ಯುಎಇ ನಿಜಕ್ಕೂ ಅಷ್ಟೊಂದು ಅಸಹಿಷ್ಣು ದೇಶವೇ?
– ರಾಘವೇಂದ್ರ ಎಮ್ ಸುಬ್ರಹ್ಮಣ್ಯ
ಕಳೆದೆರಡು ವಾರದಿಂದ ಗಲ್ಫ್ ದೇಶಗಳಲ್ಲಿರುವ ಹಿಂದೂಗಳ ಕೆಲಸಕ್ಕೆ ಕುತ್ತು ತರುವ ವ್ಯವಸ್ಥಿತ ಸಂಚುಗಳು ನಡೆದಿವೆ. ದೆಹಲಿಯ ತಬ್ಲೀಗೀ ಜಮಾತ್’ನವರ ವರ್ತನೆಯನ್ನು ಖಂಡಿಸಿ ಏನನ್ನಾದರೂ ಬರೆದರೆ ಅದೇ ದೊಡ್ಡ ತಪ್ಪು ಎಂಬಂತೆ ಬಿಂಬಿಸಿ, ಪೋಲಿಸರಿಗೆ ದೂರು ನೀಡುವ ಕೆಲಸ ನಡೆದಿದೆ. ಹಾಗಾದರೆ ಯುಎಇಯಲ್ಲಿ ಅಷ್ಟೆಲ್ಲಾ ಸುಲಭಕ್ಕೆ ಯಾರನ್ನಾದರೂ ಅರೆಸ್ಟ್ ಮಾಡಿಸಬಹುದೇ? ಇಸ್ಲಾಂ ಬಗ್ಗೆ ಏನೂ ಕೆಟ್ಟದಾಗಿ ಬರೆಯದೇ, ಭಾರತದ ಕೆಲ ಮುಸ್ಲಿಮರ ತಪ್ಪುಗಳ ಬಗ್ಗೆ ಬರೆದರೆ ಅದು ಶಿಕ್ಷಾರ್ಹ ಅಪರಾಧವೇ?
ಹೆಚ್ಚಿನವರಿಗೆ ಅರಬ್ ರಾಷ್ಟ್ರಗಳೆಂದರೆ ಬಹಳಷ್ಟು ತಪ್ಪು ಅಭಿಪ್ರಾಯಗಳಿವೆ. ತಪ್ಪು ಮಾಡಿದರೆ ಸಾರ್ವಜನಿಕವಾಗಿ ಛಡಿಯೇಟು ಬೀಳುತ್ತದೆ, ಕೈ ಕಾಲು ತಲೆ ಕಡಿಯುತ್ತಾರೆ ಎಂಬೆಲ್ಲಾ ಅನಿಸಿಕೆಗಳಿವೆ. ಆದರೆ ಈ ಎಲ್ಲಾ ಹೆಚ್ಚಿನ ಅಭಿಪ್ರಾಯಗಳು ಬಂದಿರುವುದು ಸೌದಿ ಅರೇಬಿಯಾದಿಂದ. ಯಾಕೆಂದರೆ ಇವೆಲ್ಲಾ ಹೆಚ್ಚಾಗಿ ನಡೆಯುವುದು ಅಲ್ಲಿ ಮಾತ್ರ. ಆದರೆ ಎಲ್ಲಾ ಅರಬ್ ದೇಶಗಳೂ ಹೀಗಿಲ್ಲ. ಇಲ್ಲಿ ಇಸ್ಲಾಂ ನಿಂದನೆಯನ್ನು ಯಾರೂ ಸಹಿಸುವುದಿಲ್ಲವಾದರೂ, ಒಮಾನ್, ಬಹರೈನ್ ಮತ್ತು ಯುಎಇ ದೇಶಗಳು ಸಹಿಷ್ಣುತೆಯಲ್ಲಿ ಹೊಸ ಅಧ್ಯಾಯಗಳನ್ನೇ ಬರೆದಿವೆ. ಮತ್ತಷ್ಟು ಓದು
ಸಹಿಷ್ಣುತೆ-ಅಸಹಿಷ್ಣುತೆಗಳ ಸುತ್ತಾ…..
– ಸಂಗೀತಾ ದೀಪಕ್
ಕಳೆದ ವರ್ಷವೆಲ್ಲಾ ಸುದ್ದಿ ಮಾಡಿದ, ದೇಶ ವಿದೇಶಗಳಲ್ಲಿ ತೀರ್ವ ಸಂಚಲನವನ್ನು ಉಂಟು ಮಾಡಿದ ಪದ ಅಸಹಿಷ್ಣುತೆ. ಇದಕ್ಕೆ ಅದೆಷ್ಟೋ ಪ್ರಶಸ್ತಿ, ಪುರಸ್ಕಾರಗಳ ಮರ್ಯಾದೆ ಬಲಿಯಾದವು, ಅದೆಷ್ಟೋ ತಾರಾಮಣಿಯರ, ವಿದ್ವಜ್ಜನರ ಪರ-ವಿರೋಧ ಹೇಳಿಕೆಗಳು ವಿವಾದಕ್ಕೀಡಾದವು. ಒಂದು ರಾಜ್ಯದ ರಾಜಕೀಯ ಭವಿಷ್ಯವನ್ನು ತಕ್ಕ ಮಟ್ಟಿಗೆ ಬದಲಾಯಿಸಿದ ಪದ ಅದು. ಅಸಹಿಷ್ಣುತೆ ಬಗ್ಗೆ ಬರೆಯುತ್ತಿರುವ ಲೇಖನವೆಂದರೆ, ಯಾವುದೋ ರಾಜಕೀಯ ಪಕ್ಷದ ಪರ ಅಥವ ವಿರುದ್ಧವಾಗಿಯೇ ಈ ಲೇಖನವೆಂದು ಎಲ್ಲಾ ಭಾವಿಸುವುದು ಸಹಜ, ಆದರೆ ಅಸಹಿಷ್ಣುತೆ ಮತ್ತು ಮಾನವನ ನಡುವಿನ ಸಂಬಂಧವನ್ನು ತಿಳಿಸುವುದಷ್ಟೇ ಈ ಲೇಖನದ ಉದ್ದೇಶ. ಇಲ್ಲಿ ಅಸಹಿಷ್ಣುತೆ, ಅದೂ ಭಾರತೀಯರಲ್ಲಿ ಎಂಬ ವಿಷಯವಂತೂ ರಾಜ್ಯ, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗಿ ದಿನಗಟ್ಟಲೇ ಪತ್ರಿಕೆಗಳಿಗೆ ಹಾಗೂ ದೃಶ್ಯ ಮಾಧ್ಯಮಗಳಿಗೆ ಆಹಾರವನ್ನು ಒದಗಿಸಿದ್ದವು. ಈ ವಿಷಯದಲ್ಲಿ ಸಾಮಾಜಿಕ ತಾಣಗಳು ಕೂಡ ಹಿಂದೆ ಬಿದ್ದಿರಲಿಲ್ಲ, ತಾವೇನೂ ಕಡಿಮೆಯಿಲ್ಲವನ್ನುವಂತೆ ಜನರೂ ಮನಸೋ ಇಚ್ಛೆ ತಮ್ಮ ಅಭಿಪ್ರಾಯಗಳನ್ನು ಹರಿಯಬಿಟ್ಟಿದ್ದರು. ಮತ್ತಷ್ಟು ಓದು