ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 19, 2010

ಕನ್ನಡ ಲೈಬ್ರೆರಿ – ಐಫೋನ್ ಮೂಲಕ ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಓದಿರಿ

‍ನಿಲುಮೆ ಮೂಲಕ

ಸುನಿಲ್ ಜಯಪ್ರಕಾಶ್, ಬೆಂಗಳೂರು

ಗೆಳೆಯರೆ,

ನೀವೂ ನನ್ನಂತೆಯೇ ಯೋಚಿಸುವವರಾದರೆ, ನೀವು ಎಲ್ಲೇ ಹೋದರೂ, ಹೇಗೇ ಹೋದರೂ ಕೈಯಲ್ಲಿ ಓದಲು ಒಂದು ಕನ್ನಡ ಪುಸ್ತಕವಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಯೋಚಿಸುತ್ತೀರಿ. ಉದಾ: ಬಸ್ಸಿನಲ್ಲಿಯೋ, ರೈಲಿನಲ್ಲಿಯೋ ಅಥವಾ ಫ್ಲೈಟಿನಲ್ಲಿಯೋ ಹೋಗುತ್ತಿರಬೇಕಾದರೆ, ಹೊರದೇಶಕ್ಕೆ ಹೋಗಬೇಕಾದಾಗ, ಹೀಗೆ. ಈ ರೀತಿಯ ಯೋಚಿನೆ ತಲೆಯಲ್ಲಿ ಇರುವಾಗ ಮೊಬೈಲಿನ ಮೂಲಕ ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಓದಲು ಸಾಧ್ಯವಾಗಿಸುವಂತಹ ಅಪ್ಲಿಕೇಶನ್ ಸಿಕ್ಕರೆ ಸಂತೋಷವಾಗುವುದಿಲ್ಲವೇ ? ಈ ಯೋಚನೆಯನ್ನು ಸಾಕಾರಗೊಳಿಸಲೆಂದೇ ನಾನು ಒಂದು ಐ-ಫೋನ್ ಅಪ್ಲಿಕೇಶನ್ ಬರೆದಿದ್ದೇನೆ. ಇದನ್ನು ಬಳಸಿ, ಐಫೋನಿನ ಮೂಲಕ ನೀವು ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಓದಬಹುದು. ಹೇಗೆ ಸಾಧ್ಯ ? ಅಂತೀರ .. ಮುಂದೆ ಓದಿ

೧. ಈ ಐಫೋನ್ ಅಪ್ಲಿಕೇಶನ್ನಿನ ಹೆಸರು “ಕನ್ನಡ ಲೈಬ್ರೆರಿ”.

೨. ಇಂಟರ್ನೆಟ್ಟಿನಲ್ಲಿ ಲಭ್ಯವಿರುವ ಕನ್ನಡ ಪುಸ್ತಗಳ ಇಂಡೆಕ್ಸ್ ಅನ್ನು ನಿಮಗೆ ನೀಡುತ್ತದೆ. ನೀವು ಯಾವುದೇ ತಲೆನೋವಿಲ್ಲದೆ ಆಯಾ ಪುಸ್ತಕದ ಹೆಸರಿನ ಮೇಲೆ ಚಿಟುಕಿದರೆ ಸಾಕು, ಆ ಪುಸ್ತಕ ನಿಮಗೆ ಲಭ್ಯವಾಗುತ್ತದೆ.

೩. ಇದನ್ನು ಬಳಸಲು ಇಂಟರ್ನೆಟ್ ಬೇಕು. ಆದರೆ ಒಮ್ಮೆ ಒಂದು ಪುಟವನ್ನು ಓದಿದರೆ, ಮತ್ತೊಮ್ಮೆ ಓದಲು ಇಂಟರ್ನೆಟ್ ಬೇಕಿಲ್ಲ, ಹಾಗಾಗಿ ನಿಮಗೆ ಇಂಟರ್ನೆಟ್ ಬಲ್, ಅಥ್ವಾ ಐಫೋನಿನಲ್ಲಾದರೆ ಜಿಪಿಆರ್ಎಸ್ ಬಿಲ್ಲಿನ ಮೇಲೆ ಭಾರಿ ಹೊಡೆತ ಬೀಳುವುದಿಲ್ಲ.

೪. ಉಳಿಸಲಾದ ಪುಟಗಳನ್ನು ನೀವು ಯಾವಾಗ ಬೇಕಾದರೂ ತೆಗೆಯಬಹುದು.

೫. ಆಯಾ ಪುಸ್ತಕದ ಯಾವ ಪುಟವನ್ನು ತಾವು ಓದುತ್ತಿದ್ದೀರಿ ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಂಡಿರುತ್ತದೆ. ಹಾಗಾಗಿ ಪುಸ್ತಕವನ್ನು ಓದುತ್ತ ಅರ್ಧಕ್ಕೆ ನಿಲ್ಲಿಸಿದ್ದರೆ, ಮತ್ತೊಮ್ಮೆ ತೆರೆದಾಗ, ಆಯಾ ಪುಟ ತಂತಾನೇ ತೆರೆದುಕೊಳ್ಳುತ್ತದೆ.

ಈ ಅಪ್ಲಿಕೇಶನ್ ಅನ್ನು ೧೦ ದಿನಗಳ ಹಿಂದೆ Apple Storeಗೆ ಸಬ್ಮಿಟ್ ಮಾಡಿದ್ದೆ. ಕಳೆದ ಶುಕ್ರವಾರ ಇದು ಅಪ್ರೂವ್ ಆಗಿ, Apple App Storeನಲ್ಲಿ ಲಭ್ಯವಿದೆ.

Apple Store ಕೊಂಡಿ  – http://itunes.apple.com/in/app/kannada-library/id397350933

ಅಪ್ಲಿಕೇಶನ್ ಪಾಪೆಗಳು – ಸೂಚನೆ – ಕೆಲವು ಪುಸ್ತಕಗಳ ಹೆಸರು ಇಂಗ್ಲೀಶಿನಲ್ಲಿರುತ್ತದೆ.

 

ಮೂಲ ಬ್ಲಾಗಿಗೆ ತೆರಳಲು ಇದನ್ನು ಚಿಟುಕಿ

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments