ವಿಷಯದ ವಿವರಗಳಿಗೆ ದಾಟಿರಿ

Archive for

12
ಆಕ್ಟೋ

ಯುವ ಜನರೇ ಆತ್ಮಹತ್ಯೆಗೆ ಮುನ್ನ ಯೋಚಿಸಿ ?

ಅರವಿಂದ್

ಬದುಕಿನ ಕಟ್ಟಕಡೆಯ ಸಂಧರ್ಭವಾದರು, ಯಾರಿಗೂ ತಿಳಿಯದ ನಿಗೂಢ, ಇಂದಿನ ಯುವ ಜನರ ಮನದಲ್ಲಿ ಸಾವು ಎಂಬುದು ಆಟಿಕೆಯ ವಸ್ತುವೇ ? ಸಾವನ್ನು ಅಷ್ಟು ಸುಲಭವಾಗಿ ಆಸ್ವಾದಿಸುವುದಾದರೆ ಎಷ್ಟೋ ಸಮಸ್ಯೆಗಳಿಗೆ ಜೀವವೇ ಇರುತ್ತಿರಲಿಲ್ಲ. ಇಂದಿನ ಧಾವಂತದದ ಯುಗದಲ್ಲಿ ಎಲ್ಲೆಲ್ಲೂ ಪ್ಯೆಪೋಟಿ, ಎಲ್ಲರನ್ನು ಹಿಂದುಕ್ಕುವಂತ ನಾಗಾಲೋಟದ ಮನಸ್ಸಿಗೆ ಅಷ್ಟು ಸುಲಭವಾಗಿ ಸಾವು ಬಂತಂದರೆ ಅಥವಾ ಸಾವಿನ ನಿರ್ಣಯವನ್ನು ಕ್ಯೆಗೆತ್ತುಕೊಂಡರೆ ಅದಕ್ಕಿಂತಲೂ ಹೇಡಿತನ ಮತ್ತೊಂದಿಲ್ಲ.

ಅಸಲಿಗೆ ನಮ್ಮ ಯುವ ಜನರಲ್ಲಿ ಸಮಸ್ಯೆಗಳ ಪರಿಹಾರವನ್ನು ಹುಡುಕಿಕೊಳ್ಳುವ ತಾಳ್ಮೆಯೇ ಇಲ್ಲದಾಗಿದೆಯೇ ? ಅಥವಾ ಪ್ಯೆಪೋಟಿ ಜಗತ್ತಿಗೆ ಅವರನ್ನು ಒಡ್ಡಿಕೊಳ್ಳುವ ಛಲವೇ ಮರೆತು ಹೋಗಿದೆಯೇ ? ಸಮಸ್ಯೆ ಕೌಟುಂಬಿಕದ್ದೆ ಇರಲಿ, ಅಥವಾ ನೌಕರಿಯದೆ ಇರಲಿ, ಪ್ರತಿ ಸಮಸ್ಯೆಗಳು ಸೃಷ್ಟಿಗಳಿಗೂ ಕಾರಣ ಪರಿಹಾರವಿಲ್ಲದೆ ಇಲ್ಲ. ಈಗ್ಗೆ ಕೆಲವು ವರುಷಗಳಿಂದ ಸ್ವಾಭಾವಿಕ ಸಾವಿನ ಸಂಖ್ಯೆ ಇಳಿಮುಖವಾದರು, ಅಸ್ವಾಭಾವಿಕವಾಗಿ ಸಾವನ್ನು ಬರಮಾಡಿಕೊಳ್ಳುವ ಯುವ ಜನರಲ್ಲಿ ಮಾನಸಿಕ ಸ್ಥ್ಯೇರ್ಯ, ಸಮಸ್ಯೆಗಳ ಸ್ವರೂಪದಲ್ಲಿರುವ ಗೋಜಲುಗಳು, ಅರ್ಥಮಾಡಿಕೊಳ್ಳುವದರಲ್ಲಿ ಸಂಯಮವೇ ಕಳೆದು ಹೋಗಿದೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಯಾರನ್ನೋ ಹೊಣೆಯನ್ನಾಗಿ ಮಾಡುವ, ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿರುವ, ಮತ್ತು ಅದರ ಕೂತೂಹಲಕ್ಕೆ ಪ್ರಯತ್ನಿಸುವ ಮಿತ್ರರೇ, ಒಮ್ಮೆ ನಿಮ್ಮ ಸಮಸ್ಯೆಯಾ ಬಗ್ಗೆ ಚಿಂತನೆ ನಡೆಸಿ, ಸಾಧ್ಯವಾದರೆ ನಿಮ್ಮ ಆಪ್ತರೊಡನೆ ಒಮ್ಮೆ ಚರ್ಚಿಸಿ,

ನನ್ನ ಮಿತ್ರನೊಬ್ಬ ಕಳೆದ ವರುಷಗಳ ಹಿಂದೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾದ, ಅವನ ಸಮಸ್ಯೆ ಕೇವಲ ದುಡ್ಡಿಗೆ ಸಂಭಂದಿಸಿದ್ದು, ತಂಗಿಯ ಮದುವೆಗೆ ಸಾಲ ಮಾಡಿದ್ದ ಜವಾಬ್ದಾರಿಯುತ ವ್ಯಕ್ತಿ, ಸಾಲ ತೀರಿಸಲಾಗದೆ ಸಾವನ್ನು ಬರಮಾಡಿಕೊಂಡಿದ್ದ. ಒಂದಿಬ್ಬರು ಗೆಳೆಯರಲ್ಲಿ ಸಣ್ಣ ಪುಟ್ಟ ಸಾಲ ಇತ್ತಾದರೂ ಅದ್ಯಾವುದು ಅವನ ಸಾವಿನಿಂದ ಪರಿಹಾರವಾಗುವ ಸಮಸ್ಯೆಯಲ್ಲ. ತನ್ನ ೧೮ನೇ ವಯಸ್ಸಿಗೆ ಸಾಲ ಮಾಡಿ ಆಟೋ ಖರೀದಿಸಿದ ಹುಡುಗ, ಸಮಯದ ಪರಿವೆಯೇಯಿಲ್ಲದೆ ದುಡಿದು ಎರಡು ವರುಷಗಳಲ್ಲೇ ಸಾಲ ತೀರಿಸಿದವನು, ತನ್ನ ತಂಗಿಯ ಮದುವೆಗೆ ಮಾಡಿದ ಸಾಲ ತೀರಿಸದೆ ಹೋದಾನೆ, ಅದು ಕೇವಲ ಒಂದೂವರೆ ಲಕ್ಷ. ಆತನ ಪರಿಸ್ಥಿತಿಗೆ ಅದು ದೊಡ್ಡದೇ ಇರಬಹುದು, ಸಾವಿನಿಂದ ಅದು ಪರಿಹಾರವಾಗಲಿಲ್ಲ. ಈಗ ಅವನ ಸಾಲವೂ ಬೆಳೆದಿದೆ. ಅವನ ತಾಯಿಗೆ ವಯಸ್ಸಾಗಿದ್ದರೂ ದುಡಿದು ಸಾಲ ತೀರಿಸುವ ಹಂಬಲ. ಆದರೆ ಆರೋಗ್ಯ ಕ್ಯೆಕೊಟ್ಟಿದೆಯಾದರೂ, ಒಬ್ಬರಲ್ಲಿ ಅವಲಂಬನೆಯಾಗದ ತುಡಿತ. ಆಕೆಯೇ ಮಗನಂತೆ ಸಾವಿಗೆ ಶರಣಾಗಿದ್ದಾರೆ ? ಮತ್ತಷ್ಟು ಓದು »

12
ಆಕ್ಟೋ

ಹಿಂದೂ ಹಾಗೆಂದರೇನು?

ಸಂತೋಷ್ ಕುಮಾರ್ ಪಿ.ಕೆ
ಸಂಶೋಧಕರು, ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಸಂಸ್ಥೆ
ಕುವೆಂಪು ವಿ ವಿ, ಶಂಕರಘಟ್ಟ

ಆಧುನಿಕ ಜಗತ್ತಿನ ಬುದ್ದಿಜೀವಿಗಳ ವಲಯದಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿರುವ ವಿಷಯವೆಂದರೆ ಹಿಂದೂಯಿಸಂ, ಈ ಹಿಂದೂಯಿಸಂನ ಅಧ್ಯಯನಕ್ಕಾಗಿ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಬೃಹತ್ ಮಟ್ಟದ ಸಂಸ್ಥೆಗಳು ಹುಟ್ಟಿಕೊಂಡಿವೆ. ಈ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬಹುತೇಕ ಬುದ್ದಿಜೀವಿಗಳು ಹಿಂದೂಯಿಸಂ ಎಂಬ ರಿಲಿಜನ್ ಅಸ್ಥಿತ್ವದಲ್ಲಿದ್ದು ಅದರ ಸಾಧಕ ಬಾಧಕಗಳ ಕುರಿತು ಆಲೋಚಿಸುವ ಸಂದರ್ಭದಲ್ಲಿ ಕೊಂಚ ವಿಭಿನ್ನವಾಗಿ ಪರ್ಯಾಯಾವಲೋಚಿಸುವ ಕುರಿತು ಇಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ನಾವು ನಮ್ಮದಲ್ಲದ ವಿಚಾರಗಳನ್ನು ನಮ್ಮದೇ ಎಂದು ಹೇಗೆ ತಿಳಿದುಕೊಂಡಿದ್ದೇವೆ ಹಾಗು ಅವುಗಳು ನಮ್ಮವೇ ಎಂದು ಸ್ಪಷ್ಟಪಡಿಸುವಲ್ಲಿ ಇತರ ಅಂಶಗಳ ಪಾತ್ರಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿದ್ದೇನೆ. ಪ್ರಸಕ್ತ ಲೇಖನದಲ್ಲಿ ಈ ಕೆಳ ಕಾಣಿಸಿರುವ ಅಂಶಗಳ ಮೇಲೆ ಬೆಳಕನ್ನು ಹರಿಸಲು ಪ್ರಯತ್ನಿಸಿದ್ದೇನೆ.

1. ಹಿಂದೂ ಪದದ ಉಗಮ, ಬೆಳವಣಿಗೆ ಮತ್ತು ಅದರ ಇಂದಿನ ಬಳಕೆ

2. ಹಿಂದೂಯಿಸಂನ ಉಗಮ ಮತ್ತು ಅದರ ಪ್ರಸಕ್ತತೆ

1. ಹಿಂದೂಯಿಸಂನ ಕುರಿತು ಚರ್ಚಿಸುವ ಮುನ್ನ ಈ ಹಿಂದೂ ಎಂಬ ಪದವು ಹೇಗೆ ಅಸ್ಥಿತ್ವಕ್ಕೆ ಬಂದಿತೆಂದು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಭಾರತದವರು ಹಿಂದುಗಳು ಎಂಬ ಕಲ್ಪನೆ ಬಹಳಷ್ಟು ಜನರಿಗೆ ಬೇರೂರಿದೆ, ಪ್ರೌಢಶಾಲಾ ಶಿಕ್ಷಣ ಮುಗಿಸಿದವರಿಗೆ ನೆನಪಿರಬಹುದು, ಹಿಂದೂ ಎಂಬ ಪದ ಹೇಗೆ ಬಂತೆಂದು. ಪರ್ಷಿಯನ್ನರು ಮೊದಲು ಭಾರತಕ್ಕೆ ಬಂದಾಗ ಸಿಂಧೂ ನದಿಯ ಬಯಲಿನಲ್ಲಿ ವಾಸಿಸುತ್ತಿದ್ದ ಜನರನ್ನು  ಹಿಂದೂಗಳೆಂದು ಕರೆದರು,  ಈ ವಿಷಯಕ್ಕೆ ಸಂಬಂಧಿಸಿದಂತೆ ಆಧಾರವನ್ನು ಒದಗಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ,  ಕಾರಣ ಪ್ರೌಢಶಾಲಾ ಪಠ್ಯಪುಸ್ತಕಗಳಲ್ಲಿ ದೊರಕುವ ಸರ್ವೇಸಾಮಾನ್ಯ ಮಾಹಿತಿಯಾಗಿದೆ. ಆದರೆ ಹಿಂದೂಸ್ಥಾನ ಎಂಬ ಹೆಸರು ಬಹಳ ಹಿಂದಿನಿಂದಲೂ ಭಾರತಕ್ಕೆ ಇತ್ತು ಆದ ಕಾರಣ ಇಲ್ಲಿ ವಾಸಿಸುವವರಿಗೆ ಹಿಂದೂಗಳೆಂದು ಹೆಸರು ಬಂದಿರುವುದು ಎಂಬುದು ಕೆಲವರ ವಾದ ಇರಬಹುದು, ಆದರೆ ನಾನು ಆ ರೀತಿಯ ಗೊಂದಲ ಚರ್ಚೆಗೆ ಇಳಿಯಬಸುವುದಿಲ್ಲ, ಬದಲಿಗೆ ನಾ ಹೇಳ ಹೊರಟಿರುವುದು, ಹಿಂದೂ ಎಂಬುದು ಹೇಗೆ ಅಸ್ಥಿತ್ವಕ್ಕೆ ಬಂದಿತು ಮತ್ತು ಅದರ ಬಳಕೆ ಪ್ರಸಕ್ತ ಕಾಲದಲ್ಲಿ ಯಾವ ರೀತಿ ಆಗುತ್ತಿದೆ ಎಂಬುದನ್ನು ವಿಶ್ಲೇಷಿಸುತ್ತೇನೆ. ನಮಗೆ ಈ ವಿಷಯಗಳು ತಿಳಿದಿದ್ದರೂ ಅದರ ಕುರಿತು ಆಲೋಚಿಸುವಾಗ ಸ್ವಲ್ಪ ಎಡವಿರುವುದು ಬುದ್ದಿಜೀವಿಗಳ ಆಲೋಚನಾ ಕ್ರಮಗಳನ್ನು ನೋಡಿದರೆ ತಿಳಿಯುತ್ತದೆ. ಮತ್ತಷ್ಟು ಓದು »

12
ಆಕ್ಟೋ

ದೇಶವನ್ನು ಆತಂಕಕ್ಕೀಡು ಮಾಡಿರುವ ಮರ್ಯಾದ ಹತ್ಯೆ ಪ್ರಕರಣ

-ಶಂಶೀರ್, ಬುಡೋಳಿ
ಪತ್ರಕರ್ತ

ದೇಶದಲ್ಲಿ ಆತಂಕಕ್ಕೀಡು ಮಾಡಿರುವ ಪ್ರಕರಣವೆಂದರೆ ಮರ್ಯಾದ ಹತ್ಯೆ ಪ್ರಕರಣ. ಚಂಡೀಗಢದ ವಕೀಲರಾದ ಅನಿಲ್ ಮಲೋತ್ರ ಮತ್ತು ರಂಜಿತ್ ಮಲೋತ್ರ ಮರ್ಯಾದ ಹತ್ಯೆ ಪ್ರಕರಣಕ್ಕೆ ಕುರಿತಾದ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಉತ್ತರಪ್ರದೇಶ, ಹರ್ಯಾಣ, ಪಂಜಾಬ್‌ಗಳಲ್ಲಿ ವರ್ಷಕ್ಕೆ ೯೦೦ ರಷ್ಟು ಮರ್ಯಾದ ಹತ್ಯೆಗಳು ನಡೆಯುತ್ತಿದೆ. ಮಾತ್ರವಲ್ಲ, ಇತರ ರಾಜ್ಯಗಳಲ್ಲಿ ೨೦೦ರಿಂದ ೩೦೦ರಷ್ಟು ಮರ್ಯಾದ ಹತ್ಯೆಗಳು ನಡೆಯುತ್ತದೆ ಎಂಬ ಆತಂಕಕಾರಿ ವಿಚಾರ ಕೂಡಾ ಬಹಿರಂಗಗೊಂಡಿದೆ. ಅಂತರ್‌ಜಾತಿ, ಸಗೋತ್ರ ಮದುವೆಯ ಕಾರಣದಿಂದಾಗಿ ಹಾಗೂ ಕುಟುಂಬ ಮತ್ತು ಸಮುದಾಯದ ಮರ್ಯಾದೆ, ಗೌರವ, ಪ್ರತಿಷ್ಠೆಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಮರ್ಯಾದೆ ಹತ್ಯೆಗಳು ನಡೆಯುತ್ತಿದ್ದು ಇದು ಆತಂಕಕಾರಿ ವಿಚಾರವಾಗಿದೆ.
ಮರ್ಯಾದೆ ಹತ್ಯೆ ಪ್ರಕರಣಕ್ಕೊಳಗಾದವರು ಇವತ್ತು ಸಾಮಾಜಿಕವಾಗಿ ಅವಮಾನಕ್ಕೊಳಗಾಗುತ್ತಿದ್ದಾರೆ. ಖಾಪ್ಸ್ ಪಂಚಾಯತಿಗಳು ಅಣ್ಣ-ತಂಗಿಯೆಂದು ಘೋಷಿಸಿ ಹೆಣ್ಣು- ಗಂಡನ್ನು ಸಗೋತ್ರದ ಹಿನ್ನೆಲೆಯಲ್ಲಿ ಪ್ರತ್ಯೇಕ ಮಾಡುತ್ತಿದ್ದಾರೆ. ಒಟ್ಟಾರೆ ಮರ್ಯಾದೆ ಹತ್ಯಾ ಪ್ರಕರಣಗಳು ಭೀಕರತೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಬಬುದು. ಈ ಮರ್ಯಾದ ಹತ್ಯೆಯೆಂಬುದು ಇವತ್ತು ನಿನ್ನೆಯ ರೋದನವಲ್ಲ. ರೋಮಿಯೋ-ಜೂಲಿಯೆಟ್ ಘಟನೆಯಿಂದಲೂ ಇವರೆಗೆ ಹೆಚ್ಚುತ್ತಾ ಬಂದಿರುವ ಆತಂಕಕಾರಿ ವಿಚಾರವಾಗಿದೆ. ಹೀಗಾಗಿ ಮರ್ಯಾದ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮರ್ಯಾದೆ ಎಂಬ ಪದದ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಕ್ಕೊಳಪಡಿಸುವ ಅಗತ್ಯವಿದೆ. ಈ ಕುರಿತು ವಿವಿಧ ಮಾನವ ಹಕ್ಕು ಸಂಘಟನೆಗಳು, ಜನಪರ ಸಂಘಟನೆಗಳು ದಿ ಇಂಡಿಯನ್ ಎವಿಡೆನ್ಸ್ ಆಕ್ಟ್, ದಿ ಇಂಡಿಯನ್ ಸಿವಿಲ್ ಕೋಡ್ ಆಕ್ಟ್, ಸ್ಪೆಷಲ್‌ಮ್ಯಾರೇಜ್ ಆಕ್ಟ್‌ನಲ್ಲಿ ಬದಲಾವಣೆಗಳನ್ನು ಹಾಗೂ ಹತ್ಯೆಗಳನ್ನು ತಡೆಗಟ್ಟಲು ವಿವಿಧ ಮಾರ್ಗಗಳನ್ನು ಸೂಚಿಸಬೇಕೆಂದು ಕೇಂದ್ರ ಸರಕಾರದ ಮುಂದೆ ಬೇಡಿಕೆಯಿಟ್ಟಿವೆ.

೨೦೦೭ರ ಜೂನ್ ನಿಮಗೆ ನೆನಪಿರಬೇಕು. ಹರ್ಯಾಣ ರಾಜ್ಯದ ಕೈತಾಲ್ ಜಿಲ್ಲೆಯಲ್ಲಿ ಒಂದು ಘಟನೆ ನಡೆಯಿತು. ಬಾಬ್ಲಿ-ಮನೋಜ್ ಇವರು ಸ್ವಗೋತ್ರದವರು. ಇವರಿಬ್ಬರು ಮದುವೆಯಾದ ಒಂದೇ ಒಂದು ಕಾರಣಕ್ಕಾಗಿ ಇವರಿಬ್ಬರನ್ನು ಕೊಲೆ ಮಾಡಲಾಯಿತು. ಆಗ ಖಾಪ್ಸ್ ಪಂಚಾಯತಿ ಪ್ರಶ್ನೆಗೊಳಗಾಗಿತ್ತು. ಇವರನ್ನು ಕೊಂದ ಕೊಲೆಗಾರರಿಗೆ ಶಿಕ್ಷೆಯಾಯಿತಾದರೂ ಅಮಾಯಕ ಎರಡು ಜೀವ ಬಲಿಯಾದದ್ದು ಮಾತ್ರ ದೇಶವನ್ನೇ ತಲ್ಲಣಗೊಳಿಸಿತ್ತು.
ಮತ್ತಷ್ಟು ಓದು »