ಅಮ್ಮ
ಎಚ್. ಆನಂದರಾಮ ಶಾಸ್ತ್ರೀ
ಅಮ್ಮಾ, ನಿನ್ನ ಅನುರಾಗದ ಕಂದ ನಾನು
ಬೇಕೆಂದುದ ಕೊಡುವ ನೀನು ಕಾಮಧೇನು
ನಾ ಮುಟ್ಟುವ ಗುರಿಯ ಮಾರ್ಗದರ್ಶಿ ನೀನು
ತಿಳಿಯದೆನಗೆ ಪಯಣಗತಿಯ ಕಷ್ಟವೇನೂ
ನನಗಾಗಿಯೆ ಮಿಡಿದೆ ಬಹಳ ಕಂಬನಿಯನ್ನು
ನನ್ನೆದುರಿನ ಜೀವಂತ ದೇವಿ ನೀನು
ಕೊಡುವೆ ನನ್ನ ಮಧುರ ನೆನಪುಗಳಲಿ ಪಾಲನು
ಕೊಡಲಾರೆನು ನಿನಗೆ ನಾನು ಇನ್ನೇನನ್ನೂ
ಅಮ್ಮಾ, ನಿನ್ನ ಅನುರಾಗದ ಕಂದ ನಾನು
ನಾನು ನೆರಳು, ಭವ್ಯ ಮೂಲಮೂರ್ತಿ ನೀನು




