಿಂದ ಹೊರಬರಬೇಕು.” ಎಂದೆಲ್ಲ ಭಾವಿಸುತ್ತೇವೆ. ಮತ್ತಷ್ಟು ಓದು »

29
ಮಾರ್ಚ್

ಹಿಂದೂಧರ್ಮದಿಂದ ಹೊರಹೋಗುವುದು ಎಂದರೇನು?

– ರಾಕೇಶ್ ಶೆಟ್ಟಿ

ಅರ್ಧ ಸೌಟು ಲಾರ್ಡ್ ಕರ್ಜನ್,ಒಂದು ಹಿಡಿಯಷ್ಟು ನೆಹರೂ-ಜಿನ್ನಾ ಮಿಶ್ರಣಕ್ಕೆ ಅರ್ಧ ಗ್ಲಾಸು ತುಘಲಕ್-ಟಿಪ್ಪು ಎಂಬ ದ್ರಾವಣ ಬೆರೆಸಿದರೇ ಸಿದ್ದರಾಮಯ್ಯ ತಯಾರಾಗಿಬಿಡುತ್ತಾರೆ. ಲಾರ್ಡ್ ಕರ್ಜನ್ ಸಾಧನೆ ಬಂಗಾಳ ವಿಭಜನೆಯದ್ದು. ಭಾರತ ವಿಭಜನೆಯ ಸಾಧನೆ ಜಿನ್ನದ್ದಾದರೂ,ಕಾಂಗ್ರೆಸ್-ನೆಹರೂ ಯೋಗದಾನವನ್ನು ಮರೆಯುವಂತಿಲ್ಲವಲ್ಲ.ಅದೇ ಸಾಲಿಗೆ ಸೇರುವುದು ಹಿಂದೂ ವಿಭಜನೆ ಮಾಡಿದ ಸನ್ಮಾನ್ಯ ಸಿದ್ದರಾಮಯ್ಯ. ಕರ್ಜನ್ ಬಂಗಾಳ ವಿಭಜನೆಗೆ ಕೈ ಹಾಕಿದ್ದು ಮತೀಯ ಆಧಾರದ ಮೇಲೆ,ಕರ್ಜನ್ ಹಾದಿಯನ್ನೇ ದಾರಿದೀಪವಾಗಿಸಿಕೊಂಡವ ಜಿನ್ನಾ,ದೇಶವನ್ನೇ ಮತೀಯವಾಗಿ ವಿಭಜಿಸಿದರು.ಇಬ್ಬರೂ ನೆಮ್ಮದಿಯಿಂದಿದ್ದ ಸಮಾಜವನ್ನು ವಿಭಜಿಸಿದ್ದು ಅಧಿಕಾರಕ್ಕಾಗಿ. ಈಗ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮತ್ತವರ ಸಚಿವರು ವೀರಶೈವ-ಲಿಂಗಾಯಿತ ವಿಭಜನೆ ಮಾಡಿದ್ದು ಚುನಾವಣೆ ಗೆಲ್ಲಬೇಕೆಂಬ ಏಕೈಕ ಕಾರಣಕ್ಕಾಗಿ.ರಾಜಕೀಯ ಕಾರಣದಾಚೆಗೆ ಈ ವಿಭಜನೆಯಲ್ಲಿರುವುದು ವ್ಯಾವಹಾರಿಕ ಕಾರಣಗಳು, ಅಲ್ಪಸಂಖ್ಯಾತ ಬ್ಯಾಡ್ಜಿನಡಿ ಸಿಗುವ ಸೌಲಭ್ಯಗಳ ಆಧಾರವಷ್ಟೇ.ರಾಜಕೀಯ,ವ್ಯಾವಹಾರಿಕ ಕಾರಣಗಳಿಗಿಂತ , ಈ ವಿಷಯದ ವೈಚಾರಿಕ ಆಯಾಮದ ಬಗ್ಗೆ ಗಮನಹರಿಸುವುದು ಈ ಲೇಖನದ ಉದ್ದೇಶ.

ಲಿಂಗಾಯಿತರು “ಹಿಂದೂ ಧರ್ಮ” ಭಾಗವಲ್ಲ,ಅವರದ್ದು ಪ್ರತ್ಯೇಕ “ಧರ್ಮ” ಎಂದು ನಡೆಯುತ್ತಿರುವ ಈ ಚರ್ಚೆಯಲ್ಲಿ ಮುಖ್ಯವಾಗುವುದು ಹಿಂದೂ+ಧರ್ಮ ಪದಗಳು. ಒಂದು ಉದಾಹರಣೆಯ ಮೂಲಕ ಈ ಚರ್ಚೆಯೊಳಗೆ ಹೋಗೋಣ :ಶಾಲಾ ಪಠ್ಯವೊಂದರಲ್ಲಿ “ಭಾರತ ವೈವಿಧ್ಯಮಯ ದೇಶ.ಇಲ್ಲಿ ಹಿಂದೂ,ಜೈನ,ಬೌದ್ಧ,ಸಿಖ್,ಇಸ್ಲಾಂ,ಕ್ರಿಶ್ಚಿಯಾನಿಟಿ, ಪಾರ್ಸಿ (ಮುಂದೆ ಲಿಂಗಾಯತ ?) ಹೀಗೆ ಬಹಳಷ್ಟು ಧರ್ಮಗಳಿವೆ” ಎಂಬ ಪಾಠವನ್ನು ಕೇಳಿದ ವಿದ್ಯಾರ್ಥಿಯೊಬ್ಬ ಶಾಲೆ ಮುಗಿಸಿಕೊಂಡು ಹೊರಗೆ ಬಂದಾಗ,ಅವನಿಗೆ ಎದುರಾದ ಭಿಕ್ಷುಕನೊಬ್ಬ “ಧರ್ಮ ಮಾಡಪ್ಪ” ಅಂತಾನೇ.ಆಗ ಆ ಪಾಪದ ಹುಡುಗನಿಗೆ “ತರಗತಿಯಲ್ಲಿ ಮೇಷ್ಟ್ರು ಹೇಳಿದ ಅಷ್ಟೊಂದು ವೈವಿಧ್ಯಮಯ “ಧರ್ಮ”ಗಳಲ್ಲಿ ಯಾವ ಧರ್ಮವನ್ನು ಈ ಭಿಕ್ಷುಕನಿಗೆ ಮಾಡಬೇಕು? ಅಷ್ಟಕ್ಕೂ ಧರ್ಮ ಮಾಡುವುದೆಂದರೇನು?” ಎಂಬಿತ್ಯಾದಿ ಪ್ರಶ್ನೆಗಳು ಕಾಡಿದರೆ,ನಮ್ಮ ಬುದ್ಧಿಜೀವಿಗಳ ಬಳಿ ಆ ಹುಡುಗನ ಪ್ರಶ್ನೆಗೆ ಉತ್ತರವಿದೆಯೇ?

ಮತ್ತಷ್ಟು ಓದು »