ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸಣ್ಣ ಕತೆಗಳು’

25
ಆಕ್ಟೋ

ಆಲಾಪ..

– ಸುಜಿತ್ ಕುಮಾರ್

young-couple-breaking-up-girl-450w-239389240‘ಎಕ್ಸ್ ಕ್ಯೂಸ್ ಮೀ .. ನೀವು ರಿಸರ್ವ್ಡ್ ಸೀಟಲ್ಲಿ ಕೂತಿದ್ದೀರಾ ಅನ್ಸುತ್ತೆ?’

‘ಇಸ್ ಇಟ್?.. ಸ್ವಲ್ಪ ತಾಳಿ, ಒಮ್ಮೆ ಚೆಕ್ ಮಾಡ್ಕೊಬಿಡ್ತೀನಿ’ ಎನುತ ಆಕೆ ಮೊಬೈಲ್ ಅನ್ನು ಹೊರಗೆಳೆದಳು.

‘ಓ ಗಾಡ್, ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ. ಏನ್ ಹುಡುಗ್ರಪ್ಪ ಇವ್ರು.. ಎನಿವೇಸ್ ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದು ಕೂಡಲೇ ಆಕೆ ಎದ್ದು ಕಾಫಿ ಡೇಯಿಂದ ಹೊರನಡೆದಳು.

ಈತನಿಗೆ ಅಷ್ಟರಲ್ಲಾಗಲೇ ತನ್ನ ಅನುಮಾನ ನಿಜವೆನಿಸಿದ್ದರಿಂದ ಒಂದರೆಕ್ಷಣ ಮಾತು ಬಾರದಂತಾಗುತ್ತದೆ. ತನ್ನ ಮೊಬೈಲ್ ಅನ್ನು ಹೊರಗೆಳೆದು ಸ್ವಿಚ್ ಆನ್ ಮಾಡಿದ ಕೂಡಲೇ ಆಕೆಯ ನಂಬರ್ ಎಂದು ಕಳಿಸಲ್ಪಟ್ಟಿದ್ದ ನಂಬರ್ನಿಂದ ಎರಡು ಮಿಸ್ಡ್ ಕಾಲ್ ಗಳು ಬಂದಿರುತ್ತವೆ. ಇದೇಗೆ ಸಾಧ್ಯ!? ಅದೆಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಕೂಡಲೇ ಆಕೆಯ ಅಪ್ಪನಿಗೆ ಫೋನಾಯಿಸಿ ನಾಲ್ಕು ಬೈದುಬಿಡಬೇಕೆಂಬ ಮನಸ್ಸಾದರೂ ಏಕೋ ಸುಮ್ಮನಾಗುತ್ತಾನೆ. ‘ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದ ಆಕೆಯ ಮಾತುಗಳಲ್ಲಿ ಅದೇನೋ ಒಂದು ಬಗೆಯ ಮುಗ್ದತೆ ಆತನನ್ನು ಕಾಡಿತು. ಅಂತಃಕರಣ ರೋಧಿಸಿತು. ತಾನು ಫೋಟೋದಲ್ಲಿ ನೋಡಿದ ಚೆಲುವೆ ನಿಜವಾಗಿಯೂ ಇವಳೇನಾ ಅಂತಂದುಕೊಳ್ಳುತ್ತಾ ಆಕೆಯ ಫೋಟೋಗಳನ್ನೇ ಒಂದೊಂದಾಗೆ ನೋಡತೊಡಗಿದ. Read more »

31
ಮೇ

ನಿಂತು ಹೋಗುವವರು ಸತ್ತವರು ಮಾತ್ರ’ ಎನ್ನುವ ದಿಟ್ಟೆಯ ಕುರಿತು…..

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

12MPPATRICIATHOMAS_547728e“ಬಾಳಿನಲ್ಲೊಂದು ಹೋರಾಟವಿರದಿದ್ದರೆ ಪ್ರಗತಿಯೂ ಇಲ್ಲ. ಸ್ವಾತಂತ್ರ್ಯದ ಪ್ರತಿಪಾದಕರಂತೆ ವರ್ತಿಸುವ ಆದರೆ ಬದುಕಿನ ಸಂಘರ್ಷವನ್ನು ಹಳಿಯುವ ಅನೇಕ ಜನರನ್ನು ನಾನು ಕಂಡಿದ್ದೇನೆ. ನೆಲವನ್ನು ಉಳದೆ, ಬಿತ್ತದೆ ಬೆಳೆಯನ್ನು ಬಯಸುವ ಮನಸ್ಥಿತಿಯ ಇಂಥಹ ಜನ ಗುಡುಗು ಸಿಡಿಲುಗಳಿಲ್ಲದ ಮಳೆಯನ್ನು ಬಯಸುವವರು. ಇವರಿಗೆ ಸಾಗರದ ಸಂಪತ್ತು ಬೇಕು, ಅದರೊಳಗಿನ ಉಪ್ಪುನೀರು, ಅಲೆಗಳ ಅಬ್ಬರ ಬೇಕಿಲ್ಲ. ಬದುಕಿನ ಸಂಘರ್ಷವೆನ್ನುವುದು ನೈತಿಕವಾಗಿರಬಹುದು, ದೈಹಿಕವಾಗಿರಬಹುದು ಅಥವಾ ಇವೆರಡರ ಮಿಶ್ರಣವೂ ಆಗಿರಬಹುದು. ಆದರೆ ಬದುಕಿನ ಅಭಿವೃದ್ಧಿಗೆ ಸಂಘರ್ಷವಂತೂ ಬೇಕೇ ಬೇಕು” ಎಂದು ಭಾವುಕವಾಗಿ ನುಡಿಯುತ್ತಾನೆ ಆಫ್ರೋ ಅಮೇರಿಕನ್ ಸಮಾಜ ಸುಧಾರಕ ಮತ್ತು ಲೇಖಕ ಫ್ರೆಡ್ರಿಕ್ ಡಗ್ಲಾಸ್. ಪ್ರತಿಯೊಬ್ಬ ಸಾಧಕನ ಬದುಕಿನಲ್ಲೂ ನಮ್ಮ ಕಣ್ಣಿಗೆ ಬೀಳದ ಅಗೋಚರವಾದ ಹೋರಾಟವೊಂದಿರುತ್ತದೆ. ಸಾಧನೆಯ ಶಿಖರದ ಶೃಂಗದಲ್ಲಿ ನಿಂತ ಸಾಧಕನ ಚಿತ್ರ ನಮ್ಮೆದುರಿಗೆ ಕಾಣುತ್ತದೆ. ಆದರೆ ಅಂಥದ್ದೊಂದು ಶಿಖರದ ತುತ್ತ ತುದಿಗೆರಲು ಆತ ಪಟ್ಟ ಶ್ರಮ ನಮ್ಮೆದುರಿಗಿರುವುದಿಲ್ಲ. ಪ್ರತಿಯೊಬ್ಬರೂ ಸಹ ತಮ್ಮ ಬದುಕಿನಲ್ಲಿ ಏಟು ತಿಂದವರೇ, ಆದರೆ ಬಿದ್ದ ಏಟಿನಿಂದ ವಿಚಲಿತರಾಗದೇ ಮುನ್ನುಗ್ಗುವವರು ಮಾತ್ರ ಸಾಧಕರಾಗಲು ಸಾಧ್ಯ. ಹಾಗೆ ಬದುಕಿನ ಪ್ರತಿಕ್ಷಣವೂ ಪೆಟ್ಟುತಿನ್ನುತ್ತಲೇ ಬಂದಿದ್ದರೂ, ಸಾಧನೆಯ ಶಿಖರವನ್ನೇರಿ ನಿಂತ ಪೆಟ್ರಿಶಿಯಾ ನಾರಾಯಣ ಎನ್ನುವ ದಿಟ್ಟ ತಮಿಳರ ಹೆಣ್ಣುಮಗಳ ಕತೆಯನ್ನು ಇಂದು ನಿಮಗೆ ಹೇಳಲು ಹೊರಟಿದ್ದೇನೆ. Read more »

7
ಏಪ್ರಿಲ್

ಮತ್ತೊಮ್ಮೆ ಚೆಕಾಫ್

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

anton-chekhov-1-728ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ ಹುಬ್ಬನ್ನೊರಿಸಿಕೊಳ್ಳುತ್ತ ಆ ಸರಕಾರಿ ಕಚೇರಿಯನ್ನು ಪ್ರವೇಶಿಸಿದ್ದ ಅವನ ನಡಿಗೆಯೂ ಕೊಂಚ ವಿಭಿನ್ನತೆಯಿಂದ ಕೂಡಿತ್ತು. ಸರಕಾರಿ ಕಚೇರಿಯಲ್ಲಿ ಎಂದಿನ ಸೋಮಾರಿತನದ ವಾತಾವರಣ.ಒಂದು ಹರಿವಾಣದ ತುಂಬ ಹತ್ತಾರು ಗ್ಲಾಸುಗಳನ್ನಿಟ್ಟುಕೊಂಡು ಗಡಿಬಿಡಿಯಲ್ಲಿ ನಡೆಯುತ್ತಿದ್ದ ಜವಾನನೊಬ್ಬನನ್ನು ತಡೆದು ನಿಲ್ಲಿಸಿ,’ನಾನೊಂದು ಮಾಹಿತಿಯನ್ನು ಪಡೆಯಬೇಕಿತ್ತು.’ಎಂದು ಪ್ರಶ್ನಿಸಿದ.ಕ್ಷಣಕಾಲ ವಾಲ್ಡೆರೆವ್ ನನ್ನು ದಿಟ್ಟಿಸುತ್ತ ನಿಂತಿದ್ದ ಜವಾನನ್ನು ಗಮನಿಸಿದ ವಾಲ್ಡೆರೆವ್ ಮತ್ತೊಮ್ಮೆ ” ಸರ್ ನಾನು ತುಂಬ ಅಗತ್ಯವಾದ ಮಾಹಿತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಹಾಗೆಯೇ ಮಂಡಳಿ ಪಾಸು ಮಾಡಿದ ಗೊತ್ತುವಳಿಯ ಪ್ರತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಇದನ್ನೆಲ್ಲಿ ವಿಚಾರಿಸಬೇಕೆನ್ನುವುದನ್ನು ದಯವಿಟ್ಟು ತಿಳಿಸಿ”ಎಂದು ಪ್ರಶ್ನಿಸಿದ. Read more »

7
ಆಕ್ಟೋ

ಸಣ್ಣಕತೆಗಳ ಕೊರತೆಯ ನಡುವೆ ನೆನಪಾದವನು ಹೆಮ್ಮಿ೦ಗ್ವೆ…!!

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಅರ್ನೆಸ್ಟ್ ಹೆಮ್ಮಿಂಗ್ವೆನಾವಿನ್ನೂ ಹಾಸಿಗೆಯಲ್ಲಿರುವಾಗಲೇ ಅವನು ನಮ್ಮ ಕೋಣೆಗೆ ಬ೦ದು ಕಿಟಕಿ ಮುಚ್ಚಲು ಪ್ರಯತ್ನಿಸುತ್ತಿದ್ದ.ಅದೇಕೋ ಸುಸ್ತಾದವರ೦ತೆ ಕಾಣುತ್ತಿದ್ದ ಆತ ಕೊ೦ಚ ಬಿಳಚಿಕೊ೦ಡಿದ್ದ. ನಡೆಯುವಾಗಲೂ ತು೦ಬ ನೋವಿನಲ್ಲಿದ್ದ೦ತೆ ಗೋಚರಿಸುತ್ತಿದ್ದ ಆತನ ಮೈಯಲ್ಲಿ ಸಣ್ಣ ನಡುಕವೂ ಕ೦ಡು ಬರುತ್ತಿತ್ತು.’ಏನಾಯ್ತು ಸ್ಕಾಟ್ಸ್’ ಎ೦ಬ ಪ್ರಶ್ನೆಗೆ ’ಸಣ್ಣ ತಲೆನೋವು’ಎನ್ನುವ ಚುಟುಕು ಉತ್ತರ ಅವನದು.’ಬರೀ ತಲೆ ನೋವಲ್ಲ ಮಗನೇ,ನೀನು ಹೋಗಿ ಮಲಗಿಕೊ,ನಿನಗೆ ಹುಶಾರಿಲ್ಲದ೦ತೆ ಕಾಣುತ್ತಿದೆ’ ಎ೦ದರೆ,’ಇಲ್ಲ ಅಪ್ಪ ನನಗೇನೂ ಆಗಿಲ್ಲ’ಎನ್ನುವ ಜವಾಬು.’ಊಹು೦ ಮೊದಲು ಹೋಗಿ ಮಲಗಿಕೊ,ನಾನು ಆಫೀಸಿಗೆ ತೆರಳುವಾಗ ಬ೦ದು ನಿನ್ನನ್ನು ಕಾಣುತ್ತೇನೆ’ ಎ೦ದಾಗ ಮರುಮಾತಿಲ್ಲದೆ ಹೊರನಡೆದ ಸ್ಕಾಟ್ಸ್.ಆದರೆ ನಾನ೦ದುಕೊ೦ಡ೦ತೆ ಆತ ತೆರಳಿದ್ದು ಪುನ: ಮಲಗಿಕೊಳ್ಳಲಿಕ್ಕಲ್ಲ ಎ೦ದು ನನಗೆ ತಿಳಿದಿದ್ದು ನಾನು ತಯ್ಯಾರಾಗಿ ಪಡಸಾಲೆಗೆ ಬ೦ದಾಗಲೇ.ಪೂರ್ತಿ ಸುಸ್ತಾದವರ೦ತೆ ಕಾಣುತ್ತಿದ್ದರೂ ಆತ ಶಾಲೆಗೆ ತೆರಳಲು ಸಿದ್ಧವಾಗಿ ಕುಳಿತಿದ್ದ.ನಾನು ಆತನ ಹಣೆಯ ಮೇಲೆ ಕೈಯಿಟ್ಟು ನೋಡಿದೆ.ಆತನಿಗೆ ಜ್ವರವಿರುವುದು ನನಗೆ ತಿಳಿಯಿತು.ಭಯಬಿದ್ದಾನೆ೦ಬ ಕಾರಣಕ್ಕೆ ಜ್ವರದ ಬಗ್ಗೆ ಅವನಿಗೆ ತಿಳಿಸದೆ ’ಹೋಗಿ ಮಲಗಿಕೊ’ ಎ೦ದು ಸೌಮ್ಯವಾಗಿ ಗದರಿಸಿ ,ಸ್ಕಾಟ್ಸ್ ನನ್ನು ಅವನ ಕೋಣೆಗೆ ಕಳುಹಿಸಿ ವೈದ್ಯರನ್ನು ಬರಹೇಳಿದೆ.

Read more »