ಪ್ರೇತದ ಆತ್ಮ ಚರಿತೆ! (ಭಾಗ 3)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಶನಿವಾರವಾಡೆಗೆ ಶನಿ ಎಡಗಾಲಿಟ್ಟು ವಕ್ಕರಿಸಿದ್ದ. ರಘುನಾಥನನ್ನು ಗೃಹಬಂಧನದಲ್ಲಿ ಇಢಲಾಗಿದ್ದರೂ, ಆತನ ದುಷ್ಟಕೂಟ ಮಾತ್ರ ಸುಮ್ಮನೆ ಕೂತಿರಲಿಲ್ಲ. ಅದು ಒಂದಲ್ಲಾ ಒಂದು ಸಂಚನ್ನು ಹೆಣೆಯುತ್ತಲೇ ಇತ್ತು. ರಘುನಾಥನ ಬಂಧನವಾದ ಕೆಲವೇ ದಿನದಲ್ಲಿ ಪೇಶ್ವಾ ಮಾಧವ ರಾವ್ ಮೇಲೆ ಮಾರಣಾಂತಿಕ ದಾಳಿ ನಡೆಯಿತು. ಮಾಧವ ರಾವ್ ಬೆಂಗಾವಲಿಗನಾಗಿದ್ದ ರಾಮಸಿಂಗ್ ಎಂಬಾತ ಮಾಧವ್ ರಾವ್ ಮೇಲೆ ಅನಿರೀಕ್ಷಿತವಾಗಿ ತಲವಾರು ಝಳಪಿಸಿದ. ಕುತ್ತಿಗೆಗೆ ಬೀಳಬೇಕಿದ್ದ ಪೆಟ್ಟು ತೋಳಿಗೆ ಬಿತ್ತು ಬದುಕಿಕೊಂಡ, ಇದರ ಹಿಂದೆ ರಘುನಾಥ ರಾವ್ ಕೈವಾಡ ಇತ್ತು ಎಂದು ಬಳಿಕ ತಿಳಿದು ಬಂತು. ಹೈದರ್ ಆಲಿಯ ವಿರುದ್ಧ ಮೂರನೇ ಯುದ್ಧಕ್ಕೆ ಮಾಧವ್ ರಾವ್ ಪೇಶ್ವಾ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಪೇಶ್ವಾ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಭಯಾನಕ ಟಿಬಿ ಖಾಯಿಲೆ ಪೇಶ್ವಾನಿಗೆ ತಟ್ಟಿತ್ತು. ಅಂದಿನ ಕಾಲಕ್ಕೆ ಅದು ಬ್ರಿಟಿಷರು ತಂದು ಬಿಟ್ಟಿದ್ದ ಹೊಸ ಖಾಯಿಲೆಯಾದ ಕಾರಣ ಇಲ್ಲಿ ಟಿಬಿಗೆ ಸರಿಯಾದ ಚಿಕಿತ್ಸೆ ಇರಲಿಲ್ಲ. ಥೇವೂರು ಚಂತಾಮಣಿ ದೇವಾಲಯದಲ್ಲಿ ಪೇಶ್ವಾ ಮಾಧವ ರಾವ ಕೊನೆಯುಸಿರೆಳೆದ. ಅಲ್ಲೇ ಆತನ ಅಂತ್ಯಸಂಸ್ಕಾರ ನಡೆಸಲಾಯಿತು. ಆತನ ಪ್ರಿಯ ಪತ್ನಿ ರಾಮಾಬಾಯಿ ಗಂಡನ ಚಿತೆಗೆ ಹಾರಿ ಪ್ರಾಣ ಬಿಟ್ಟಳು. ಮಾಧವ ರಾವ್, ಶನಿವಾರವಾಡೆಯ ಪೇಶ್ವಾ ಗದ್ದುಗೆ ಅಲಂಕರಿಸಿದ ಕೊನೆಯ ಸಮರ್ಥ ಪೇಶ್ವಾ. ಈತ ಹಲವಾರು ಸಮರ್ಥ ಸೇನಾನಿಗಳನ್ನು ಗುರುತಿಸಿ ಅವರಿಗೆ ಬೇರೆ ಬೇರೆ ವಲಯಗಳ ಅಧಿಕಾರ ನೀಡಿದ. ಇಂದು ನಾವು ರಾಜಸ್ಥಾನದಲ್ಲಿ ಕಾಣುತ್ತಿರುವ ಸಿಂಧ್ಯಾ ಮನೆತನದ ಮೂಲ ಪುರುಷ ಮಹಾದ್ ಜಿ ಸಿಂಧ್ಯಾನನ್ನು ಬೆಳೆಸಿದ್ದು ಮಾಧವರಾವ್ ಪೇಶ್ವಾ. ಕೊಲ್ಹಾಪುರದ ಭೋಸ್ಲೆಗಳು, ಬರೋಡಾದ ಗಾಯಕ್ವಾಡರು, ಉತ್ತರಭಾರತದಲ್ಲಿ ಹೋಳ್ಕರ್‌ಗಳು ಇವರೆಲ್ಲಾ ಮಾಧವರಾವ್ ಪೇಶ್ವಾನ ಗರಡಿಯಲ್ಲೇ ಪಳಗಿ ಪುಣೆಗೆ ನಿಷ್ಟರಾಗಿ ಆಡಳಿತ ನಡೆಸಿದರು. ಮಾಧವರಾವ್ ಪೇಶ್ವೆ ತೀರಿಕೊಳ್ಳುತ್ತಿದ್ದಂತೆ ಈ ರಾಜ್ಯಗಳ ಹಿಡಿತ ಪುಣೆಯಿಂದ ಕೈ ತಪ್ಪಿತು. ಎಲ್ಲರೂ ಸ್ವತಂತ್ರರಾಗಿ ಆಳ್ವಿಕೆ ಮಾಡಲು ಆರಂಭಿಸಿದರು. ಮಾಧವ ರಾವ್ ಬಳಿಕ ಪುಣೆಯಲ್ಲಿ ನಾಲಾಯಕ್ಕುಗಳ ಸರದಿ ಆರಂಭ ವಾಯಿತು. ಪೇಶ್ವಾಯಿಯ ರಕ್ತ ಎಲ್ಲಿ ಕಳಪೆಯಾಯಿತೋ ಗೊತ್ತಿಲ್ಲ, ಒಬ್ಬರಿಗಿಂತ ಒಬ್ಬರು ಅಯೋಗ್ಯರೇ ಬರಲಾರಂಭಿಸಿದರು. ಶನಿವಾರ ವಾಡೆಯನ್ನು ಇಂದಿಗೂ ಕಾಡುತ್ತಿರುವ ಪ್ರೇತದ ಕತೆ ಇಲ್ಲಿ ಆರಂಭವಾಗುತ್ತದೆ. ಮತ್ತಷ್ಟು ಓದು