ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸಾಹಿತ್ಯ ಸಮ್ಮೇಳನ’

3
ಡಿಸೆ

ಸಾಹಿತಿ, ಬುದ್ಧಿಜೀವಿಗಳ ಆತ್ಮ ಸಾಕ್ಷಿ ಯಾರ ಪಾದಾರುವಿಂದವನ್ನು ಸೇರಿದೆ?

ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ
ಆಂಧ್ರ ಪ್ರದೇಶ

15203330_1161962633852199_2178590942366491034_nಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅರೆನಗ್ನ ಚಿತ್ರ ನೋಡಿ, ಸಾಕಷ್ಟು ಛೀಮಾರಿಗೆ ಒಳಗಾಗಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್, “ಮೂರೂ ಬಿಟ್ಟವರು ಊರಿಗೆ ದೊಡ್ಡವರು” ಎನ್ನುವ ಹಾಗೇ ಓಡಾಡಿಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ. ಈ ನಡುವೆ ಸರ್ಕಾರವು ಸಚಿವ ಮಹಾಶಯರ ಬೆನ್ನಿಗೆ ನಿಂತು, ಸಿ.ಐ.ಡಿ.ಯಿಂದ ತನಿಖೆಯ ನಾಟಕವಾಡಿಸಿ ಕ್ಲೀನ್‍ಚೀಟ್ ನೀಡುವ ಉಮ್ಮೇದಿಯಲ್ಲಿದೆ. ನಿಷ್ಠ ಪೋಲಿಸ್ ಅಧಿಕಾರಿ ಗಣಪತಿ ಸಾವಿನ ವಿಚಾರದಲ್ಲೇ ಜಾರ್ಜ್‍ಗೆ ಕ್ಲೀನ್‍ಚೀಟ್ ನೀಡಿದವರಿಗೆ, ಈ ಪ್ರಕರಣ ಹೂವೆತ್ತಿದಷ್ಟೇ ಸಲೀಸು ಬಿಡಿ! ಇರಲಿ, ಇದೆಲ್ಲಾ ರಾಜಕಾರಣದ ಕೇಡಿನ ಭಾಗ. ನನ್ನ ಪ್ರಶ್ನೆ ಆ ಕುರಿತದ್ದಲ್ಲ, ಆ ಉದ್ದೇಶವೂ ನನ್ನಲ್ಲಿಲ್ಲ. ಆದರೆ ಸಭ್ಯ, ಪ್ರಜ್ಞಾವಂತ ಸಮಾಜವನ್ನು ಕಾಡುತ್ತಿರುವುದು ಹಾಗೂ ಸಂಕಟಕ್ಕೆ ದೂಡಿರುವುದು, ಈ ಮನುಷ್ಯ ನಾಡಿದ್ದು ರಾಯಚೂರಿನಲ್ಲಿ ನಡೆಯುತ್ತಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷನೆಂಬುದು! Read more »

Advertisements
7
ಫೆಬ್ರ

ಸಮ್ಮೇಳನದ ವೇದಿಕೆಯಲ್ಲಿ ಬರಹಗಾರರೋಬ್ಬರನ್ನು ನಿಂದಿಸುವುದು ಕನ್ನಡ ಮತ್ತು ಸಮ್ಮೇಳನದ ಅಪಮಾನವಲ್ಲವೆ ?

– ಅನಿಲ್ ಚಳಗೇರಿ 

ಭೈರಪ್ಪ ಬೈಗುಳ ಗೋಷ್ಠಿಹೌದು, ಅದು ಪ್ರಸಕ್ತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮಹಿಳೆಯರ ಸಮಾನತೆ ಮತ್ತು ಸವಾಲು ಅನ್ನುವ ವಿಷಯದ ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ ಅಲ್ಲಿ ನಡೆದಿದ್ದು ಮಾತ್ರ ಕರ್ನಾಟಕ ಕಂಡ ಅಧ್ಭುತ ಸಾಹಿತಿಗಳಲ್ಲಿ ಒಬ್ಬರಾದ  ಎಸ್ ಎಲ್ ಭೈರಪ್ಪನವರ ಬಗ್ಗೆ ಅಪಪ್ರಚಾರ , ಹಿಂದೂ ವಿರೋಧಿ ಹೇಳಿಕೆಗಳು, ಬ್ರಾಹ್ಮಣರ ಬಗ್ಗೆ ಕೆಳಮಟ್ಟದ ಆರೋಪ , ಪುರೋಹಿತಶಾಹಿಯ ಹೆಸರಿನಲ್ಲಿ ಈಡೀ ಜನಾಂಗವನ್ನೇ ದೂಷಿಸುವ ಪ್ರಯತ್ನ . ಈ ದೂಷಿಸುವ ಭರದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ, ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಮುಖ್ಯ ವಿಷಯಗಳ ಬಗ್ಗೆ ಚರ್ಚೆಯೇ ಆಗಲಿಲ್ಲ. ನೆರದಿದ್ದ ಅನೇಕ ಕವಿಯತ್ರಿಯರು ಭೈರಪ್ಪನವರನ್ನು ನೇರವಾಗಿ ವೈಯ್ಯಕ್ತಿಕವಾಗಿ ನಿಂದಿಸಿದರು. ಅಷ್ಟೇಯಲ್ಲದೇ ಇಂತಹ ಕೆಳ ಮಟ್ಟದ ಭಾಷಣಗಳು ಮತ್ತು ವ್ಯಕ್ತಿ ನಿಂದನೆಯನ್ನು ಕೇಕೆ, ಶಿಳ್ಳೆ ಮುಖಾಂತರ ಆನಂದಿಸುವ ಜನರು ಆ ಕಾರ್ಯಕ್ರಮಗಳಲ್ಲಿ ಉಪಸ್ತಿತರಿದ್ದರು. ಕನ್ನಡ ಹಿರಿಮೆ, ಕನ್ನಡ ಕಂಪು ಹಾಗು ಮಹಿಳೆಯರ ಪರ ಧ್ವನಿಎತ್ತಬೇಕಾದ ವೇದಿಕೆಯೊಂದರಲ್ಲಿ ಕನ್ನಡದ ಕಣ್ಮಣಿಯನ್ನು ನಿಂದಿಸುವದು ಸಾಹಿತ್ಯ ಸಮ್ಮೇಳನಕ್ಕೆ ಮತ್ತು ಕನ್ನಡಕ್ಕೆ ಮಾಡುವ ಅಪಮಾನವಲ್ಲವೆ??

ಭೈರಪ್ಪನವರ ನಿಂದನೆ ಮುಗಿಸಿ ಮುಂದುವರೆದ ಕವಿಯತ್ರಿಯರು ದೇವರ ಹೆಸರಲ್ಲಿ, ಪುರೋಹಿತಶಾಹಿಯ ಹೆಸರಲ್ಲಿ ಮೇಲ್ವರ್ಗದವರು ಬೇರೆಯವರನ್ನು ಲೂಟಿ ಮಾಡುತ್ತಾರೆಂದು ದೂಷಿಸಿದರು. ಈ ರೀತಿಯ ದೂಷಣೆಯಿಂದ ಮತ್ತು ಮೇಲ್ವರ್ಗದವರನ್ನು ಬಾಯಿಗೆ ಲಗಾಮಿಲ್ಲದೆ ಬಯ್ಯುವುದರಿಂದಲೇ ಕೆಲವರ ಮನೆ ನಡೆದರೆ ಇನ್ನು ಕೆಲವರಿಗೆ ಮಾಧ್ಯಮಗಳಲ್ಲಿ ಸ್ಥಳ ದೊರಕುವುದೆಂದು ಚೆನ್ನಾಗಿ ಅರಿತುಕೊಂಡಿದ್ದಾರೆ. ಬ್ರಾಹ್ಮಣ ವಿರೋಧಿ ಮನೋಭಾವವನ್ನು ಹೆಚ್ಚಿಸಲು ಬ್ರಾಹ್ಮಣ್ಯ ದೇಶಕ್ಕೆ ಅಂಟಿಕೊಂಡ ಒಂದು ದೊಡ್ಡ ಶಾಪ ಅನ್ನುವ ಅರ್ಥರಹಿತ ಮಾತುಗಳನ್ನಾಡಿ ಜೊತೆಗೆ ಬುದ್ಧ ಕೂಡ ಬ್ರಾಹ್ಮಣರಿಂದ ದೂರವಿರಬೇಕಂದು ಎಂದು ಕರೆ ನೀಡಿದ್ದರಂತೆ !.ಅದ್ಯಾವ ಕೃತಿಯಲ್ಲಿ ಬುದ್ದ ಹೀಗೆ ಹೇಳಿದ್ದೆನೆಂದು ಆ ಕವಿಯತ್ರಿಗಳೇ ಬಲ್ಲರು..

Read more »