ಕನ್ನಡ ಲೈಬ್ರೆರಿ – ಐಫೋನ್ ಮೂಲಕ ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಓದಿರಿ
ಸುನಿಲ್ ಜಯಪ್ರಕಾಶ್, ಬೆಂಗಳೂರು
ಗೆಳೆಯರೆ,
ನೀವೂ ನನ್ನಂತೆಯೇ ಯೋಚಿಸುವವರಾದರೆ, ನೀವು ಎಲ್ಲೇ ಹೋದರೂ, ಹೇಗೇ ಹೋದರೂ ಕೈಯಲ್ಲಿ ಓದಲು ಒಂದು ಕನ್ನಡ ಪುಸ್ತಕವಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಯೋಚಿಸುತ್ತೀರಿ. ಉದಾ: ಬಸ್ಸಿನಲ್ಲಿಯೋ, ರೈಲಿನಲ್ಲಿಯೋ ಅಥವಾ ಫ್ಲೈಟಿನಲ್ಲಿಯೋ ಹೋಗುತ್ತಿರಬೇಕಾದರೆ, ಹೊರದೇಶಕ್ಕೆ ಹೋಗಬೇಕಾದಾಗ, ಹೀಗೆ. ಈ ರೀತಿಯ ಯೋಚಿನೆ ತಲೆಯಲ್ಲಿ ಇರುವಾಗ ಮೊಬೈಲಿನ ಮೂಲಕ ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಓದಲು ಸಾಧ್ಯವಾಗಿಸುವಂತಹ ಅಪ್ಲಿಕೇಶನ್ ಸಿಕ್ಕರೆ ಸಂತೋಷವಾಗುವುದಿಲ್ಲವೇ ? ಈ ಯೋಚನೆಯನ್ನು ಸಾಕಾರಗೊಳಿಸಲೆಂದೇ ನಾನು ಒಂದು ಐ-ಫೋನ್ ಅಪ್ಲಿಕೇಶನ್ ಬರೆದಿದ್ದೇನೆ. ಇದನ್ನು ಬಳಸಿ, ಐಫೋನಿನ ಮೂಲಕ ನೀವು ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಓದಬಹುದು. ಹೇಗೆ ಸಾಧ್ಯ ? ಅಂತೀರ .. ಮುಂದೆ ಓದಿ
೧. ಈ ಐಫೋನ್ ಅಪ್ಲಿಕೇಶನ್ನಿನ ಹೆಸರು “ಕನ್ನಡ ಲೈಬ್ರೆರಿ”.
೨. ಇಂಟರ್ನೆಟ್ಟಿನಲ್ಲಿ ಲಭ್ಯವಿರುವ ಕನ್ನಡ ಪುಸ್ತಗಳ ಇಂಡೆಕ್ಸ್ ಅನ್ನು ನಿಮಗೆ ನೀಡುತ್ತದೆ. ನೀವು ಯಾವುದೇ ತಲೆನೋವಿಲ್ಲದೆ ಆಯಾ ಪುಸ್ತಕದ ಹೆಸರಿನ ಮೇಲೆ ಚಿಟುಕಿದರೆ ಸಾಕು, ಆ ಪುಸ್ತಕ ನಿಮಗೆ ಲಭ್ಯವಾಗುತ್ತದೆ.
೩. ಇದನ್ನು ಬಳಸಲು ಇಂಟರ್ನೆಟ್ ಬೇಕು. ಆದರೆ ಒಮ್ಮೆ ಒಂದು ಪುಟವನ್ನು ಓದಿದರೆ, ಮತ್ತೊಮ್ಮೆ ಓದಲು ಇಂಟರ್ನೆಟ್ ಬೇಕಿಲ್ಲ, ಹಾಗಾಗಿ ನಿಮಗೆ ಇಂಟರ್ನೆಟ್ ಬಲ್, ಅಥ್ವಾ ಐಫೋನಿನಲ್ಲಾದರೆ ಜಿಪಿಆರ್ಎಸ್ ಬಿಲ್ಲಿನ ಮೇಲೆ ಭಾರಿ ಹೊಡೆತ ಬೀಳುವುದಿಲ್ಲ.
೪. ಉಳಿಸಲಾದ ಪುಟಗಳನ್ನು ನೀವು ಯಾವಾಗ ಬೇಕಾದರೂ ತೆಗೆಯಬಹುದು.
೫. ಆಯಾ ಪುಸ್ತಕದ ಯಾವ ಪುಟವನ್ನು ತಾವು ಓದುತ್ತಿದ್ದೀರಿ ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಂಡಿರುತ್ತದೆ. ಹಾಗಾಗಿ ಪುಸ್ತಕವನ್ನು ಓದುತ್ತ ಅರ್ಧಕ್ಕೆ ನಿಲ್ಲಿಸಿದ್ದರೆ, ಮತ್ತೊಮ್ಮೆ ತೆರೆದಾಗ, ಆಯಾ ಪುಟ ತಂತಾನೇ ತೆರೆದುಕೊಳ್ಳುತ್ತದೆ.
ಈ ಅಪ್ಲಿಕೇಶನ್ ಅನ್ನು ೧೦ ದಿನಗಳ ಹಿಂದೆ Apple Storeಗೆ ಸಬ್ಮಿಟ್ ಮಾಡಿದ್ದೆ. ಕಳೆದ ಶುಕ್ರವಾರ ಇದು ಅಪ್ರೂವ್ ಆಗಿ, Apple App Storeನಲ್ಲಿ ಲಭ್ಯವಿದೆ.
Apple Store ಕೊಂಡಿ – http://itunes.apple.com/in/app/kannada-library/id397350933
ಅಪ್ಲಿಕೇಶನ್ ಪಾಪೆಗಳು – ಸೂಚನೆ – ಕೆಲವು ಪುಸ್ತಕಗಳ ಹೆಸರು ಇಂಗ್ಲೀಶಿನಲ್ಲಿರುತ್ತದೆ.
‘ತೆರೆಮರೆಯ ರಾಜಕೀಯ ದೊಂಬರಾಟ, ಜನತೆಗೆ ಉಚಿತ ಮನೋರಂಜನೆ’
ಕರುಣಾಕರ ಬಳ್ಕೂರು
ಕನ್ನಡ ಉಪನ್ಯಾಸಕ, ಎಕ್ಸ್ ಪರ್ಟ್ ಪಿ.ಯು.ಕಾಲೇಜು, ಮಂಗಳೂರು
ಕರ್ನಾಟಕ ರಾಜ್ಯಕ್ಕೆ ಏನ್ ಗತಿ ಬಂತು ಅಂತ? ಏನ್ ಗ್ರಹಚಾರ ತಾಗಿದೆಯೊ? ಯಾರ ಕೆಟ್ಟ ಕಣ್ಣು ಬಿದ್ದಿದೆಯೋ? ದೇವರೆ ಬಲ್ಲ! ರಾಜಕೀಯ ತಂತ್ರ-ಕುತಂತ್ರಗಳಿಂದ ಎಲ್ಲಾ ಪಕ್ಷಗಳು ಹೊಲಸೆದ್ದೋಗಿದೆ. ಇಷ್ಟೊಂದು ಕೆಳಮಟ್ಟದ ರಾಜಕೀಯ ಸೃಷ್ಟಿಯಾಗುತ್ತೆ? ಎಂದು ಯಾವ ಪ್ರಜೆಗಳು ಕನಸು ಮನಸುಲೂ ಅಂದುಕೊಂಡಿಲ್ಲ. ‘ಜನರ ಸೇವೆಯೇ ಜರ್ನಾಧನ ಸೇವೆ’ ಎಂದು ಅಧಿಕಾರ ವಹಿಸಿಕೊಂಡು ಇಂದು ಮತಿಭ್ರಮಣಯಾದವರಂತೆ ವರ್ತಿಸುತ್ತಿದ್ದಾರೆ, ಇದು ನಾಚಿಕೆಗೇಡು. ರಾಜ್ಯ ಉದ್ಧಾರ ಮಾಡ್ತಾರೆ ಅಂತ ಅಧಿಕಾರ ಕೊಡಿಸಿದ್ರೆ, ರಾಜ್ಯದ ಮಾನಮರ್ಯಾದೆಯನ್ನು 3 ಕಾಸಿಗೆ ಹರಾಜ್ ಹಾಕ್ತಾ ಇದ್ದಾರೆ. ಮಹಾಭಾರತದಲ್ಲೂ ಕೂಡ ಇಂತಹ ಕಳಪೆ ಮಟ್ಟದ, ಹೊಲಸು ರಾಜಕೀಯ ಮಾಡಿಲಾ.
ಹೆಣ್ಣು, ಮಣ್ಣು, ಹೊನ್ನುಗೋಸ್ಕರ ಎಷ್ಟೊಂದು ಕೆಳಮಟ್ಟಕ್ಕೆ ಇಲಿಯುತ್ತಾರೆ ಎನ್ನುವುದಕ್ಕೆ, ನೈಜ ಚಿತ್ರಣವೇ ಸಾಕ್ಷಿ. ವಿಧಾನಸೌಧಕ್ಕೆ ಎಷ್ಟು ಪಾವಿತ್ರ್ಯ ಇದೆ, ಕೆಲವು ಕಳಹೀನರು ಮನ ಬಂದಂತೆ ತಳಿಸಿರುವುದು ನೋಡಿ, ಮತಿಭ್ರಮಣೆ ಆಗಿದೆಯೇ ಎನ್ನುವ ಪ್ರಶ್ನೆಯೂ ಕಾಡಿತು. ಕಳಪೆ ರಾಜಕೀಯಕ್ಕೆ ತುತ್ತಾಗುತ್ತಿರುವುದು ನಮ್ಮ ದುರಂತ. ಇಂದಿನ ರಾಜಕಾರಣಿಗಳು ಪ್ರಜಾ ಪ್ರಭತ್ವ ವ್ಯವಸ್ಥೆಗೆ ಬಗೆದ ದ್ರೋಹ. ಅಧಿಕಾರ ಕೈಗೆ ಬಂದಿದ್ದೆ ಬಂದಿದ್ದು, ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ‘ಯಥಾ ರಾಜ ತಥಾ ಪ್ರಜಾ’- ರಾಜ ಸುಖಿಯಾಗಿದ್ದರೆ ಪ್ರಜೆಗಳು ಸುಖಿಯಾಗಿರುತ್ತಾರೆ. ರಾಜ್ಯ ಉದ್ಧಾರ ಮಾಡ್ತಾರೆ ಅಂತ ತಿಳ್‌ಕೊಂಡ್ರೆ, ಗುಡಿಸಿ ಗುಂಡಾಂತರ ಮಾಡ್ತಾ ಇದ್ದಾರೆ. ಕಾಯುವವವರೆ ಹೊಡೆದಾಡಿ ಕೊಳ್ಳುತ್ತಿದ್ದರೆ. ಇನ್ನೂ ಜನ ಸಾಮಾನ್ಯರ ಸ್ಥಿತಿ ಅದೋಗತಿ. ಕುರ್ಚಿ ಆಸೆಗಾಗಿ ವ್ಯಕ್ತಿತ್ವದ ಬಗ್ಗೆ ಆಲೋಚಿಸದೆ ಹಣದ ಹೊಳೆಯಲ್ಲಿ ರಾಜಕೀಯದ ನೈತಿಕತೆಯನ್ನು ಬುಡಮೇಲು ಮಾಡಿದ್ದಾರೆ. ಅಧಿಕಾರ ಬರುವ ಮುಂಚೆ ಸಾಧುವಂತೆ, ಸೌಜನ್ಯಶೀಲತೆ, ಪರಿಪೂರ್ಣ ವ್ಯಕ್ತಿತ್ವ ಹೊಂದಿರುವವಂತೆ ವರ್ತಿಸಿ, ಅಧಿಕಾರ ಬಂದ ತಕ್ಷಣ ತಾನು ಎಲ್ಲಿದಿನಿ ಎನ್ನುವ ಪರಿಜ್ಞಾನವು ಇಲ್ಲದೆ ವ್ಯವಹರಿಸುತ್ತಿರುವ ರಾಜಕಾರಣಿಗಳಿಗೇನು ನಮ್ಮಲಿ ಬರಗಾಲವಿಲ್ಲ. ಮತ್ತಷ್ಟು ಓದು 
ಶೌಚ ಪುರಾಣ
ವಿನಯ

ಮೊದಲೇ ಹೇಳಿಬಿಡುತ್ತೇನೆ ಲೇಖನ ಓದಿ ಆದ ಮೇಲೆ ನೀವು ನನ್ನನ್ನ ಇವನೆಂತ ಗಲೀಜು , ಹೊಲಸು , ಭಂಡ , ನಾಚಿಕೆ ಇಲ್ಲದವ ಅಂತ ಏನಾದ್ರೂ ಬೈಕೊಳ್ಳಿ ಪರವಾಗಿಲ್ಲ ಯಾಕಂದ್ರೆ ಹೆತಿದ್ದನ್ನು ಇಲ್ಲ ಅನ್ನೋದು ಕಷ್ಟ.ಹಾಗೆ ಏನಾದರು ತಿನ್ನುತ್ತಾ ಇದ್ದರೆ ದಯಮಾಡಿ ಅದನ್ನ ಬದಿಗಿಟ್ಟು ಇದನ್ನ ಓದಿ.ಆಮೇಲೆ ನಾನು ಮುನ್ನೆಚ್ಚರಿಕೆಗಳನ್ನ ಹೇಳಿಲ್ಲ ಅಂತ ನೀವು ನನ್ನನ್ನ ದೂರುವ ಹಾಗೆ ಇಲ್ಲ.
ನೋಡಿ ಜಗತ್ತಿನಲ್ಲಿ ಸಾವು ಕೂಡ ಹೇಳಿಕೇಳಿ ಬರಬಹುದು ಆದರೆ ನಾನು ಹೇಳ ಹೊರಟಿರುವ ಆ ಹೇಲು ಮಾತ್ರ ಹಾಗಲ್ಲ , ಯಾವಾಗ ಬರುತ್ತೆ ಅಂತ ಹೇಳೋದು ಕಷ್ಟ.ಹೇಗೆ ದೇವರೊಬ್ಬ ನಾಮ ಹಲವು ಅಂತ ಹೇಳ್ತಾರೋ ಹೇಲಿನ ವಿಷಯದಲ್ಲೂ ಅದೇ ಮಾತು ಅನ್ವಯವಾಗುತ್ತೆ. ನಾಚಿಕೆ ಇಲ್ಲದ ನನ್ನೊಂತೋರು ಹೇಲು ಅಂತ ಕರೆದರೆ , ಕೆಲವರು ಕಕ್ಕಸ್ಸು ಅಂತಾಲು,ಉತ್ತರ ಕನ್ನಡ ಕಡೆಯವರು ಸಂಡಾಸ್ ಅಂತಲೂ , ಸ್ವಲ್ಪ ನಾಚಿಕೆ ಸ್ವಭಾವದವರು ನಂಬರ್ ೨ ಅಂತಾಲು ಮತ್ತು ಆಧುನಿಕ ಜಗತ್ತಿನ ಜನ ಅನ್ನಿಸಿಕೊಂಡೋರು ರೆಸ್ಟ್ ರೂಂ ಗೆ ಹೋಗೋದು ಅಂತಾಲು ಕರೆಯುತ್ತಾರೆ ( ಇಲ್ಲಿ ಯಾರಿಗೆ ರೆಸ್ಟ್ ಅಂತ ಮಾತ್ರ ಕೇಳಬೇಡಿ).ಇನ್ನು ನಮ್ಮ ಸರ್ಕಾರದವರು ಇದನ್ನ ಮಲ ಅಂತಾಲು ಕರೆಯುತ್ತಾರೆ.
ಈ ಹೇಲಿನ ಜೊತೆಗೆ ಹೊಂದಿಕೊಂಡಿರೋದು ಹುನ್ಸ್ , ಇವೆರಡದ್ದು ಸಕತ್ ಕಾಮ್ಬಿನಶನ್.ಅದರ ವಿಚಾರಕ್ಕೆ ಆಮೇಲೆ ಬರೋಣ ಮೊದಲು ಈ ಹೇಲಿನ ಪುರಾಣ ಮುಗಿಸೋಣ. ನಾ ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ಶೌಚಾಲಯ ಇರಲಿಲ್ಲ , ಈಗಲೂ ಊರಿನ ಕೆಲವರ ಮನೆಯಲ್ಲಿ ಶೌಚಾಲಯ ಇಲ್ಲ.ಅವಾಗ ಹೇಲು ಬಂದ್ರೆ ಸಾಕು ಹಳ್ಳದ ಕಡೆಗೋ ಅಥವಾ ದರ್ಕಸ್ಕೋ ಅಥವಾ ಗುಡ್ಡದ ಕಡೆಗೋ ನಮ್ಮ ಓಟ ಶುರುವಾಗುತ್ತಿತ್ತು. ನನ್ನ ಅಚ್ಚು ಮೆಚ್ಚಿನ ಜಾಗ ಗುಡ್ಡದ ಪಕ್ಕದಲ್ಲಿರುವ ಒಂದು ಸಣ್ಣ ಕಾಲುವೆಯಾಗಿತ್ತು.ಸಂಡಾಸ್ ಮಾಡಲಿಕ್ಕೆ ಪ್ರಸಕ್ತವಾದ ಸ್ಥಳ ಅಂತಾನೆ ಹೇಳಬಹುದು. ಪಕ್ಕದ ಕಾಲುವೆಯಲ್ಲಿ ಸಂಡಾಸ್ ಮಾಡಿ ಕಾಲುವೆಯಲ್ಲಿ ಸ್ವಚ್ಛ ಮಾಡಿಕೊಳ್ಳೋದು ಸಕತ್ ಮಜಾ ಕೊಡೊ ವಿಚಾರ.ಕೆಲವೊಮ್ಮೆ ಸೋಂಬೇರಿತನ ಬಂದು ಕುನ್ದೆಯನ್ನೆ ಕಾಲುವೆಗೆ ಆದ್ದಿದ್ದು ಉಂಟು.ಮಳೆಗಾಲ ಶುರುವಾಯಿತೆಂದರೆ ಇನ್ನು ಒಂದು ಮಜಾ ಕಾಲುವೆಯ ನಡುವೆ ಸೇತುವೆಯಂತೆ ಹರಡಿರುವ ಬಳ್ಳಿಗಳ ಮೇಲೆ ಕೂತು ನೇರವಾಗಿ ಕಾಲುವೆಗೆ ಪ್ರಸಾದ ಹಾಕ್ತ ಇದ್ದೆವು.ಅಷ್ಟೇ ಅಲ್ಲ ನಾನು ಅಣ್ಣ ಒಟ್ಟಿಗೆ ಸಂಡಾಸ್ ಗೆ ಹೋಗ್ತಾ ಇದ್ದಿದ್ದರಿಂದ ಯಾರದು ಮುಂದೆ ಹೋಗುತ್ತೆ ಅನ್ನೋ ಬೆಟ್ ಬೇರೆ , ಏನೇ ಹೇಳಿ ಅದರ ಮಜವೇ ಬೇರೆ. ಮತ್ತಷ್ಟು ಓದು 
ಪ್ರಿಯೆ ಏಕೆ ನನ್ನ ಕಾಡುವೆ ಪ್ರತಿದಿನ
ನಾಗರಾಜ್ ಬೆಂಗಳೂರು
ಪ್ರಿಯೆ ಏಕೆ ನನ್ನ ಕಾಡುವೆ ಪ್ರತಿದಿನ ನಿನಗಾಗಿ ಕಾದಿರುವೆನು ಪ್ರತಿದಿನ ಬಂದು ಹೋಗುವೆಯಾ ಒಂದು ದಿನ ನಿನ್ನ ನೋಡಿ ಕಳೆದವು ಹಲವು ದಿನ ಎಲ್ಲಿ ಹೋದರು ನಿನ್ನ ನೆನೆಪುಗಳೇ ಕಾಡುತ್ತಿದೆ ಚಿನ್ನಾ…. ಆ ಸಂಜೆ ನಿನಗೆ ನೆನಪಿದೆಯಾ ಚಿನ್ನಾ, ನನ್ನ ಜೊತೆ ನೀ ಕಡೇ ಬಾರಿ ಇದ್ದ ಕ್ಷಣ, ಮರೆಯದ ಆ ಮುಸ್ಸಂಜೆ. ಈ ನನ್ನ ಕಣ್ಣೊಳಗೆ ಕೆಂಪಾದ ಸೂರ್ಯ, ನನ್ನೆದೆಯೊಳಗೆ ಬಿಸಿಯಾದ ಆ ತಂಗಾಳಿಯನ್ನ ಮರೆಯೋಕಾಗತ್ತಾ ಹೇಳು. ಕಡಲ ತೀರಕ್ಕೆ ಪ್ರತಿಸಲ ನಾನೇ ಕರೆದುಕೊಂಡು ಹೋಗುತ್ತಿದ್ದೆ. ಆದರೆ ಆ ದಿನ ‘ಏನೋ ಮಾತಾಡ್ಬೇಕು ಕಣೋ’……. ಅಂತ ನೀನೆ ಕರೆದುಕೊಂಡು ಹೋದೆ ನೋಡು, ಆಗಲೇ ನನ್ನಲ್ಲಿ ಅದಾವುದೋ ಒಂದು ಸಣ್ಣ ಭಯ ನನಗೇ ಗೊತ್ತಿಲ್ಲದೇ ಶುರುವಾಗಿತ್ತು. ಈ ಮನಸ್ಸು ಚಟಪಡಿಸ್ತಾ ಇತ್ತು. ಏಕೋ ಗೊತ್ತಿಲ್ಲ ಚಿನ್ನು, ನಿನ್ನ ಜೊತೆಗೆ ಆ ಮೂರು ದಿನಗಳಿಂದ ಮಾತಾಡ್ದೆ, ನೋಡದೆ ಇರದಿದ್ದರಿಂದಾನೋ ಏನೋ, ನಾನು ಮೌನಕ್ಕೆ ಶರಣಾಗಿದ್ದೆ. ಆದರೆ, ಗುಲಾಬಿಯಂತೆ ನಗು ತುಂಬಿ ಆದರಿಸುತ್ತಿದ್ದ ಆ ನಿನ್ನ ಕೆಂಪಾದ ತುಟಿಗಳಲ್ಲಿ ಅದೆಂಥದೋ ನಡುಕವಿತ್ತು. ಕೋಮಲದಂಥ ಆ ನಿನ್ನ ಕಣ್ಣುಗಳು ನನ್ನ ನೋಡಲು ಅಳಕುತ್ತಿದ್ದವು. ಮೌನದಿ ನಾ ನೋಡಿದಾಗ, ಒಂದೇ ಸಮನೆ ಉಸಿರು ಬಿಗಿದಪ್ಪಿ ದಯವಿಟ್ಟು ನನ್ನನ್ನು ಕ್ಷಮಿಸು, ನನ್ನನ್ನು ಮರೆತುಬಿಡು ಎಂದು, ಎರಡು ಕೈಗಳನ್ನ ಮುಚ್ಚಿಕೊಂಡು ದುಃಖಿಸಿ ಅಳುತ್ತಾ ಕುಳಿತು ಬಿಟ್ಟೆ ನೋಡು, ಆಗ ನನ್ನ ಜಿವಾನೇ ಹೋದಂತಾಯ್ತು. 😦
ನೀನೆಂದೂ ನನ್ನ ನೋಡಬಾರದು, ನನ್ನ ಹಿಂದೆ ಬರಬಾರದು. ಹಾಗೇನಾದರು ಮಾಡಿದರೇ ನನ್ನಾಣೆ ಎಂದೇಳಿ ನನ್ನನ್ನು ಮಾತನಾಡಲೂ ಬಿಡದೇ, ನನ್ನೆಡೆಗೆ ಬೆನ್ನು ತೋರಿ ಎದ್ದು ನಡೆದು ಬಿಟ್ಟೆ. ಆ ಸಂಜೆಯಲಿ ನಿನ್ನೊಂದಿಗೆ ಕಳೆದು ಹೋದ ಆ ಸೂರ್ಯ ಮತ್ತೆಂದಿಗೂ ನನ್ನ ಬಾಳಲ್ಲಿ ಬೆಳಕಾಗಿ ಬಂದಿಲ್ಲ ಹಾಗೆ ಬರಲೆನ್ನುವ ಸಣ್ಣ ನಿರೀಕ್ಷೆಯು ಈಗ ನನ್ನಲ್ಲಿಲ್ಲ. 😦 ಚೀನ್ನಾ ನಿನೇನೋ ಸುಲಭವಾಗಿ ಮರೆತುಬಿಡು ಅಂತ ಹೇಳಿಬಿಟ್ಟೇನೋ ಹೋದೆ ಕಣೋ. ಆದರೆ, ಮರೆಯುವುದು ಹೇಗೆ ಅಂತ ಮಾತ್ರ ಹೇಳಿ ಹೋಗಲಿಲ್ಲ ನೋಡು. ಅದಕ್ಕೇ ಅನ್ಸತ್ತೆ, ಇಂದಿಗೂ ನನ್ನಿಂದ ನಿನ್ನ ಮರೆಯೋದಕ್ಕೆ ಸಾಧ್ಯ ಆಗಿಲ್ಲ. ನಿನ್ನೊಂದಿಗಿನ ಆ ಮಧುರ ಕ್ಷಣಗಳು, ನಿನ್ನ ರೇಗಿಸಿ ಖುಷಿಪಡಿಸುತ್ತಿದ್ದ ಆ ದಿನಗಳು; ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸುಖಿಸುತ್ತಿದ್ದ ಆ ಕ್ಷಣಗಳು ಮರೆಯಲು ಸಾಧ್ಯನಾ? ಚಿನ್ನಾ ನೆನಪಿದೆಯಾ ಆ ದಿನ ಅಳುತ್ತಾ ‘ನನ್ನನ್ನು ಯಾವತ್ತಿಗೂ ಕೈ ಬಿಡೋಲ್ಲಂತ ಭಾಷೆ ಕೊಡು’ ಎಂದೇಳಿ ಭಾಷೆ ತೆಗೆದುಕೊಂಡಿದ್ದ ನಿನ್ನಿಂದಲೇ ನನ್ನ ಮರೆಯಲು ಅದ್ಹೇಗೆ ಸಾಧ್ಯ?! ನಿಜ ಹೇಳ್ಲಾ, ನೀನು ಹಪಹಪಿಗೆ ಬಿದ್ದು ಕೇಳಿದ ಅದೆಷ್ಟೋ ಮಾತುಗಳು, ನನ್ನೊಳಗೂ ಇದ್ದರು ಆದೆಕೋ ಬರೀ ಮೌನವಾಗಿಯೇ ಉಳಿದು ಬಿಟ್ಟೆವು. ಈಗೀಗ ಅನಿಸ್ತಿದೆ, ನೀನಿರದ ಈ ಬಾಳು ಬರಡು ಅಂತ. ನೀನಿಲ್ಲದ ಈ ಜಗವೆಲ್ಲ ಶೂನ್ಯವಾಗಿರುವಾಗ, ಒಳ ಹೋಗಿ ಬಂದ ಪ್ರತಿ ಉಸಿರು ‘ನೀನೆಲ್ಲಿ’… ಎಂದು ಕೇಳುವಾಗ, ಅವುಗಳಿಗೆಲ್ಲ ಏನೆಂದು/ಏನಂತ ಉತ್ತರ ಕೊಡಲಿ ಹೇಳು ಚಿನ್ನು? ಮತ್ತಷ್ಟು ಓದು 







