ವಿಷಯದ ವಿವರಗಳಿಗೆ ದಾಟಿರಿ

Posts tagged ‘ವಿಶ್ವ ಯೋಗ ದಿನ’

15
ಜೂನ್

ಎಲ್ಲ ರೋಗಗಳನ್ನು ಗುಣಪಡಿಸುವ ಯೋಗಕ್ಕೆ ಧರ್ಮಾ೦ಧತೆಯ ರೋಗವನ್ನು ಗುಣಪಡಿಸುವ ಶಕ್ತಿಯಿದೆಯೇ?

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ವಿಶ್ವ ಯೋಗ ದಿನ“ಇಸ್ಲಾ೦ ತತ್ವಗಳ ಕುರಿತಾದ ನನ್ನ ಗ್ರಹಿಕೆ ಅತ್ಯ೦ತ ನಿಖರ ಮತ್ತು ಸ್ಪಷ್ಟ.ಯೋಗವೆನ್ನುವುದು ಮುಸ್ಲಿಮರಿಗೆ ನಿಷೇಧವೆ೦ದು ಖುರಾನಿನ ಯಾವುದೇ ಅಧ್ಯಾಯದಲ್ಲಿಯೂ ಹೇಳಿಲ್ಲವೆನ್ನುವುದನ್ನು ನಾನು ವಿಶ್ವಾಸದಿ೦ದ ನುಡಿಯಬಲ್ಲೆ.ಬದಲಿಗೆ ಯೋಗದಿ೦ದ ಅಲ್ಲಾಹನನ್ನು ಇನ್ನಷ್ಟು ಭಾವುಕವಾಗಿ ಪೂಜಿಸಬಹುದು ಎನ್ನುವುದು ನನ್ನ ನ೦ಬಿಕೆ. ತನ್ನ ದೈನ೦ದಿನ ಜೀವನದಲ್ಲಿ ಯೋಗಾಭ್ಯಾಸದ ಅಳವಡಿಕೆಯಿ೦ದ ಮುಸಲ್ಮಾನನೊಬ್ಬ ಇನ್ನಷ್ಟು ದೇವರಿಗೆ ಪ್ರಿಯನಾಗಬಲ್ಲ ಎನ್ನುವುದನ್ನು ನಾನು ಅನುಮೋದಿಸುತ್ತೇನೆ.ಬಾಲ್ಯದಿ೦ದಲೂ ಯೋಗವನ್ನು ಅಭ್ಯಸಿಸುತ್ತ ಬ೦ದವನು ನಾನು.ಹಾಗಾಗಿ ಇಸ್ಲಾ೦ ಮತ್ತು ಯೋಗದ ನಡುವಣ ಪಾರಮಾರ್ಥಿಕ ಸ೦ಬ೦ಧವನ್ನು ನಾನು ಅನುಭವದಿ೦ದ ಬಲ್ಲೆ.ಅನೇಕ ಮುಸ್ಲಿ೦ ಧರ್ಮಗುರುಗಳು ಯೋಗಾಭ್ಯಾಸ ನಡೆಸುವ ಮುಸಲ್ಮಾನರ ವಿರುದ್ಧ ಫತ್ವಾಗಳನ್ನು ಹೊರಡಿಸಿದ್ದಾರೆ೦ಬುದನ್ನು ನಾನು ಕೇಳಿದ್ದೇನೆ.ಖುರಾನ್ ಶ್ಲೋಕಗಳ ಅವರ ತಪ್ಪುಗ್ರಹಿಕೆಯೆ ಇ೦ಥಹ ಪ್ರಮಾದಕ್ಕೆ ಕಾರಣ.ಸರಿಯಾಗಿ ಪರಾಮರ್ಶಿಸಿದರೆ ಯೋಗವೆನ್ನುವುದು ಇಸ್ಲಾಮಿನ ಒ೦ದು ಭಾಗವೇ ಆಗಿರುವುದು ತಿಳಿಯುತ್ತದೆ.ಯೋಗ ಮತ್ತು ಇಸ್ಲಾ೦ಗಳ ನಡುವಣ ಸ೦ಬ೦ಧವೆನ್ನುವುದು ಪರಸ್ಪರಾವಲ೦ಬಿ ಪಾರಮಾರ್ಥಿಕ ಒಡಬ೦ಡಿಕೆಯ೦ಥದ್ದು.ಯೋಗ ಮತ್ತು ಇಸ್ಲಾಮ್ ತತ್ವಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ.ದೇಹವೆನ್ನುವುದು ಮೋಕ್ಷ ಸಾಧನೆ ಮತ್ತು ಧಾರ್ಮಿಕ ಅನುಭಾವಗಳ ಗ್ರಹಿಕೆಗೆ ಬಹುಮುಖ್ಯ ಅ೦ಗವೆನ್ನುವುದನ್ನು ಯೋಗದ೦ತೆ,ಇಸ್ಲಾ೦ ಸಹ ಒಪ್ಪಿಕೊಳ್ಳುತ್ತದೆ.ಮೋಕ್ಷ ಸಾಧನೆ ಅಥವಾ ಬ್ರಹ್ಮತ್ವವೇ ಯೋಗಸಾಧನೆಯ ಮುಖ್ಯ ಉದ್ದೇಶವಾಗಿದ್ದರೆ, ಸೂಫಿ ಜೀವನಶೈಲಿಯಾಗಿರುವ ’ತಾರೀಕ್-ಎ-ನಕ್ಷಬ೦ದಿ’ಯ ಮೂಲೋದ್ದೇಶ ಅಲ್ಲಾಹನಲ್ಲಿ ಮುಸಲ್ಮಾನನ ವಿಲೀನಿಕರಣ. ಸೂಫಿ ಪ೦ಥದ ಕೆಲವು ಆಚರಣೆಗಳು ಅಕ್ಷರಶ; ಯೋಗದ ಅನುಕರಣೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಖ್ಯಾತ ಮುಸ್ಲಿ೦ ಲೇಖಕ ಅಶ್ರಫ್ ನಿಝಾಮಿ ತಮ್ಮ ’ನಮಾಝ್’ ಎನ್ನುವ ಕೃತಿಯಲ್ಲಿ ಯೋಗವೆನ್ನುವುದು ಇಸ್ಲಾಮಿನ ಅವಿಭಾಜ್ಯ ಅ೦ಗವೆ೦ದು ಸ್ಪಷ್ಟವಾಗಿ ದಾಖಲಿಸಿದ್ದಾರೆ.ಈಜಿಪ್ಟಿನ ಅಬ್ದುಲ್ ಬಾಸಿತ್ ಯಾರಿಗೆ ತಾನೇ ಗೊತ್ತಿಲ್ಲ? ಜಗತ್ತಿನ ಶ್ರೇಷ್ಠ ಖುರಾನ್ ವಾಚಕನೆ೦ದು ಪರಿಗಣಿಸಲ್ಪಡುವ ಬಾಸಿತ್,ಹತ್ತಾರು ನಿಮಿಷಗಳ ಕಾಲ ಉಸಿರು ಬಿಗಿಹಿಡಿದು ಖುರಾನಿನ ಅಧ್ಯಾಯಗಳನ್ನು ನಿರರ್ಗಳವಾಗಿ ಪಠಿಸುವುದನ್ನು ಕ೦ಡು ಅನೇಕ ವಿಜ್ನಾನಿಗಳೇ ಬೆರಗಾಗುತ್ತಾರೆ.ವಿಚಿತ್ರವೆ೦ದರೆ ಉಸಿರಿನ ಮೇಲೆ ಇ೦ಥದ್ದೊ೦ದು ಪಾರಮ್ಯವನ್ನು ಸಾಧಿಸಲು ಅಬ್ದುಲ್ ಬಾಸಿತ್,ಪ್ರಾಣಾಯಾಮದ ಅಭ್ಯಾಸ ನಡೆಸುತ್ತಾರೆನ್ನುವುದು ಅನೇಕರಿಗೆ ತಿಳಿದಿಲ್ಲ.ಹಾಗಾಗಿ ಇಸ್ಲಾಮಿನಲ್ಲಿ ಯೋಗಾಭ್ಯಾಸವೆನ್ನುವುದು ಅನೈತಿಕವೆನ್ನುವುದು ಅರ್ಥಹೀನ ವಾದ.”
ಮತ್ತಷ್ಟು ಓದು »

9
ಜೂನ್

ಯೋಗದಿನಕ್ಕಾಗಿ ಮೋದಿ ಸರಕಾರದ ವಿಶೇಷ ಶವಾಸನ

– ರೋಹಿತ್ ಚಕ್ರತೀರ್ಥ

Yoga Dayನಮ್ಮ ದೇಶ ಜಾತ್ಯತೀತ ದೇಶ. ಆದರೆ ಹೆಜ್ಜೆಹೆಜ್ಜೆಗೂ ನಿಮಗಿಲ್ಲಿ ನಿಮ್ಮ ಜಾತಿಯ ನೆನಪು ಅಳಿಯದಂತೆ ನೋಡಿಕೊಳ್ಳಲಾಗುತ್ತದೆ. ಶಾಲೆಗೆ ಸೇರುವ ಮೊದಲ ದಿನ ಅಡ್ಮಿಷನ್ ಮಾಡಿಕೊಳ್ಳುವ ಮುಖ್ಯೋಪಾಧ್ಯಾಯರು ಹೆಸರು, ಅಪ್ಪನ ಹೆಸರು, ಜಾತಿ ಎಂದು ಬರೆದ ಅಪ್ಲಿಕೇಶನ್ನನ್ನು ಕಣ್ಣಮುಂದೆ ಹಿಡಿಯುತ್ತಾರೆ. ಪರೀಕ್ಷೆ ಬರೆಯಲು ಅರ್ಜಿ ತುಂಬುವಾಗ ಯಾವ ಜಾತಿ ಎಂದು ಕೆದಕಿ ವಿಚಾರಿಸಿಕೊಂಡು ನೀವು ಕಟ್ಟಬೇಕಾದ ಫೀಸು ನಿರ್ಧರಿಸುತ್ತಾರೆ. ಕೆಲಸಕ್ಕೆ ಹೋಗುವಾಗ ನಿಮ್ಮ ಪದವಿ ಸರ್ಟಿಫಿಕೇಟು ಯಾರಿಗೆ ಬೇಕು ಸ್ವಾಮಿ! ನಾಯಿಯೂ ಮೂಸುವುದಿಲ್ಲ ಅದನ್ನು! ನೀವು ಯಾವ ಜಾತಿ ಹೇಳಿ, ಅದರ ಆಧಾರದ ಮೇಲೆ ನಿಮಗೆ ಕೆಲಸ ಸಿಗುತ್ತದೋ ಇಲ್ಲವೋ ಎನ್ನುವುದು ನಿರ್ಧಾರಿತವಾಗುತ್ತದೆ. ಈ ದೇಶದಲ್ಲಿ ಶಿಕ್ಷಣ, ಉದ್ಯೋಗ, ಮದುವೆ, ಮುಂಜಿ, ಸಾವು, ತಿಥಿಗಳೆಲ್ಲ ನಿರ್ಧಾರವಾಗುವುದು ನಿಮ್ಮ ಜಾತಿಯ ಮೇಲೆ. ಯಾಕೆಂದರೆ ನಾವು ಬದುಕುತ್ತಿರುವುದು ಜಾತ್ಯತೀತ ದೇಶದಲ್ಲಿ ನೋಡಿ!

ಜೂನ್ 21ರಂದು ವಿಶ್ವ ಯೋಗದಿನ ಆಚರಿಸಬೇಕು ಎಂದು ನಮ್ಮ ದೇಶದ ಪ್ರಧಾನಿ ಕರೆಕೊಟ್ಟರು. ಅವರು ಅಲ್ಲಿ ಅದನ್ನು ಹೇಳಿ ಮುಗಿಸಿದ್ದರೋ ಇಲ್ಲವೋ ಇತ್ತ ಜಾತ್ಯತೀತ ಕೋಮುಸೌಹಾರ್ದ ಬಳಗದ ಬುಜೀಗಳಿಗೆ ಕಡಿತ ಶುರುವಾಯಿತು. ಈ ಮೋದಿ ಮಹಾ ಜಾತೀವಾದಿ. ಹಿಂದೂಗಳ ಯೋಗವನ್ನು ಸನಾತನಿಗಳಂತೆಯೇ ಜಾತಿಧರ್ಮಗಳಿಗೆ ಅತೀತರಾದ ಪ್ರಗತಿಪರ ಅಲ್ಪಸಂಖ್ಯಾಕ ಪಂಗಡಗಳಿಗೂ ವಿಸ್ತರಿಸುವ ಯೋಜನೆ ಹಾಕಿದ್ದಾರೆ ಎಂದು ಅವರಿಗೆ ಗುಮಾನಿ ಬಂತು. ಅಷ್ಟಲ್ಲದೆ ಜೂನ್ ಇಪ್ಪತ್ತೊಂದು – ಮುಸ್ಲಿಮರ ಹಬ್ಬ ಬೇರೆ. ಹೋಗಿಹೋಗಿ ಆ ದಿನ ಯೋಗ ಮಾಡುವುದೇ? ಸಾಧ್ಯವೇ ಇಲ್ಲ ಎಂದು ಈ ಅಲ್ಪಸಂಖ್ಯಾತ ಮತದ ನಾಯಕ ಓವೈಸಿ ಕೂಗಿದ. ಅವನ ಹಿಂದೆ ಅವನ ಇಡೀ ಗಾಂಪರ ಗುಂಪೇ ಎದ್ದುನಿಲ್ಲುವ ಸೂಚನೆ ಸಿಕ್ಕಿತು. ಕೇಂದ್ರ ಸರಕಾರ ಈಗ ನಿಜವಾಗಿಯೂ ಇಲ್ಲದ ಇಕ್ಕಳದಲ್ಲಿ ತಲೆ ಸಿಕ್ಕಿಸಿಕೊಂಡಿದ್ದೇನೆಂದು ಸುಳ್ಳೇ ಭಾವಿಸಿ ನಡುಗಿತು. ಯೋಗದಿನ ಮಾಡೋಣ, ಆದರೆ ಸೂರ್ಯನಮಸ್ಕಾರ ಕೈಬಿಡೋಣ ಎಂದು ಠರಾವು ಮಂಡಿಸಿತು. ಮೋದಿ ಹೇಳಿಕೊಟ್ಟಂತೆ ಅವರ ಸರಕಾರದ ಎಲ್ಲ ಮಂತ್ರಿಗಳೂ “ಸೂರ್ಯನಮಸ್ಕಾರ ಕಠಿಣ ಆಸನ. ಹಾಗಾಗಿ, ಅದನ್ನು ಬಿಟ್ಟು ಮಿಕ್ಕಿದ್ದನ್ನು ಮಾಡಲು ಚಿಂತನೆ ನಡೆಸಿದ್ದೇವೆ” ಎಂದು ತಿಪ್ಪೆ ಸಾರಿಸಿದರು.
ಮತ್ತಷ್ಟು ಓದು »