ವಿಷಯದ ವಿವರಗಳಿಗೆ ದಾಟಿರಿ

Posts tagged ‘ಹೊಯ್ಸಳ’

16
ಆಗಸ್ಟ್

ಕನ್ನಡದ ಮೊದಲ ಕೋಮುವಾದಿ ಈ ಮುಮ್ಮಡಿ ಬಲ್ಲಾಳ ವೀರ!

– ಸಂತೋಷ್ ತಮ್ಮಯ್ಯ

hoಕ್ರಿ.ಶ ೧೩೧೦. ಅದು ಮುಸಲ್ಮಾನರ ರಂಜಾನ್ ತಿಂಗಳಿನ ೨೨ನೇ ದಿನ, ಭಾನುವಾರ. ಆ ಪವಿತ್ರ ತಿಂಗಳಿನ ೨೧ ದಿನಗಳೂ ಮುಸಲ್ಮಾನರು ದಕ್ಷಿಣ ಭಾರತದಲ್ಲಿ ನಿರಂತರ ಲೂಟಿ ನಡೆಸಿದ್ದರು. ಕಾಫಿರರ ಕೊಲೆ ಮಾಡಿದ್ದರು, ವಿಗ್ರಹ ಭಂಜನೆ ನಡೆಸಿದ್ದರು, ಮತಾಂತರಗಳು ನಡೆದಿದ್ದವು.

ರಂಜಾನಿನ ೨೨ನೇ ದಿನದಂದು ಅವರು ಲೂಟಿಗೆ ಆರಿಸಿಕೊಂಡದ್ದು ಶ್ರೀಮಂತ ದ್ವಾರಸಮುದ್ರವನ್ನು. ಮಲ್ಲಿಕಾಫರ್ ಎಂಬ ಒಂದು ಕಾಲದ ಬ್ರಾಹ್ಮಣ ಮತಾಂತರವಾದೊಡನೆಯೇ ವಿಪರೀತ ಕ್ರೂರಿಯೂ, ಮಾತೃ ಧರ್ಮದ ದ್ವೇಷಿಯೂ ಆಗಿ ಬದಲಾಗಿದ್ದ. ಹಿಂದೂ ಧರ್ಮದ ಯಾವ ನರವನ್ನು ಮೀಟಿದರೆ ಲಾಭ ಎಂಬುದನ್ನು ಉಳಿದ ದಾಳಿಕೋರರಿಗಿಂತ ಆತ ಚೆನ್ನಾಗಿ ಬಲ್ಲವನಾಗಿದ್ದ. ಅಲ್ಲಾವುದ್ದೀನ್ ಖಿಲ್ಜಿಯ ಕೂಲಿ ಮಾಡುತ್ತಿದ್ದ ಆತ ದಣಿಯನ್ನು ಮೆಚ್ಚಿಸಲು ಏನು ಮಾಡಲೂ ಹಿಂಜರಿಯುತ್ತಿರಲಿಲ್ಲ. ದ್ವಾರಸಮುದ್ರವನ್ನು ಲೂಟಿಮಾಡಬೇಕು ಎಂದು ಆತನೇ ಮುಹೂರ್ತ ನಿಗದಿಪಡಿಸಿದ್ದ. ಏಕೆಂದರೆ ಆ ಹೊತ್ತಲ್ಲಿ ದ್ವಾರಸಮುದ್ರದ ರಾಜ ರಾಜಧಾನಿಯಲ್ಲಿರಲಿಲ್ಲ. ನಿಶ್ಚಯವಾದಂತೆ ದ್ವಾರಸಮುದ್ರದ ಮೇಲೆ ದಾಳಿಯಾಯಿತು. ನಿರಂತರ ೧೩ ದಿನ ಲೂಟಿ ನಡೆಯಿತು. ದೇವಸ್ಥಾನಗಳು ಧ್ವಂಸವಾದವು. ಅತ್ತ ರಾಜ ರಾಜಧಾನಿಗೆ ದೌಢಾಯಿಸಿ ಬಂದಾಗ ಕಾಲ ಮಿಂಚಿಹೋಗಿತ್ತು. ಮಲ್ಲಿಕಾಫರನಿಗೆ ಶರಣಾಗದೆ ಆತನಿಗೆ ಬೇರೆ ದಾರಿಯಿರಲಿಲ್ಲ. ದುಷ್ಟ ಮಲ್ಲಿಕಾಫರ್ ಆತನಿಗೆ ಎರಡು ಆಯ್ಕೆಗಳನ್ನು ನೀಡಿದ. ಒಂದೋ ಇಸ್ಲಾಮಿಗೆ ಮತಾಂತರವಾಗಬೇಕು. ಇಲ್ಲವೇ ತಮಿಳು ಪಾಂಡ್ಯರನ್ನು ಗೆಲ್ಲಲು ಸಹಾಯ ಮಾಡಬೇಕು ಮತ್ತು ದ್ವಾರಸಮುದ್ರದಲ್ಲಿ ಮುಸಲ್ಮಾನ ಸೈನ್ಯವನ್ನು ಇರಿಸಿಕೊಳ್ಳಬೇಕು. ರಾಜ ಮತಾಂತರಕ್ಕೆ ಒಪ್ಪಿಗೆ ನೀಡಲಿಲ್ಲ. ಉಳಿದ ಷರತ್ತುಗಳಿಗೆ ಒಪ್ಪಿದ. ಮಲ್ಲಿಕಾಫರ್ ದ್ವಾರಸಮುದ್ರದ ಸೈನ್ಯದ ಬಲದಿಂದ ತಮಿಳು ಪಾಂಡ್ಯರನ್ನು ಗೆದ್ದು ಲೂಟಿಗೈದು ದೆಹಲಿಗೆ ಹೊರಟುಹೋದ. Read more »

18
ಆಕ್ಟೋ

ಏಕ್ ಥಾ ಟೈಗರ್…! ಅವನೊಬ್ಬನಿದ್ದ ನಮ್ಮ ಸಳ…!

– ಚರಿತ್ರ ಕುಮಾರ್

ಮಲೆನಾಡಿನ ಒಂದು ಹಳ್ಳಿ. ಗುರುವೊಬ್ಬ ಶಿಷ್ಯರನ್ನು ಕೂರಿಸಿಕೊಂಡು ಬಯಲಲ್ಲಿ ಪಾಠ ಹೇಳಿಕೊಡುತ್ತಿದ್ದ. ತನ್ಮಯನಾಗಿದ್ದ ಗುರು. ಆಲಿಸುತ್ತಾ ಮನನಮಾಡಿಕೊಳ್ಳುತ್ತಿದ್ದ ಶಿಷ್ಯರು. ವಿದ್ಯೆಯನ್ನು ಪರಿಕಿಸಲೋ ಅಥವಾ ಶಿಷ್ಯರನ್ನು ಅಳೆಯಲೋ ಅಥವಾ ಗುರುವಿನ ಮಟ್ಟವನ್ನು ತಿಳಿಯಲೋ ಎಂಬಂತೆ ವ್ಯಾಘ್ರವೊಂದು ಘರ್ಜಿಸುತ್ತಾ ಬಂತು. ಎಂಥಾ ಗುರು-ಶಿಷ್ಯರೂ ಒಮ್ಮೆ ಅವಕ್ಕಾಗುವ ಸಮಯ. ಗುರುವಿನ ಬಾಯಿಂದ ಬಂದಿದ್ದು ಒಂದೇ ಒಂದು ಮಾತು “ಹೊಯ್-ಸಳ” . ಸಳ ಎಂಬವನು ಶಿಷ್ಯ. ಆತ ನೆಚ್ಚಿನ ಶಿಷ್ಯನೇ ಇರಬೇಕು. ಆತ ಕತ್ತಿ ಹಿರಿಯಲಿಲ್ಲ. ಬಾಣ ಹೂಡಲಿಲ್ಲ. ಬಯಲಲ್ಲಿ ಗುರುಸಮ್ಮುಖದಲ್ಲಿ ಪಾರಾಯಣ ಮಾಡುತ್ತಿದ್ದವನಿಗೆ ಗುರುವಾಕ್ಯವೇ ಆಯುಧಕ್ಕಿಂತ ವೊನಚಾಯಿತು. ಸಳ ಬರಿಗೈಯಲ್ಲೇ ಕಾದ. ಗುರುವಾಕ್ಯ ಪೂರೈಸಿತು. ಹುಲಿ ಅಸುನೀಗಿತು. ಹೊಯ್ ಸಳ ಎಂದಿದ್ದ ಗುರುವೇ ಈಗ “ಭಲೇ ಸಳ” ಎಂದ. ಮುಂದೆ ಗುರುವಾಕ್ಯಬಲದಿಂದಲೇ ಯುವಕ/ಬಾಲಕ ಸಳ ರಾಜ್ಯ ಕಟ್ಟಿದ, ಆಳಿದ. ವಿದ್ಯೆಯ ಬಲ, ಗುರುವಿನ ಬಲ ಮತ್ತು ಶಿಷ್ಯನ ಅಂತಶಕ್ತಿಗೆ ಇವೆಲ್ಲಾ ಘಟನೆಗಳು ಸಾಕ್ಷಿಗಳಾಗಿ ನಿಲ್ಲುತ್ತವೆ. ಇದು ಕನ್ನಡದ ಇತಿಹಾಸದಲ್ಲಿ ದಾಖಲಾಗುವ ಮಹತ್ತರ ಪ್ರಸಂಗ. ಸ್ವಶಕ್ತಿಯಿಂದ , ಸ್ವಚಿಂತನೆಯಿಂದ ಸಾಮ್ರಾಜ್ಯವೊಂದು ಮೈದಾಳಿದ ಕಥೆ. ಹೀಗೆ ಕರ್ನಾಟಕ ಮರೆಯಲಾಗದ, ಸುವರ್ಣಯುಗವನ್ನು ಕಂಡ ಹೊಯ್ಸಳ ಸಾಮ್ರಾಜ್ಯಮುಂದೆ ಹಲವು ವೈಭವಗಳನ್ನು ಕಂಡಿತು. ಕನ್ನಡದ ಹಲವು ಕುರುಹುಗಳನ್ನು ಬಿಟ್ಟುಹೋಯಿತು. ಕರ್ನಾಟಕ ಶಿಲ್ಪ ಕಲೆಗಳ ಬೀಡಾಯಿತು. ಭೂಲೋಕದ ಸ್ವರ್ಗ ಎಂದು ಕವಿಗಳು ವರ್ಣಿಸುವಂತಾಯಿತು. ಕರ್ನಾಟಕ ನಾಟ್ಯ ಕಲೆಗಳ ನಾಡಾಯಿತು. ಸರ್ವಧರ್ಮ ಸಮನ್ವಯದ ನೆಲೆಯಾಯಿತು. ದ್ವಾರಸಮುದ್ರದ ಹೊಯ್ಸಳರು ಗಡಿಯಾಚೆಗಿನ ರಾಜರೊಂದಿಗೂ ಕಾದಾಡಿ ಕನ್ನಡದ ಹಿರಿಮೆಯನ್ನು ಸಾರಿದರು. ಆಧುನಿಕ ಪರಿಭಾಷೆಯಲ್ಲಿ ಹೇಳಬೇಕೆಂದರೆ ಕನ್ನಡದ ಮನಸ್ಸನ್ನು ಪ್ರಬಲವಾಗಿ ರೂಪಿಸಿದವರೇ ಹೊಯ್ಸಳರು. ಕರ್ನಾಟಕದಲ್ಲಿ ಶಿವ ದೇವಾಲಯಗಳು ಪ್ರಸಿದ್ಧವಾಗಿದ್ದೇ ವೈಷ್ಣವರಾಗಿದ್ದ ಹೊಯ್ಸಳರ ಕಾಲದಲ್ಲಿ ಎಂಬುದು ಇಂದಿನ ಕಾಲಮಾನದಲ್ಲೂ ಸೋಜಿಗ ಹುಟ್ಟಿಸುವ ಸಂಗತಿ.

ಇಂಥ ಎಷ್ಟೋ ಸಂಗತಿಗಳನ್ನು ಇತಿಹಾಸದ ಪುಟಗಳು ವಿವರಿಸುತ್ತಾ ಹೋಗುತ್ತವೆ. ಆ ಸಂಗತಿಗಳೆಲ್ಲವೂ ಹುಲಿಕೊಂದ ಸಳನ ವಂಶದ ವೈಭವಗಳು-ಕೊಡುಗೆಗಳು. ಇಷ್ಟೊಂದು ವೈಭವಶಾಲಿ, ಪರಾಕ್ರಮಶಾಲಿ,ಪರಿಶ್ರಮಶಾಲಿ ಸಾಮ್ರಾಜ್ಯಕ್ಕೆ ಬೀಜ ಹಾಕಿದ ಸಳ ನಿಜವಾದ ಕರ್ನಾಟಕದ ಹುಲಿ. ಪರಾಕ್ರಮದಲ್ಲಿ, ಗುರುವಾಕ್ಯ ಪರಿಪಾಲನೆಯಲ್ಲಿ , ಹಿಡಿದ ಸಂಗತಿಯನ್ನು ಪಾಲಿಸುವುದರಲ್ಲಿ , ಧರ್ಮ ಕಾರ್ಯದಲ್ಲಿ ,ಪರೋಪಕಾರದಲ್ಲೂ ಆತ ಹುಲಿ. ಅವನೊಬ್ಬನಿದ್ದ ಹುಲಿ. ಏಕ್ ಥಾ ಟೈಗರ್. ಹುಲಿ ಎಂದು ಕರೆದರೆ ಇವನನ್ನೇ ಕರೆಯಬೇಕು ಎಂಬ ಗುಣಲಕ್ಷಣ, ವ್ಯಕ್ತಿತ್ವವನ್ನು ಹೊಂದಿದ್ದ ಸಳ ರಾಜ್ಯ ಕಟ್ಟದೆ ಇನ್ನಾರು ಕಟ್ಟಿಯಾರು? ಆತನನ್ನಲ್ಲದೆ ಇನ್ನಾರನ್ನು ತಾನೇ ಹುಲಿ ಎಂದು ಕರೆಯಲಾದೀತು?

Read more »