ವಿಷಯದ ವಿವರಗಳಿಗೆ ದಾಟಿರಿ

Posts tagged ‘ಲೇಖಕ’

11
ಸೆಪ್ಟೆಂ

ಮನದ ಮಾತು

– ಗೀತಾ ಹೆಗ್ಡೆ

ಹಲವು ಮಜಲುಗಳನ್ನೊಳಗೊಂಡ ಕೆಲವರ ಬರಹ ಓದುವಾಗ ನಮಗರಿವಿಲ್ಲದಂತೆ ಇದ್ದಕ್ಕಿದ್ದಂತೆ ನಾನೂ ಏನಾದರೂ ಬರೆಯಬೇಕು ಅನ್ನುವ ತುಡಿತ ಗರಿಗೆದರುವುದು. ಇದು ನನಗೊಬ್ಬಳಿಗೇ ಹೀಗೆ ಅನಿಸುತ್ತಾ?  ಅಥವಾ ಎಲ್ಲರ ಕಥೆ ಹೀಗೆಯೇ ಇರಬಹುದಾ? ಅನ್ನುವ ಜಿಜ್ಞಾಸೆ ನನ್ನಲ್ಲಿ. ಸದಾ ಕಾಡುವ ಪ್ರಶ್ನೆ. ಆಗೆಲ್ಲ ನನಗೆ ಈ ಬಗ್ಗೆ ಬೇರೆಯವರನ್ನೂ ಕೇಳಬೇಕೆನ್ನುವ ಹಂಬಲ ಹುಟ್ಟಿಕೊಂಡರೂ, ಛೆ! ನನ್ನ ಮಾತು ಕೇಳಿ ನಕ್ಕಾರು. ಇವಳಿಗೇನು ಸ್ವಂತ ಬುದ್ಧಿ ಇಲ್ವಾ? ಏನಾದರೂ ಬರಿಬೇಕೆಂದರೆ ಇನ್ನೊಬ್ಬರ ಬರಹ ಓದಿನೇ ಹುಮ್ಮಸ್ಸು ಹುಟ್ಟಬೇಕಾ? ಬರಹ ಅನ್ನೋದು ಯಾರಿಂದಲೂ ಹೇಳಿಸಿಕೊಂಡು ಬರುವುದಲ್ಲಾ. ಸ್ವತಃ ಅವರಲ್ಲಿ ಹುಟ್ಟಬೇಕು. ಜನ್ಮಜಾತವಾಗಿ ದೇವರು ಕೊಟ್ಟ ವರ ಎಂದು ನಂಬಿರುವ ನನಗೆ ಇದೊಂದು ಬಿಡಿಸಲಾಗದ ಒಗಟು. Read more »

Advertisements
18
ಜೂನ್

ಬರಹಗಾರನ ತಲ್ಲಣಗಳು

gururaj kodkani

ಹಚ್ಚಿದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ; ಆರಿಸಿದರೆ ಬೆಂಕಿ ಆರಿಸು, ದೀಪ ಆರಿಸಬೇಡ – ದಿನಕರ ದೇಸಾಯಿ

ತೀರ ಬೇಸರ, ಅವಮಾನದ ಸಂದರ್ಭ, ಖಿನ್ನತೆ ಮನಸ್ಸನ್ನು ಆವರಿಸಿದಾಗ ಆ ಘಳಿಗೆ ನಾನು ಓದಿನ ಮೊರೆ ಹೋಗುತ್ತೇನೆ. ಓದುತ್ತ ಹೋದಂತೆ ಬರಹಗಾರನ ತಲ್ಲಣಗಳೆದುರು ನನ್ನ ವೈಯಕ್ತಿಕ ಸಂಕಟಗಳೆಲ್ಲ ತೀರ ಸಣ್ಣ ಸಂಗತಿಗಳೆನಿಸಿ ಆ ಕ್ಷಣ ಮನಸ್ಸನ್ನು ಆವರಿಸಿದ ಖಿನ್ನತೆಯ ತೆರೆ ಸರಿದು ಹೋಗುತ್ತದೆ. ಬರಹಗಾರರ ಸಮಾಜಮುಖಿ ತಲ್ಲಣಗಳ ಎದುರು ನನ್ನ ವೈಯಕ್ತಿಕ ತಲ್ಲಣಗಳು ಸೋತು ನೆಲಕಚ್ಚುತ್ತವೆ. ಈ ದೃಷ್ಟಿಯಿಂದ ನಾನು ಬರಹಗಾರರಿಗೆ ಮತ್ತು ಅವರೊಳಗಿನ ತಲ್ಲಣಗಳಿಗೆ ಹೆಚ್ಚು ಕೃತಜ್ಞನಾಗಿದ್ದೇನೆ. ನನ್ನನ್ನಾವರಿಸುವ ಬೇಸರದಿಂದ ಹೊರಬರಲು ಓದು ನನಗೆ ಪರ್ಯಾಯ ಮಾರ್ಗವಾಗಿ ತೋರುತ್ತದೆ. ಮನುಷ್ಯ ಸಂಬಂಧಗಳಿಂದ ಮನಸ್ಸು ಘಾಸಿಗೊಂಡಾಗ ನಾನು ಕಾಫ್ಕಾನ ಮೆಟಾಮಾರ್ಫಸಿಸ್ ಕಥೆಯನ್ನು ಮತ್ತೆ ಮತ್ತೆ ಓದಿಗೆ ಕೈಗೆತ್ತಿಕೊಳ್ಳುತ್ತೇನೆ. ಮನುಷ್ಯ ಸಂಬಂಧಗಳು ಸಂದರ್ಭದ ಕೈಗೆ ಸಿಲುಕಿ ಹೇಗೆ ಬದಲಾಗುತ್ತ ಹೋಗುತ್ತವೆ ಎನ್ನುವುದನ್ನು ಗ್ರೇಗರ್‍ನ ಪಾತ್ರದ ಮೂಲಕ ಕಾಫ್ಕಾ ತುಂಬ ಅನನ್ಯವಾಗಿ ಹೇಳುತ್ತಾನೆ. ಕಥೆ ಕಾಲ್ಪನಿಕವಾಗಿದ್ದರೂ ಅಲ್ಲಿ ಮನುಷ್ಯ ಸಂಬಂಧಗಳನ್ನು ಬದಲಾದ ಸನ್ನಿವೇಶದಲ್ಲಿ ನೋಡುವ ಕಾಫ್ಕಾನ ತಲ್ಲಣಗಳಿವೆ. ಅನಂತಮೂರ್ತಿ ಅವರ ಕಥೆಗಳು, ಭೈರಪ್ಪನವರ ಕಾದಂಬರಿಗಳು, ಮಹಾದೇವರ ಲೇಖನಗಳನ್ನು ಓದುವಾಗಲೆಲ್ಲ ಈ ಬರಹಗಾರರ ತಲ್ಲಣಗಳು ಒಬ್ಬ ಓದುಗನಾಗಿ ನನಗೆ ಅನೇಕ ಸಲ ಎದುರಾದದ್ದುಂಟು. Read more »