ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸ್ನೇಹ’

10
ಜುಲೈ

ನವಿಲುಗರಿ…..

– ಮಯೂರಲಕ್ಷ್ಮೀ
imagesಮುಖಪುಸ್ತಕದ ಅಭಿವ್ಯಕ್ತ ಮನಸುಗಳು…….
ದೈನಂದಿನ ಯಾಂತ್ರಿಕ ಬದುಕಿನ ಏಕತಾನತೆಯಿಂದ ಹೊರಬಂದು ಮನದಲ್ಲಿ ಹಾದು ಹೋಗುವ ಹಲವು ಭಾವನೆಗಳನ್ನು ವ್ಯಕ್ತಪಡಿಸಲು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸಿಗುವ ಸಾಧನಗಳಲ್ಲಿ ಇಂದು ಮುಖಪುಟವೂ (ಫೇಸ್‍ಬುಕ್) ಮುಖ್ಯ ಪಾತ್ರ ವಹಿಸುತ್ತಿದೆ. ಹಲವರಿಗೆ ಮುಖಪುಸ್ತಕದ ಸಂವಾದಗಳಲ್ಲಿ ತಮ್ಮ ವಿಚಾರಧಾರೆಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಬಹುಮುಖ್ಯ ತಾಣಗಳು… ತಮಗಾದ ಹತಾಶೆ ಮತ್ತು ಸೋಲುಗಳಿಂದ ಹೊರಬಂದ ಮತ್ತೊಬ್ಬರಲ್ಲಿ ಕಂಡು ಗೆಲುವಿನ ಹಾದಿಯನ್ನು ಅರಸುವ ಹೃದಯಗಳು…ಇಂದಿನ ಮಾಹಿತಿ ಯುಗದಲ್ಲಿ ಐತಿಹಾಸಿಕ ಗತವೈಭವದ ಹಿರಿಮೆಯನ್ನು ಸಾರುವ ಬರಹಗಳು… ದೇಶ-ದೇಶಗಳ ಸಂಸ್ಕೃತಿಯನ್ನು ಕುರಿತು ದಾಖಲೆಗಳನ್ನು ನೀಡುವ ಪ್ರಾಜ್ಞ ದೃಷ್ಟಿಕೋನಗಳು… ಶಿಲಾಯುಗದಿಂದ ಸೈಬರ್‍ಯುಗದವರೆಗೂ ಅರಿವಿನ ಹಂದರವನ್ನು ಒರೆಹಚ್ಚುವ ವೈಜ್ಞಾನಿಕ ಸಿದ್ಧಾಂತಗಳು… ಪ್ರಚಲಿತ ವಿದ್ಯಮಾನಗಳನ್ನು ವಿಶ್ಲೇಷಿಸಿ BURNING ISSUE ಗಳನ್ನು ಕುರಿತು ಗಂಭೀರ ಚರ್ಚೆಗಳಲ್ಲಿ ಭಾಗವಹಿಸಿ ತಮ್ಮ ತಮ್ಮ ವಾದಗಳನ್ನು ವ್ಯಕ್ತಪಡಿಸುವ ಮನಸುಗಳು… ಸಕಾರಾತ್ಮಕ ನಿಲುವುಗಳನ್ನು ಪಾಸಿಟೀವ್ ದೃಷ್ಟಿಕೋನದಲ್ಲಿ ಭಿತ್ತರಿಸುವ ಚಿತ್ರ ಸಂದೇಶಗಳನ್ನು ಕಂಡ ಕೂಡಲೇ ತಮ್ಮ ಗೋಡೆಯ ಮೇಲೆ ಲಗತ್ತಿಸುವ ಕೈಗಳು… ಯಾರಿಗೋ ಎಲ್ಲೋ ಕಷ್ಟವಾದಲ್ಲಿ ಆ ಕಷ್ಟವು ತಮಗೇ ಬಂದಂತೆ ಕೂಡಲೇ ಪರಿತಿಪಿಸಿ ಪ್ರತಿಕ್ರಯಿಸುವ ಶುದ್ಧಾತ್ಮಗಳು… ಪ್ರಕೃತಿಯ ವಿಸ್ಮಯಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂರಕ್ಷಿಸುವ ಛಾಯಾಚಿತ್ರ ಶೀರ್ಷಿಕೆಗಳು…ಇಂತಹ ನೂರಾರು ಸಾವಿರಾರು ಜನರು ದಿನನಿತ್ಯ ಫೇಸ್‍ಬುಕ್‍ನ ಜಾಲತಾಣದಲ್ಲಿ ಸಂವಹನಶೀಲರಾಗಿರುತ್ತಾರೆ. ತಿಳಿದೋ ತಿಳಿಯದೆಯೋ ನಾವು ಈ ಅಂತರ್‍ಜಾಲವೆಂಬ ತಾಣವಲ್ಲದ ತಾಣದಲ್ಲಿ ಕಳೆದು ಹೋಗುತ್ತಿರುತ್ತೇವೆ….. Read more »

1
ಏಪ್ರಿಲ್

ಸ್ನೇಹಿತ ಮೊದಲ ಬಾರಿ ಅತ್ತುಬಿಟ್ಟ…!

ಪ್ರವೀಣಚಂದ್ರ, ಪುತ್ತೂರು

ಬಸ್ ವೇಗವಾಗಿ ಸಾಗುತ್ತಿತ್ತು. ಊರಿಗೆ ಬಂದ ಸಂಭ್ರಮವನ್ನು ಕಿತ್ತುಕೊಂಡ ಆ ಕ್ಷಣದ ಕುರಿತು ಯೋಚಿಸುತ್ತಿದ್ದೆ. ಬಸ್ಸಿನ ಕಿಟಕಿ ಹಾಕಿದ್ದರೂ ಚಳಿ ಕಾಡುತ್ತಿತ್ತು. ಹೃದಯವೂ ತಣ್ಣಗಿತ್ತು. ಅಪದಮನಿ ಅಭಿದಮನಿಗಳೆರಡೂ ನೋವಿನಲ್ಲಿತ್ತು. ಆಪ್ತ ಸ್ನೇಹಿತನೊಬ್ಬನ ಮುಂದೆ ಸ್ವಾಭಿಮಾನದ ಪ್ರಶ್ನೆಯೆದ್ದು ಅಹಲ್ಯೆಯಂತೆ ಕಲ್ಲಾದ ಪರಿಣಾಮವದು. ನನ್ನ ಎದುರು ಮಾತು ಆತನಿಗೆ ಅನಿರೀಕ್ಷಿತವಾಗಿತ್ತು. ನನಗೆ ಅನಿವಾರ್ಯವಾಗಿತ್ತು.
***
ಬ್ಯಾಗಿನಲ್ಲಿದ್ದ ಪತ್ರಿಕೆಯೊಂದನ್ನು ಕೈಗೆತ್ತಿಕೊಂಡೆ. ಅಲ್ಲಿ ನಾಗತಿಹಳ್ಳಿ ಸಂಬಂಧದ ಕುರಿತು ಬರೆದಿದ್ದರು. ಸಂಬಂಧವೆಂದರೆ ಬೆಂಕಿ ಮತ್ತು ಚಳಿ ಕಾಯುವವನ ನಡುವಿನ ಅಂತರದಂತೆ. ಚಳಿಯಾಗುತ್ತೆ ಎಂದು ಬೆಂಕಿಯನ್ನು ಮುಟ್ಟುವ ಹಾಗಿಲ್ಲ. ಬೆಂಕಿಗೂ ವ್ಯಕ್ತಿಗೂ ಒಂದಿಷ್ಟು ಅಂತರ ಕಾಯ್ದುಕೊಳ್ಳಬೇಕು ಅಂತ ಬರೆದಿದ್ದರು. ಸ್ನೇಹಕ್ಕೂ ಇದು ಅನ್ವಯವಾಗುತ್ತಾ? ನಾನು ಯೋಚಿಸತೊಡಗಿದೆ. ಸ್ನೇಹಕ್ಕೆ ಯಾವುದೇ ಅಂತರಗಳೇ ಇಲ್ಲವಾ ಅರ್ಥವಾಗಲಿಲ್ಲ.
***
ಇನ್ ಬಾಕ್ಸ್ ತೆರೆದು ನೋಡಿದಾಗ ಸ್ನೇಹದ ಮಹತ್ವ ಸಾರುವ ಹತ್ತಾರು ಸಂದೇಶಗಳು ಬಂದು ಕೂತ್ತಿದ್ದವು. ನಮ್ಮ ಕೋಪನೋಡಿ ಸ್ನೇಹಿತರೇ ಕಳುಹಿಸುತ್ತಿದ್ದರು. ಬೇರೆ ಸಂದರ್ಭದಲ್ಲಿಯಾದರೆ ಡಿಲಿಟ್ ಮಾಡಿ ಬಿಡುತ್ತಿದ್ದೆ. ಈಗ ಪ್ರತಿಪದಗಳು ಅರ್ಥವತ್ತಾಗಿ ಗೋಚರಿಸುತ್ತಿದ್ದವು. ನಮ್ಮೊಳಗೆ ಯಾಕೆ ಜಗಳ ಎಂದು ಸ್ನೇಹಿತರೆಲ್ಲರ ಗೋಗೆರತದಂತೆ ಕಾಡುತ್ತಿದ್ದವು.
***
ಅವನಲ್ಲಿ ಜಗಳ ಮಾಡಿದ ಮರುಕ್ಷಣವೇ ಆತನೊಂದಿಗೆ ಮನಸ್ಸು ರಾಜಿಯಾಗಿತ್ತು. ಆದರೆ ಮಾತನಾಡಲು ಮನಸ್ಸು ಇಚ್ಚಿಸಲಿಲ್ಲ. ಏನು ನಡೆಯಿತು ಎಂದು ಬರೆಯಲು ಕಷ್ಟ. ಯಾಕೆಂದರೆ ಅದರ ಯಾತನೆ ಅನುಭವವೇದ್ಯ. ಇಲ್ಲೊಂದು ಕತೆ ಓದಿ.
***
Read more »