ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸಣ್ಣ ಕತೆ’

25
ಆಕ್ಟೋ

ಆಲಾಪ..

– ಸುಜಿತ್ ಕುಮಾರ್

young-couple-breaking-up-girl-450w-239389240‘ಎಕ್ಸ್ ಕ್ಯೂಸ್ ಮೀ .. ನೀವು ರಿಸರ್ವ್ಡ್ ಸೀಟಲ್ಲಿ ಕೂತಿದ್ದೀರಾ ಅನ್ಸುತ್ತೆ?’

‘ಇಸ್ ಇಟ್?.. ಸ್ವಲ್ಪ ತಾಳಿ, ಒಮ್ಮೆ ಚೆಕ್ ಮಾಡ್ಕೊಬಿಡ್ತೀನಿ’ ಎನುತ ಆಕೆ ಮೊಬೈಲ್ ಅನ್ನು ಹೊರಗೆಳೆದಳು.

‘ಓ ಗಾಡ್, ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ. ಏನ್ ಹುಡುಗ್ರಪ್ಪ ಇವ್ರು.. ಎನಿವೇಸ್ ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದು ಕೂಡಲೇ ಆಕೆ ಎದ್ದು ಕಾಫಿ ಡೇಯಿಂದ ಹೊರನಡೆದಳು.

ಈತನಿಗೆ ಅಷ್ಟರಲ್ಲಾಗಲೇ ತನ್ನ ಅನುಮಾನ ನಿಜವೆನಿಸಿದ್ದರಿಂದ ಒಂದರೆಕ್ಷಣ ಮಾತು ಬಾರದಂತಾಗುತ್ತದೆ. ತನ್ನ ಮೊಬೈಲ್ ಅನ್ನು ಹೊರಗೆಳೆದು ಸ್ವಿಚ್ ಆನ್ ಮಾಡಿದ ಕೂಡಲೇ ಆಕೆಯ ನಂಬರ್ ಎಂದು ಕಳಿಸಲ್ಪಟ್ಟಿದ್ದ ನಂಬರ್ನಿಂದ ಎರಡು ಮಿಸ್ಡ್ ಕಾಲ್ ಗಳು ಬಂದಿರುತ್ತವೆ. ಇದೇಗೆ ಸಾಧ್ಯ!? ಅದೆಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಕೂಡಲೇ ಆಕೆಯ ಅಪ್ಪನಿಗೆ ಫೋನಾಯಿಸಿ ನಾಲ್ಕು ಬೈದುಬಿಡಬೇಕೆಂಬ ಮನಸ್ಸಾದರೂ ಏಕೋ ಸುಮ್ಮನಾಗುತ್ತಾನೆ. ‘ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದ ಆಕೆಯ ಮಾತುಗಳಲ್ಲಿ ಅದೇನೋ ಒಂದು ಬಗೆಯ ಮುಗ್ದತೆ ಆತನನ್ನು ಕಾಡಿತು. ಅಂತಃಕರಣ ರೋಧಿಸಿತು. ತಾನು ಫೋಟೋದಲ್ಲಿ ನೋಡಿದ ಚೆಲುವೆ ನಿಜವಾಗಿಯೂ ಇವಳೇನಾ ಅಂತಂದುಕೊಳ್ಳುತ್ತಾ ಆಕೆಯ ಫೋಟೋಗಳನ್ನೇ ಒಂದೊಂದಾಗೆ ನೋಡತೊಡಗಿದ. Read more »

Advertisements
6
ಸೆಪ್ಟೆಂ

ಕನಸು ನನಸಾದಾಗ….!

-ನಾಗರಾಜ ಅಡಿಗ, ಕೈಗಾ.

download (2)ಸುಮಾರು ೩೫ ವರ್ಷಗಳ  ಹಿಂದಿನ ಮಾತು. ರೋಹಿತ್ ನ ಬಾಲ್ಯದ ದಿನಗಳವು. ಆ ದಿನಗಳಲ್ಲಿಯೇ ರೋಹಿತ್ ಗೆ ಬಾಹ್ಯಾಕಾಶ , ಆಕಾಶಕಾಯಗಳು, ಉಪಗ್ರಹಗಳು ಇವುಗಳ ಬಗ್ಗೆ ಅತ್ಯಂತ ಆಸಕ್ತಿ.  ಕರೆಂಟಿಲ್ಲದ ಆ ಕತ್ತಲ ರಾತ್ರಿಯಲ್ಲಿ ಆಕಾಶವನ್ನು ವೀಕ್ಷಿಸುವುದು ಒಂದು ಹವ್ಯಾಸವಾಗಿತ್ತು. ಸಪ್ತಋಷಿ ಮಂಡಲ, ದ್ರುವ ನಕ್ಷತ್ರ,  ನಕ್ಷತ್ರ ಪುಂಜಗಳು, ಶುಕ್ರ, ಮಂಗಳ, ಗುರು ಗ್ರಹಗಳನ್ನು ಬಾಲ್ಯದಲ್ಲಿಯೇ ಗುರುತಿಸಿಕೊಂಡು ಅವುಗಳ ಚಲನವಲನಗಳನ್ನು ವೀಕ್ಷಿಸುತ್ತಿದ್ದ.  ಪುತ್ತೂರಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಒಬ್ಬ ಖಗೋಳ ವೀಕ್ಷಕನಿಂದ ರಾತ್ರಿ “ಆಕಾಶ ವೀಕ್ಷಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೇಲಂತೂ ಆಸಕ್ತಿ ಇನ್ನೂ  ಹೆಚ್ಚಾಯಿತು. ಹೈಸ್ಕೂಲಿನಲ್ಲಿರುವಾಗ ಕಾಣಿಸಿದ ಧೂಮಕೇತು ಅವನ ಕುತೂಹಲವನ್ನು ಇನ್ನೂ  ಕೆರಳಿಸಿತ್ತು. ರೋಹಿತ್ ನು ಬಾಲ್ಯವನ್ನು ಕಳೆದ ಊರು ಕುಗ್ರಾಮ ಅಲ್ಲದಿದ್ದರೂ ಪ್ರಾಥಮಿಕ ಅಗತ್ಯತೆಗಳನ್ನೂ ಹೊಂದಿರದ ಚಿಕ್ಕ ಗ್ರಾಮ. ಒಂದೆರಡು ವರ್ಷಗಳ ಹಿಂದಷ್ಟೇ ಅಲ್ಲಿ ಸರಕಾರಿ ಹೈಸ್ಕೂಲ್ ಹುಟ್ಟಿಕೊಂಡಿದೆ. ಸಾಮಾನ್ಯ ಸರಕಾರಿ ಶಾಲೆಗಳಲ್ಲಾಗುವಂತೆ ಶಾಲೆಯ ಬಹುತ್ತಮ ಅಧ್ಯಾಪಕರು ನಿರಾಸಕ್ತಿಯಿಂದ ಪಾಠ ಹೇಳಿಕೊಡುತ್ತಿದ್ದರೆ, ವಿಜ್ಞಾನ ಅಧ್ಯಾಪಕರು ಅದಕ್ಕೆ ತದ್ವಿರುಧ್ಧ. ಹೈಸ್ಕೂಲಿನ ನೆಚ್ಚಿನ ವಿಜ್ಞಾನ ಅಧ್ಯಾಪಕರು ರೋಹಿತ್ ನ ಆಸಕ್ತಿಗಳಿಗೆ ಹೆಚ್ಚಿನ ಬೆಂಬಲ ಕೊಟ್ಟು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. “Children’s knowledge bank” ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತಂದುಕೊಟ್ಟು ರೋಹಿತ್ ಗೆ ಅರ್ಥವಾಗದ ವಿಷಯಗಳನ್ನು ವಿವರವಾಗಿ ತಿಳಿಸುತ್ತಿದ್ದರು. ಆಸಕ್ತಿ ತೋರುತ್ತಿದ್ದ ವಿದ್ಯಾರ್ಥಿಗಳೆಂದರೆ ಮುತುವರ್ಜಿವಹಿಸಿ ಹೇಳಿಕೊಡುವುದು ಅವರ ಇಷ್ಟದ ವಿಷಯವಾಗಿತ್ತು. ಅಕ್ಕ-ಪಕ್ಕದ ಶಾಲೆಗಳಲ್ಲಾಗುವ ವಿಜ್ಞಾನ ವಸ್ತುಪ್ರದರ್ಶನಗಳಲ್ಲಿ ಅಧ್ಯಾಪಕದ ಸಹಾಯ-ಪ್ರೋತ್ಸಾಹದಿಂದ ಭಾಗವಹಿಸಿ, ಸೌರವ್ಯೂಹ, ಚಂದ್ರಗ್ರಹಣ-ಸೂರ್ಯಗ್ರಹಣಗಳ ಮಾದರಿಗಳನ್ನು ಮಾಡಿ ಪ್ರದರ್ಶಿಸಿ ಹಲವವಾರು ಬಹುಮಾನಗಳನ್ನೂ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದ. ಶಾಲೆಯಲ್ಲಿರುವ ದೂರದರ್ಶಕದಿಂದ ಕ್ಲಾಸಿನ ಎಲ್ಲ ಮಕ್ಕಳಿಗೆ ಚಂದ್ರನನ್ನು ಮಾತ್ರ ತೋರಿಸುತ್ತಿದ್ದ ಅಧ್ಯಾಪಕರು,  ರೋಹಿತ್ ಅನ್ನು ರಾತ್ರಿಯಲ್ಲೂ ಕರೆದು ಗ್ರಹಗಳ ವೀಕ್ಷಣೆ ಮಾಡಿಸುತ್ತಿದ್ದರು. ಹೈಸ್ಕೂಲಿನ್ನಲಿರುವಾಗಲೇ ಗುರು, ಮಂಗಳ ಶುಕ್ರ ಗ್ರಹಗಳ ಚಲನಯನ್ನು ಅಂದಾಜಿಸುತ್ತಿದ್ದ. ಹಾಗೆಯೇ ಭಾರತೀಯ ಪಂಚಾಂಗ ಮತ್ತು ಖಗೋಳ ವಿಜ್ಞಾನಗಳ ಸಂಬಂಧವನ್ನು ಹಲವರನ್ನು ಕೇಳಿ ತನ್ನ ಸ್ವಯಂ ಜ್ಞಾನಾರ್ಜನೆ ಮಾಡುತ್ತಿದ್ದ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ತನ್ನ ಕನಸನ್ನೂ  ತಂದೆ-ತಾಯಿ, ಅಧ್ಯಾಪಕರ ಅಲ್ಲದೆ ಊರಿನವರ ನಿರೀಕ್ಷೆಯನ್ನೂ  ಆಕಾಶದೆತ್ತರಕ್ಕೆ ಏರಿಸಿಟ್ಟಿದ್ದ.! Read more »

2
ಆಗಸ್ಟ್

ಕೀಳರಿಮೆಯನ್ನೂ ಕಥಾವಸ್ತುವಾಗಿ ಬಳಸಿಕೊಂಡ ಅಕ್ಷರ ಮಾಂತ್ರಿಕನೀತ……!!!

ಗುರುರಾಜ್ ಕೊಡ್ಕಣಿ, ಯಲ್ಲಾಪುರ

stock-photo-taganrog-russia-june-sculpture-illustrates-a-short-story-fat-and-thin-by-anton-347343851ಅದು ಇಬ್ಬರು ಸ್ನೇಹಿತರು ತುಂಬ ವರ್ಷಗಳ ನಂತರ ಸೇರಿದ ಕ್ಷಣ. ಸ್ಥೂಲದೇಹಿ ವ್ಯಕ್ತಿಯೊಬ್ಬ, ತನ್ನ ಕೃಶಕಾಯದ ಸ್ನೇಹಿತನನ್ನು ನಿಕೋಲಿವಸ್ಕಿ ಸ್ಟೇಷನ್ನಿನಲ್ಲಿ ಸಂಧಿಸಿದ ಸಂತಸಮಯ ಗಳಿಗೆಯದು. ಸ್ಥೂಲಕಾಯದ ವ್ಯಕ್ತಿಯ ತುಟಿಗಳು ಕೆಂಪಗೆ ಕಳಿತ ಚೆರ್ರಿಯ ಹಣ್ಣುಗಳಂತೆ ಹೊಳೆಯುತ್ತಿದ್ದರೆ, ಆತನ ಬಾಯಿಯಿಂದ ಹೊಮ್ಮುತ್ತಿದ್ದ ವೈನ್ ಮತ್ತು ಕಿತ್ತಳೆ ಹಣ್ಣಿನ ಗಂಧ ಆತ ಅದಾಗಲೇ ತನ್ನ ಊಟವನ್ನು ಮುಗಿಸಿದ್ದನ್ನೆನ್ನುವುದಕ್ಕೆ ಸಾಕ್ಷಿಯಾಗಿದ್ದವು. ನಿಧಾನವಾಗಿ ಹಳಿಗಳ ಮೇಲೆ ತೆವಳುತ್ತಿದ್ದ ರೈಲಿನಿಂದ ಪ್ಲಾಟಿಫಾರ್ಮಿನ ಮೇಲೆ ಕುಪ್ಪಳಿಸಿದ್ದ ಕೃಶದೇಹಿ ವ್ಯಕ್ತಿಯ ಎರಡೂ ಕೈಗಳಲ್ಲಿ ಬಟ್ಟೆ ತುಂಬಿದ ಸೂಟ್ ಕೇಸು ಮತ್ತೀತರ ಸರಂಜಾಮುಗಳಿದ್ದವು. ಅವನ ಅಂಗಿಯಿಂದ ಹೊಮ್ಮುತ್ತಿದ್ದ ತಿಳಿಯಾದ ಕಂಪು ಆತ ರೈಲಿನಲ್ಲಿಯೇ ಮಾಂಸದ ತುಂಡುಗಳ ಜೊತೆಗೆ ಕಾಫಿಯನ್ನು ಸೇವಿಸಿದ್ದನೆನ್ನುವುದರ ಪುರಾವೆಯಾಗಿದ್ದವು. ಅವನ ಜೊತೆಗಿದ್ದ ತೆಳ್ಳಗಿನ ಮೈಕಟ್ಟಿನ, ನೀಳ ಗದ್ದದ ಅವನ ಮಡದಿ ಮತ್ತು ಒಕ್ಕಣ್ಣನಂತೇ ಕಾಣುತ್ತಿದ್ದ ಬಾಲಕ ರೈಲಿನಿಂದಿಳಿದು ಕೃಶಕಾಯದ ವ್ಯಕ್ತಿಯನ್ನೇ ಹಿಂಬಾಲಿಸತೊಡಗಿದರು. Read more »