ವಿಷಯದ ವಿವರಗಳಿಗೆ ದಾಟಿರಿ

Posts tagged ‘ವಸಾಹತುಶಾಹಿ’

21
ಜೂನ್

ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು? ( ಭಾಗ – ೪ )

ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)

ಎರಡು ವಿಭಿನ್ನ ಮಾರ್ಗಗಳು :

ಸಾಮಾನ್ಯವಾಗಿ ಪಶ್ಚಿಮದಲ್ಲಿ ನಮ್ಮ ಸಂಸ್ಕೃತಿಗೆ ಸಂಬಂಧಿಸಿದಂತೆ ಪದೇಪದೇ ಕೇಳಿಬರುವ ಈ ಪ್ರಶ್ನೆಗಳನ್ನು ಗಮನಿಸಿ. ನೀವು ಹಣೆಗೆ ತಿಲಕ ಇಡುವುದೇಕೆ? ಗೋಮಾಂಸವನ್ನು ನೀವೇಕೆ ತಿನ್ನುವುದಿಲ್ಲ? ನೀವು ಶಿಶ್ನವನ್ನು ಪೂಜೆ ಮಾಡುತ್ತೀರಂತೆ ಹೌದೆ? ಜಾತಿ ಪದ್ಧತಿಯ ಬಗ್ಗೆ ನಿಮ್ಮ ಅನಿಸಿಕೆಯೇನು? ಈಗಲೂ ಭಾರತದಲ್ಲಿ ವಿಧವೆಯರನ್ನು ಸುಡುತ್ತಾರೆಯೇ? ನಿಮ್ಮ ದೇವರುಗಳಿಗೇಕೆ ಆರೆಂಟು ಕೈಗಳು ಇರುತ್ತವೆ? ನಿಮ್ಮ ರಿಲಿಜನ್ನಿನ ಚಿಹ್ನೆ ಯಾವುದು? ನೀವು ದೇವಸ್ಥಾನದಲ್ಲಿ ಮೂರ್ತಿಪೂಜೆ/idolatry ಮಾಡುತ್ತೀರಾ? ನೀವು ದೇವರನ್ನು ನಂಬುತ್ತೀರಾ? Are you religious? ಇತ್ಯಾದಿ. ಈ ರೀತಿಯ ಪ್ರಶ್ನೆಗಳು ಎದುರಾದಾಗ ಯಾರಾದರೂ ಹೇಗೆ ಪ್ರತಿಕ್ರಿಯಿಸಬಹುದು? ಸ್ಥೂಲವಾಗಿ ಹೇಳುವುದಾದರೆ, ಇದಕ್ಕೆ ಎರಡು ವಿಧದಲ್ಲಿ ಪ್ರತಿಕ್ರಿಯಿಸಬಹುದು. ಮೊದಲನೆಯದು, ಈ ಪ್ರಶ್ನೆಗಳು ಗ್ರಹಿಸಲು ಸಾಧ್ಯವಾಗುವಂಥ ಮತ್ತು ನಮಗೆ ಅರ್ಥವಾಗುವ ಪ್ರಶ್ನೆಗಳು ಎಂಬ ಊಹೆಯೊಂದಿಗೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದು. ಸುಧಾರಣಾವಾದಿಗಳ ಕಾಲದಿಂದ ಇಂದಿನವರೆಗೆ ನಾವು ಅನುಸರಿಸಿದ ಮಾರ್ಗ ಇದೇ. ಆದರೆ ಅಮೆರಿಕೆಯಲ್ಲಿ ನೆಲೆಸುವ ಭಾರತೀಯರ [ಅಷ್ಟೇ ಏಕೆ, ಸಂಕುಚಿತಗೊಳ್ಳುತ್ತಿರುವ ಆ ಜಗತ್ತಿನಲ್ಲಿ, ಭಾರತದಲ್ಲಿನ ಭಾರತೀಯರ] ಪರಿಸ್ಥಿತಿ ಇಂದು ಬದಲಾಗಿದೆ: ಹಿಂದಿನ ಕಾಲದ ಸುಧಾರಕರು ಭಾರತೀಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು, ಆದರೆ ನಾವಿಂದು ಪಾಶ್ಚಾತ್ಯ ಸಂಸ್ಕೃತಿಯ ಸಂದರ್ಭದಲ್ಲಿ ನಿಂತು ಮಾತನಾಡುತ್ತಿದ್ದೇವೆ. ಬದಲಾದ ಈ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನಾವೂ ನಮ್ಮ ಸುಧಾರಣಾವಾದಿಗಳು ನಡೆದ ಮಾರ್ಗವನ್ನು ಅನುಸರಿಸಿದರೆ ಉಂಟಾಗುವ ಪರಿಣಾಮವನ್ನು ಗ್ರಹಿಸುವುದು ಬಹಳ ಮುಖ್ಯವಾಗಿದೆ. ಮತ್ತಷ್ಟು ಓದು »

15
ಜೂನ್

ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೩ )

ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)

ಭಾಗ – ೧

ಭಾಗ – ೨

ಒಂದು ಹೋಲಿಕೆ

ವಸಾಹತುಶಾಹಿ ಕಾಲದ ಭಾರತೀಯ ಬುದ್ಧಿಜೀವಿಗಳು ಈ ಕಥೆಯನ್ನು ಸಾರಾಸಗಟಾಗಿ ನಂಬಿದ್ದರು. (ಏಕೆ ಎಂಬುದು ಒಂದು ಮುಖ್ಯ ಪ್ರಶ್ನೆಯಾದರೂ, ಈ ಲೇಖನದಲ್ಲಿ ನಾನದನ್ನು ಚರ್ಚೆಗೆತ್ತಿಕೊಳ್ಳುವುದಿಲ್ಲ). ಇದು ಎರಡು ಪರಸ್ಪರ ವಿರುದ್ಧವಾದ ಪ್ರತಿಕ್ರಿಯೆಗಳಿಗೆ ದಾರಿಮಾಡಿತು: ಒಂದೆಡೆ ಕೆಲವು ಜನರು ಹಿಂದುಗಳ ರಿಲಿಜನ್ನಿನ ಪುನರುತ್ಥಾನಕ್ಕಾಗಿ ಪರಿಶ್ರಮಿಸಿದರು. ವೇದ ಉಪನಿಷತ್ತುಗಳಲ್ಲಿರುವ ಶುದ್ಧವಾದ ರಿಲಿಜನ್ನಿಗೆ ಹಿಂದಿರುಗಬೇಕು ಎಂದು ಅವರು ವಾದಿಸಿದರು. ಇನ್ನೊಂದೆಡೆಯಲ್ಲಿ ಹಿಂದೂಯಿಸಂ ಈಗ ಹೇಗಿದೆಯೋ ಅದೇ ಸರಿ ಎಂದು ಗಂಟಾಘೋಷವಾಗಿ ಸಮರ್ಥಿಸುವವರೂ ಇದ್ದರು. ಈ ಎರಡು ತುದಿಗಳ ನಡುವೆ ಹಲವು ವಿವಿಧ ನಿಲುವುಗಳೂ ನಿಧಾನವಾಗಿ ಹರಳುಗಟ್ಟಿದ್ದವು. ಮತ್ತಷ್ಟು ಓದು »

13
ಜೂನ್

ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೨ )

ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)

ಭಾಗ ೧

ಹಿನ್ನೆಲೆ:

ಭಾರತದ ಹಲವು ಪ್ರದೇಶಗಳ ಮೇಲೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಹಿಡಿತವನ್ನು ಬಿಗಿಗೊಳಿಸಿ, ಅದರ ಆಡಳಿತಾಧಿಕಾರಿಗಳು ಆಳುವವರ ಸ್ಥಾನಕ್ಕೆ ಬಂದಾಗ, ಭಾರತೀಯ ಸಂಪ್ರದಾಯಗಳ ಕುರಿತಂತೆ ಒಂದು ವಿಶೇಷ ಹಗೆತನವು ವಸಾಹುತು ಆಡಳಿತ ನೀತಿಯ ಹೆಗ್ಗುರುತಾಯಿತು. ಈ ಹಗೆತನಕ್ಕೆ ಬಹಳ ಪುರಾತನ ಇತಿಹಾಸವಿರುವುದು ನಿಜ. ಹಿಂದೂಗಳ ‘ರಿಲಿಜನ್’ ಆದ ‘ಹಿಂದೂಯಿಸಂ’ನ ಪ್ರತಿ ಅಂಶವೂ ಅವರಿಗೆ ಆಕ್ಷೇಪಾರ್ಹ ಮತ್ತು ಅಸಂಗತವಾಗಿ ಕಂಡಿದ್ದು ಹಳೆಯ ವಿಚಾರ. ಬಾಲ್ಯವಿವಾಹ, ಸತಿ ಪದ್ಧತಿ ಮುಂತಾದ ಅಸಹನೀಯ ಮತ್ತು ಅನೈತಿಕ ಆಚರಣೆಗಳನ್ನು ಅವರು ಭಾರತದಲ್ಲಿ ‘ಕಂಡುಕೊಂಡಿದ್ದರಿಂದ’ ಮಾತ್ರವೇ ಈ ಹಗೆತನವು ಬೆಳೆದದ್ದಲ್ಲ. ಅವರ ಹಗೆತನಕ್ಕೆ ಸಾಕಷ್ಟು ಆಳವಾದ ಬೇರುಗಳಿವೆ: ತಮ್ಮ ರಿಲಿಜನ್ನಿನ ಕನ್ನಡಕದಿಂದ ನೋಡಿದಾಗ, ಇಂತಹ ವಿಕೃತ ಆಚರಣೆಗಳು ಸುಳ್ಳು ರಿಲಿಜನ್ಗಳ ಅವಿಭಾಜ್ಯ ಅಂಗಗಳು ಎಂದು ಅವರಿಗೆ ಅನಿಸಿತ್ತು. ‘ಹಿಂದೂಯಿಸಂ’ ಎನ್ನುವುದು ಸುಳ್ಳು ಮತ್ತು ಅವನತಿ ಹೊಂದಿದ ರಿಲಿಜನ್ನಾದ್ದರಿಂದ, ಇಂತಹ ಅರ್ಥಹೀನ ವಿಕೃತ ಆಚರಣೆಗಳು ಕೇವಲ ಆಕಸ್ಮಿಕಗಳಲ್ಲ, ಬದಲಿಗೆ ಅದರ ಅಗತ್ಯ ಲಕ್ಷಣಗಳು ಎಂದು ಅವರು ನಂಬಿದ್ದರು. ಮತ್ತಷ್ಟು ಓದು »

21
ಮೇ

ಬಹುಸಂಖ್ಯಾತರಿಗೆ ರಿಲಿಜನ್ ಇಲ್ಲವಾದರೆ ಅಲ್ಪಸಂಖ್ಯಾತರು ಯಾರು?

– ರಾಕೇಶ್ ಶೆಟ್ಟಿ

ರಿಲಿಜನ್ಅದು ರಾಮಕೃಷ್ಣ ಮಿಷನ್ ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ನಡೆದ ಕುತೂಹಲಕಾರಿ ಕಾನೂನು ಕದನ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ರಾಮಕೃಷ್ಣ ಮಿಷನ್ ಸಂಸ್ಥೆಗೆ ಸೇರಿದ ಶಿಕ್ಷಣ ಸಂಸ್ಥೆಯೊಂದರಲ್ಲಿ ಶುರುವಾಗಿದ್ದ ಕಾಲೇಜಿನ ನಿರ್ವಹಣೆಗೆ ಸಂಬಂಧಿಸಿದಂತೆ,ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸಿ ರಾಮಕೃಷ್ಣ ಮಿಷನ್ ನ್ಯಾಯಾಲಯದ ಮೆಟ್ಟಿಲೇರಿತ್ತು.ತಮ್ಮ ಸಂಘಟನೆಯೂ ರಾಮಕೃಷ್ಣರ ಬೋಧನೆಗಳ ಮೇಲೆ ಆಧಾರಿತವಾಗಿರುವುದರಿಂದ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಂವಿಧಾನದ Article 30(1) ಮತ್ತು Article 26(a) ಕಾಯ್ದೆಯಡಿಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಇರಬೇಕಾದ ರಕ್ಷಣೆಯಿದೆ ಎಂದು ವಾದಿಸಿತ್ತು.ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ರಾಮಕೃಷ್ಣಯಿಸಂ ಎಂಬ ಪ್ರತ್ಯೇಕವಾದ ರಿಲಿಜನ್ ಇಲ್ಲ ಮತ್ತದು ಹಿಂದೂ ಸಂಪ್ರದಾಯಗಳ ವ್ಯಾಪ್ತಿಯಲ್ಲೇ ಇದೆ ಎಂದಿತ್ತು ಹಾಗೂ ಹಿಂದೂ ಎಂಬುದು ರಿಲಿಜನ್ ಅಲ್ಲ ಅದೊಂದು ಜೀವನ ಪದ್ಧತಿ ಎಂದು ತೀರ್ಪು ನೀಡಿತ್ತು.ಈ ದೇಶದ ಸರ್ವೋಚ್ಚ ನ್ಯಾಯಾಲಯವೇ ಹಿಂದೂ ಎಂಬುದು ರಿಲಿಜನ್ ಅಲ್ಲ ಎಂದ ಮೇಲೆ ನಮ್ಮ ಸರ್ಕಾರಗಳು ಅದನ್ನು ಪರಿಗಣಿಸಬೇಕಿತ್ತಲ್ಲವೇ?

ಒಂದು ವೇಳೆ ಪರಿಗಣಿಸಿದ್ದರೆ ಈಗಲೂ ಸರ್ಕಾರಿ,ಖಾಸಗಿ ಕಚೇರಿ,ಶಿಕ್ಷಣ ಸಂಸ್ಥೆ ಇತ್ಯಾದಿಗಳ ಅರ್ಜಿಗಳಲ್ಲಿ “ಹಿಂದೂ” ಎಂಬುದನ್ನು “ರಿಲಿಜನ್” ಕಾಲಂನಲ್ಲಿ ಭರ್ತಿ ಮಾಡಿಕೊಳ್ಳುತ್ತಿರಲಿಲ್ಲ. ಉದಾಹರಣೆಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಸರ್ಕಾರ ಮಾಡಿದ ಜಾತಿಗಣತಿಯ ವೇಳೆ ನನಗಾದ ಅನುಭವದ ಬಗ್ಗೆ ಹೇಳಬೇಕು.

ಮತ್ತಷ್ಟು ಓದು »