ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸ್ಮಾರ್ಟ್ ಸಿಟಿ’

19
ಜುಲೈ

ಸಿಟಿಯೊಂದು ಸ್ಮಾರ್ಟ್ ಆಗುವುದು ಯಾವಾಗ?

– ರಾಘವೇಂದ್ರ ಸುಬ್ರಹ್ಮಣ್ಯ

smart-city-india

ಮೊನ್ನೆ ಈ ವೆಂಕಯ್ಯನವರ ಗಲಾಟೆ ನಡೆಯುತ್ತಿರುವಾಗ ಯಾರೋ ಸ್ನೇಹಿತರು ವೆಂಕಯ್ಯ ಮಾಡಿದ ಅನ್ಯಾಯ ನೋಡಿ ಅಂತಾ ಪಕ್ಕದಲ್ಲಿರುವ ನ್ಯೂಸ್ ಕ್ಲಿಪ್ಪಿಂಗಿನ ಚಿತ್ರವೊಂದನ್ನು ಹಾಕಿದರು. ಆ ವಾದ ವಿವಾದ ಎಲ್ಲಾ ಮುಗಿದ ಮೇಲೂ, ಅದೊಂದು ಚಿತ್ರ ನನ್ನ ತಲೆಯಲ್ಲುಳಿದು ಬಿಡ್ತು. ವೆಂಕಯ್ಯ ಬದಿಗೆ ಹೋಗಯ್ಯ ಅಂತಾ ತಳ್ಳಿದ್ರೂ ಆ ಚಿತ್ರ ಹೋಗ್ಲಿಲ್ಲ.

ಆ ಚಿತ್ರದಲ್ಲಿದ್ದ ವಿಷಯ “ರಾಜ್ಯದ ಯಾವ ನಗರವೂ ಸ್ಮಾರ್ಟ್ ಸಿಟಿಯಾಗೋದಿಲ್ವಂತೆ” ಅನ್ನೋದು. ಆ ಸುದ್ಧಿಗೆ ನನಗೆ ಬೇಸರವಾಗ್ಲಿಲ್ಲ. ಆದರೆ ಅಲ್ಲಿ ಕೆಳಗಿರೋ ಚಿತ್ರ ನೋಡಿ ಬೇಸರವಾಯ್ತು. Infact, ಕರ್ನಾಟಕದ ನಗರ ಸ್ಮಾರ್ಟ್ ಸಿಟಿಯಾಗುವುದು ಅಂದ್ರೆ ಈ ಚಿತ್ರದಲ್ಲಿರೋವಂತೆ ಆಗೋದು ಅಂತಾದ್ರೆ, ಆ ಅವಕಾಶ ಕರ್ನಾಟಕದ ನಗರವೊಂದಕ್ಕೆ ತಪ್ಪಿದ್ದಕ್ಕೆ ಸಂತೋಷವೇ ಆಯ್ತು. ಯಾಕಂದ್ರೆ ಆ ಚಿತ್ರದಲ್ಲಿದ್ದದ್ದು ಬರೀ ದೊಡ್ಡ, ಎತ್ತರದ ಕಟ್ಟಡಗಳು. ಬಿಟ್ರೆ, ಫೈ ಓವರ್ ಮೇಲೆ ಇನ್ನೊಂದು ಫೈ ಓವರ್ರಿನ ಮೇಲೆ ಮತ್ತೊಂದು ಫ್ಲೈ ಓವರ್. ನಮಗೆ ನಮ್ಮ ಸರ್ಕಾರಗಳು, ಮಾಧ್ಯದವರು ಹಿಡಿಸಿರೋ ಈ ಸ್ಮಾರ್ಟ್ ಸಿಟಿಯ ಹುಚ್ಚು ನೋಡಿ ತಲೆಕೆಟ್ಟು ಹೋಯ್ತು. ಆಮೇಲೆ ಸ್ವಲ್ಪ ಹೊತ್ತಿನ ಮೇಲೆ ಅನ್ನಿಸ್ತು, ಇದು ಹುಚ್ಚಲ್ಲ. ಬರೀ ತಪ್ಪು ಮಾಹಿತಿ, ತಪ್ಪು ಗ್ರಹಿಕೆಯಷ್ಟೇ ಅಂತಾ. ಹೆಚ್ಚು ಯೋಚಿಸಿದಷ್ಟು ಆ ಅನಿಸಿಕೆ ಸರಿ ಅನ್ನಿಸ್ತಾ ಹೋಯ್ತು. ಹಾಗೆಯೇ ನಮ್ಮಲ್ಲೇ ಕೆಲ ಜನ ಮನಗೆ ಹಿಡಿಸಿರುವ ಈ ಸನ್ನಿ ಎಂತದ್ದು ಅಂತಾ ಕಣ್ಣಮುಂದೆ ಹರಿದಾಡಲು ಶುರುವಾಯ್ತು. Read more »

16
ಏಪ್ರಿಲ್

ಐಡಿಯಾಲಜಿ,ಚಿಂತನೆ ಮತ್ತು ಜೀವನದ ವಾಸ್ತವಗಳು

– ಮು.ಅ ಶ್ರೀರಂಗ,ಬೆಂಗಳೂರು

Badanavalu Gandhijiಡಾ. ಕಿರಣ್ ಎಂ ಗಾಜನೂರು ಅವರು ೧೩-೪-೧೫ರ ಪ್ರಜಾವಾಣಿ ದಿನಪತ್ರಿಕೆಯ ‘ಸಂಗತ’ ಕಾಲಂನಲ್ಲಿ ‘ಮೋಡಿ’ಯಿಂದ ಬಿಡಿಸಿಕೊಳ್ಳಿ ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಲೇಖನಕ್ಕೆ ಇದೊಂದು ಪ್ರತಿಕ್ರಿಯಾತ್ಮಕ ಸಹಸ್ಪಂದನ.

‘ಶ್ರಮಸಹಿತ ಸರಳ ಬದುಕು, ಸುಂದರ ಬದುಕು’ ಎಂಬ ತತ್ವವನ್ನು ಸಾರುವ  ಸಲುವಾಗಿ  ರಂಗಕರ್ಮಿ ಪ್ರಸನ್ನ ಅವರು  ಬದನವಾಳುವಿನಲ್ಲಿ  ‘ಸತ್ಯಾಗ್ರಹ ಮತ್ತು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ’ ಆಯೋಜಿಸಿರುವ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲಿ ವರದಿಗಳು,ಲೇಖನಗಳು ಬಂದಿವೆ. ‘ಶ್ರಮಸಹಿತ ಸರಳ ಬದುಕು’ ಎಂಬ ಮೂರ್ನಾಲಕ್ಕು ಪದಗಳನ್ನು ವಿಶ್ಲೇಷಿಸಿದರೆ ನಮಗೆ ಸಿಗಬಹುದಾದ ಸಂಭಾವ್ಯ ಉತ್ತರಗಳು –

(೧) ಈಗ ಒಂದಿಲ್ಲೊಂದು ಕೆಲಸದ ಮೂಲಕ ತಮ್ಮ ಅನ್ನ  ಸಂಪಾದಿಸಿಕೊಳ್ಳುತ್ತಿರುವ ಜನಗಳು ಶ್ರಮಪಡದೆ ಅದನ್ನು ಪಡೆಯುತ್ತಿದ್ದಾರೆ ಅಥವಾ
(೨) ಜನಗಳ ಕೈಯಲ್ಲಿ ಹೆಚ್ಚು ದೈಹಿಕ ಶ್ರಮದ ಅವಶ್ಯಕತೆ ಇಲ್ಲದ ಸಣ್ಣಪುಟ್ಟ ಕೆಲಸಮಾಡಿಸಿಕೊಂಡು ಅವರ ಸರಳ ಬದುಕಿಗೆ ಎಷ್ಟು ಬೇಕೋ ಅಷ್ಟು ಅನ್ನ ಕೊಟ್ಟು ಸಾಕುತ್ತಿರುವ ಧರ್ಮಾರ್ತರು ನಮ್ಮ ನಡುವೆ ಇದ್ದಾರೆ.

ಸ್ವಲ್ಪ ಸಾಮಾನ್ಯ ಜ್ಞಾನ ಇರುವವರಿಗೂ ಮೇಲಿನ ಎರಡು ಉತ್ತರಗಳಲ್ಲಿರುವ ಹುಳುಕುಗಳು,ತಪ್ಪುಗಳು ಕಾಣುತ್ತವೆ.ಇಂದು ಒಬ್ಬ ಶ್ರೀಸಾಮಾನ್ಯ ಒಂದು ಹೊತ್ತಿಗೆ ಊಟ ಸಂಪಾದಿಸಿಕೊಳ್ಳಬೇಕಾದರೂ ಶ್ರಮ ಪಟ್ಟು ಕೆಲಸ ಮಾಡಲೇಬೇಕು. ಅದು ಅವರವರ ವಿದ್ಯೆ,ಕುಶಲತೆ,ಕೆಲಸದ ರೀತಿಗೆ ಸಂಬಂಧಪಟ್ಟಿರುತ್ತದೆ…ಕೆಲಸಮಾಡದೆ ಸಿಕ್ಕಷ್ಟು ತಿಂದು ತನ್ನ ಹೊಟ್ಟೆಹೊರೆದುಕೊಳ್ಳಬೇಕಾದರೆ ಎಲ್ಲರಂತೆ ಕೆಲಸ ಮಾಡೋಕ್ಕೆ ನಿನಗೇನು ಧಾಡಿಯೆಂದು ಬೈಸಿಕೊಂಡು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಬೇಕು.

‘ಸುಂದರ ಬದುಕು’ ಸಾಧ್ಯವಾಗುವುದು ಯಾವಾಗ? ನಮ್ಮ ಜೀವನ ನಿನ್ನೆಗಿಂತ ಇಂದು,ಇಂದಿಗಿಂತ ನಾಳೆ ಉತ್ತಮವಾಗಿದ್ದರೆ ಅದನ್ನು ಸುಂದರ ಅನ್ನಬಹುದು.ನಮ್ಮ ತಾತ ಎಲ್ಲಾ ಕಡೆಗೂ ನಡೆದುಕೊಂಡೇ ಹೋಗುತ್ತಿದ್ದ; ನಾನೂ ನಡೆದುಕೊಂಡೇ ಓಡಾಡುವ ಸ್ಥಿತಿಯಲ್ಲಿ ಜೀವನ ನಡೆಸುತ್ತೇನೆ ಎನ್ನುವುದು ಬದುಕು ಸುಂದರವಾಗುವ ಲಕ್ಷಣವೆ? ಕೆಲವೊಂದು ವಿಚಾರಗಳನ್ನು ನಾವು ನಮ್ಮ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳ ಸಾಧ್ಯತೆ-ಅಸಾಧ್ಯತೆಗಳ ಬಗ್ಗೆ ಯೋಚಿಸಬೇಕಾಗುತ್ತದೆ.ಇಲ್ಲವಾದರೆ ನಮ್ಮನ್ನು ನಾವೇ ಮಾನಸಿಕವಾಗಿ ವಂಚಿಸಿಕೊಳ್ಳುತ್ತಾ ಹೋಗುತ್ತೇವೆ. ಇದೇನು ದೊಡ್ಡ ತತ್ವಶಾಸ್ತ್ರೀಯ ಸಮಸ್ಯೆ ಅಲ್ಲ. ಚಿಕ್ಕ ಚಿಕ್ಕ ಸಂಗತಿಗಳನ್ನೇ ನೋಡೋಣ ಸಾಕು.
Read more »