ವಿಷಯದ ವಿವರಗಳಿಗೆ ದಾಟಿರಿ

Archive for

21
ಆಕ್ಟೋ

ಈಗ ಬರೀ ಟ್ಯಾಟ್ಟೋದ ಖಯಾಲಿ..

ಕವಿತಾ ಆನಂದ ಹಳ್ಳಿ

ನಿಮಗೆ `ಬಿಂದಿ’ ಗೊತ್ತು. `ಮದರಂಗಿ’ ಗೊತ್ತು. `ಟ್ಯಾಟ್ಟೋ’ ಗೊತ್ತೆ?. ಗೊತ್ತಿಲ್ಲ ಅನ್ಬೇಡಿ. ಇದು, ಇವತ್ತಿನ ಲೇಟೇಸ್ಟ್ ಫ್ಯಾಷನ್.
ಹೌದು! ಈಗ ನಮ್ಮ ನಡುವೆ ಟ್ಯಾಟ್ಟೋ ಬಂದಿದೆ. ಇದು ಥೇಟ್ ಹಚ್ಚಿ ತರ. ನಮ್ಮ ಯುವ ಸ್ನೇಹಿತರು ಇದಕ್ಕಾಗಿ  ಸಜ್ಜಾಗುತ್ತಿದ್ದಾರೆ. ನಮ್ಮ ಯುವಕಲಿಗಳು ಯಾವಾಗಲು ಬಯಸುವುದು ಹೊಸದನ್ನೇ ಅಲ್ವಾ? ಅದಕ್ಕೆ ಟ್ಯಾಟ್ಟೋಗೆ ಈಗ ಭಾರಿ ಬೇಡಿಕೆ ಬಂದಿದೆ. ನಮ್ಮ ಕಾಲೇಜ್ ಹೈದ, ಹೈದೆಯರು ಈಗ ಇದರ ಹಿಂದೆ ಬಿದ್ದಿದ್ದಾರೆ ಗೊತ್ತಾ?
ಏನಿದು ಟ್ಯಾಟ್ಟೋ..
ಚರ್ಮದ ಮೇಲೆ ಹಾಕಿಸಿಕೊಳ್ಳುವ ಗುರುತು, ಬಿಡಿಸಿಕೊಳ್ಳುವ ಚಿತ್ರವೇ ಟ್ಯಾಟ್ಟೋ. ಇದು ಒಂದು ಕಲೆಯೂ ಹೌದು. ಇದನ್ನು ಒಂದ್ಸಾರಿ ಮೈಮೇಲೆ ಹಾಕಿಸಿಕೊಂಡರೆ ಸಾಯೋತನಕ ಜೊತೆಗಿರುತ್ತದೆ. ಬಾಳ ಸಂಗಾತಿಯಂತೆ.
ಇದು, ಮೂಲತಃ ವಿದೇಶದಲ್ಲಿ ಹುಟ್ಟಿಕೊಂಡ ಸಂಸ್ಕೃತಿ. ಈಜೀಪ್ತ್, ಚೀನಾ, ಜಪಾನ್ ದೇಶಗಳಲ್ಲಿ ತುಂಬಾ ಜನಪ್ರೀಯ ಕಲೆಯಾಗಿದ್ದು ಇದೀಗ ನಮ್ಮಲ್ಲಿ ಲಗ್ಗೆ ಇಟ್ಟಿದೆ.
ಹೇಗೆ ಹಾಕುವುದು
ಇದನ್ನು ಮಶೀನ್‌ದಿಂದ ಹಾಕುತ್ತಾರೆ. ಸೂಜಿ ಹಾಗೂ ಇಂಕ್ (ಮಸಿ)ನ್ನು ಬಳಸುತ್ತಾರೆ. ಕಪ್ಪು, ಕೆಂಪು, ಹಸಿರು, ಲೇಮನ್ ಇನ್ನೂ ವಿವಿಧ ಬಣ್ಣದ ಇಂಕ್‌ಗಳಿರುತ್ತವೆ. ಈ ಹುಚ್ಚು ಯಾರನ್ನು ಬಿಟ್ಟಿಲ್ಲಾ. ತಮಗೆ ಬೇಕಾದ ಡಿಸೈನ್ ಇಂಟರ್‌ನೆಟ್‌ನಲ್ಲಿ ಹುಡುಕಿ, ತಂದು ಹಾಕಿಸಿಕೊಳ್ಳುವರು. ಇಲ್ಲವೇ ಟ್ಯಾಟ್ಟೋ ಡಿಸೈನ್‌ರ್‌ಗಳು ತಮ್ಮ ಇಚ್ಚೆಯ ಪ್ರಕಾರ ಹಾಕುವರು.
ಏನು ಮಾಡಬೇಕು
ಇದನ್ನು ಹಾಕಿಸಿಕೊಳ್ಳುವಾಗ ತುಸು ನೋವಾಗುತ್ತದೆ. ಅದು ಆ ಕ್ಷಣ ಮಾತ್ರ. ಹಾಕಿಸಿಕೊಂಡ ಒಂದು ತಿಂಗಳವರೆಗೆ  ಅದನ್ನು ಕಾಪಾಡಬೇಕು. ಆ ಜಾಗವನ್ನು ದಿನಕ್ಕೆರಡು ಬಾರಿ ಜಾನ್ಸನ್‌ಬೇಬಿ ಸೋಪ್‌ನಿಂದ ತೊಳೆದು ನಂತರ ಮೃದು ಬಟ್ಟೆಯಿಂದ ನಿಧಾನವಾಗಿ ತಟ್ಟಬೇಕು ಹೊರತು, ಒರೆಸಬಾರದು. ಆ ನಂತರ ವ್ಯಾಸಲೀನ್ ಅಥವಾ ಆಯಿಂಟ್‌ಮೆಂಟ್‌ನ್ನು ಹಚ್ಚಬೇಕು. ಈ ಕ್ರಮವನ್ನು ಒಂದು ವಾರದವರೆಗೆ ತಪ್ಪದೇ ಪಾಲಿಸಿದಲ್ಲಿ ಅದಕ್ಕೆ ಅದು ಹಾಳಾಗುವುದಿಲ್ಲ. ಮತ್ತಷ್ಟು ಓದು »