ವಿಷಯದ ವಿವರಗಳಿಗೆ ದಾಟಿರಿ

Archive for

20
ಆಕ್ಟೋ

ದೇವರು, ಧರ್ಮ ಮತ್ತವನ ಜಾತಿ. – ಸರಣಿ ೨

ಅರವಿಂದ್

ಕ್ರಿ.ಪೂ. ೧೦೦೦

ದೇವರು ಹುಟ್ಟಿದ್ದು ಹೇಗೆ ?

ಹಳೆಶಿಲಾಯುಗದ ಕಾಲದಲ್ಲಿ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದದ್ದು, ಪಠ್ಯಪುಸ್ತಕಗಳಲ್ಲಿ ಓದಿಯೇ ಇರುತ್ತೀರಿ. ಅದು ಅವನ ಅಂದಿನ ಅವಶ್ಯಕತೆ. ಆದರೆ ಮನುಷ್ಯನಿಗೆ ತನ್ನ ಸುತ್ತಮುತ್ತಲಿನ ನಿಸರ್ಗದ ವ್ಯೆಪರೀತ್ಯಗಳು, ಒಮ್ಮೊಮ್ಮೆ ವಿಚಿತ್ರವಾಗಿ ಉಂಟಾಗುವ ಗುಡುಗು, ಮಿಂಚು, ಭೂಕಂಪ ಅವನನ್ನು ಗೊಂದಲಕ್ಕೀಡು ಮಾಡುತ್ತಿತ್ತೇನೋ ? ಈ ವಿಚಿತ್ರಗಳ ಅನುಭವದಿಂದ ಮನುಷ್ಯ ತನ್ನನ್ನು ಮೀರಿ ಮತ್ತೊಬ್ಬ ಶಕ್ತಿವಂತನಿರಬಹುದು. ಆ ವ್ಯಕ್ತಿ ಇವೆಲ್ಲವನ್ನು ಮಾಡುತ್ತಿರಬಹುದೇನೋ ಎಂಬ ಭ್ರಾಂತಿಗೆ ಬಂದ ? ನಿಸರ್ಗದ ದೃಷ್ಠಿಯಲ್ಲಿ ಮನುಷ್ಯ ಕಂಡ ಪ್ರತಿ ಬದಲಾವಣೆಗಳನ್ನು ನಂತರದ ದಿನಗಳಲ್ಲಿ ದೇವರು ಎಂಬ ಹೆಸರಿನಲ್ಲಿ ಕರೆದಿರಬಹುದು.

ಇಂಥ ದೇವರುಗಳನ್ನು ಕಾಲಕ್ರಮೇಣ ಪ್ರತಿ ಪಂಗಡದಲ್ಲೂ ಅವರ ಕಲ್ಪನೆಯ ಅನುಸಾರ ಮೂರ್ತರೂಪ ಕೊಟ್ಟು, ಆ ಗುಂಪಿನ ನಾಯಕ ತನಗೆ ಏನು ತೋಚುತ್ತಿತ್ತೋ ಹಾಗೆ ಪೂಜೆಯನ್ನೋ ಅಥವಾ ಮತ್ತಿನ್ಯಾವುದೋ ರೀತಿ ಮನವಿಯನ್ನೋ ಮಾಡುತ್ತಿದ್ದುದು ಇನ್ನಿತರ ಸದಸ್ಯರುಗಳಿಗೆ ಅದೇ ಸರಿ ಮತ್ತು ನಾಯಕನ ಮಾತಿನಂತೆ ಮತ್ತವನು ಮಾಡುತ್ತಿದ್ದ ಪೂಜೆಯೆಂಬ ಹೆಸರಿನ ಪ್ರಕಾರವೇ ದೇವರನ್ನು ಒಲಿಸುವುದು ಎಂಬ ಭಾವನೆ ಬಂದಿರಬಹುದು. ಹೀಗೆ ನಡೆಸುವ ಪೂಜೆ-ಪುನಸ್ಕಾರಗಳ ನಂತರ ಅವರ ಕಷ್ಟಗಳು ಆಕಸ್ಮಿಕವಾಗಿ ನಿವಾರಣೆಯಾದಾಗ ದೇವರು ನಮ್ಮ ಇಷ್ಟಾರ್ಥವನ್ನು ಸಿದ್ಧಿಸುವ ವ್ಯಕ್ತಿ ಮತ್ತು ನಾವು ಆ ಕಾಣದ ವ್ಯಕ್ತಿಗೆ ಯಾವತ್ತೂ ಅಭಾರಿಯಾಗಿರಬೇಕೆನ್ನಿಸಿತೇನೋ ? ಮತ್ತಷ್ಟು ಓದು »

20
ಆಕ್ಟೋ

ದೇವರು, ಧರ್ಮ ಮತ್ತವನ ಜಾತಿ. – ಸರಣಿ ೧

ದೇವರು, ಧರ್ಮ ಮತ್ತವನ ಜಾತಿ

ಅರವಿಂದ್

ದೇವರು ಎಂಬ ಪದ ಸಾರ್ವಜನಿಕವಾಗಿ ಒಮ್ಮೆ ಚರ್ಚೆಗೆ ಬಂದರೆ ಅಲ್ಲಿ ತನ್ನ ಪರಮ ಪ್ರಿಯ ದೇವರೇ ಶ್ರೇಷ್ಠ. ಮತ್ತೆಲ್ಲವೂ ನಿಕೃಷ್ಟ, ಎಂಬಂತೆ ವಾದ ಮಂಡಿಸುವ ಭಕ್ತ ಸಮೂಹ ಎಲ್ಲಿಲ್ಲ ಹೇಳಿ. ಅದರಲ್ಲೂ ವಾದಿಸುವವ ತಾನು ಪೂಜಿಸುವ ದೇವರು ಹೇಗೆಲ್ಲ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸಲಿಕ್ಕೆ, ಆ ದೇವರ ಕುರಿತಾದ ಕಥೆಗಳು, ಉಪಮೆಗಳು, ಮತ್ತು ಆಧಾರಗಳು, ಮತ್ಯಾವುದೋ ಮಹಿಮೆ, ಅವತಾರಗಳ ಪಟ್ಟಿಯನ್ನೇ ಕೊಟ್ಟುಬಿಡುತ್ತಾನೆ. ನಿಜಕ್ಕೂ ದೇವರೇ ಕೇಳಿಸಿಕೊಂಡರು (ಇದ್ದಲ್ಲಿ) ಈ ಪರಿಯ ವಿಚಾರಗಳು ಅವನಿಗೂ ತಿಳಿದಿರುತ್ತದೋ ಇಲ್ಲವೋ, ಆದರೆ ಹಟಕ್ಕೆ ಬೀಳುವ ಭಕ್ತ ಅದನ್ನು ಹೇಗಾದರೂ ಸರಿಯೇ ಪ್ರಾಬಲ್ಯಕ್ಕೆ ಕಟ್ಟು ಬೀಳುವ ಹಾಗೆ ವಾದಿಸುತ್ತಾನೆ.

ಅಸಲಿಗೆ ದೇವರಿಗೂ ಧರ್ಮಕ್ಕೂ ವಾದಿಸುವ ವ್ಯಕ್ತಿಗೆ ಅಸಲಿಗೆ ಪ್ರತ್ಯಕ್ಷ ದೇವರೇ ಎದುರಿಗೆ ಬಂದರೂ ನಂಬುವುದಿಲ್ಲ, ಇಂತಹ ಪರಿಸ್ಥಿತಿಯಲ್ಲೂ ದೇವರೆಂಬ ದೇವರೇ ಏನು ಮಾಡಲಾಗದಿರುವಾಗ, ಇಲ್ಲ ಸಲ್ಲದ ವಾದ ವಿವಾದಗಳಲ್ಲಿ ತಲೆತೂರಿಸಿ ತನ್ನ ವಾದಶಕ್ತಿಯಿಂದಲೇ ಮತ್ತೊಬ್ಬನನ್ನು ಮರುಳು ಮಾಡುತ್ತೇನೆಂದು ನಿಂತವನಿಗೆ ಮತ್ತೆಲ್ಲವೂ ಗೌಣ್ಯ.

ಎಲ್ಲರೂ ದೇವರು!!!!!!!!!!! ದೇವರು!!!!!!!!!! ಎನ್ನುವ ಈ ದೇವರು ನಿಜಕ್ಕೂ ಯಾರು ? ಮತ್ತು ಯಾವುದು ?

ದೇವರು ಯಾರು ? ಎಂದರೆ (ಧರ್ಮಗಳ ಬಗ್ಗೆ ಮುಂದೆ ದಿನ ಚರ್ಚೆ ಮಾಡೋಣ) ಹಿಂದೂ ಎಂಬ ಹಣೆಪಟ್ಟಿಯಲ್ಲಿ ಬೆಳೆದವನು ಅಟ್ಟಿ ಲಕ್ಕಮ್ಮನಿಂದ ಹಿಡಿದು ಬ್ರಹ್ಮ, ವಿಷ್ಣು, ಮಹೇಶ್ವರಾದಿಗಳವರೆಗೂ ದೊಡ್ಡ ಪಟ್ಟಿಯನ್ನು ಕೊಡುತ್ತಾನೆ. ಇನ್ನು ಮುಸ್ಲಿಂ ಹಣೆಪಟ್ಟಿಯಡಿ ದೇವರುಗಳ ಸಂಖ್ಯೆ ಚಿಕ್ಕದಾದರೂ ಆತ ಯಾವುದನ್ನೂ ಬಿಡದೆ ತಿಳಿಸುತ್ತಾನೆ. ಇನ್ನು ಕ್ರ್ಯೆಸ್ತ, ಜ್ಯೆನ, ಬೌದ್ದ, ಇನ್ನಿತರ ಹಣೆಪಟ್ಟಿಯಡಿ ಬರುವ ಪ್ರಪಂಚದ ದೇವರುಗಳು ತಮ್ಮವೇ ದೇವರುಗಳ ಪ್ರವರ ನೀಡಿ, ಏನನ್ನೋ ಸಾಧಿಸಿಬಿಟ್ಟನೆಂಬಂತೆ ಒಮ್ಮೆ ಬೀಗುತ್ತಾರೆ.

ದೇವರು ಪರಿಕಲ್ಪನೆಯಲ್ಲಿ ಒಂಥರಾ ರಿಮೋಟ್ ಇದ್ದ ಹಾಗೆ, ಅವನ ಟಿವಿಯಲ್ಲಿ ಬರೋಬ್ಬರಿ ೬೦೦ ಕೋಟಿ ಹೆಚ್ಚು ಚಾನೆಲ್ಗಳು ಅಡಕ. ಹಾಗಿರುವ ದೇವರಿಗೆ ಭಕ್ತನ ಪ್ರತಿ ಹೆಜ್ಜೆಯೂ ಆಲೋಚನೆಗಳು ಮತ್ತವನ ನಡುವಳಿಕೆಗಳು, ಒಳ್ಳೆಯದು ಕೆಟ್ಟದ್ದು ಎಲ್ಲವೂ ತಿಳಿದಿರುವ ದೇವರಿಗೆ, ಈ ಉಪಮೆಗಳು ಯಾವತ್ತೂ ದೇವರ ಅಸ್ತಿತ್ವದಲ್ಲಿದ್ದಾನೆಂಬ ನಂಬಿಕೆಗಷ್ಟೆ ಅರ್ಹ. ನಿಜಕ್ಕೂ ದೇವರು ಎಂಬುದು ಇಂದಿನ ಬಹುಜನರ ಪ್ರಶ್ನಾರ್ಥಕ ಚಿಹ್ನೆ, ಇದರ ಉತ್ತರ ಬಿಡಿಸಲು ಹೋದ ಪ್ರತಿಯೋರ್ವನು ನಿರಾಶೆಯಿಂದ ಪ್ರಯತ್ನ ಬಿಟ್ಟಿರುತ್ತಾನೆ. ಹಾಗಂತ ಎಲ್ಲೂ ದೇವರಿಲ್ಲ ಎಂಬ ಮಾತಿಗೆ ಅವನ ವಿರೋಧ ಇದ್ದೇ ಇರುತ್ತದೆ.

20
ಆಕ್ಟೋ

ಕರಾವಳಿಯ ಸಿತಾರ್ ಲೋಕದ ಯುವ ಕಲಾವಿದ ಅಂಕುಶ್

ಕರುಣಾಕರ ಬಳ್ಕೂರು


ಕರಾವಳಿಯ ಜಿಲ್ಲೆಯಲ್ಲಿ ಏನುಂಟು ಏನಿಲ್ಲ ಹೇಳಿ, ಎಲ್ಲವುಂಟು. ಕಲೆ ಸಂಸ್ಕೃತಿಗಳ ತುಳುನಾಡು. ವಿಶಿಷ್ಟ ಪ್ರತಿಭೆಗಳನ್ನು ನೀಡುತ್ತಿರುವ ಬೀಡು. ಅದೆಷ್ಟೋ ಪ್ರತಿಭೆಗಳು ಎಲೆ ಮರೆಯಲ್ಲಿದ್ದಾವೆ. ಬುದ್ದಿವಂತರ ಜಿಲ್ಲೆಯೆಂದೆ ಮನೆ ಮಾತಾಗಿರುವ ದಕ್ಷಿಣ ಕನ್ನಡ ಜಿಲ್ಲೆ, ನೂರಾರು ಪ್ರತಿಭೆಗಳನ್ನು ಸೃಷ್ಟಿಸುತ್ತಿರುವ ತಾಣವಿದು. ಕಲೆ, ಸಾಹಿತ್ಯ, ವಾಣಿಜ್ಯ, ರಾಜಕೀಯ, ಶಿಕ್ಷಣ, ವಿಜ್ಞಾನ, ಸಮಾಜಸೇವೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಕರಾವಳಿಯವರು ತಮ್ಮ ಸಾಧನೆಯ ಮುದ್ರೆಯನ್ನು ಒತ್ತಿದ್ದಾರೆ. ಇದಕ್ಕೆ ಸಂಗೀತ ಕ್ಷೇತ್ರವು ಹೊರತಲ್ಲ. ಹೀಗೆ ಅದ್ಭುತ ಪ್ರತಿಭೆಗಳನ್ನು ಹೊಂದಿರುವ ಕಲಾವಿದರ ಗೂಡು. ಯುವ ಸಮುದಾಯದಿಂದ ಆರಂಭವಾಗಿ ಪ್ರೌಢ ಪ್ರತಿಭೆಗಳ ಸರಮಾಲೆ ನಮ್ಮಲಿವೆ.
ಬನ್ನಿ ಕರಾವಳಿಯ ಹುಡುಗ ಮಾಡಿರುವ ಸಾಧನೆಯ ಹಾದಿಯನ್ನು ನೋಡಿ ಬರೋಣ..
ಹೆಸರು: ಅಂಕುಶ್ ಎನ್.ನಾಯಕ್
ತಂದೆ: ನರೇಂದ್ರ ಎಲ್.ನಾಯಕ್
ತಾಯಿ: ಉಷಾಪ್ರಭಾ ಎನ್.ನಾಯಕ್
ಸಾಧನೆ ಮಾಡಿರುವ ಕ್ಷೇತ್ರ: ಸಿತಾರ್
ಗುರು: ಉಸ್ತಾದ್ ರಫೀಕ್ ಖಾನ್
ವಿದ್ಯಾಭ್ಯಾಸ: ಎಕ್ಸ್‌ಪರ್ಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರಸ್ತುತ ಸುರತ್ಕಲ್‌ನ ಎನ್‌ಐಟಿಕೆ ವಿದ್ಯಾರ್ಥಿ.
ಹವ್ಯಾಸ: ಸಂಗೀತ ಆಲಿಸುವುದು
ಇದು ಇವನ ಸರಳ ಬೈಯುವ ಡಾಟ್ ಅಲ್ಲ, ಬೈಯೋಡಾಟ.. ಬಾಲ್ಯದಲ್ಲಿ ಪಂ.ರಫೀಕ್ ಖಾನ್ ಅವರ  ಸಿತಾರ್ ವಾದನವನ್ನು ಕೇಳಿ ಮೂಕವಿಸ್ಮಿತನಾಗಿ, ಅಂದೆ ದೃಢ ನಿರ್ಧಾರ ಮಾಡಿ ನಾನೇಕೆ ಇವರಂತೆ ಸಿತಾರ್ ವಾದಕನಾಗಬಾರದು?.  ಸಿತಾರ್ ವಾದನದ ಧ್ವನಿಯನ್ನು ಕೇಳಿ ‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕ್ಕೆ ನನ್ನನ್ನು..’ ಎನ್ನುವ ಹಾಗೆ ಇವನ್ನನ್ನು ಸಂಗೀತ ಕ್ಷೇತ್ರಕ್ಕೆ ಸೆಳೆದೆ ಬಿಟ್ಟಿತು. ಮತ್ತಷ್ಟು ಓದು »

20
ಆಕ್ಟೋ

ಶಿವರಾಮ ಕಾರ೦ತರ ಸಾಹಿತ್ಯವನ್ನು ಪಸರಿಸಲು ಸಾಹಿತ್ಯಾಸಕ್ತರ ನೆರವು ಕೋರಿ

ಕೆ ಎಸ್ ರಾಘವೇಂದ್ರ ನಾವಡ


ಮಿತ್ರ ಮಹನೀಯರುಗಳೇ ಹಾಗೂ ಓದುಗ ಬ೦ಧುಗಳೇ,
೧೦-೧೦-೨೦೧೦ ರ೦ದು ದ್ಯುತಿ ಟೆಕ್ನಾಲಜೀಸ್ (ಶ್ರೀಹರ್ಷ ಸಾಲೀಮಠ್)ಹಾಗೂ ಕು೦ಭಾಶಿ ಸ೦ಪತ್ ಕುಮಾರ್ ನೇತೃತ್ವದ ತ೦ಡದ ಶ್ರಮದಿ೦ದ ಹಾಗೂ ಸಾಹಿತ್ಯ ಕಕ್ಕುಲತೆಯಿ೦ದ ಕೋಟ ಶಿವರಾಮ ಕಾರ೦ತರ ಅಧಿಕೃತ ವೆಬ್ ಸೈಟ್ http://www.shivaramkarantha.in/ ಸಾಲಿಗ್ರಾಮದ ಕಾರ೦ತ ರ೦ಗ ಪಥದಲ್ಲಿ ಅಧಿಕೃತವಾಗಿ ಉಧ್ಘಾಟನೆ ಗೊ೦ಡು,ಕಾರ್ಯಾರ೦ಭ ಮಾಡಿದೆ.ಈ ಹಿ೦ದೆಯೇ ತಿಳಿಸಿದ೦ತೆ, ಕಾರ೦ತರ ಎಲ್ಲಾ ಗ್ರ೦ಥಗಳನ್ನು ಹಾಗೂ ಹಸ್ತಪ್ರತಿಗಳನ್ನು ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಸಾಹಿತ್ಯ ಪ್ರೇಮಿಗಳೆಲ್ಲರಿಗೂ ನೀಡಬೇಕೆ೦ಬುದು ಸಾಲೀಮಠ್ ತ೦ಡದ ಬಯಕೆ. ಕನ್ನಡ ಸಾಹಿತ್ಯ ಪ್ರೇಮಿಗಳ ಎಲ್ಲಾ ರೀತಿಯ ನೆರವಿನ ಅಪೇಕ್ಷೆಯನ್ನಿಟ್ಟುಕೊ೦ಡು ಸಾಲೀಮಠ್ ರವರು ಈ ಮಹ ತ್ಕಾರ್ಯಕ್ಕೆ ಮು೦ದಡಿ ಯಿಟ್ಟಿದ್ದಾರೆ.ಶಿವರಾಮ ಕಾರ೦ತರ ಸ೦ಪೂರ್ಣ ಪರಿಚಯ,ಅವರ ಕೃತಿಗಳು,ಯಕ್ಷಗಾನ ಮು೦ತಾದ ಎಲ್ಲಾ ಅವರ ಬಗ್ಗೆಗಿನ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು,ಕನ್ನದ ಸಾಹಿತ್ಯಾಸಕ್ತರು, ಅಭಿಮಾನಿಗಳು,ಕೋಟ ಶಿವರಾಮ ಕಾರ೦ತರ ಅನುಯಾಯಿಗಳು ಈ ಆನ್ ಲೈನ್ ವೆಬ್ ಸೈಟಿನ ಸ೦ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆ೦ದು, ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಪದಾಧಿಕಾರಿಗಳು, ಶ್ರೀದ್ಯುತಿ ಟೆಕ್ನಾಲಜೀಸ್ ನ ಶ್ರೀಹರ್ಷ ಸಾಲೀಮಠರು ಆಶಿಸಿದ್ದಾರೆ.24-10-2010 ರ೦ದು ಬೆ೦ಗಳೂರಿನಲ್ಲೂ ಒ೦ದು ಕಾರ್ಯಕ್ರಮವನ್ನೂ ನಡೆಸಲು ಸಾಲೀಮಠ್ ರವರ ತ೦ಡ ನಿರ್ಧರಿಸಿದೆ. ಮತ್ತಷ್ಟು ಓದು »