ವಿಷಯದ ವಿವರಗಳಿಗೆ ದಾಟಿರಿ

Posts tagged ‘ಹರೀಶ್’

13
ಏಪ್ರಿಲ್

ಇದೊಂದು ಸಣ್ಣ ಸಂಗತಿ ತಿಳಿದಿದ್ದರೆ ಆ ಸಾವನ್ನು ಯಾರಾದರೂ ತಪ್ಪಿಸಬಹುದಿತ್ತು

– ರೋಹಿತ್ ಚಕ್ರತೀರ್ಥ

harishjpg-08-1457415172ಫೆಬ್ರವರಿ 17ನೇ ತಾರೀಖು ಬುಧವಾರದ ಪತ್ರಿಕೆಯಲ್ಲಿ ಪ್ರಕಟವಾದ ಆ ವರದಿಯನ್ನು ಹಾಗ್‍ಹಾಗೇ ಕೊಡುವುದಾದರೆ ಅದು ಹೀಗಿದೆ: ಹುಟ್ಟೂರಿನಲ್ಲಿ ನಡೆಯುತ್ತಿದ್ದ ಸ್ಥಳೀಯ ಚುನಾವಣೆಯಲ್ಲಿ ಓಟು ಹಾಕಲೆಂದು ಹರೀಶ್ ಶನಿವಾರ ಊರಿಗೆ ತೆರಳಿದ್ದರು. ತನ್ನ ಕುಟುಂಬದ ಜತೆ (ತಾಯಿ ಮತ್ತು ಅಣ್ಣ) ಒಂದಷ್ಟು  ಹೆಚ್ಚಿನ  ಸಮಯ  ಕಳೆಯುವ   ಉದ್ಧೇಶದಿಂದ  ಸೋಮವಾರ   ರಜೆ   ಹಾಕಿದ್ದರು. ಮಂಗಳವಾರ  ಆಫೀಸಿದ್ದುದರಿಂದ  ಊರಿಂದ  ಮುಂಜಾನೆ  ಬೇಗನೇ  ಹೊರಟಿದ್ದರು.  ಬೈಕು ಚಲಾಯಿಸುತ್ತ  ಬರುತ್ತಿದ್ದಾಗ,  ತಿಪ್ಪಗೊಂಡನಹಳ್ಳಿಯ  ಸಮೀಪ,  ಹಿಂದಿನಿಂದ  ಒಂದು   ಲಾರಿ ಅವರನ್ನು ಓವರ್‍ಟೇಕ್ ಮಾಡುವ ಯತ್ನದಲ್ಲಿತ್ತು. ಲಾರಿ ಅತಿ ವೇಗದಲ್ಲಿದ್ದುದರಿಂದ, ಅದು ತನ್ನ ತೀರಾ ಹತ್ತಿರ ಬಂದಾಗ ಹರೀಶ್ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದರು. ಆದರೆ, ಲಾರಿ ಮಾತ್ರ ನಿಲ್ಲುವ ಸೂಚನೆ ತೋರಿಸಲಿಲ್ಲ. ಅದು, ಯಮವೇಗದಲ್ಲಿ ಮುಂದುವರಿದು ಹರೀಶರ  ದೇಹದ  ಮೇಲೆಯೇ  ಹಾದುಹೋಯಿತು. Read more »