ಉಳ್ಳಾಲದ ದರ್ಗಾ ಒಂದು ಪರಿಚಯ
ಶಿಹಾ ಉಳ್ಳಾಲ್
ಭೂಗರ್ಭ ಶಾಸ್ತ್ರದ ಪ್ರಕಾರ ಭಾರತ ಮತ್ತು ಶ್ರೀಲಂಕೆಗಳು ಒಂದಾಗಿದ್ದುವೆಂದೂ, ಇವೆರಡರ ಮಧ್ಯೆ ಸಮುದ್ರವಿರಲಿಲ್ಲವೆಂದೂ ಶ್ರೀಲಂಕೆಯ ತಲೈಮನ್ನಾರ್‌ನಿಂದ ರಾಮೇಶ್ವರದವರೆಗೆ ಕಲ್ಲುಗಳು ಇದ್ದು (ಆಡಂಬ್ರಿಜ್) ಇಲ್ಲಿ ಭೂಮಿ ಇದೆಯೆಂಬ ಕುರುಹು ಇದೆ. ಮತ್ತು ತಮಿಳುನಾಡಿನ ರಾಮೇಶ್ವರದಲ್ಲಿ ಸಯ್ಯಿದುನಾ ಆದಂ(ಅ.ಸ)ರ ಮಕ್ಕಳಾದ ಹಝ್ರತ್ ಹಾಬೀಲ್(ರ.ಅ.) ಮತ್ತು ಹಝ್ರತ್ ಖಾಬೀಲ್ (ರ.ಅ.)ಮಕ್‌ಬರವಿರುತ್ತದೆ. ಪ್ರವಾದಿ ಹಝ್ರತ್ ನೂಹ್ (ಅ.ಸ.)ರವರ ಕಾಲದಲ್ಲಿ (ಕ್ರಿ.ಪೂ.೩೭೮೦)ಬಂದ ಭೀಕರ ಜಲಪ್ರಳಯದಿಂದಾಗಿ ಶ್ರೀಲಂಕೆ, ಭಾರತ ಭೂಖಂಡ ದಿಂದ ಬೇರ್ಪಟ್ಟಿತೆಂದೂ ಭೂಗರ್ಭ ಶಾಸ್ತಜ್ಞರು ಹೇಳಿರುತ್ತಾರೆ. ಹಾಗಾದರೆ ಹಿಂದಿನ ಕಾಲದಲ್ಲಿ ಶ್ರೀಲಂಕೆ ಭಾರತದ ಒಂದು ಭಾಗವಾಗಿತ್ತೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರವಾದಿ ಆದಂ(.ಅ.ಸ)ರವರ ಪಾದಕಮಲಗಳು ಪ್ರಥಮವಾಗಿ ಸ್ಪರ್ಶಿಸಲ್ಪಟ್ಟ ಸ್ಥಳ ಅಂದೂ, ಇಂದೂ ‘ಆದಂಮಲೆ’ಎಂದು ಕರೆಯಲ್ಪಡುವ ಶ್ರೀಲಂಕೆಯ ಆದಂ ಪರ್ವತದಲ್ಲಿ ಎಂದು ಚರಿತ್ರೆ ಉಲ್ಲೇಖಿಸುತ್ತದೆ. ಆ ಪುಣ್ಯ ಮಲೆ ಇಂದು ಜಗತ್ತಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಝ್ರತ್ ಆದಂ (ಅ.ಸ.)ರವರು ಆದಂಮಲೆಯ ಮೇಲಿನಿಂದ ಇಳಿದು ಬಂದು ಅದರ ಸುತ್ತಮುತ್ತಲ ಪರಿಸರಗಳಲ್ಲಿ ಸಂಚರಿಸಿದ್ದರು. ಆ ಬಳಿಕ ಅಲ್ಲಾಹನ ಆದೇಶದಂತೆ ಹಝ್ರ್ರತ್ ಆದಮ್ (ಅ.ಸ.) ಭಾರತದ ಮೂಲಕ ಕಾಲ್ನಡಿಗೆಯಲ್ಲೇ ಪವಿತ್ರ ಮಕ್ಕಾದ ಕಡೆಗೆ ಹೊರಟರು. ಮಕ್ಕಾ ತಲುಪಿದ ಅವರು ಮಾನವ ಪಾಪ(ದೋಷ)ಪರಿಹಾರಕ್ಕೆ ಮಲಾಯಿಕರು(ದೇವದೂತ) ಅಂತರೀಕ್ಷದಲ್ಲಿರುವ ಬೈತುಲ್ ಮಅಮೂರ್ ಮಸೀದಿಯ ನೇರಕ್ಕೆ ಭೂಮಿಯಲ್ಲಿ ನಿರ್ಮಿಸಿದ ಕಅಬಾ-ಶರೀಫಿಗೆ ತೆರಳಿ ಅಲ್ಲಾಹನ ಸ್ತುತಿಗೈದು, ತನ್ನ ಪತ್ನಿ ಹವ್ವಾ (ರ.ಅ.) ರನ್ನು ಅರಫಾ ಮೈದಾನದಲ್ಲಿ ಸಂಧಿಸಿದರು. ಅಲ್ಲಿಂದ ಅವರೀರ್ವರೂ ಭಾರತಕ್ಕೆ ಹಿಂತಿರುಗಿ ಇಲ್ಲೇ ವಾಸಿಸತೊಡಗಿದರು.
ಪ್ರವಾದಿ ಸಯ್ಯಿದುನಾ ಆದಂ (ಅ.ಸ.)ರವರನ್ನು ಜಬಲ್ ಖುಬೈಸ್ ಎಂಬ ಬೆಟ್ಟದಲ್ಲಿಯೂ ಹಝ್ರತ್ ಹವ್ವಾ (ರ.ಅ.)ರವರು ಜಿದ್ದಾದಲ್ಲಿ ಅಂತ್ಯವಿಶ್ರಮ ಹೊಂದಿರುತ್ತಾರೆ. ಹಝ್ರತ್ ಆದಂ (ಅ.ಸ.). ಹಾಗೂ ಹಝ್ರತ್ ಹವ್ವಾ (ರ.ಅ.) ದಂಪತಿಗೆ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ಒಟ್ಟು ೪೦೦ ಮಂದಿ ಸಂತತಿಗಳಿದ್ದರೆಂದೂ ಇಬ್ನ್ ಅಬ್ಬಾಸ್(ರ)ರವರು ವ್ಯಾಖ್ಯಾನಿಸಿದ್ದಾರೆ. ಅವರು ಶ್ರೀಲಂಕೆಯಿಂದ ಮಕ್ಕಾದ ವರೆಗಿನ ಹಲವಾರು ರಾಜ್ಯಗಳಲ್ಲಿ ಜೀವಿಸಿದ್ದರೆಂದೂ ಹೇಳಲಾಗಿದೆ. ಮತ್ತಷ್ಟು ಓದು 
ಪಂಚರಂಗಿ…………. ಲೈಫು ಇಷ್ಟೇನೇ
ರೂಪರಾಜೀವ್
ನಮ್ಮ ಹೊಸ ಚಲನಚಿತ್ರ ‘ಪಂಚರಂಗಿ’ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಈ ರೀತಿಯ ಪ್ರಚಂಡ ಆರಂಭದ ಯಶಸ್ಸನ್ನು ನಾನಾಗಲೀ, ನಮ್ಮ ತಂಡವಾಗಲೀ ನಿರೀಕ್ಷಿಸಿಯೇ ಇರಲಿಲ್ಲ! ನಾನು ಪವನ್ ಕುಮಾರ್, ಪಂಚರಂಗಿ ಯ ಕಥೆ, ಚಿತ್ರಕಥೆ ಬರೆದವರಲ್ಲಿ ಒಬ್ಬ! ಜೊತೆಗೆ ಈ ಚಿತ್ರದ ‘ಲಕಿ’ ಪಾತ್ರಧಾರಿ ಕೂಡ ನಾನೇ. ನಾವು ಪಂಚರಂಗಿಯನ್ನು ತೆರೆಗೆ ತರುವ ಮುನ್ನಾ ಏನಾಯಿತು, ಹೇಗಾಯಿತು ಎನ್ನುವುದನ್ನು ನಿಮ್ಮ ಮುಂದಿಡಲು ಇಚ್ಚಿಸುತ್ತೇನೆ.

ಮನಸಾರೆ ಚಿತ್ರವು ಸೆಪ್ಟೆಂಬರ್ ೨೦೦೯ ರಲ್ಲಿ ಬಿಡುಗಡೆಯಾಯಿತು. ಮನಸಾರೆ ಚಿತ್ರದ ಯಶಸ್ಸನ್ನು ಸ್ವಲ್ಪ ಮಟ್ಟಿಗೆ ನಿರೀಕ್ಷಿಸಿದ್ದೆವು ಕೂಡ. ಈ ಚಿತ್ರಕ್ಕೆ ಸುರಿದ ಪ್ರಶಂಸೆಯ ಸುರಿಮಳೆ, ನನಗೆ ಸ್ವರ್ಗಕ್ಕೆ ಮೂರೇ ಗೇಣು ಎಂದಂತೆ ಭಾಸವಾಗಿದ್ದು ಮಾತ್ರ ಸುಳ್ಳಲ್ಲ. ಮನಸಾರೆ ಕಥೆ, ಚಿತ್ರಕಥೆ ಬರೆಯುವಾಗಿನ ಕ್ಷಣಗಳು ನನಗೆ ವೈಯಕ್ತಿಕವಾಗಿ ಅತ್ಯಂತ ಖುಷಿ ಕೊಟ್ಟಂತಹ ಕ್ಷಣಗಳು. ನಾನು ಈ ಚಿತ್ರ ನಿರ್ಮಾಣ ಕಾರ್ಯದಲ್ಲಿ ಅತೀ ಉತ್ಸುಕತೆಯಿಂದ ಭಾಗವಹಿಸಿದ್ದೇನೆ. ಇದರ ಕಥೆ, ಚಿತ್ರಕಥೆಯಲ್ಲಿನ ಕ್ಷಣಕ್ಷಣದ ಬದಲಾವಣೆಗಳು, ಹಾಸ್ಯ ಮಿಶ್ರಿತ ಫಿಲಾಸಫಿ, ಇದೆಲ್ಲವೂ ನನ್ನನ್ನು ಜೀವಂತಿಕೆಯಲ್ಲಿಟ್ಟಿತ್ತು ಎಂದರೆ ತಪ್ಪಾಗಲಾರದು. ಮತ್ತಷ್ಟು ಓದು 
ವೈದೇಹಿಯವರ ಭೇಟಿ ಎಂಬ ಕೌತುಕ
ಸಾತ್ವಿಕ್
’ನನಗೆ ನಿಮ್ಮ ಕೈಯನ್ನೊಮ್ಮೆ ಮುಟ್ಟಬೇಕೆಂಬ ಆಸೆ’ , ಇದು ವೈದೇಹಿಯವರು ತುಂಬಿದ ಸಭೆಯಲ್ಲಿ ತಾರಿಣಿಯವನ್ನು ಕುರಿತು ಹೇಳಿದ ಮಾತು. ಯಾಕೆಂದರೆ ರಾಷ್ಟ್ರಕವಿ ಕುವೆಂಪು ಅವರ ಮಗಳು ತಾರಿಣಿಯವರನ್ನು ಮುಟ್ಟಿದರೆ ಕುವೆಂಪು ಅವರನ್ನೇ ಸ್ಪರ್ಷಿಸಿದಂತೆ ಎಂಬ ಮುಗ್ಧಭಾವ ಅವರ ಮಾತಿನಲ್ಲಿತ್ತು.

(ಚಿತ್ರದಲ್ಲಿ ಕ್ರಮವಾಗಿ ಪ್ರತಾಪಚಂದ್ರಶೆಟ್ಟಿ, ಸಾತ್ವಿಕ್, ಚಂದ್ರಶೇಖರ ಮಂಡೆಕೋಲು ಮತ್ತು ವೈದೇಹಿಯವರು)ಜನಸಾಮಾನ್ಯರಲ್ಲಿ ಇರಬಹುದಾದ ಭಾವುಕ ಆಲೋಚನೆಗಳನ್ನು ಹತ್ತು ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡ ನಂತರವೂ ಉಳಿಸಿಕೊಂಡವರು ವೈದೇಹಿಯವರು. ಇಂಥ ಪ್ರಸಿದ್ಧ ಸಾಹಿತಿ, ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶ್ರೀಮತಿ ವೈದೇಹಿಯವರನ್ನು ಭೇಟಿಯಾಗಬೇಕೆಂದಾಗ ನಮ್ಮ ಮನಸ್ಸಿನಲ್ಲೂ ಒಂದು ಪುಳಕ. ಅವರು ಎಂದಿನಂತೆಯೇ ತಮ್ಮ ಚೂಟಿಯಾದ ಮಾತುಗಳಿಂದ ನಮ್ಮನ್ನು ಇದಿರುಗೊಂಡರು. ಭೇಟಿಯಾಗಿದ್ದಾಗ ತೆಗೆದ ಫೋಟೋ ಇದು.
ಚಿತ್ರ ಕೃಪೆ : ಎಚ್.ಪಿ. ನಾಡಿಗ್





