ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸರ್ಜಿಕಲ್ ಸ್ಟ್ರೈಕ್’

31
ಮೇ

ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ 2

– ತಾರನಾಥ ಸೋನ

ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್  ಭಾಗ-1

ಸಾಸ್ ಅರಣ್ಯದಲ್ಲಿ  ಇಷ್ಟೆಲ್ಲ ಆಗುತ್ತಿರುವಾಗ ಇತ್ತ ಕಡೆ ಬ್ರಿಟಿಷ್ ಸೇನೆಯಲ್ಲಿ ಸದ್ದಿಲ್ಲದಂತೆ ರೂಪುರೇಷೆಯೊಂದು ತಯಾರಾಗಿತ್ತು. ಅಪಹೃತರನ್ನು ರಕ್ಷಿಸಲು ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ರಹಸ್ಯ ಕಾರ್ಯಾಚರಣೆ ಒಂದಕ್ಕೆ ಅನುಮತಿ ಕೊಟ್ಟರು. ಅದುವೇ ಆಪರೇಷನ್ ಬರ್ರಾಸ್.  ಇಂತಹ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಗೆಂದು ಸಿದ್ದವಾಗಿದ್ದ ಸಾಸ್ (SAS- Special Air service) ತನ್ನ ಪರಿವೀಕ್ಷಣಾ ತಂಡವೊಂದನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ವೆಸ್ಟ್ ಸೈಡ್ ಬಾಯ್ಸ್ಗಳ ತಾಣದತ್ತ ಕಳುಹಿಸಿತು. ಅಪಹೃತರನ್ನು ಕೂಡಿ ಹಾಕಿದ್ದ ಪ್ರದೇಶದ ಸ್ವಲ್ಪ ದೂರದಲ್ಲಿ ಅಡಗಿಕೊಂಡ ಇವರು ಸೂಕ್ಷ್ಮ ಮೈಕ್ರೋಫೋನ್ ಮೂಲಕ ಅಲ್ಲಿಂದ ಕೇಳಿ ಬರುವ ಮಾತುಕತೆಗಳನ್ನು ಆಲಿಸಲಾರಂಭಿಸಿದರು. ಬೇಡಿಕೆಗಳ ಈಡೇರಿಕೆ ತಡವಾದಂತೆ ಉಗ್ರರು ಯೋಧರನ್ನು ಹಿಂಸಿಸಲಾರಂಭಿಸಿದರು. ಗುಂಡಿಯೊಳಗೆ ಜೀವಂತ ಶವವಾಗಿದ್ದ ಮುಸ ಬಂಗುರಾನ ಪರಿಸ್ಥಿತಿ ದಿನಕಳೆದಂತೆ ಬಿಗಡಾಯಿಸುತಿತ್ತು. ಗ್ಯಾಂಗ್ ಜತೆಗಿದ್ದ ಸಣ್ಣ ಸಣ್ಣ ಬಾಲಕರು ಕೂಡ ಅವನಿಗೆ ಕಲ್ಲು ಹೊಡೆಯುತ್ತಿದ್ದರು. ಮೇಜರ್ ಅಲನ್ ಮಾರ್ಷಲ್ರನ್ನು ಅಂತಾರಾಷ್ಟ್ರೀಯ ಮಾಧ್ಯಮದ ಜೊತೆಗೆ ಫೋನ್ನಲ್ಲಿ ಮಾತಾಡುವಂತೆ ಒತ್ತಾಯಿಸಲಾಗುತ್ತಿತ್ತು, ಒಪ್ಪದಿದ್ದಾಗ ಕೊಲ್ಲುವುದಾಗಿ ಹೆದರಿಸುತಿದ್ದರು. ಇದನ್ನು ಪರಿವೀಕ್ಷಣಾ ತಂಡ ಮುಖ್ಯನೆಲೆಗೆ ವರದಿ ಮಾಡುತ್ತಿತ್ತು.

ಸಿಯಾರ್ ಲಿಯೋನ್ನ ಮುಖ್ಯ ನದಿಯಾದ ರೊಕೆಲ್ ಕ್ರೀಕ್ ನ ಉತ್ತರ ಭಾಗದಲ್ಲಿ ಒತ್ತೆಯಾಳುಗಳನ್ನು ಕೂಡಿ ಹಾಕಿದ ಗಬೇರಿ ಬಾನ ಇದ್ದರೆ, ನದಿಯ ದಕ್ಷಿಣ ಭಾಗದ ಮ್ಯಾಗ್ಬೇನಿಯಲ್ಲಿ  ಅವರದ್ದೆ ಇನ್ನೊಂದು ತಾಣವಿತ್ತು. ಸಾಸ್ ತಂಡ  ಕೇವಲ ಗಬೇರಿ ಬಾನಕ್ಕೆ ಧಾಳಿ ನಡೆಸಿದರೆ ಅಲ್ಲಿಂದ ಸುಮಾರು 2 km ದೂರದ ಮ್ಯಾಗ್ಬೇನಿಯಲ್ಲಿದ್ದ ಉಗ್ರರ ಪ್ರತಿರೋಧ ಎದುರಿಸಬೇಕಿತ್ತು. ಹಾಗಾಗಿ ಏಕಕಾಲದಲ್ಲಿ ನದಿಯ ಎರಡು ಬದಿ ಧಾಳಿ ಮಾಡಬೇಕಿತ್ತು. ಈ ಸಂಯುಕ್ತ ಧಾಳಿಗೆ ಬ್ರಿಟಿಷ್ ಪ್ಯಾರಾಚೂಟ್ ರೆಜಿಮೆಂಟ್ನ 130 ಯೋಧರನ್ನು ಬಳಸಿಕೊಳ್ಳಲು ನಿರ್ಧರಿಸಿದರು. ದಟ್ಟವಾದ ಅರಣ್ಯ, ಅಪಾಯಕಾರಿ ರಸ್ತೆಮಾರ್ಗ ಮತ್ತು ಹರಿಯುವ ನದಿಯಿಂದಾಗಿ ವಾಯುಮಾರ್ಗದಲ್ಲಿ ಧಾಳಿ ಮಾಡಲು ಯೋಜಿಸಲಾಯಿತು. ಶತ್ರುಗಳು ಹೊಂದಿರುವ ಆಯುಧಗಳು, ಚಲನವಲನ ಹಾಗು ಹೆಲಿಕ್ಯಾಪ್ಟರ್ ಇಳಿಯಲು ಸೂಕ್ತ ಜಾಗ ಮೊದಲಾದ ಮಾಹಿತಿಯನ್ನು ಸಾಸ್ ನ  ಪರಿವೀಕ್ಷಣಾ ತಂಡ ಒದಗಿಸಿತು. ಒಂದು ರಹಸ್ಯ ತಾಣದಲ್ಲಿ ಕಾರ್ಯಾಚರಣೆಯ ರಿಹರ್ಸಲ್ ಕೂಡ ನಡೆಸಿದ್ದರು, ಏಕೆಂದರೆ 12 ಮಂದಿ ಸೇನೆಯ ಒತ್ತೆಯಾಳುಗಳು ಹಾಗು ಹೀಗೆಯೇ ಬಂಧಿತರಾಗಿದ್ದ ಕೆಲವು ಸಿಯರ್ ಲಿಯೋನ್ ನಾಗರಿಕರ ಪ್ರಾಣಕ್ಕೆ ಕುತ್ತು ಉಂಟಾಗಬಾರದಿತ್ತು.

Read more »

14
ನವೆಂ

ಮೋದಿಜಿ ಮಾಡುವುದೆಲ್ಲ ವೋಟಿಗಲ್ಲಾ…!

– ವಿಕ್ರಮ್ ಎಂ.ಆರ್

know-what-pm-modi-were-doing-in-surgical-strike-nightನಲವತ್ತು ವರ್ಷಗಳಿಂದ ಹಾಗೆಯೇ ಮೂಲೆ ಗುಂಪಾಗಿ ಬಿದ್ದಿತ್ತು. 1973ರಲ್ಲಿ ಇಂದಿರಾಗಾಂಧಿ OROP ಪ್ರಸ್ತಾಪವನ್ನೇ ಕಿತ್ತು ಎಸೆದಿದ್ದರು. ಇಂದು ಮೋದಿ ಸರ್ಕಾರ ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಸೈನಿಕರ ಕನಸನ್ನು ನನಸು ಮಾಡಿದೆ. GST ಎಷ್ಟು ವರ್ಷದಿಂದ ಚರ್ಚೆಯಲ್ಲಿತ್ತು, ನೀವೇ ವಿಚಾರ ಮಾಡಿ! ಗಾಂಧಿ ಮನೆತನದ ತಂದಿಟ್ಟ ನೂರೆಂಟು ವಿಘ್ನಗಳ ನಡುವೆಯೂ ಮೋದಿಜಿ GST ಬಿಲ್ಲನ್ನು ಸಂಸತ್ತಿನಲ್ಲಿ ತಂದು ಎರಡೂ ಸದನದಲ್ಲಿ ಮಂಡನೆ ಮಾಡಿ ಎಲ್ಲರ ಒಪ್ಪಂದ ಪಡೆದು ಪಾಸು ಮಾಡಲಾಗಿದೆ. ಪ್ರಧಾನಮಂತ್ರಿ ಧನ ಜನ ಯೋಜನೆ ಅಸ್ತಿತ್ವಕ್ಕೆ ಬಂದಾಗಿನಿಂದ ಎಷ್ಟೋ ಕೋಟಿ ಬಡ ಜನರು ಬ್ಯಾಂಕಿನಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಮೊದಲು ಅವರಿಗೆ ಸಿಗಬೇಕಾದ ಹಣ ಕೈಗೆ ಬರುತ್ತಿರಲಿಲ್ಲ ಆದರೆ ಈಗ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತದೆ. ನಮ್ಮ ಕಂಪನಿಯಲ್ಲಿರುವ ಕಾಂಟ್ರಾಕ್ಟ್ ಕೆಲಸಗಾರನೊಬ್ಬ ಹೀಗೆ ಹೇಳುತ್ತಾನೆ “ಸರ್, ಮೊದಲು ನೂರು ರೂಪಾಯಿ ವೇತನ ಇದ್ದರೆ ಅದರಲ್ಲಿ ಇಪ್ಪತ್ತು ರೂಪಾಯಿಯನ್ನು ಮೇಲ್ವಿಚಾರಕ ಇಟ್ಟುಕೊಂಡು ಉಳಿದಿದ್ದನ್ನು ನನಗೆ ಕೊಡುತ್ತಿದ್ದ ಆದರೆ ಈಗ ನೇರವಾಗಿ ನೂರು ರುಪಾಯಿ ನನ್ನ ಬ್ಯಾಂಕಿಗೆ ಬರುತ್ತದೆ”. ಇದು ಒಂದು ಉದಾಹರಣೆ ಅಷ್ಟೇ, ಇಂತಹ ಸಾವಿರ ನಿದರ್ಶನಗಳನ್ನು ಹಂಚಿಕೊಳ್ಳಬಹುದು. ಇವೆಲ್ಲ ಒಂದಲ್ಲಾ ಒಂದುಕಡೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ‌. ಆದರೆ ಮೋದಿ ಸರ್ಕಾರ ಏನೇ ಮಾಡಿದರೂ ಕೆಲವರಿಗೆ ಉರಿ. ವಿರೋಧ ಪಕ್ಷ ಅಥವಾ ಕೆಲವು ಬುದ್ಧಿಜೀವಿಗಳು ಮೋದಿಜಿಯವರ ಪ್ರತಿ ಪ್ರಯತ್ನವನ್ನೂ ವಿರೋಧಿಸುವುದು ಯಾತಕ್ಕೆ? ಮಾಡಬೇಕು ಇಲ್ಲವೇ ಮಾಡಲು ಬಿಡಬೇಕು. ಅರವತ್ತು ವರ್ಷವಾಯಿತು, ಇನ್ನೂ ದೇಶ ಎಷ್ಟು ಮುಂದುವರಿಯಬೇಕೋ ಅಷ್ಟು ಮುಂದುವರಿದಿಲ್ಲ. ಮೋದಿಜಿ ಬಂದಾಗಿನಿಂದ ಒಂದು ರಿದಮ್ ಸಿಕ್ಕಿದೆ ಅದನ್ನು ಹಾಳು ಮಾಡಲು‌ ಕಾರಣಗಳೇನು? ಏನೇ ಮಾಡಿದರೂ ಅದು ಚುನಾವಣೆಯಲ್ಲಿ ಮತ ಗಳಿಸಲೇ ಮಾಡಿದ್ದು ಎಂದು ಡಂಗುರ ಬಾರಿಸುತ್ತ ಸಾರುವ ಈ ಎಡಬಿಡಂಗಿಗಳ ಉದ್ದೇಶವಾದರೂ ಏನು? Read more »