ಈಗ ಬರೀ ಟ್ಯಾಟ್ಟೋದ ಖಯಾಲಿ..
ಕವಿತಾ ಆನಂದ ಹಳ್ಳಿ

ನಿಮಗೆ `ಬಿಂದಿ’ ಗೊತ್ತು. `ಮದರಂಗಿ’ ಗೊತ್ತು. `ಟ್ಯಾಟ್ಟೋ’ ಗೊತ್ತೆ?. ಗೊತ್ತಿಲ್ಲ ಅನ್ಬೇಡಿ. ಇದು, ಇವತ್ತಿನ ಲೇಟೇಸ್ಟ್ ಫ್ಯಾಷನ್.
ಹೌದು! ಈಗ ನಮ್ಮ ನಡುವೆ ಟ್ಯಾಟ್ಟೋ ಬಂದಿದೆ. ಇದು ಥೇಟ್ ಹಚ್ಚಿ ತರ. ನಮ್ಮ ಯುವ ಸ್ನೇಹಿತರು ಇದಕ್ಕಾಗಿ ಸಜ್ಜಾಗುತ್ತಿದ್ದಾರೆ. ನಮ್ಮ ಯುವಕಲಿಗಳು ಯಾವಾಗಲು ಬಯಸುವುದು ಹೊಸದನ್ನೇ ಅಲ್ವಾ? ಅದಕ್ಕೆ ಟ್ಯಾಟ್ಟೋಗೆ ಈಗ ಭಾರಿ ಬೇಡಿಕೆ ಬಂದಿದೆ. ನಮ್ಮ ಕಾಲೇಜ್ ಹೈದ, ಹೈದೆಯರು ಈಗ ಇದರ ಹಿಂದೆ ಬಿದ್ದಿದ್ದಾರೆ ಗೊತ್ತಾ?
ಏನಿದು ಟ್ಯಾಟ್ಟೋ..
ಚರ್ಮದ ಮೇಲೆ ಹಾಕಿಸಿಕೊಳ್ಳುವ ಗುರುತು, ಬಿಡಿಸಿಕೊಳ್ಳುವ ಚಿತ್ರವೇ ಟ್ಯಾಟ್ಟೋ. ಇದು ಒಂದು ಕಲೆಯೂ ಹೌದು. ಇದನ್ನು ಒಂದ್ಸಾರಿ ಮೈಮೇಲೆ ಹಾಕಿಸಿಕೊಂಡರೆ ಸಾಯೋತನಕ ಜೊತೆಗಿರುತ್ತದೆ. ಬಾಳ ಸಂಗಾತಿಯಂತೆ.
ಇದು, ಮೂಲತಃ ವಿದೇಶದಲ್ಲಿ ಹುಟ್ಟಿಕೊಂಡ ಸಂಸ್ಕೃತಿ. ಈಜೀಪ್ತ್, ಚೀನಾ, ಜಪಾನ್ ದೇಶಗಳಲ್ಲಿ ತುಂಬಾ ಜನಪ್ರೀಯ ಕಲೆಯಾಗಿದ್ದು ಇದೀಗ ನಮ್ಮಲ್ಲಿ ಲಗ್ಗೆ ಇಟ್ಟಿದೆ.
ಹೇಗೆ ಹಾಕುವುದು
ಇದನ್ನು ಮಶೀನ್‌ದಿಂದ ಹಾಕುತ್ತಾರೆ. ಸೂಜಿ ಹಾಗೂ ಇಂಕ್ (ಮಸಿ)ನ್ನು ಬಳಸುತ್ತಾರೆ. ಕಪ್ಪು, ಕೆಂಪು, ಹಸಿರು, ಲೇಮನ್ ಇನ್ನೂ ವಿವಿಧ ಬಣ್ಣದ ಇಂಕ್‌ಗಳಿರುತ್ತವೆ. ಈ ಹುಚ್ಚು ಯಾರನ್ನು ಬಿಟ್ಟಿಲ್ಲಾ. ತಮಗೆ ಬೇಕಾದ ಡಿಸೈನ್ ಇಂಟರ್‌ನೆಟ್‌ನಲ್ಲಿ ಹುಡುಕಿ, ತಂದು ಹಾಕಿಸಿಕೊಳ್ಳುವರು. ಇಲ್ಲವೇ ಟ್ಯಾಟ್ಟೋ ಡಿಸೈನ್‌ರ್‌ಗಳು ತಮ್ಮ ಇಚ್ಚೆಯ ಪ್ರಕಾರ ಹಾಕುವರು.
ಏನು ಮಾಡಬೇಕು
ಇದನ್ನು ಹಾಕಿಸಿಕೊಳ್ಳುವಾಗ ತುಸು ನೋವಾಗುತ್ತದೆ. ಅದು ಆ ಕ್ಷಣ ಮಾತ್ರ. ಹಾಕಿಸಿಕೊಂಡ ಒಂದು ತಿಂಗಳವರೆಗೆ ಅದನ್ನು ಕಾಪಾಡಬೇಕು. ಆ ಜಾಗವನ್ನು ದಿನಕ್ಕೆರಡು ಬಾರಿ ಜಾನ್ಸನ್‌ಬೇಬಿ ಸೋಪ್‌ನಿಂದ ತೊಳೆದು ನಂತರ ಮೃದು ಬಟ್ಟೆಯಿಂದ ನಿಧಾನವಾಗಿ ತಟ್ಟಬೇಕು ಹೊರತು, ಒರೆಸಬಾರದು. ಆ ನಂತರ ವ್ಯಾಸಲೀನ್ ಅಥವಾ ಆಯಿಂಟ್‌ಮೆಂಟ್‌ನ್ನು ಹಚ್ಚಬೇಕು. ಈ ಕ್ರಮವನ್ನು ಒಂದು ವಾರದವರೆಗೆ ತಪ್ಪದೇ ಪಾಲಿಸಿದಲ್ಲಿ ಅದಕ್ಕೆ ಅದು ಹಾಳಾಗುವುದಿಲ್ಲ.
ತುಂಬಾ ದುಬಾರಿ
ಟ್ಯಾಟ್ಟೋ ಡಿಸೈನ್ ಸೈಜ್ ಮೇಲೆ ಫೀ ಇರುತ್ತದೆ. ನಮ್ಮಲ್ಲಿ ಈಗ ೨೫೦ ರಿಂದ ೩೫೦೦ ವರೆಗೂ ಹಣಯಿದೆ. ಅಮೆರಿಕಾದಲ್ಲಿ ಇದಕ್ಕೆ ೫೦ ರಿಂದ ೫೨ ಡಾಲರ್‍ಸ್ ತೆತ್ತಬೇಕು. ಇದನ್ನು ಬಿಡಿಸಲು ೧ ರಿಂದ ೨ ತಾಸು ಬೇಕು. ಈ ಮಶೀನ್ ಕೂಡ ತುಂಬಾ ದುಬಾರಿ. ವಿದೇಶದಿಂದ ತರಿಸಬೇಕು. ಒಂದು ಮಶೀನ್‌ಗೆ ೪೮ ರಿಂದ ೧.೫೦ ಲಕ್ಷ ರೂಪಾಯಿ.
ನಾನಾ ತರಹದ ಡಿಸೈನ್
ದೇಹದ ವಿವಿಧ ಭಾಗಗಳಲ್ಲಿ ಈ ಡೀಸೈನ್‌ನ್ನು ಬಿಡಿಸಿಕೊಳ್ಳುವರು. ಹೆಚ್ಚಾಗಿ ಬೆನ್ನು, ಕೈ, ನಡ, ಭುಜ, ಕಾಲುಗಳಲ್ಲಿ ಹಾಕಿಸಿಕೊಳ್ಳುವರು. ತಮ್ಮ ಪ್ರೀತಿಗೆ ಪಾತ್ರರಾದವರ ಹೆಸರು, ದೇವರ ಹೆಸರು ಹಾಕಿಸಿಕೊಂಡು ಖುಷಿ ಪಡುವರು.
ತುಸು ಎಚ್ಚರ
ಡಯಾಬಿಟೀಸ್, ಹಿಮೋಫೀಲಿಯಾ ಹಾಗೂ ಆಲ್ಕೋಹಾಲ್ ಸೇವಿಸುವವರು ಟ್ಯಾಟ್ಟೋವಿನಿಂದ ದೂರವಿದ್ದರೆ ಒಳ್ಳೆಯದು. ಏಕೆಂದರೆ ಇದನ್ನು ಹಾಕಿಸಿಕೊಳ್ಳುವಾಗ ಬ್ಲಿಡಿಂಗ್ ನಿಲ್ಲುವ ಸಂಭವ ಕಡಿಮೆ ಇರುತ್ತದೆ. ಇದರಿಂದ ಅಂತವರಿಗೆ ಂದರೆ ಉಂಟಾಗಬಹುದು.
ಈಗ ಟ್ಯಾಟ್ಟೋದ್ದೇ ಖಯಾಲಿ
ಈಗ ಕೆಲವರಲ್ಲಿ ಬರೀ ಇದರದ್ದೇ ಹುಚ್ಚು. ನಮ್ಮ ಯುವಜನತೆ ಇದರ ದುಂಬಾಲು ಬಿದ್ದಿದ್ದಾರೆ. ಮೊದಲಿನ ಕಾಲದಲ್ಲಿ ನಮ್ಮ ಹಿರಿಯರು ಹಚ್ಚೆಯನ್ನು ಹಾಕಿಸಿಕೊಳ್ಳುತ್ತಿದ್ದರು ಅದರ ಸ್ಥಾನವನ್ನು ಇದು ಅಲಂಕರಿಸಿದೆ.
ಸರ್, ನಿಮ್ಗೊಂದುಸಲಹೆ. ಟ್ಯಾಟ್ಟೋ ನೋಡಲು ತುಂಬಾ ಸೊಗಸು ನಿಜ. ಬೇಕಾದರೆ ನೀವು ಒಂದ್ಸಲಾ ಹಾಕಿಸಿಕೊಳ್ರಿ. ಆದರೆ, ಹಾಕಿಸಿಕೊಳ್ಳುವಾಗ ತುಸು ಎಚ್ಚರವಿರಲಿ. ಒಬ್ಬರಿಗೆ ಬಳಸಿದ ವಸ್ತುವನ್ನು ಇನ್ನೊಬ್ಬರಿಗೆ ಬಳಸಿದಲ್ಲಿ ಏನಾಗುತ್ತೇ ಎಂದು ನಿಮಗೆ ಗೊತ್ತಿದೆಯಲ್ಲಾ. ಮಾರಕ ರೋಗಕ್ಕೆ ಆಹ್ವಾನವಷ್ಟೇ.
ಕಲರ್ ಫುಲ್ ಕಾಲದಲ್ಲಿ ಮನಸಿಗೆ ಬಂದಂತೆ ವರ್ತಿಸುವುದು ಸರಿಯಲ್ಲ. ಹೊಸದನ್ನು ಬಳಸುವಾಗ ತುಸು ಜಾಗರೂಕತೆಯಿದ್ದರೆ ಯಾವ ತೊಂದರೆಯೂ ಇಲ್ಲ. ನೀವೂ ಟ್ಯಾಟ್ಟೋ ಬಳಸುವುದಾದರೆ ಇದನ್ನು ಮರೆಯದಿರಿ
ಚಿತ್ರಕೃಪೆ : ಗೂಗಲ್ ಇಮೇಜ್




