ಜ೦ಗಮ ಜೋಗಿಯ ಮಾತಿನ ಮ೦ಟಪ
ಚೇತನ್ ಮು೦ಡಾಜೆ
ಪದ್ಯದ ಮಾತು ಬೇರೆ
ಅಥ೯ ಅನ್ನುವುದು ಕವಿತೆಯಲ್ಲಿ ಎಲ್ಲಿರುತ್ತದೆ? ಲಾಕ್ಷಣಿಕರು `ಶಬ್ದಾರ್ಥ ಸಹಿತಮ್ ಕಾವ್ಯ೦’ ಅ೦ತ ಹೇಳಿದ್ದರೂ ಸಹ ಮತ್ತೆ ಮತ್ತೆ ಶಬ್ದ ಮತ್ತು ಅರ್ಥದ ಕುರಿತ ಜಿಜ್ಞಾಸೆ ನಡೆಯುತ್ತಾ ಬ೦ದಿದೆ. ಹೀಗಾಗಿ ಕಾವ್ಯದ ಅರ್ಥ ವಿಸ್ತರಣೆಗೊಳ್ಳುತ್ತಲೂ ಬ೦ದಿದೆ. ಹಾಗಾಗಿ `ಅರ್ಥ’ ಶಬ್ದದಲ್ಲಿದೆಯೇ? ಅಥವಾ ಕವಿತೆಯ ವಿನ್ಯಾಸದಲ್ಲಿದೆಯೇ? ಹಾಗಾಗಿ ಒ೦ದು ಪದ್ಯದ ಅರ್ಥ ಜಿಜ್ಞಾಸೆ ಯಾವ ಬಗೆಯಲ್ಲಿ ಚಾರಿತ್ರಿಕವಾಗಿ ವಿಸ್ತರಣೆಗೊಳ್ಳುತ್ತಾ ಬ೦ದಿದೆ, ಮಾತ್ರವಲ್ಲ ಸ೦ಕುಚಿತಗೊ೦ಡಿದೆ ಎ೦ಬಲ್ಲಿಯೇ ಪದ್ಯದ ಅರ್ಥವಿದೆ. ಹಾಗಾಗಿ ರಾಮಾನುಜನ್ ಹೇಳುವ ಹಾಗೆ `ಪದ್ಯದ ಮಾತು ಬೇರೆ’.
ಈ ಅರ್ಥದ ವಿನ್ಯಾಸವನ್ನು ನಾವು ಹೆಚ್ಚು ಸ್ಪಷ್ಟವಾಗಿ ಅರಿತುಕೊಳ್ಳಲು ಯಕ್ಷಗಾನದ ತಾಳಮದ್ದಳೆಯೆಡೆಗೆ ದೃಷ್ಠಿ ಕೇ೦ದ್ರೀಕರಿಸುವುದು ಒಳಿತು. ತಾಳಮದ್ದಳೆಯಲ್ಲಿ `ಅರ್ಥ’ ಯಾವ ತೆರದಲ್ಲಿ ವಿನ್ಯಾಸಗೊಳ್ಳುತ್ತೆ ಅನ್ನುವುದು ಮುಖ್ಯ. `ತಾಳಮದ್ದಳೆ’ಯನ್ನೇ `ಅರ್ಥಗಾರಿಕೆ’ ಎ೦ಬ ಹೆಸರಿನಿ೦ದ ಕರೆಯುತ್ತಾರೆ. ಹಾಗಾಗಿ ಅರ್ಥಗಾರಿಕೆಯೂ ಒ೦ದು ಕಲೆ. ಈ ಎರಡೂ ನಾಮಕರಣಗಳಿಗೂ ಅ೦ದರೆ ತಾಳಮದ್ದಳೆ ಮತ್ತು ಅರ್ಥಗಾರಿಕೆಯ ನಡುವೆ ಒ೦ದು ಬಗೆಯ ಸ೦ಬ೦ಧ ಇದೆ. ಅ೦ದರೆ ತಾಳ ಮದ್ದಳೆಯ ಭಾಗವತಿಕೆಯ ಸ್ವರಕ್ಕೆ ಪೂರಕವಾಗಿ ಬರುವ೦ತದ್ದು `ಅರ್ಥಗಾರಿಕೆ’. ಈ ಅರ್ಥಕ್ಕೆ ಇಲ್ಲಿ ಒ೦ದು ಚೌಕಟ್ಟು ಇದೆ, ಮಿತಿಯೂ ಇದೆ. ಹಾಗೆಯೇ ಇಲ್ಲಿ ಅರ್ಥ ಹಲವು ವಿನ್ಯಾಸಗಳಲ್ಲಿ ಮಾತಿನ ಚಮತ್ಕಾರಗಳಲ್ಲಿ ಬಿ೦ಬಿತವಾಗುವುದನ್ನು ಗಮನಿಸಬಹುದು. ನಾನು ನನ್ನ ಬಾಲ್ಯದ ದಿನಗಳಿ೦ದಲೂ ಈ ` ತಾಳ ಮದ್ದಳೆ’ಗೆ ಮೋಹಿತನಾಗಿದ್ದವನು. ಒ೦ದೊ೦ದು ಪದ್ಯದ ಗತಿಗೆ ಅನುಸಾರವಾಗಿ ಅದಕ್ಕೆ ತಕ್ಕ ಅರ್ಥಗಾರಿಕೆ ಇದೆ. ಇಲ್ಲಿ ಅರ್ಥಗಾರಿಕೆಯು ಪಾತ್ರಗಳ ಸ೦ವಾದದ ಜತೆಗೆ ಚಲನೆಯನ್ನು ಪಡೆದಿರುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದುದು ಪಾತ್ರಗಳ ಸ೦ವಾದದ ಮೂಲಕ ಒಡಮೂಡುವ `ಅರ್ಥಗಳು’. ಈ ಅರ್ಥಗಳು ಪದ್ಯದಲ್ಲಿ ಮೂಲದಲ್ಲಿ ಇದ್ದದ್ದೇ ಎ೦ದರೆ ತಕ್ಷಣಕ್ಕೆ ಉತ್ತರ ಕೊಡಬಹುದು ‘ಅಲ್ಲ’! ಹಾಗಾಗಿ ಅರ್ಥ ಅನ್ನುವುದು ಶಬ್ದದ ಒಳಗಿದೆಯೇ ಅಥವಾ ಹೊರಗಿದೆಯೇ? ಮತ್ತಷ್ಟು ಓದು 
ನಿಮಗೂ ನಿಮ್ಮೂರು ನೆನಪಾಗುತ್ತಾ? ಭಾಗ- ೧
ದೀಪಕ್ ಮದೆನಾಡು
ದಕ್ಷಿಣದ ಕಾಶ್ಮೀರ ಮಡಿಕೇರಿಯಿಂದ ೭ ಕಿ.ಮೀ. ದೂರದಲ್ಲಿ ನನ್ನೂರು ಮದೆನಾಡು. ಹೆದ್ದಾರಿ ಕವಲು ಮಣ್ಣಿನ ದಾರಿ ಹಿಡಿದು ಜಾರುಗುಪ್ಪೆಯ ಮೇಲೆ ನಡೆದಂತೆ, ಹಲವು ಮೈಲು ನಡೆದರೆ ಬೆಟ್ಟದ ತುತ್ತ–ತುದಿಯಲ್ಲಿ ಸಿಗುವುದು ನಮ್ಮ ಮನೆ! ಆಗಸವನ್ನೇ ಮರೆಮಾಚುವಂತೆ ಬೆಳೆದ ಮರಗಳು, ಬೆಟ್ಟ–ಗುಡ್ಡಗಳು… ಸುಂಯನೇ ಬೀಸುತಿದ್ದ ತಂಗಾಳಿ ತಂಪಾದ ಹಾಸಿಗೆ ಹಾಸುತ್ತಿತ್ತು. ನಮ್ಮ ಮನೆಯ ಎಡಭಾಗದ ತೋಟದಿಂದ ಹರಿದ ಝರಿಯು ಭೋ..ಎ೦ದು ತನ್ನದೆ ರಾಗ ಹಾಡುತ್ತಿತ್ತು. ಎಷ್ಟೇ ದೂರ ಕಣ್ಣು ಹಾಯಿಸಿದರೂ ಕಾಣಿಸುತ್ತಿದ್ದುದ್ದು ಪ್ರಕೃತಿಯ ಸೊಬಗೇ ಹೊರತು ಮನೆಗಳಲ್ಲ!.
ರಾತ್ರಿ ಗಡದ್ದಾಗಿ ಬಿಸಿ–ಬಿಸಿ ಊಟ ಮಾಡಿ, ಸ್ವಲ್ಪ ತರಲೆ ಮಾಡಿ, ಓಡಿ ಹಾಸಿಗೆ ಮೇಲೆ ಹಾರಿ ಕಂಬಳಿ ಒಳಗೆ ಸೇರಿಕೊಂಡರೇ ಅಮ್ಮನ ಧ್ವನಿ ಕೇಳಿದಾಗಲೇ ಬೆಳಗಾಯಿತೆಂದು ತಿಳಿಯುವುದು!! ಮುಂಜಾನೆ ಅಮ್ಮ ಪ್ರೀತಿಯಿಂದ ಕರೆದರೆ ಮಿಸುಕಾಡದ ದೇಹ ನನ್ನದು. ಅಮ್ಮ ಕರೆದಾಗ ಎಲ್ಲೋ ಕನಸಿನಲ್ಲಿ, ಯಾರೋ ಕರೆದ ಹಾಗೆ ಭಾಸವಾಗುತ್ತಿತ್ತು. ಅಮ್ಮ ಸಿಟ್ಟನಿಂದ ” ಸಟ್ಟುಗ ಕಾಯಿಸಿ ಇಡುತ್ತೇನೆ” ಎ೦ದಾಗ ಸ್ವಲ್ಪ ನಿದ್ರೆ ಬಿಡುತಿತ್ತು. ಕುಂಬಳಕಾಯಿ ಮುಖ ಮಾಡಿಕೊಂಡು ಹಾಸಿಗೆಯಿಂದ ನೇರ ನನ್ನ ಪ್ರಯಾಣ ಒಲೆಯ ಬುಡದೆಡೆಗೆ! ಆರಾಮವಾಗಿ ಬಿಸಿಕಾಯಿಸಿಕೊಂಡು ಮಲಗಿರುತ್ತಿದ್ದ ಬೆಕ್ಕನ್ನು ಸ್ವಲ್ಪ ತಳ್ಳಿ ನಾನು ಕುಳಿತುಕೊಳ್ಳುತ್ತಿದೆ. ಒಲೆಯ ಬಳಿ ಬಿಸಿ ಕಾಯಿಸಿ–ಕಾಯಿಸಿ ಕಾಲಿನ ಚರ್ಮ ಬಿರುಕು ಬಿಟ್ಟಿರುತ್ತಿದ್ದವು. ಅಮ್ಮನ ವಟ–ವಟ ಅಲ್ಲಿಯು ಮು೦ದುವರಿಯುತ್ತಿತ್ತು. ಕಣ್ಣು ಮುಚ್ಚಿಕೊಂಡು ಬಚ್ಚಲು ಮನೆಗೆ ಹೋಗಿ ಹಲ್ಲುಜ್ಜಿ, ಮುಖತೊಳೆದು ಅಮ್ಮ ಹೇಳಿದ ಕೆಲಸ ಮಾಡಿ ಶಾಲೆಗೆ ಹೊರಡಲು ಸಿದ್ದನಾಗುತ್ತಿದ್ದೆ. ಮತ್ತಷ್ಟು ಓದು 
ದಿ ಕಲರ್ ಪರ್ಪಲ್ – ನಾ ನೋಡಿದ ಸಿನೆಮಾ
ಇಂಚರ
ಇತ್ತೀಚೆಗೆ ನೋಡಿದ ಚಿತ್ರ ‘ದಿ ಕಲರ್ ಪರ್ಪಲ್’. ಅಲೈಸ್ ವಾಕರ್ ಎಂಬುವವರ ನಾವೆಲ್ ಆಧಾರಿತವಾದ ಈ ಚಿತ್ರ ತೆರೆಗಂಡಿದ್ದು ೧೯೮೫ ರಲ್ಲಿ. ಇದರ ನಿರ್ದೇಶಕರು ಸ್ಟೀವನ್ ಸ್ಪೀಲ್ ಬರ್ಗ್. ಇದು ಸಿಲಿ ಎಂಬ ಆಫ್ರಿಕನ್ ಅಮೇರಿಕನ್ ಹುಡುಗಿಯ ಕಥೆ. ಕಥೆ ಶುರುವಾಗೋದು ಹೀಗೆ. ಸಿಲಿಯ ತಾಯಿ ಹೆರಿಗೆ ನೋವಿನಲ್ಲಿರುತ್ತಾಳೆ. ಹೆಣ್ಣು ಮಗುವೊಂದು ಜನಿಸುತ್ತದೆ. ತಂದೆ ಆಗ ತಾನೇ ಜನಿಸಿದ ಮಗುವನ್ನು ಹೊರಗೆ ಮಾರಲು ತೆಗೆದುಕೊಂಡು ಹೋಗುತ್ತಾನೆ. ಇದನ್ನೆಲ್ಲಾ ಕಣ್ಣಾರೆ ಕಂಡ ಸಿಲಿ ಗೆ ಎಚ್ಚರಿಕೆ ಕೊಟ್ಟು ಹೋಗುತ್ತಾನೆ. ಸುಮಾರು ೧೯೦೦ ರ ದಶಕದಲ್ಲಿ ಈ ಅಶಿಕ್ಷಿತ ಬಡ ಕಪ್ಪು(ಆಫ್ರಿಕನ್) ಹೆಣ್ಣು ಮಕ್ಕಳ ಶೋಷಣೆ ಹೇಗೆ ನಡೆಯುತ್ತಿತ್ತು? ಗಂಡಸರ ದಬ್ಬಾಳಿಕೆ, ಅಮೇರಿಕನ್ ವೈಟ್ ನವರ ದರ್ಪ, ಅಶಿಕ್ಷಿತ ಕಪ್ಪು ಜನರ ಅದ್ರಲ್ಲೂ ಹೆಣ್ಣುಮಕ್ಕಳ ಅಸಹಾಯಕತೆಯನ್ನು ಚಿತ್ರ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾ ಹೋಗುತ್ತದೆ.
ಸಿಲಿಗೆ ೧೪ ವರ್ಷ, ಆಕೆಯ ತಾಯಿ ಹೆತ್ತು, ಹೆತ್ತು ಸುಸ್ತಾದಳೆಂದು, ಸಿಲಿಯ ತಂದೆ, ಸಿಲಿಯ ಮೇಲೆ ಬಲಾತ್ಕಾರ ಮಾಡುತ್ತಾನೆ. ಇದರಿಂದಾಗಿ ಸಿಲಿಗೆ ೨ ಮಕ್ಕಳಾಗುತ್ತವೆ. ಅವರಿಬ್ಬರನ್ನೂ ಮಕ್ಕಳಿಲ್ಲದ ಅಮೇರಿಕನ್ ವೈಟ್ ದಂಪತಿಗಳಿಗೆ ಮಾರಿಬಿಡುತ್ತಾನೆ. ತಾಯಿ ಸಾಯುತ್ತಾಳೆ. ಸಿಲಿ ತನ್ನ ತಂದೆಯ ಹೆಂಡತಿಯಾಗುತ್ತಾಳೆ! ಸಿಲಿಗೊಬ್ಬಳು ಅತ್ಯಂತ ಪ್ರೀತಿ ಪಾತ್ರಳಾದ ತಂಗಿ ನೆಟ್ಟಿ. ಈಕೆಯ ಮೇಲೆ ತಮ್ಮ ತಂದೆಯ ಕಣ್ಣು ಬೀಳದಂತೆ ಕಾಪಾಡುವ ಸಿಲಿ ಆಕೆಯನ್ನು ಶಾಲೆಗೆ ಹೋಗುವಂತೆ ನೋಡಿಕೊಳ್ಳುತ್ತಾಳೆ. ಚರ್ಚ್ ನಲ್ಲಿ ನೆಟ್ಟಿಯನ್ನು ನೋಡಿದ ವಿಧುರನೊಬ್ಬ ಸಿಲಿಯ ತಂದೆಯ ಬಳಿ ಬಂದು ಆಕೆಯನ್ನು ಮದುವೆ ಮಾಡಿಕೊಡಲು ಕೇಳುತ್ತಾನೆ. ಆದರೆ ಸಿಲಿಯ ತಂದೆ ಸಿಲಿಯನ್ನೇ ಮಾಡಿಕೋ ಎಂದು ಹೇಳುತ್ತಾನೆ. ಆಕೆ ಚೆನ್ನಾಗಿಲ್ಲ, ಕಪ್ಪು, ಆಕೆಯ ನಗು ಚೆನ್ನಾಗಿಲ್ಲ, ಆಕೆ ಈಗಾಗಲೇ ಹಾಳಾಗಿದ್ದಾಳೆ, ಇದೆಲ್ಲವೂ ಈ ವಿಧುರನ ಕಂಪ್ಲೇಂಟ್. ಆದರೆ ಅದಕ್ಕೆಲ್ಲವೂ ಸಮಜಾಯಿಶಿ ಕೊಡುತ್ತಾನೆ ಸಿಲಿಯ ತಂದೆ. ವಧು ಪರೀಕ್ಷೆಯಂತೂ ಥೇಟ್ ಪ್ರಾಣಿಗಳ ವ್ಯಾಪಾರದ ಹಾಗೇ ಭಾಸವಾಗುತ್ತದೆ. ಆಕೆಯನ್ನು ತಿರುಗಿಸಿ, ನಡೆಸಿ ತೋರಿಸುವ ತಂದೆ, ಒಪ್ಪಿಕೊಳ್ಳುವ ಈತ. ಸಿಲಿಯ ಮದುವೆಯಾಗುತ್ತದೆ. ಮತ್ತಷ್ಟು ಓದು 






