ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸುಭಾಷ್ ಚಂದ್ರ ಬೋಸ್’

21
ಆಕ್ಟೋ

ಅರ್ಝಿ ಹುಕುಮತ್-ಇ-ಹಿಂದ್ ಆಜಾದ್: ಸ್ವತಂತ್ರ ಭಾರತದ ಪ್ರಾಂತೀಯ ಸರಕಾರಕ್ಕೆ 75..!

– ಶ್ರೇಯಾಂಕ ಎಸ್ ರಾನಡೆ.

netaji-subhash-chandra-bose-01-1501591576‘ಬೋಸ್ ಹಾಗೂ ಐಎನ್‍ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಠರು” ಎಂದು ಬ್ರಿಟಿಷ್‍ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್‍ಲ್ಯಾಂಡ್ ಪ್ರಕಾಶನ, 1964, ಪುಟ: 93.

ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ತುದಿಗಾಲಲ್ಲಿ ನಿಂತಿದ್ದ ಸಂದರ್ಭ. ಒಂದೆಡೆ ಗಾಂಧೀಜಿಯೇ ಸ್ವಾತಂತ್ರ್ಯ ದೊರಕಲು ಹಳೆಯ ಮಾರ್ಗಗಳಿಗೆ ಶುಭವಿದಾಯ ಹೇಳಿ, 1942ರಲ್ಲಿ “ಮಾಡು ಇಲ್ಲವೆ ಮಡಿ: ಭಾರತ ಬಿಟ್ಟು ತೊಲಗಿ” ಆಂದೋಲನಕ್ಕೆ ಕರೆ ನೀಡಿದ್ದರೆ, ಮತ್ತೊಂದೆಡೆ ಅದಕ್ಕೆ ಪರೋಕ್ಷ ಉತ್ತೇಜನ ಮತ್ತು ಅಂತಹ ಹೋರಾಟಕ್ಕೆ ಅನಿವಾರ್ಯತೆಯನ್ನು ಸೃಷ್ಟಿಸುವ ಪ್ರಕ್ರಿಯೆ ವಿದೇಶಿ ನೆಲದಲ್ಲಿ ನೆಲೆಸಿದ್ದ ಭಾರತೀಯ ಹೋರಾಟಗಾರರಿಂದ ನಡೆಯುತ್ತಿತ್ತು. Read more »

17
ಆಗಸ್ಟ್

ಸ್ವಾತಂತ್ರ್ಯದ ಒಕ್ಕೊರಲ ರಾಗ “ರಾಗ್ ದೇಶ್”

– ಶ್ರೇಯಾಂಕ ಎಸ್ ರಾನಡೆ.

ಭಾರತ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು? ಈ ಪ್ರಶ್ನೆಯನ್ನು ನಿಮ್ಮ ಆಪ್ತರ, ಸಹೋದ್ಯೋಗಿಗಳ ಹಾಗೂ ಯಾವುದೇ ವಿದ್ಯಾರ್ಥಿಗಳ ಬಳಿ ಕೇಳಿ ನೋಡಿ. ಅದಕ್ಕೆ ನಿಮಗೆ ಸಿಗುವ ಉತ್ತರ ಗಾಂಧೀಜಿ ಕೇಂದ್ರಿತವಾಗಿರುತ್ತದೆ. ಖಂಡಿತವಾಗಿಯೂ ಸ್ವಾತಂತ್ರ್ಯ ಚಳುವಳಿಯ ಕೊನೆಯ ಘಟ್ಟದಲ್ಲಿ 1915-1947 ಗಾಂಧೀಜಿಯ ಪಾಲು ಬಹುಮುಖ್ಯವಾದದ್ದು. ಆದರೆ ಈ ದೇಶದ ಜನರ ಆಸ್ಥೆ, ಗಾಂಧೀಜಿಯ ಅಹಿಂಸಾ ಸತ್ಯಾಗ್ರಹ ಮಾತ್ರವೇ ದಪ್ಪ ಚರ್ಮದ ಬ್ರಿಟಿಷರ ಸೊಕ್ಕು ಮುರಿಯಲಿಲ್ಲ. ಅನೇಕ ಕ್ರಾಂತಿಕಾರಿಗಳು, ಸಣ್ಣ-ಪುಟ್ಟ ಹಳ್ಳಿ, ಪ್ರಾಂತ್ಯ-ಪ್ರದೇಶಗಳಲ್ಲಿ ರೈತ, ಬುಡಕಟ್ಟು ಹೀಗೆ ಅಸಂಖ್ಯಾತ ಜನರು ಆಗಾಗ್ಗೆ ಇಂಗ್ಲೀಷರ ಅಹಂಕಾರಕ್ಕೆ ಪೆಟ್ಟುಕೊಟ್ಟರೆ; ಹೊರಗಿನಿಂದ ನೇರವಾಗಿ ಹಾಗೂ ಒಳಗಿನಿಂದ ಪರೋಕ್ಷವಾಗಿ ಬ್ರಿಟಿಷರ ಸೊಕ್ಕನ್ನು, ಅವರ ಬೃಹತ್ ವಸಾಹತು ಸಾಮ್ರಾಜ್ಯದ ಅಸ್ಮಿತೆಯನ್ನೇ ಕಂಪಿಸುವಂತೆ ಮಾಡಿದ್ದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಹೊರಟಿದ್ದು ಸುಭಾಷ್ ಚಂದ್ರ ಬೋಸ್‍ರ ಇಂಡಿಯನ್ ನ್ಯಾಷನಲ್ ಆರ್ಮಿ. Read more »

28
ಜೂನ್

ಗಾಂಧಿ ತಾತಾ ಯಾಕಾಗಿ ಹೀಗೆಲ್ಲಾ ಮಾಡಿದಿರಿ?

– ಶ್ರೀಕಾಂತ್ ಆಚಾರ್ಯ

mahatma_gandhiನೇರಾ ನೇರಾ ವಿಷಯಕ್ಕೆ ಬರುತ್ತೀನಿ. ಕೆಲವಷ್ಟು ವಿಷಯಗಳಲ್ಲಿ ಗಾಂಧೀ ತಾತಾ ತುಂಬಾ ಇಷ್ಟವಾಗಿ ಬಿಡುತ್ತಾರೆ. ಆದರೆ ಉಳಿದ ಕೆಲವು ವಿಷಯಗಳಲ್ಲಿ ನನಗೆ ಗಾಂಧೀಜಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅಷ್ಟಕ್ಕೂ ನನ್ನ ಅಭಿಪ್ರಾಯ ಇಲ್ಲಾರಿಗೂ ಅನಿವಾರ್ಯವಲ್ಲ ಬಿಡಿ. ಹೇಳಿದ್ದೆಲ್ಲವನ್ನ ಸುಖಾಸುಮ್ಮನೆ ನಂಬಿ ಬಿಡಿ ಅಂತ ನಿಮ್ಮಲ್ಲಿ ಅಂಗಾಲಾಚುವುದೂ ಇಲ್ಲ. ಸಮಾನ ಮನಸ್ಕರಿದ್ದರೆ ಓದಿಕೊಳ್ಳಬಹುದು. ಹೌದು ಅಂತನ್ನಿಸಿದರೆ ಮಾತ್ರ ತಾಕಲಾಟಕ್ಕೆ ಎಡತಾಕುತ್ತೀರಿ. ಯೋಚನೆಗೆ ಬೀಳುತ್ತೀರಿ. ಅಖಂಡ ಭಾರತದ ಕೋಟ್ಯಾಂತರ ಜನರ ಹೃದಯ ಹೊಕ್ಕಿ ಕುಳಿತ ಗಾಂಧೀಜಿಯನ್ನ ಕೆಲವೊಂದು ಕಾರಣಕ್ಕೆ ದ್ವೇಷಿಸುತ್ತಿದ್ದೀನಿ ಅಂದರೆ ಬಹುಷಃ ನೀವೂ ತಕರಾರು ಮಾಡಲಿಕ್ಕಿಲ್ಲ(ವಿಷಯ ಬಲ್ಲವರಿಗೆ ಮಾತ್ರ) ಅಲ್ಲವಾ? Read more »

9
ಫೆಬ್ರ

ಪ್ರಸ್ಥಾನ: ಕಲ್ಕತ್ತಾದಿಂದ ಬರ್ಲಿನ್ನಿನ ವರೆಗೆ; ದಾಸ್ಯದಿಂದ ಮುಕ್ತಿಯವರೆಗೆ

– ಎಸ್.ಎನ್.ಭಾಸ್ಕರ್‍

NSC-Bose-Airಕಲ್ಕತ್ತಾ ನಗರದ ಎಲ್ಗಿನ್ ರಸ್ತೆಯ ಮನೆಯೊಂದರಲ್ಲಿನ ಪ್ರತ್ಯೇಕ ಕೋಣೆ. ದಿನಾಂಕ ೧೬ ನೇ ಜನವರಿ, ಇಸವಿ ೧೯೪೧.

“ರಾಷ್ಟ್ರಂ ಧಾರಯತಾಂ ಧ್ರೃವಂ”

“ರಾಷ್ಟ್ರಂ ಅಶ್ವಮೇಧಃ”

ಇದು ಸಂಕಲ್ಪ. ಈ ಧೀರ ಸಂಕಲ್ಪ ಮನೆಮಾಡಿದ್ದ ಆ ವ್ಯಕ್ತಿ ಪದ್ಮಾಸನ ಹಾಕಿ ಕುಳಿತಿದ್ದಾರೆ. ಎಡಗೈನಲ್ಲಿ ಜಪಮಾಲೆ ಮನದಲ್ಲಿ ಪ್ರಣವಮಂತ್ರ. ಮುಚ್ಚಿದ ಕಣ್ಗಳ ಹಿಂದೆ ಅದೆಂತಹ ಉಜ್ವಲ ಭವಿತವ್ಯದ ನೋಟವಿತ್ತೋ..! ಅರಿಯಬಲ್ಲವರು ತಾನೇ ಯಾರಿದ್ದರು ?

ಮಂದಸ್ಮಿತ ಅಂತರ್ಮುಖಿಯಾದ ಮುಖಾರವಿಂದದ ನೆರಳಿನಲ್ಲಿ ಸ್ಪಷ್ಟ ನಿಲುವು ಅಪ್ರಯತ್ನಪೂರ್ವಕವಾಗಿ ನಳನಳಿಸುತಲಿತ್ತು. ಆಳವಾದ ಧ್ಯಾನ. ಜಪಮಾಲೆಯನ್ನು ಹಿಡಿದಿದ್ದ ಕೈ ಬೆರಳುಗಳನ್ನು ಹೊರತು ಪಡಿಸಿ ಇಡೀ ದೇಹ ನಿರ್ಲಿಪ್ತ. ಮನದಲ್ಲಿ ಜ್ವಾಲಾಮುಖಿಯೇ ಇದ್ದರೂ, ಹಿಮಾಲಯದ ಪರ್ವತದಂತೆ ಶಾಂತಸ್ಮಿತ. ಮುಂಜಾನೆಯ ಮೊಗ್ಗರಳುವಂತೆ ನಿಧಾನವಾಗಿ ಕಣ್ಣಗಳನ್ನು ತೆರೆಯುತ್ತಾರೆ. ಎದುರಿಗೆ ಗೋಡೆಯ ಮೇಲೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಅದರ ಎಡಗಡೆಗೆ ರಾಮಕೃಷ್ಣ ಪರಮಹಂಸರು, ಬಲಗಡೆಗೆ ಮಹರ್ಷಿ ಅರವಿಂದರು. ತನ್ನೆರಡೂ ಕೈಗಳನ್ನೂ ಕಟ್ಟಿ ನಸುನಗುತ್ತಾ ನಿಂತಿದ್ದ ವಿವೇಕಾನಂದರ ಭಾವಚಿತ್ರವನ್ನೇ ನೋಡುತ್ತಾ ನಿಶ್ಚಲರಾಗಿ ಕುಳಿತೇ ಇದ್ದರು. ಅದೆಂತಹ ದಿವ್ಯ ಚೈತನ್ಯ, ದೇದೀಪ್ಯಮಾನವಾದ ಪ್ರಾಂಜ್ವಲ ಕಣ್ಗಳಲ್ಲಿ ಹೊಳೆಯುತ್ತಿದ್ದ ಅಚಲ ವಿಶ್ವಾಸ. ನೋಡುತ್ತಿದ್ದರೇ ಆ ಕಣ್ಗಳೆಂಬ ಸಾಗರದಲ್ಲಿ ಮುಳುಗೇ ಹೋಗುತ್ತೇವೆ. ಸೂಜಿಗಲ್ಲಿಗೆ ಸೆಳೆಯಲ್ಪಡುವ ಕಬ್ಬಿಣದ ಚೂರುಗಳಂತೆ ಸೆಳೆದು ಬಂಧಿಯಾಗುತ್ತೇವೆ. ಎಂತಹ ಆಕರ್ಷಣೀಯ ವ್ಯಕ್ತಿತ್ವ…!! ಕಣ್ತುಂಬಿ ಬಂತು ಮೂಡಿದ ಹನಿಗಳು ಧಳ ಧಳನೇ ಇಳಿಯತೊಡಗಿದವು ನೋಟ ಮಾತ್ರ ನಿಶ್ಚಲ..ನಿರ್ಲಿಪ್ತ. ರೋಮ ರೋಮಗಳಲ್ಲೂ ವಿದ್ಯುತ್ ಸಂಚಾರ. ಅವರ ನಿರ್ಧಾರ ಸಂಪೂರ್ಣವಾಗಿತ್ತು. ರೂಪುರೇಷೆಗಳು ಸಿದ್ದವಾಗಿದ್ದವು. ಇಟ್ಟ ಹೆಜ್ಜೆ ಹಿಂತೆಗೆದ ನಿದರ್ಶನ ಜಾಯಮಾನದಲ್ಲೇ ಇಲ್ಲವಲ್ಲ. “ರಾಷ್ಟ್ರಂ ಧಾರಯತಾಂ ದ್ರೃವಂ: ರಾಷ್ಟ್ರಂ ಅಶ್ವಮೇಧಃ:”.

Read more »

18
ಆಗಸ್ಟ್

ಸುಭಾಷರ ನೆನಪಿನೊಂದಿಗೆ ಮರೆಯಬಾರದ ಹೆಣ್ಣು

– ಚೇತನಾ ತೀರ್ಥಹಳ್ಳಿ

ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ? ಅವರು ಹಂಬಲಿಸಿದ ನೆಲ ಭಾರತ. ಮತ್ತು, ಅವರು ಪ್ರೇಮಿಸಿದ ಹೆಣ್ಣು ಎಮಿಲೀ!……….. ಸುಭಾಷ್ ಅವರನ್ನ ನೆನೆಸಿಕೊಂಡರೆ, ಎಮಿಲಿಗೂ ನಮ್ಮಿಂದ ಒಂದು ಗೌರವ ಸಲ್ಲಲಿ ಅಂತ ಹಾರೈಸ್ತಾ….

“ನಿನ್ನ ನೋಡಲು ಮತ್ತೆಂದೂ ಸಾಧ್ಯವಾಗದೆ ಹೋಗಬಹುದು. ಆದರೆ ನನ್ನ ನಂಬು. ನೀನು ಸದಾ ನನ್ನ ಹೃದಯದಲ್ಲಿ, ಆಲೋಚನೆಗಳಲ್ಲಿ, ಕನಸಲ್ಲಿ ಇದ್ದೇ ಇರುತ್ತೀಯೆ. ಹಾಗೇನಾದರೂ ವಿಧಿ ನಮ್ಮಿಬ್ಬರನ್ನು ಶಾಶ್ವತವಾಗಿ ಅಗಲಿಸಿದನೆಂದುಕೋ… ಮುಂದಿನ ಹುಟ್ಟಿನಲ್ಲಿ ಮತ್ತೆ ನಿನ್ನ ಸೇರಲು ನಾನು ಪರಿತಪಿಸುವೆ. ನನ್ನ ಕಿನ್ನರೀ… Jeden tag denke ich an sie- ನಿನ್ನನ್ನ ಪ್ರತಿದಿನವೂ ನೆನೆಸಿಕೊಳ್ಳುತ್ತೇನೆ”
( ಸುಭಾಷ್ ಚಂದ್ರ ಬೋಸ್, ಎಮಿಲೀ ಶೆಂಕಲ್ ಗೆ ಬರೆದ ಪತ್ರದಲ್ಲಿ)

ನರನರದಲ್ಲಿ ನೆಲದ ಉನ್ಮಾದ. ಹೋರಾಟದ ಕೆಚ್ಚು. ತನ್ನನ್ನೇ ದೇಶದ ಹೆಸರಿಗೆ ಬರೆದಿಟ್ಟ ಪ್ರೌಢ ಗಂಡಸಿನ ಎದೆಯಲ್ಲೂ ಒಂದು ಬೆಚ್ಚಗಿನ ಗೂಡು. ಪುಟ್ಟದೊಂದು ಖಾಸಗಿ ಬದುಕು. ಅಲ್ಲಿ, ಮೊಗೆದಷ್ಟೂ ಚಿಮ್ಮುವ ಪ್ರೀತಿ. ಎದೆ ಸೀಯುವ ವಿರಹದ ಕಾವು. ಕಾಸಗಲ ಕಣ್ಣೆದುರು ಮುಕ್ತ ಭಾರತದ ಕನಸು. ಒಳಗಿನೊಳಗಲ್ಲಿ ಅವಳ ಪ್ರೇಮ ಬಂಧನದ ನೆನಪು.

ಸುಭಾಷ್ ಚಂದ್ರ ಬೋಸ್… Read more »