ಕಾರ್ಗಿಲ್ ಕದನ; ಕಡಲಲ್ಲಿ ಐಎನ್ ಎಸ್ ತಾರಾಗಿರಿ ಕಲರವ
– ಸಂತೋಷ್ ತಮ್ಮಯ್ಯ
ವಿಜಯ ಎಂಬುದೇ ಹಾಗೆ. ಅದಕ್ಕೆ ನಾನಾ ಅರ್ಥಗಳು. ನಾನಾ ಮಜಲುಗಳು. ಅದು ಕಂಡಷ್ಟೇ ಅಲ್ಲ. ವಿಜಯ ಯಾರಿಗೂ ಪುಕ್ಕಟೆಯಾಗಿ ಒಲಿದಿಲ್ಲ. ಜಿದ್ದಿಗೆ ಬೀಳದೆ ಅದು ದಕ್ಕುವುದೂ ಇಲ್ಲ. ಅದರ ಹಿಂದೋಡಿದವರನ್ನು ವಿಜಯ ಪಾತಾಳಕ್ಕೆ ತಳ್ಳಿದ, ಹೇಳಹೆಸರಿಲ್ಲದಂತೆ ಮಾಡಿದ ಉದಾಹರಣೆಗಳಿವೆ. ತಾನೊಲಿಯಲು ನೆಲವನ್ನೂ ಹದಗೊಳಿಸಿ, ಮಾಯಾಮೃಗದಂತೆ ದಿಕ್ಕುತಪ್ಪಿಸಿ ಪರೀಕ್ಷೆಗೊಳಪಡಿಸಿ ಎಲ್ಲವನ್ನೂ ತೂಕಕಿಟ್ಟ ನಂತರ ವಿಜಯ ಒಲಿಯುತ್ತದೆ. ಹಾಗಾಗಿ ವಿಜಯಕ್ಕೆ ಮೆಟ್ಟಿಲುಗಳು ಹೆಚ್ಚು. ಎತ್ತರವೂ ಜಾಸ್ತಿ.
ವಿಜಯವೆಂಬುದು ಯಜ್ಞದಂತೆ. ಅದು ಹವಿಸ್ಸನ್ನು ಬೇಡುತ್ತದೆ. ತನ್ನ ಹಾದಿಯಲ್ಲಿ ನೋವನ್ನೂ ಕೊಡುತ್ತದೆ. ಇನ್ನೇನು ಸಿಕ್ಕೇ ಬಿಟ್ಟಿತು ಎಂಬಷ್ಟರಲ್ಲಿ ಸಕಾಲವಲ್ಲ ಎಂಬಂತೆ ಮುಂದೋಡುತ್ತದೆ. ವಿಜಯವೆಂಬುದು ಮಾಯೆಯೂ ಹೌದು. ಅದು ರುಚಿ ಹಿಡಿಸುತ್ತದೆ, ಮೋಹಗೊಳಿಸುತ್ತದೆ. ಆದರೆ ಮೋಹದಿಂದಲೇ ವಿಜಯ ಒಲಿಯದು. ಒಲಿದ ವಿಜಯ ಪಡೆದವನನ್ನ್ನೇ ಒರೆಗೆ ಹಚ್ಚುತ್ತದೆ. ಗೆಲುವಿನಿಂದ ಆರ್ಭಟಿಸಿದವನನ್ನು ಕಾಲ ಕೆಳಗೆ ಹೊಸಕಿಹಾಕುತ್ತದೆ. ಆದರೆ ಪ್ರಾಯಾಸದಿಂದ ವಿಜಯಿಯಾದವನನ್ನು, ವಿಜಯದ ತತ್ವವನ್ನು ಕಾಪಿಟ್ಟುಕೊಂಡವನನ್ನು ವಿಜಯವೇ ಆರಾಧಿಸುತ್ತದೆ. ಬಹುಕಾಲ ಆ ವಿಜಯವನ್ನು ಲೋಕ ನೆನಪಿಟ್ಟುಕೊಂಡಿರುತ್ತದೆ.
ದೇಶಕ್ಕಾಗಿ ನಿಮ್ಮ ಪ್ರಾಣಾರ್ಪಣ – ಇದೋ ನಿಮಗೆ ನಮ್ಮ ಅಶ್ರು ತರ್ಪಣ
– ಕ್ಯಾ. ನವೀನ್ ನಾಗಪ್ಪ
ರೈಫಲ್ ಮ್ಯಾನ್ ಮೋಹಿ೦ದರ್ ಸಿ೦ಗ್, ರೈಫಲ್ ಮ್ಯಾನ್ ರಾಕೇಶ್ ಕುಮಾರ್, ಲ್ಯಾನ್ಸ್ ನಾಯಕ್ ಹರೀಶ್ ಪಾಲ್, ಮೇಜರ್ ಅಜಯ್ ಸಿ೦ಗ್ ಜಸ್ರೋಟಿಯ, ಹವಲ್ದಾರ್ ಜಗನ್ನಾಥ್, ಲ್ಯಾನ್ಸ್ ನಾಯಕ್ ರಣಬೀರ್ ಸಿ೦ಗ್, ರೈಫಲ್ ಮ್ಯಾನ್ ಪವನ್ ಸಿ೦ಗ್, ರೈಫಲ್ ಮ್ಯಾನ್ ಅಶೋಕ್ ಕುಮಾರ್, ಲ್ಯಾನ್ಸ್ ನಾಯಕ್ ವೀರ್ ಸಿ೦ಗ್, ರೈಫಲ್ ಮ್ಯಾನ್ ಶ್ಯಾಮ್ ಸಿ೦ಗ್, ಹವಲ್ದಾರ್ ಕ್ರಿಷನ್ ಸಿ೦ಗ್, ರೈಫಲ್ ಮ್ಯಾನ್ ಮನೋಹರ್ ಲಾಲ್, ಲ್ಯಾನ್ಸ್ ನಾಯಕ್ ಕ್ರಿಷ್ಣನ್ ಮೋಹನ್, ರೈಫಲ್ ಮ್ಯಾನ್ ದೀಪ್ ಚಂದ್, ರೈಫಲ್ ಮ್ಯಾನ್ ಪ್ರವೀಣ್ ಕುಮಾರ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ರೈಫಲ್ ಮ್ಯಾನ್ ಅಬ್ದುಲ್ ನಜ಼ಾರ್.
ಒಂದು ರಾಷ್ಟ್ರ, ಒಂದು ಕಾನೂನು, ಒಂದು ತೆರಿಗೆ ಎಂದು ಕನವರಿಸುತ್ತಿರುವ ದೇಶಕ್ಕೆ ಮೇಲೆ ಕಾಣಿಸುವ ೧೭ ಹೆಸರುಗಳನ್ನು ನೆನಪಿಸಿಕೊಳ್ಳುವ ಧಾವಂತ ಎಲ್ಲಿದೆ? ಸೈನಿಕರನ್ನು ಹೊರತುಪಡಿಸಿ. ಮತ್ತಷ್ಟು ಓದು
ಶಿಲೆಯೊಂದು ಶಿಲ್ಪವಾಗಿ, ಪರಕಾಯ ಪ್ರವೇಶವಾಗಿ, ಸಮರಭೂಮಿಗೆ ಸಿದ್ಧವಾಗುವ ರಾಷ್ಟ್ರಶಕ್ತಿ
– ಸಂತೋಷ್ ತಮ್ಮಯ್ಯ
೧೯೪೯ರ ಜನವರಿ ೧೫ ರಂದು ಫಿಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಮಹಾದಂಡನಾಯಕರಾಗಿ ಅಧಿಕಾರ ವಹಿಸಿಕೊಂಡ ದಿನವನ್ನು ‘ಭಾರತೀಯ ಸೈನ್ಯ ದಿನಾಚರಣೆ ಎಂದು ಆಚರಿಸಲಾಗುತ್ತವೆ. ‘ಭಾರತದ ಗೌರವವನ್ನು ರಕ್ಷಿಸಿದ, ವಿದೇಶಗಳಿಂದಲೂ ಹೊಗಳಿಸಿಕೊಂಡ, ಬೃಹತ್ ಪಡೆಗಳನ್ನ್ನು ಹೊಂದಿರುವ ‘ಭಾರತೀಯ ಸೇನೆ ವಿಶ್ವದ ಹಲವು ದೇಶಗಳ ಮಿಲಿಟರಿಗೆ ಮಾರ್ಗದರ್ಶನ ನೀಡಿದ ಹಿರಿಮೆಯಿದೆ. ವಿಶ್ವದ ಹಲವು ಸವಾಲುಗಳನ್ನು ‘ಭಾರತೀಯ ಸೇನೆ ಎದುರಿಸಿದೆ. ವಿಶ್ವ ಶಾಂತಿಗೆ ಭಾರತೀಯ ಸೇನೆಯ ಕೊಡುಗೆಯನ್ನು ವಿಶ್ವಸಂಸ್ಥೆ ಇಂದಿಗೂ ಕೊಂಡಾಡುತ್ತಿದೆ. ಅವೆಲ್ಲಕ್ಕೂ ಕಾರಣ ಸೈನ್ಯದ ಅಸಲಿ ಶಕ್ತಿಯಾದ ‘ಭಾರತೀಯ ಯೋಧ‘ರು. ಅವರಿಗೆ ನಮ್ಮ ನಮನ. ಮತ್ತಷ್ಟು ಓದು
ಸುಮ್ಮ ಸುಮ್ಮನೆ ಬರಲಿಲ್ಲ ಕನ್ನಡಕ್ಕೆ ಮಹಾವೀರ ಚಕ್ರ ; ಇವರು ಮಹಾವೀರತೆಯ ಜೀವಂತ ಸ್ಮಾರಕ
– ಸಂತೋಷ್ ತಮ್ಮಯ್ಯ
ದೇಶದ ಎರಡನೆಯ ಅತಿದೊಡ್ಡ ಶೌರ್ಯ ಪದಕ ಮಹಾವೀರ ಚಕ್ರ ಪದಕದ ಗೌರವಕ್ಕೆ ಪಾತ್ರರಾದ ಇಬ್ಬರು ಮಹಾಯೋಧರಲ್ಲಿ ಲೆ.ಕರ್ನಲ್ ಪಿ.ಎಸ್. ಗಣಪತಿ ಎರಡನೆಯವರು. ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದಿಲ್ಲ, ಟಿ ವಿ ಅವರ ಸಂದರ್ಶನ ನಡೆಸಿಲ್ಲ. ಅವರು ಸಭೆ ಸಮಾರಂಭಗಳಿಗೆ ಹೋಗಿಲ್ಲ. ಅವರ ಬಗ್ಗೆ ನಾಡಿನ ಜನಕ್ಕೆ ಏನೆಂದರೆ ಏನೂ ತಿಳಿದಿಲ್ಲ. ಅವರ ಸಂಪರ್ಕ ಸಂಖ್ಯೆ: 9980009687
ನೋಡಲು ಅದೊಂದು ಲೋಹದ ಬಿಲ್ಲೆ. ಅದರಲ್ಲಿ ನಕ್ಷತ್ರದ ಚಿಹ್ನೆ. ಅದರ ಅಂಚಿನಲ್ಲಿ ಕಂಡೂ ಕಾಣದಂತೆ ಕೆತ್ತಿದ ಪಡೆದವರ ಹೆಸರು, ಪಡೆದ ದಿನಾಂಕ. ಕದನಕ್ಕೆ ತೆರಳಿದ ಪ್ರತೀ ಯೋಧನಿಗೂ ಅದನ್ನು ಪಡೆಯುವ ಅದಮ್ಯ ಹಂಬಲ. ಏಕೆಂದರೆ ಅದು ವೀರತೆಯ ಪ್ರತೀಕ. ಹೆಸರು ಮಹಾವೀರ ಚಕ್ರ. ಯುದ್ಧಕಾಲದಲ್ಲಿ ಮಹಾಪರಾಕ್ರಮಕ್ಕೆ ನೀಡುವ ಎರಡನೆಯ ಅತೀ ದೊಡ್ಡ ಶೌರ್ಯ ಪ್ರಶಸ್ತಿ. ಬ್ರಿಟಿಷ್ ಸೈನ್ಯದಲ್ಲಿ ‘ಡಿಶ್ಟಿಂಗ್ವಿಸ್ಡ್ ಸರ್ವೀಸ್ ಕ್ರಾಸ್’ ಹೇಗೋ ಹಾಗೆ ಭಾರತಕ್ಕೆ ಈ ಮಹಾವೀರ ಚಕ್ರ. ಮಹಾ ಸಮರಪಡೆಯನ್ನು ಹೊಂದಿರುವ ಭಾರತದಲ್ಲಿ ೧೯೪೭ರಿಂದ ಇದುವರೆಗೆ ಮಹಾವೀರ ಚಕ್ರದ ಗೌರವಕ್ಕೆ ಪಾತ್ರರಾದವರು ಕೇವಲ ೨೧೮ ಮಂದಿ ವೀರರು. ಅವರಲ್ಲಿ ೬ ಜನ ಯೋಧರು ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದ ವೀರರಲ್ಲಿ ವೀರರು (MahaVira chakra bar). ಹೀಗಿರುವಾಗ ಭಾರತೀಯ ಸೈನ್ಯಕ್ಕೆ ಮಹಾಮಹಾ ಯೋಧರನ್ನು ನೀಡಿದ ನಮ್ಮ ಕರ್ನಾಟಕದಲ್ಲಿ ಇದನ್ನು ಪಡೆದವರಾರು ಎಂದು ನೋಡಿದರೆ ಕಾಣುವವರು ಕನ್ನಡದ ಇಬ್ಬರು ಮಹಾರ ಚಕ್ರಧರರು. ಅವರಲ್ಲೊಬ್ಬರು ‘ಟೈಗರ್ ಆಫ್ ಸರ್ಗೋದಾ’ ಎಂದು ಖ್ಯಾತರಾದ ಸ್ಕ್ವಾ.ಲೀ.ಅಜ್ಜಾಮಾಡ ಬಿ.ದೇವಯ್ಯ. ಮತ್ತೊಬ್ಬರು ಮೇ.(ನಂತರ ಲೆ.ಕರ್ನಲ್)ಪಿ.ಎಸ್ ಗಣಪತಿ. ಒಬ್ಬರು ಅಮರಯೋಧ. ಮತ್ತೊಬ್ಬರು ಮಹಾವೀರತೆಯ ಜೀವಂತ ಸ್ಮಾರಕ. ಮತ್ತಷ್ಟು ಓದು
ಕಶ್ಮೀರಿಯತ್ – ಅಸ್ಮಿತೆಯೋ ವಿಸ್ಮೃತಿಯೋ

ಸಿಂಧುರಕ್ಷಕ್ ಮುಳುಗಿತೆಂದರೆ ಹಿಂದೂಸ್ಥಾನವೂ ಮುಳುಗಿದಂತೆ!
– ರಾಜೇಶ್ ರಾವ್
ಭಾರತೀಯ ನೌಕೋದ್ಯಮಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಋಗ್ವೇದದಲ್ಲಿ ನೌಕೆಗಳ ಉಲ್ಲೇಖವಿದೆ. ವೇದಕಾಲದಲ್ಲಿ ನೌಕೆಗಳ ಬಗ್ಗೆ, ಅವುಗಳನ್ನು ತಯಾರಿಸುವ, ಬಳಸುವ ಬಗ್ಗೆ ಜನತೆಗೆ ಅರಿವು ಇತ್ತು. ಅಂದರೆ ಸಾಗರ ಗರ್ಭದೊಳಗಡಗಿರುವ ಅಪಾರ ಸಂಪನ್ಮೂಲಗಳ ಬಗ್ಗೆ ಜನ ತಿಳಿದಿದ್ದರು. ಆಧುನಿಕ ವಿಜ್ಞಾನದ ಅರಿವಿಗೆ ದೊರಕಿದ ಮಾಹಿತಿಯನ್ನು ಆಧರಿಸಿದರೂ ಭಾರತವೇ ನೌಕೋದ್ಯಮದ ತವರು. ಕ್ರಿ.ಪೂ 2300ರ ಸುಮಾರಿಗೆ ಗುಜರಾತಿನ ಲೋಥಲ್ ಎಂಬ ಪ್ರದೇಶದಲ್ಲಿರುವ ಮಾಂಗ್ರೋಲ್ ಬಂದರಿನ ಬಳಿ ಸಿಂಧೂ ನಾಗರೀಕತೆಯ ಸಮಯದಲ್ಲಿ ಮೊದಲ ಉಬ್ಬರವಿಳಿತದ ಹಡಗು ನಿರ್ಮಾಣವಾಯಿತು. ಮೌರ್ಯರ ಆಳ್ವಿಕೆಯ ಸಮಯದಲ್ಲಿ ಜಲಮಾರ್ಗದ ಸಮಸ್ತ ಆಗು ಹೋಗುಗಳು ನವಾಧ್ಯಕ್ಷನ ನಿಯಂತ್ರಣದಲ್ಲಿತ್ತು. ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ನೌಕೆಗಳ ಬಗೆಗಿನ ಅಗಾಧ ಮಾಹಿತಿಯಿದೆ. ಮೌರ್ಯರಲ್ಲದೆ ಚೋಳ, ಶಾತವಾಹನ, ಗುಪ್ತ, ಪಾಲ, ಪಾಂಡ್ಯ, ವಿಜಯನಗರ, ಕಳಿಂಗ, ಮರಾಠರ ಆಳ್ವಿಕೆಯ ಕಾಲದಲ್ಲೂ ನೌಕೋದ್ಯಮ ಪ್ರಸಿದ್ದಿ ಪಡೆದಿತ್ತು. ಪಾಶ್ಚಿಮಾತ್ಯ ದೇಶಗಳೊಡನೆ ವ್ಯಾಪಾರ ವಹಿವಾಟು ಬಹು ಹಿಂದಿನಿಂದಲೂ ಸಾಗರ ಮಾರ್ಗವಾಗಿಯೇ ನಡೆದಿತ್ತು. ಮರಾಠ ನೌಕಾ ಪಡೆಯಂತೂ ಮೂರು ಶತಮಾನಗಳ ಕಾಲ ತನ್ನ ಪಾರುಪತ್ಯ ಸ್ಥಾಪಿಸಿತ್ತು. ಯೂರೋಪಿನ ನೌಕಾಪಡೆಗಳು ಅನೇಕ ಸಲ ಮರಾಠರ ನೌಕಾಪಡೆಗಳೆದುರು ನಿಲ್ಲಲಾರದೆ ಓಡಿ ಹೋಗಿದ್ದವು. ಕನ್ಹೋಜಿ ಆಂಗ್ರೇಯಂತಹ ಸಾಗರ ವೀರ ಎಂದೆಂದಿಗೂ ಅಮರ.
ಭಾರತೀಯ ನೌಕಾಪಡೆ ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು 55,000 ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು 5,000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು. ಸ್ವತಂತ್ರ ಭಾರತದ ನೌಕಾಪಡೆ ಇತಿಹಾಸದಲ್ಲಿ ಹಡಗಿನೊಂದಿಗೇ ಜಲಸಮಾಧಿಯಾದ ಹಾಗೂ ಸಾಯುವ ಮೊದಲು 67 ಜನರ ಜೀವ ರಕ್ಷಣೆ ಮಾಡಿದ್ದ ಮೊದಲ ಹಾಗೂ ಏಕೈಕ ಕ್ಯಾಪ್ಟನ್ ಮಹೇಂದ್ರನಾಥ್ ಮುಲ್ಲಾರಂತಹ ವೀರರನ್ನು ಹೊಂದಿದ್ದ ನೌಕಾಪಡೆ ನಮ್ಮದ್ದು.
ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!
– ಡಾ ಅಶೋಕ್. ಕೆ. ಆರ್
ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ [ಅನಧಿಕೃತ ವರದಿ; ಅಧಿಕೃತ ವರದಿಯನ್ನು ಎರಡೂ ದೇಶದ ಸರಕಾರಗಳು ಬಹಿರಂಗಗೊಳಿಸುವುದಿಲ್ಲ]. ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. 80%ಗಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ! ಪ್ರಕೃತಿಯ ಪ್ರಮುಖಾಯುಧ ಹಿಮ!! ಇದು ಸಿಯಾಚಿನ್ ಯುದ್ಧಭೂಮಿ.
ಆಪರೇಷನ್ ಮೇಘದೂತ: –
ಬಾಂಗ್ಲಾದೇಶದ ವಿಮೋಚನಾ ಯುದ್ಧದ ನಂತರ 1972ರಲ್ಲಿ ಸಿಮ್ಲಾ ಒಪ್ಪಂದಕ್ಕೆ ಯು.ಎನ್ ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕುತ್ತವೆ. ಗಡಿರೇಖೆಯನ್ನು ವಿವರಿಸುವ ಆ ಒಪ್ಪಂದದಲ್ಲಿ ಸಿಯಾಚಿನ್ ಸೇರಿರಲಿಲ್ಲ. ಹಿಮಚ್ಛಾದಿತ ಮರುಭೂಮಿಯ ಮೇಲೆ ಹಕ್ಕು ಸಾಧಿಸಲು ಇವೆರಡೂ ದೇಶಗಳು ಬಡಿದಾಡಲಾರವು ಎಂದುಕೊಂಡಿತ್ತು ಯು.ಎನ್. ಆದರೆ ನಡೆದಿದ್ದೇ ಬೇರೆ! 1967ರಿಂದಲೇ ಅಮೆರಿಕಾದ ರಕ್ಷಣಾ ಸಂಸ್ಥೆಗಳು ತಯಾರಿಸಿದ ನಕ್ಷೆಗಳಲ್ಲಿ ಸಿಯಾಚಿನ್ ಪ್ರದೇಶವನ್ನು ಯಾವುದೇ ಐತಿಹಾಸಿಕ ಆಧಾರಗಳಿಲ್ಲದಾಗ್ಯೂ ಪಾಕಿಸ್ತಾನದ ಭಾಗವಾಗಿ ತೋರಿಸಲಾರಂಭಿಸಿತು. ಪಾಕಿಸ್ತಾನ ಕೂಡ ಅಮೆರಿಕದ ಕುಮ್ಮಕ್ಕಿನಿಂದಾಗಿ ಕ್ರಮೇಣವಾಗಿ ಸಿಯಾಚಿನ್ ಪ್ರದೇಶದ ಮೇಲೆ ಹಕ್ಕು ಚಲಾಯಿಸಲಾರಂಭಿಸಿತು. ಪಾಕಿನ ಈ ವರ್ತನೆಯನ್ನು ಗಮನಿಸಿದ ಭಾರತ ಸರಕಾರ ಕೂಡ ತನ್ನ ಸೈನ್ಯವನ್ನು ‘ಎತ್ತರದ ಪ್ರದೇಶಗಳಲ್ಲಿ ಯುದ್ಧ ತರಬೇತಿಯ’ ನೆಪದಲ್ಲಿ ಸಿಯಾಚಿನ್ ಪ್ರದೇಶಕ್ಕೆ ನಿಯೋಜಿಸಲಾರಂಭಿಸಿತು.
ಕುದಿಯಲಾರಂಭಿಸಿದ ದ್ವೇಷ 1984ರಲ್ಲಿ ಯುದ್ಧ ರೂಪವನ್ನು ಪಡೆಯಿತು. ಸಿಯಾಚಿನ್ ಪ್ರದೇಶವನ್ನು ಹಿಂಪಡೆದುಕೊಳ್ಳಲು ಆಪರೇಷನ್ ಮೇಘದೂತದ ಹೆಸರಿನಲ್ಲಿ ಭಾರತದ ಸೈನಿಕರು ಸಿಯಾಚಿನ್ ಏರಲಾರಂಭಿಸಿದರು. ಸರಿಸುಮಾರು ಸಾವಿರ ಚದುರ ಮೈಲು ಪ್ರದೇಶವನ್ನು ವಶಪಡಿಸಿಕೊಳ್ಳುವುದರಲ್ಲಿ ಭಾರತ ಸಫಲವಾಗಿ ಯುದ್ಧದಲ್ಲಿ ಗೆಲುವು ಪಡೆಯಿತು.
ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ
– ಚಕ್ರವರ್ತಿ ಸೂಲಿಬೆಲೆ
ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?
ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!
ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.
ಗುಂಡು ಬಿಡದ ಬಂದೂಕುಗಳ ನಡುವೆ!
– ಸಂತೋಷ್ ಆಚಾರ್ಯ
೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು ಎಸೆದಿದ್ದರು. ಜನರಿಂದ ಸರ್ಕಾರ ಎನ್ನುವ ಅರ್ಥದ ಪ್ರಜಾಪ್ರಭುತ್ವ ಶುರುವಾದ ಹೊತ್ತಲ್ಲೇ ಜನರು ಬದಲಿಸಬಯಸುವ ಸರ್ಕಾರದ ನೀತಿಗಳನ್ನು ಬದಲಿಸುವ ಅನುಮತಿ ಆಗಲೇ ಇರಲಿಲ್ಲ. ನೆಹರೂ ರಾಜೀನಾಮೆಗೆ ಒಪ್ಪದೇ ಅವರನ್ನು ಅವರ ಅವಧಿ ಮುಗಿಯುವ ತನಕ(೧೯೬೧) ಇಟ್ಟುಕೊಂಡಿದ್ದು ಮತ್ತು ಭಾರತ ಯುದ್ಧದಲ್ಲಿ(೧೯೬೨) ಹೀನಾಯವಾಗಿ ಸೋತದ್ದು ಈಗ ಕೇವಲ ಇತಿಹಾಸ! ನೆಹರೂ ಚಾಣಾಕ್ಷತನದಿಂದ ವರ್ತಿಸಿದ್ದರೆ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಈಗಲೂ ಎಷ್ಟೋ ಜನ ಹೇಳುತ್ತಾರೆ. ತನ್ನ ತಂತ್ರವನ್ನು ಒಪ್ಪಲಿಲ್ಲವೆಂದು ರಾಜೀನಾಮೆ ಎಸೆದು ಸರ್ಕಾರದಿಂದ ದೂರ ಸರಿಯುವುದಕ್ಕೂ ತಾನು ಮಾಡಿದ್ದು ಸರಿ ಎಂದು ಅದಕ್ಕಾಗಿ ಸರ್ಕಾರಕ್ಕೆ ಕೇರೇ ಎನ್ನದೆ ಅದನ್ನು ಕೋರ್ಟಿಗೆಳೆಯುವುದಕ್ಕೂ ಎಷ್ಟು ವ್ಯತ್ಯಾಸಗಳನ್ನು ನಾವು ಗುರುತಿಸಬಹುದು?
ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿ ಇಂತಹಾ ಅಗ್ನಿಪರೀಕ್ಷೆ ಜನರಲ್ ವಿ.ಕೆ ಸಿಂಗ್‍ಗೆ ಬೇಕಿತ್ತೇ ಎಂದು ಸಾಮಾನ್ಯವಾಗಿ ಅನಿಸುವುದು ಸಹಜ. ಆದರೆ ಸ್ವಲ್ಪವೂ ಕ್ರಮಬದ್ಧತೆಯಿಂದ ನಿರ್ವಹಿಸದ ಸರ್ಕಾರಿ ಕಚೇರಿಗಳಿಗೆ ಇದು ಮುಖದ ಮೇಲೆ ಹೊಡೆದ ಕಪಾಳಮೋಕ್ಷ. ರಕ್ಷಣಾ ಮಂತ್ರಾಲಯದ ಮುಂದೆ ಭೂ ಸೇನೆಯ ಸಮಸ್ಯೆಗಳು ಗುಡ್ಡಗಟ್ಟುತ್ತಿವೆ. ಜನರಲ್ ವಯಸ್ಸಿನ ಸಮಸ್ಯೆಯಿಂದ ಶುರುವಾಗಿ ಲಂಚದ ಕೇಸು, ಟ್ರಕ್ಕುಗಳಲ್ಲಿ ನಡೆದ ಭ್ರಷ್ಟಾಚಾರ, ಲೀಕಾದ ಪತ್ರ ಹೀಗೆ ವಿ.ಕೆ ಸಿಂಗ್ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಈ ನಡುವೆ ತಮ್ಮ ಸ್ವಾರ್ಥಕ್ಕಾಗಿ ತಾವೇ ಪತ್ರವನ್ನು ಲೀಕ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಳಿ ವಯಸ್ಸಿನ ಮಾನಸಿಕ ಸ್ಥಿತಿಗಳನ್ನು ನೋಡುವುದಾದರೆ ಅಲ್ಲಗಳೆಯಬಹುದಾದ ವಿಚಾರವೇನೂ ಅಲ್ಲ. ಆದರೂ ಮೊದಲು ಕಮಾಂಡೋ ಆಗಿದ್ದ ಜನರಲ್ ಹೀಗೆ ಮಾಡಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಿ.ಕೆ ಸಿಂಗ್ ಒಬ್ಬ ಹೋರಾಟಗಾರ. ನೇರವಾಗಿ ವಿಷಯಗಳನ್ನು ನಿಭಾಯಿಸುವ ನಿಷ್ಠುರ ವ್ಯಕ್ತಿ. ಅವರ ಮೇಲೆ ಆಪಾದನೆ ಹೊರಿಸುವ ಮೊದಲು ಮನಸ್ಸು ಕೂಡ ಎಲ್ಲೋ ಒಪ್ಪಲು ನಿರಾಕರಿಸುತ್ತದೆ.
ಮತ್ತಷ್ಟು ಓದು
ಸೇನೆ-ಸರ್ಕಾರದ ನಡುವೆ ಬಡವಾಗದಿರಲಿ ನನ್ನ ಭಾರತ
– ರಾಕೇಶ್ ಶೆಟ್ಟಿ
ಆವತ್ತು ಸಂಸತ್ತಿನಲ್ಲಿ ಭಾಷಣಕ್ಕೆ ನಿಂತ ನೆಹರೂ ದೇಶದ ಒಂದಿಂಚು ನೆಲವನ್ನು ಚೀನಿಗಳೀಗೆ ಬಿಟ್ಟುಕೊಡುವುದಿಲ್ಲ.ಎಂತಾ ಯುದ್ಧಕ್ಕಾದರೂ ಸೈನ್ಯ ತಯಾರಿದೆ ಅನ್ನುತ್ತಲೇ ತಮ್ಮ ಕೋಟಿನಿಂದ ತೆಗೆದ ಕೆಂಪು ಗುಲಾಬಿಯನ್ನ ಜನರ ಕಿವಿಗಿಟ್ಟರು.ಅವರ ಭಾಷಣದ ನಂತರದ ಇತಿಹಾಸ ನಿಮಗೆ ಗೊತ್ತಿರಲೇಬಹುದು.ಆ ಕಹಿ ನೆನಪಿಗೆ ೫೦ ವರ್ಷ ಆಗೋ ಸಮಯದಲ್ಲಿ ಮತ್ತೊಮ್ಮೆ ಕಳೆದವಾರ ಸಂಸತ್ತಿನಲ್ಲಿ ರಕ್ಷಣಾ ಸಚಿವ ಆಂಟನಿಯವರೂ ಸಹ ಭಾರತದ ಸೈನ್ಯ ಬಲಿಷ್ಟವಾಗಿದೆ,ಯುದ್ಧ ಸನ್ನದ್ಧವಾಗಿದೆ ಅಂದಿದ್ದಾರೆ.ನೆಹರೂ ಅವರಿಗೂ-ಅವ್ರ ಕಾಲಕ್ಕೂ ತುಲನೆ ಮಾಡಿದರೆ ಆಂಟನಿ ಅವರನ್ನ ಸ್ವಲ್ಪ ನಂಬಬಹುದು ಅನ್ನಿಸುತ್ತದೇ.ಆದರೆ…
ಕಳೆದ ವಾರ ನಡೆದ ವಿದ್ಯಾಮಾನಗಳಿವೆಯಲ್ಲ ಅವೆಲ್ಲ ಗಾಬರಿ ಹುಟ್ಟಿಸುವಂತವು.ಇದಕ್ಕೆ ಮುನ್ನುಡಿ ಬರೆದಿದ್ದು ಜನರಲ್.ವಿ.ಕೆ ಸಿಂಗ್…! ಜನ್ಮ ದಿನಾಂಕದ ರಗಳೆಯ ನಂತರ ಸ್ವಲ್ಪ ದಿನ ಸುಮ್ಮನಾಗಿದ್ದವ್ರು, ಟಿವಿ ಚಾನೆಲ್ನೊಂದಿಗೆ ಮಾತನಾಡುತ್ತ ತಮಗೆ ೧೪ ಕೋಟಿ ಲಂಚ ನೀಡಲು ಬಂದ ಪ್ರಸಂಗದ ಬಗ್ಗೆ ಬಾಯಿಬಿಡುವ ಮೂಲಕ.ಮತ್ತೆ ಆ ವಿಷಯವನ್ನ ನಾನು ರಕ್ಷಣಾ ಮಂತ್ರಿ ಆಂಟನಿ ಅವರಿಗೂ ಹೇಳಿದ್ದೆ ಅನ್ನುವುದು ಬೆಂಕಿಗೆ ತುಪ್ಪ ಸುರಿದಂತಾಗಿ ಹೋಯಿತು.ಸಂಸತ್ತಿನಲ್ಲಿ ಆಂಟನಿ ’ಅವರು ಮೌಕಿಕವಾಗಿ ಹೇಳಿದ್ದರು ನಾನು ಏನು ತಾನೇ ಮಾಡಲಿ” ಅಂತೆಲ್ಲ ಗೋಳಾಡುವಾಗಲೇ, ಜನರಲ್ ಪ್ರಧಾನಿ ಅವ್ರಿಗೆ ಬರೆದ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ರಹಸ್ಯವಾಗಿರಬೇಕಿದ್ದ ಪತ್ರ ಸೋರಿಕೆಯಾಗಿದ್ದು.!