ಕಂದ ನೀನು ಸಾಯಲೇಕೆ…
– ಮಂಜುನಾಥ ಕೊಳ್ಳೇಗಾಲ
ಕಳೆದೆರಡು ದಿನದಿಂದ ಆ ಮುಗ್ಧ ಕರುವಿನ ಚಿತ್ರ ಪದೇಪದೇ ನಿದ್ದೆಗೆಡಿಸುತ್ತಿದೆ. ಮೊನ್ನೆ ಕೇರಳದಲ್ಲಿ ಕೆಲವು ರಕ್ಕಸರು ಪ್ರತಿಭಟನೆಯ ಹೆಸರಿನಲ್ಲಿ ಕಡಿದು ತಿಂದು ತೇಗಿದರಲ್ಲ,ಕಡಿಯಲು ಟೆಂಪೋ ಹತ್ತಿಸುವ ಕೆಲವೇ ಕ್ಷಣಗಳ ಹಿಂದೆ ಕೂಡ, ಬಲಿಗೆ ಹೋಗುವ ಪ್ರಾಣಿಗಳ ಕಣ್ಣುಗಳಲ್ಲಿ ಸಾಮಾನ್ಯವಾಗಿ ಕಾಣುವ ಭಯದ ಸೂಚನೆಯೂ ಇಲ್ಲ ಅದರ ಮೊಗದಲ್ಲಿ. ಇನ್ನೈದೇ ನಿಮಿಷದಲ್ಲಿ ತನ್ನನ್ನು ಕೊಲ್ಲುತ್ತಾರೆಂಬ ಅರಿವೂ ಇರಲಾರದು ಪಾಪದ್ದಕ್ಕೆ. ಕೇವಲ ಯಾರದೋ ಮೇಲಿನ ಹುರುಡಿಗಾಗಿ ಅದನ್ನು ಕತ್ತರಿಸಿ ಚೆಲ್ಲಿದ ಕಟುಕರು ಆ ಮೊಗವನ್ನು, ಆ ಭಾವವನ್ನು ಕ್ಷಣಕಾಲವಾದರೂ ನಿರುಕಿಸಿದ್ದರೇ? ಖಂಡಿತಾ ಇರಲಿಕ್ಕಿಲ್ಲ.
ಬಾಲ್ಯದಲ್ಲಿ ನಾನು ಕೊಟ್ಟಿಗೆಯಲ್ಲಿ ಕೂತು ದಿನಗಟ್ಟಲೆ ಹರಟುತ್ತಿದ್ದ ತುಂಗೆ ಕರುವೂ ಬಹುತೇಕ ಹೀಗೇ ಇತ್ತು. ಅದೇ ಬಟ್ಟಲುಗಣ್ಣು, ಅದೇ ಹೊಳಪು, ಅದೇ ಮಾಟವಾದ ಮೋರೆ, ತುಸುವೇ ನಗುವಂತಿದ್ದ ಮುಖಭಾವ, ಹಣೆಯ ಮೇಲೆ ಅದೇ ಬಿಳಿಯ ಲಾಂಛನ. ಮೈಬಣ್ಣವೊಂದು ತುಸು ತಿಳಿದು, ವಯಸ್ಸೊಂದು ಇನ್ನೂ ಚಿಕ್ಕದು… ಅಂಥದ್ದೊಂದು ಮುದ್ದಾದ ಜೀವಿಗೆ ಇಂಥ ದಾರುಣವಾದ ಅಂತ್ಯವೂ ಸಾಧ್ಯವಿರಬಹುದೆಂದು ಯೋಚಿಸಲೂ ಆಗದ ವಯಸ್ಸು ಅದು. ಹಾಲು ಕರೆಯುವುದನ್ನು ನಿಲ್ಲಿಸಿದ ಹಸುವಿಗೂ ಮನೆಯಲ್ಲಿ ಹೊರೆ ಹುಲ್ಲು, ಒಂದಷ್ಟು ’ತಿಂಡಿ’ ದಕ್ಕುತ್ತಿತ್ತು; ಮೇಯಲು ಗೋಮಾಳವಿತ್ತು. ಸತ್ತವುಗಳನ್ನು ಸಾಮಾನ್ಯವಾಗಿ ಮಾದಿಗರು ಒಯ್ಯುತ್ತಿದ್ದರಾದರೂ ಕೆಲವು ಮನೆಗಳಲ್ಲಿ ಮನೆಯ ಸದಸ್ಯರಂತೆಯೇ ಇರುತ್ತಿದ್ದ ಅವುಗಳು ಆನಂತರ ಛಿದ್ರಛಿದ್ರವಾಗಿ ಹೋಗುವುದನ್ನು ಕಲ್ಪಿಸಿಕೊಳ್ಳಲಾಗದೇ ಕೆಲವು ಮನೆಯವರು ತಮ್ಮ ಜಾಗೆಯಲ್ಲೇ ಮಣ್ಣು ಮಾಡುತ್ತಿದ್ದುದೂ, ಅದಕ್ಕಾಗಿ ಕೆಲವೊಮ್ಮೆ ಮಾದಿಗರು ಬಂದು ಜಗಳವಾಡುತ್ತಿದ್ದುದೂ ಉಂಟು – ಆಗ ಅದರ ಹಿಂದಿನ ಆರ್ಥಿಕತೆ, ಸಾಮಾಜಿಕ ನಡಾವಳಿಗಳು ನನಗಿನ್ನೂ ಅರ್ಥವಾಗದ ವಯಸ್ಸು. ಹೋರಿಗರುಗಳನ್ನೂ ಅವು ಹಾಲು ಕುಡಿಯುವುದನ್ನು ಬಿಡುವವರೆಗೆ ಇಟ್ಟುಕೊಂಡು ಆಮೇಲೆ ಅದನ್ನು ರೈತರಿಗೆ ಮಾರುತ್ತಿದ್ದುದನ್ನೂ, “ಕಟುಕರಿಗೆ ಮಾರಿಗೀರೀಯ” ಎಂಬ ಕೊನೆಯ ಎಚ್ಚರಿಕೆಯೊಂದಿಗೆ ಬೀಳ್ಕೊಡುತ್ತಿದ್ದುದನ್ನೂ ನೋಡಿದ್ದೇನೆ. ಆಮೇಲೆ ಅವುಗಳ ಗತಿ ಏನಾಗುತ್ತಿತ್ತೋ ಅರಿಯೆ – ಕೆಲವೊಮ್ಮೆ ಅವು ’ಮನೆ’ಯನ್ನು ಹುಡುಕಿಕೊಂಡು ಕೊಟ್ಟಿಗೆಗೇ ಮರಳಿ ಬಂದದ್ದೂ, ಆಗೆಲ್ಲಾ ಅವಕ್ಕೊಂದಷ್ಟು ಹುಲ್ಲು ಹಾಕಿ, ಮೈದಡವಿ, ’ಬುದ್ಧಿ ಹೇಳಿ’ ಮತ್ತೆ ಹೊಸ ಯಜಮಾನರ ಬಳಿ ಕಳಿಸುತ್ತಿದ್ದುದೂ ಉಂಟು.
ಒಂದು ಹೊತ್ತು ಉಪವಾಸ ಮಾಡಿ, ಅದರ ಹಣದಲ್ಲಿ ಗೋವುಗಳನ್ನು ಉಳಿಸಿಕೊಳ್ಳುವ ವಿನೂತನ ಅಭಿಯಾನ #GiveUpAMeal ಹಿಂದಿನ ಕತೆ..
ಅಜಿತ್ ಶೆಟ್ಟಿ
ಹೆರಂಜೆ ದೊಡ್ಡಮನೆ.
ಗೋಹತ್ಯೆ ತಡೆಗಾಗಿನ ಕೂಗು ಭಾರತದಲ್ಲಿ ಬಹಳ ಹಿಂದಿನದು, ಇತ್ತೀಚಿನ ಡಿಜಿಟಲ್ ಇಂಡಿಯಾ ಯುಗದಲ್ಲಿ ಅದು ಸೋಷಿಯಲ್ ಮೀಡಿಯದಲ್ಲೂ ಸದ್ದು ಮಾಡುತ್ತಿದೆ.. ನಮ್ಮ ಯುವಕರು ಗೋಹತ್ಯೆ ನಿಲ್ಲಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಡಿದುಕೊಳ್ಳುವಾಗ ಸೋಕಾಲ್ಡ್ ಪ್ರಗತಿಪರರು ಸೋಷಿಯಲ್ ಮೀಡಿಯದಲ್ಲಿರುವ ಮಂದಿಗೆ ತಲೆ ಇಲ್ಲ, ಅವರಿಗೆ ಅಷ್ಟು ಪ್ರೀತಿ ಇದ್ದರೆ ಒಂದೆರಡು ಗೋವುಗಳನ್ನು ಸಾಕಲಿ, ಗೋಶಾಲೆ ನಡೆಸಲಿ ಹೀಗೆ ಹಲವಾರು ಪ್ರಶ್ನೆಗಳನ್ನೊಡ್ಡಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ನಮ್ಮ ಯುವಕರ ಕೂಗು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಇದೆಯಾ ಅಥವಾ ನಿಜವಾಗಲೂ ಗೋವುಗಳನ್ನು ಉಳಿಸಿಕೊಳ್ಳುವ ಕಾಳಜಿ ಇದೆಯಾ, ಪೂಜ್ಯ ಭಾವನೆ ಇಟ್ಟುಕೊಂಡಿದ್ದಾರ ಎಂದು ನೋಡಿದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಡೆದ ಒಂದು ಅಭಿಯಾನ ಯುವ ಜನತೆ ಬಗ್ಗೆ ಹೆಮ್ಮೆ ಮೂಡಿಸುತ್ತದೆ ಎಂದು ಭಾವಿಸುತ್ತೇನೆ. ಈ ಅಭಿಯಾನದ ಒಳಗೆ ಹೋಗುವ ಮೊದಲು ಅಭಿಯಾನದ ಪೂರ್ವ ಪ್ರೇರಣೆಯ ಕಡೆ ಒಮ್ಮೆ ಗಮನ ಹರಿಸೋಣ. ನಮ್ಮ ದೇಶದಲ್ಲಿ ಗೋವು ಪ್ರತಿ ರೈತನ ಬೆನ್ನೆಲುಬು, ದೇಶಿ ಗೋವುಗಳು ಅವನತಿ ಹೊಂದಿದರೆ ರಾಸಾಯನಿಕ ಮುಕ್ತ ಕೃಷಿ ಎನ್ನುವುದು ಕನಸಾಗುವುದು ನಿಶ್ಚಿತ. ಇಂತಹ ಸತ್ಯಗಳು ನಮ್ಮ ಸಮಾಜಕ್ಕೆ, ಜನನಾಯಕರಿಗೆ ಗೊತ್ತಿಲ್ಲ ಅಂತೇನು ಇಲ್ಲ.. ಆದರೂ ಓಲೈಕೆ ರಾಜಕಾರಣಕ್ಕಾಗಿ ಗೋಹತ್ಯೆಯನ್ನು ನಿಲ್ಲಿಸಲಾಗುತ್ತಿಲ್ಲ, ನಾವು ಗಾಂಧೀಜಿ ಅನುಯಾಯಿಗಳು ಎಂದವರೇ ದಶಕಗಳ ಕಾಲ ದೇಶವನ್ನು ಆಳಿದರೂ ಗಾಂಧಿ ಕನಸನ್ನು ನನಸು ಮಾಡದೆ ಹೊಣೆಗೇಡಿಗಳಂತೆ ವರ್ತಿಸಿದ್ದಾರೆ. ಇವೆಲ್ಲವುಗಳ ನಡುವೆ ಬರಗಾಲದಿಂದ ಸಾಯುತ್ತಿರುವ ಜಾನುವಾರುಗಳನ್ನು ಉಳಿಸಿ ರೈತನ ಬಾಳನ್ನು ಬಲಗೊಳಿಸುವ ಪ್ರಾಮಾಣಿಕ ಕಾರ್ಯವನ್ನಾದರೂ ಮಾಡುತ್ತಾರೆ ಎಂದುಕೊಂಡರೆ ಅದನ್ನು ಮಾಡದೇ ಅದರಲ್ಲೂ ಭ್ರಷ್ಟಾಚಾರ ಮಾಡಿಕೊಂಡು ಮಜ ಮಾಡುತ್ತಿದ್ದಾರೆ.. ಇಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಮಠಗಳು, ಸಂಘ ಸಂಸ್ಥೆಗಳು ರೈತರ ಬೆನ್ನಿಗೆ ನಿಂತು ಗೋಶಾಲೆಗಳನ್ನು ತೆರೆದು ಗೋವುಗಳನ್ನು ಉಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇದರ ಒಂದು ಭಾಗವಾಗಿ ರಾಮಚಂದ್ರ ಪುರ ಮಠವು ಸಹ ೧೪ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆದು ಗೋವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಮತ್ತಷ್ಟು ಓದು
ಕೇಳುತ್ತಿದೆಯಾ ಗೋವಿನ ಆಕ್ರಂದನ…
– ಶಾರದ ಡೈಮಂಡ್
ಜನನದಿಂದ ಮರಣ ಪರ್ಯಂತ ಹುಲು ಮಾನವರಿಗೆ ಅಮೃತ ಸಮಾನವಾದ ಹಾಲನ್ನುಣಿಸುವವಳು ಗೋಮಾತೆ. “ಗವಾಂ ಅಂಗೇಷು ತಿಷ್ಟಂತಿ ಭುವನಾನಿ ಚತುರ್ದಶ” – ಗೋವಿನ ದೇಹದ ಕಣಕಣಗಳಲ್ಲೂ ಹದಿನಾಲ್ಕು ಲೋಕಗಳನ್ನು ವ್ಯವಸ್ಥಿತವಾಗಿ ನಡೆಸತಕ್ಕ ಮೂವತ್ಮೂರು ಕೋಟಿ ದೇವತೆಗಳು ಅನ್ಯಾನ್ಯ ಸ್ಥಳಗಳಲ್ಲಿ ನೆಲೆಸಿರುತ್ತಾರೆ. ಗೋವಿನಿಂದ ದೊರಕುವ ಹಾಲು, ಮೊಸರು, ಬೆಣ್ಣೆ, ತುಪ್ಪ ಮನುಷ್ಯ ಸ್ವಾಸ್ಥಮಯ ಜೀವನವನ್ನು ನಡೆಸಲು ಆಧಾರವಾಗಿದೆ. ಗೋಮೂತ್ರ, ಗೋಮಯ ಕೃಷಿಗೆ ಜೀವಾಳ. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕಾಮಧೇನುವಾಗಿ ನಮ್ಮನ್ನು ಸಲಹುತ್ತಿರುವ ಗೋವಿಗೆ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಮತ್ತಷ್ಟು ಓದು