ಶಿಕ್ಷಣ: ಗುರಿ ಭೀಮ, ಸಾಧಕ ಕುಚೇಲ!
– ಕಲ್ಗುಂಡಿ ನವೀನ್
ಇಂದು ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಚರ್ಚೆಗಳು, ಪ್ರಯೋಗಗಳು ಇನ್ಯಾವುದೇ ಕ್ಷೇತ್ರದಲ್ಲಿ ನಡೆಯುತ್ತಿಲ್ಲ. ತೀರಾ ವಿರಳವಾಗಿದ್ದ ಓಪನ್ ಮಾದರಿ ಶಾಲೆಗಳು ಇಂದು ವಿಪುಲವಾಗಿವೆ. ಸರ್ಕಾರಿ ಶಾಲೆಗಳೂ ಅದರ ಕೆಲವು ಆಂಶಗಳನ್ನು “ಕಾಪಿ” ಮಾಡುತ್ತಿವೆ. ಇನ್ನು ಮಾಂಟೆಸ್ಸೊರಿ ಎಂಬ ಪದ್ಧತಿ (ಮಾರಿಯಾ ಮಾಂಟೆಸ್ಸೊರಿ ಎಂಬಾಕೆ ಚಾಲ್ತಿಗೆ ತಂದ ಶಿಕ್ಷಣ ಪದ್ಧತಿ) ಹೆಚ್ಚುಕಡಿಮೆ ಮನೆ ಮಾತಾಗಿದೆ. ಇದಲ್ಲದೆ, ಖಾಸಗಿ ನೆಲೆಯಲ್ಲಿ ಅನೇಕರು ತಾವೇ ಕಂಡರಿಸಿದ ಪದ್ಥತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಶಾಲೆ ಹೀಗೂ ಇರಬಲ್ಲುದೇ ಎಂದು ತಜ್ಞರೂ ಹುಬ್ಬೇರಿಸುವಂತೆ ಮಾಡಿದ್ದಾರೆ. “ಒಂದು ಇಡೀ ವರ್ಷ ನೀನು ಏನು ಬೇಕೋ ಮಾಡಿಕೋ, ನಿನಗಿಷ್ಟವಾದದ್ದನ್ನು ಕಲಿತುಕೋ” ಎಂದು ಶಾಲೆಯಲ್ಲಿ ಹೇಳುತ್ತಾರೆ ಎಂದರೆ ನಂಬುತ್ತೀರಾ? ಅದು ಆರೋಹಿ ಎಂಬ ಶಾಲೆ. ಶಿಕ್ಷಣದಲ್ಲಿ ಆಸಕ್ತಿ ಇರುವ ಎಲ್ಲರೂ ಒಮ್ಮೆ ಹೋಗಿ ನೋಡಿಯಾದರೂ ಬರಬೇಕಾದ ಶಾಲೆಯಿದು ( http://www.aarohilife.org ). ಪೂರ್ಣಪ್ರಮತಿ ಎಂಬ ವಿಶಿಷ್ಟ ಶಾಲೆಯಲ್ಲಿ ಪ್ರತಿ ವರ್ಷ ಶಿಕ್ಷಣ ಪದ್ಧತಿಗಳು ಹಾಗೂ ಕಲಿಕೆ ಹೇಗೆ ನಡೆಯುತ್ತದೆ ಎಂದು ವಿಶ್ಲೇಷಿಸಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಲೆಂದೇ ಪೂರ್ಣಪ್ರಮತಿ ವ್ಯಾಖ್ಯಾ ಎಂಬ ಹೆಸರಿನಲ್ಲಿ ವಿಚಾರ ಸಂಕಿರಣಗಳನ್ನು ನಡೆಸುತ್ತಾರೆ. ಅನೇಕ ದೃಷ್ಟಿಕೋನಗಳಿಂದ ಹಾಗೂ ಪ್ರಯೋಗಗಳಿಂದಾಗಿ ಗಮನಿಸುತ್ತಿರಬೇಕಾದ ಶಾಲೆ, ಪೂರ್ಣಪ್ರಮತಿ (http://purnapramati.in/) ಹ್ಞಾ ಹಾಗೆ “ನೀವು ನೋಡಲೆಂದು ಬರಲೇಬೇಡಿ. ಮಕ್ಕಳು ತಮಗಿಷ್ಟವಾದದ್ದನ್ನು ಮಾಡುತ್ತಿರುತ್ತಾರೆ. ನಿಮ್ಮ ಭೇಟಿ ಅವರನ್ನು ಡಿಸ್ಟರ್ಬ್ ಮಾಡುತ್ತದೆ” ಎನ್ನುವ ಮಣಿವೆಣ್ಣನ್ ಅವರ ಶಾಲೆಯೂ ಇದೆ! ಅಷ್ಟೇ ಅಲ್ಲ ಅಲ್ಲಿನ ಪದ್ಧತಿಗಳು ನಿರಂತರ ಚರ್ಚೆ, ಮಂಥನದ ಆಧಾರದಿಂದ ಬದಲಾಗುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆ ನೀಡಿರುವ ಸ್ವಾತಂತ್ರ್ಯವನ್ನು ಚೆನ್ನಾಗಿಯೇ ಬಳಸಿಕೊಂಡು ಮೆಚ್ಚಿ ತಲೆದೂಗುವಂತಹ ಪ್ರಯತ್ನಗಳು ಖಾಸಗಿ ನೆಲೆಯಲ್ಲಿ ನಡೆದಿದೆ. ಇದರ ನಡುವೆ ನಮ್ಮ ಶಿಷ್ಟ ಪದ್ಧತಿಯನ್ನೇ ಮುಂದುವರೆಸುತ್ತಿರುವ, ಆದರೆ ಆದರ್ಶ ಪ್ರಾಯವಾದ ಖಾಸಗಿ ಶಾಲೆಗಳಿವೆ. ಇಲ್ಲಿಯೂ “ಅಂಕವಲ್ಲ, ಗುಣ ಮುಖ್ಯ” ಎಂದು ಯೋಚಿಸುತ್ತ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವ ಶಾಲೆಗಳಿವೆ. ಇದರ ಜೊತೆ ತನ್ನಷ್ಟಕ್ಕೆ ತಾನು ಬೇರೆ ಯಾವ ಗೊಡವೆಗೂ ಹೋಗದೆ ಮುಂದುವರೆಯುತ್ತಿರುವ ಸಿ ಬಿ ಎಸ್ ಇ ಇತ್ಯಾದಿ ಕೇಂದ್ರದ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಖಾಸಗಿ ಶಾಲೆಗಳಿವೆ. ಈ ಎಲ್ಲಕ್ಕಿಂತ ದೊಡ್ಡ, ಕೊರತೆ ಎಂಬ ಪದದ ಅರ್ಥವೇ ತಿಳಿಯದ ರಾಜವೈಭೋಗದ ಅಂತಾರಾಷ್ಟ್ರೀಯ ಶಾಲೆಗಳನ್ನು ಸದ್ಯದ ಚರ್ಚೆಯಿಂದ ದೂರ ಇಡೋಣ. ಮತ್ತಷ್ಟು ಓದು
ಆಗಬೇಕಿದೆ ಸರಸ್ವತಿ ಮಂದಿರಗಳ ಜೀರ್ಣೋದ್ಧಾರ
– ಮುರಳಿ ಕೃಷ್ಣ ಕಡವ
ಒಂದೂರಿನ ಒಂದಷ್ಟು ಜನ ತಮ್ಮ ಮಕ್ಕಳ ವಿದ್ಯಾಭ್ಯಾಸ ಸರಿಯಾಗಿ ನಡೆಯುತ್ತಿಲ್ಲಾ ಅಂತ ಒಬ್ಬ ಜ್ಯೋತಿಷಿಯ ಬಳಿ ಸಲಹೆಗಾಗಿ ಹೋದರು. ಜ್ಯೋತಿಷಿಯು ತನ್ನೆಲ್ಲಾ ಲೆಕ್ಕಚಾರಗಳನ್ನು ಮಾಡಿ, “ನಿಮ್ಮೂರಿನ ಮಧ್ಯದಲ್ಲಿ ದೇವರ ಸಾನ್ನಿಧ್ಯವಿದೆ, ಅಲ್ಲಿ ಒಂದು ದೇವಸ್ಥಾನದ ನಿರ್ಮಾಣವಾಗಬೇಕು” ಎಂಬ ಪರಿಹಾರವನ್ನು ನೀಡಿದರು. ದೇವರ ಮೇಲಿನ ಭಕ್ತಿಗಿಂತ ಭಯವೇ ಜಾಸ್ತಿ ನೋಡಿ ಜನರಿಗೆ. ಸರಿ ಎಂದು ಒಂದೇ ವರ್ಷದಲ್ಲಿ ಲಕ್ಷಗಟ್ಟಲೇ ದುಡ್ಡು ಸಂಗ್ರಹಿಸಿ, ಒಂದು ಗುಡಿಯನ್ನ ಎದ್ದು ನಿಲ್ಲಿಸಿ, ದೇವರ ಮೂರ್ತಿಯನ್ನ ಪ್ರತಿಷ್ಟಾಪಿಸಿಯೇ ಬಿಟ್ಟರು. ಅದಕ್ಕೊಬ್ಬ ಪೂಜಾರಿಯನ್ನೂ ನೇಮಿಸಿ ಪೂಜೆ, ಹೋಮ ಹವನಗಳನ್ನೂ ನಡೆಸಲಾಯಿತು. ಆದರೆ ಅವರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲೇ ಇಲ್ಲ. ಕೇಳಿದರೆ ಆ ಜನರ ಉತ್ತರ ಏನು ಗೊತ್ತಾ “ನಮ್ಮ ಕೆಲಸ ನಾವು ಮಾಡಿದ್ದೇವೆ ಫಲಾಫಲಗಳೆಲ್ಲಾ ದೇವರಿಗೆ ಬಿಟ್ಟದ್ದು” ಅಂತ. ಮತ್ತಷ್ಟು ಓದು