ಮಾರ್ಕ್ಸ್ ವಾದ ಮತ್ತು ನೆಹರೂವಾದ ಗಾಂಧಿವಾದವನ್ನು ಕೊಂದಿತೇ?
ಡಾ|| ಬಿ.ವಿ ವಸಂತ ಕುಮಾರ್
ಕನ್ನಡ ಪ್ರಾಧ್ಯಾಪಕರು
ಮಹಾರಾಣಿ ಮಹಿಳಾ ಕಾಲೇಜು
ಮೈಸೂರು
ಇಂದು ಕೇರಳ ಹಾಗೂ ಕರ್ನಾಟಕದಲ್ಲಿ ಕ್ರಮವಾಗಿ ಮಾರ್ಕ್ಸ್ ವಾದಿ ಹಾಗೂ ನೆಹರೂವಾದೀ ಪ್ರಭುತ್ವಗಳು ಆಳುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಸೈದ್ಧಾಂತಿಕವಾದ ಕಾರಣಗಳಿಗಾಗಿ ಹಿಂದೂ ಕಾರ್ಯಕರ್ತರ ಕೊಲೆಗಳು ಆಗುತ್ತಿವೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದರೊಟ್ಟಿಗೆ ಕೇರಳ ಹಾಗೂ ಕರ್ನಾಟಕದ ಪಿ.ಎಫ್.ಐ ಸಂಘಟನೆಯು ಮುಸ್ಲಿಂ ಮೂಲಭೂತವಾದಿ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಸಂಗವಿರುವ ಸಂಘಟನೆಗಳ ಜೊತೆಗೆ ಹೆಸರು ತುಳುಕು ಹಾಕಿಕೊಂಡಿದೆ. ಈ ನಡುವೆ ದಕ್ಷಿಣ ಭಾರತದ ಹೆಸರಾಂತ ನಟ ಕಮಲಹಾಸನ್ ಹಿಂದೂ ಭಯೋತ್ಫಾದನೆಯ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅದನ್ನು ಮತ್ತೊಬ್ಬ ಕನ್ನಡದ ನಟ ಪ್ರಕಾಶ ರೈ ಸಮರ್ಥಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳನ್ನು ಬಿಜೆಪಿಯ ರಾಜ್ಯ ನಾಯಕರು ಹಾಗೂ ರಾಷ್ಟ್ರ ನಾಯಕರು ಖಂಡಿಸಿ ಹೋರಾಟಕ್ಕಿಳಿದಿದ್ದಾರೆ. ಮತ್ತಷ್ಟು ಓದು
ಮೋದಿ ಫ್ಯಾಕ್ಟರ್ : ಒಮರ್ ಅಬ್ದುಲ್ಲಾರ ಮಾತುಗಳು ಯುಪಿಎ ದಿಗಿಲಿನ ಕನ್ನಡಿಯೇ?
ಮೂಲ : ಸಂಜಯ್ ಸಿಂಗ್
ಅನುವಾದ : ಪ್ರಶಾಂತ್ .ಕೆ
“ನನಗನ್ನಿಸುತ್ತೆ, ನಾವೇನಾದರೂ( ಯು.ಪಿ.ಎ. ಅಂಗಪಕ್ಷಗಳು) ‘ಮೋದಿ ಫ಼್ಯಾಕ್ಟರ್’ ನ್ನು ನಿರ್ಲಕ್ಷಿಸಿದರೆ ಅದು ಮೂರ್ಖತನವಾಗುತ್ತೆ; ಅಲ್ಲದೆ ಅದೊಂದು ಅಪಾಯಕಾರಿ ತಪ್ಪು ಕೂಡ..”
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ‘ಒಮರ್ ಅಬ್ದುಲ್ಲಾ’, ‘ಹಿಂದುಸ್ತಾನ್ ಟೈಮ್ಸ್’ ಗೆ ನೀಡಿದ ಸಂದರ್ಶನದಲ್ಲಿ ಆಡಿದ ಮಾತುಗಳಿವು. ದೇಶದ ಅತ್ಯಂತ ಸಮಸ್ಯಾತ್ಮಕ ರಾಜ್ಯದ, ಅದರಲ್ಲೂ ಆ ರಾಜ್ಯದ ಆಗು- ಹೋಗುಗಳು ಇಡೀ ದೇಶವನ್ನ ತಲ್ಲಣಗೊಳಿಸುತ್ತಿರುವ ಸಂದರ್ಭದಲ್ಲಿ, ಆ ರಾಜ್ಯದ ಮುಖ್ಯಮಂತ್ರಿಯ ಮಾತುಗಳನ್ನು ಹಗುರವಾಗಿ ಕಾಣುವ ಹಾಗಿಲ್ಲ. ‘ಒಮರ್’ ‘ರಾಹುಲ್ ಗಾಂಧಿ’ಯವರ ಆಪ್ತ ಮಿತ್ರ, ಅಲ್ಲದೆ ಅವರ ತಂದೆ ‘ಫ಼ರೂಕ್ ಅಬ್ದುಲ್ಲ’ ಯು.ಪಿ.ಎ. ಸರಕಾರದಲ್ಲಿ ಮಂತ್ರಿ ಕೂಡ ಹೌದು; ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಇನ್ನೂ ಮಹತ್ವ ಪಡೆದುಕೊಳ್ಳುತ್ತವೆ, ‘ರಾಹುಲ್ ಗಾಂಧಿ’ ಉತ್ತರ ಪ್ರದೇಶ, ರಾಮ್ ಪುರದಲ್ಲಿ ಹೇಳಿದ ” ೨೦೧೪ ರಲ್ಲಿ ಕೇಂದ್ರದಲ್ಲಿ ಯುವಶಕ್ತಿಯ ಸರಕಾರ ಅಧಿಕಾರಕ್ಕೆ ಬರುತ್ತದೆ, ಅದು ದೇಶವನ್ನೇ ಬದಲಾಯಿಸಬಲ್ಲುದು” ಎಂಬ ಮಾತುಗಳನ್ನು ಒಮರ್ ಪೂರ್ತಿ ಒಪ್ಪಿದಂತೆ ಕಾಣುವುದಿಲ್ಲ; ನಿಮಗೆ ಗೊತ್ತಿರಲಿ, ರಾಹುಲ್ ಮತ್ತು ಒಮರ್ ಇಬ್ಬರೂ ಒಂದೇ ವರ್ಷದಲ್ಲಿ ಜನಿಸಿದವರು ಮತ್ತು ಇಬ್ಬರಿಗೂ ಏಗ ೪೩ ವರ್ಷ ವಯಸ್ಸು. ಅನೇಕ ಕಾಂಗ್ರೆಸ್ ನಾಯಕರಂತೆ, ರಾಹುಲ್ ಗಾಂಧಿಯ ಈ ಭಾಷಣದ ಬಳಿಕ ಮುಂದಿನ ಸರಕಾರ ನಡೆಸಲು ಆತನೇ ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸದ ಕಾರಣ , ನ್ಯಾಷನಲ್ ಕಾನ್ಫ಼ರೆನ್ಸ್ ನ ನಾಯಕನ ಮಾತುಗಳನ್ನು ವಿಶೇಷವಾಗಿ ಪರಿಗಣಿಸಬೇಕು.