ವಿಜ್ಞಾನಿ ಅಜಯ್ ಶರ್ಮ ಅವರಿಂದ ವಿನೂತನ ಆವಿಷ್ಕಾರ
ಕರುಣಾಕರ ಬಳ್ಕೂರು
ದ್ರವ್ಯ ರಾಶಿ ಶಕ್ತಿ ಸಮಾನತೆಯ E=mc2ಇದನ್ನು ನೀವು ಬಾಲ್ಯದಿಂದ ವಿಜ್ಞಾನ ಓದಿದ್ದರೆ ನೋಡಿದ ತಕ್ಷಣ ನೆನಪಿಗೆ ಬಂದೇ ಬರುತ್ತೆ. ಈ ಸೂತ್ರದ ಹರಿಕಾರ ಶ್ರೇಷ್ಠ ವಿಜ್ಞಾನಿ ಐನ್‌ಸ್ಟೀನ್. ಈತ ವಿಜ್ಞಾನ ಕ್ಷೇತ್ರಕ್ಕೆ ತನ್ನದೇ ಆದ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾನೆ. ಭೌತಶಾಸ್ತ್ರ ಕ್ಷೇತ್ರದಲ್ಲಿ ಆಗಿರುವ ವಿಸ್ಮಯಗಳು ಐನ್‌ಸ್ಟೀನ್‌ನ ಆವಿಷ್ಕಾರಗಳನ್ನು ವಿಜ್ಞಾನ ಕ್ಷೇತ್ರ ಒಪ್ಪಿಕೊಂಡಿದೆ. ಆದರೆ ಹಲವು ದಿನಗಳಿಂದ ‘ದ್ರವ್ಯ ರಾಶಿ ಶಕ್ತಿ ಸಮಾನತೆಯ E=mc2ಸೂತ್ರದ’ ಬಗ್ಗೆ ಇತರ ವಿಜ್ಞಾನಿಗಳು ತಕರಾರು ಎvರುವ ಪ್ರಶ್ನೆಗಳು ಗೊತ್ತಿರಬಹುದು. ಹಲವು ವರ್ಷಗಳಿಂದ ವಿಜ್ಞಾನಿಗಳಿಗೆ ಈ ಸೂತ್ರವು ಅಷ್ಟೊಂದು ಸಮರ್ಪಕವಾಗಿಲ್ಲ ಎಂದು ಕೆಲವೊಂದು ವಿಜ್ಞಾನಿಗಳ ತಂಡ ಬಹಿರಂಗಪಡಿಸಿದೆ. ಭೌತಶಾಸ್ತ್ರದಲ್ಲಿ ಈ ಸೂತ್ರ ಅಷ್ಟೊಂದು ಸಮರ್ಪಕವಾಗಿಲ್ಲ ಎನ್ನುವ ಬಗ್ಗೆ ಹಲವಾರು ವಿಜ್ಞಾನಿಗಳಿಂದ ಆಕ್ಷೇಪಗಳು ಹಿಂದಿನಿಂದಲು ಕೇಳಿಬರುತ್ತಿತು. ಮತ್ತೆ ಇದು ಹುರುಳಿಲ್ಲದ ಸೂತ್ರ ಎನ್ನುವ ಬಗ್ಗೆಯೂ ವಿಮರ್ಶಕರು ಕರೆದ್ದುಂಟು. ಆದರೆ ಇದೀಗ ಎಲ್ಲರ ಊಹಾಪೋಹಗಳಿಗೆ ತೆರೆಬಿದ್ದಿದೆ. ಈ ಸೂತ್ರದ ಬಗ್ಗೆ ಆಳವಾಗಿ ಅದ್ಯಾಯನ ಮಾಡಿ, ಸೂತ್ರಕ್ಕೆ ಮೋಕ್ಷವನ್ನು ಕೊಡುವಲಿ ಕಾರಣಿಕರ್ತರಾದವರು ಪ್ರಖ್ಯಾತ ವಿಜ್ಞಾನಿ ಅಜಯ್ ಶರ್ಮ. ವಿನೂತನ ಆವಿಷ್ಕಾರದ ಮೂಲಕ ಯಶಸ್ವಿಯಾಗಿದ್ದಾರೆ.
ಬನ್ನಿ ಅಜಯ್ ಶರ್ಮ ಅವರ ಹೊಸ ಸೂತ್ರದ ವಿವರಣೆಯನ್ನು ತಿಳಿದುಬರೋಣ. ಐನ್‌ಸ್ಟೀನಿನ ದ್ರವ್ಯ ರಾಶಿ ಶಕ್ತಿ ಸಮಾನತೆಯ E=mc2 ಸೂತ್ರಕ್ಕೆ ಹೊಸ ರೂಪವಾಗಿ DE= DAmc2 ಅನ್ನು ಸಿದ್ಧಪಡಿಸಿ ಮಂಡಿಸಿದ್ದಾರೆ. ಆ ಮುಖೇನ ಹೊಸ ಕ್ರಾಂತಿಯನ್ನೆ ಮಾಡಿದ್ದಾರೆ. ಅಜಯ್ ಶರ್ಮರವರು ಆಕ್ಸ್‌ಫರ್ಡ್ ಮತ್ತು ಹಾವರ್ಡ್ ವಿಶ್ವವಿದ್ಯಾನಿಲಯಗಳಿಂದ ಗುರುತಿಸಲ್ಪಟ್ಟು ಅಂತರಾಷ್ಟ್ರೀಯ ಪ್ರಖ್ಯಾತಿ ಪಡೆದ ವಿಜ್ಞಾನಿ. ಮೂಲತಃ ಹಿಮಾಚಲ ಪ್ರದೇಶದವರು.
ಅಜಯ್ ಶರ್ಮರವರು ಸುಮಾರು ೨೮ ವರ್ಷಗಳ ಕಾಲ ಈ ಸಮೀಕರಣದ ಮೇಲೆ ಪ್ರಯೋಗಾತ್ಮಕವಾಗಿ ಅಧ್ಯಾಯನ ಮಾಡಿದರು. ಸತತ ಪ್ರಯೋಗದ ಮೂಲಕ ಕೊನೆಗೂ ಯಶಸ್ಸನ್ನು ಈ ಸಮೀಕರಣದಲ್ಲಿ ಕಂಡುಕೊಂಡಿದ್ದಾರೆ. ಈ ವಿಷಯದ ಕುರಿತಂತೆ ಇಂಗ್ಲೇಂಡ್, ಯು.ಎಸ್.ಎ, ಕೆನಡಾ, ಮಾಸ್ಕೋ, ಪೊಲಾಂಡ್, ಮುಂತಾದ ಹಲವಾರು ದೇಶಗಳಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಈ ಸೂತ್ರದ ಬಗ್ಗೆ ಮಂಡಿಸಿ ಸಮರ್ಥಿಸಿದ್ದಾರೆ. ಈ ವಿಷಯಕ್ಕೆ ಸಂಬದಿಸಿದಂತೆ ಸುಮಾರು ೧೮ ಲೇಖನಗಳನ್ನು ವಿವಿಧ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ೨೦೦೯-೧೦ರಲ್ಲಿ ಯು.ಎಸ್.ಎ ಮತ್ತು ಜರ್ಮನಿಯಲ್ಲಿ ಎರಡು ಪುಸ್ತಕಗಳನ್ನು ಪ್ರಕಟಗೊಳಿಸಿದ್ದಾರೆ.
ಇದೀಗ ಇವರ ಸಮೀಕರಣವು ಭಾರತ ಸರಕಾರದ ಮುಂದೆ ಇಟ್ಟಿದ್ದಾರೆ. ಭಾರತ ಸರಕಾರವೂ ಕೂಡ ಅಜಯ್ ಶರ್ಮರವರ ಸಾಧನೆಯನ್ನು ಪರಿಗಣಿಸಿ ಯೋಗ್ಯ ವಿಜ್ಞಾನಿಗಳ ತಂಡವೊಂದುನ್ನು ನೇಮಿಸಿದೆ. ಆ ಮೂಲಕ ಸಮೀಕರಣದ ಸತ್ವವನ್ನು ಪರಿಶೀಲಿಸುವ ಬಗ್ಗೆ ಭರವಸೆಯನ್ನು ನೀಡಿದೆ.
ಅಜಯ್ ಶರ್ಮರವರು ಐನ್‌ಸ್ಟೀನ್ ಸಮೀಕರಣಕ್ಕೆ ಗಣಿತದ ಸ್ವಸ್ಟೀಕರಣವಿಲ್ಲ ಹಾಗೂ ಅದನ್ನು ವಿಶಿಷ್ಟ ವಿದ್ಯಾಮಾನದಲ್ಲಿ ನಿಷ್ಪತ್ತಿ ಮಾಡಲಾಗಿತ್ತು ಎಂದು ಹೇಳುತ್ತಾರೆ. ಅಷ್ತೇ ಅಲ್ಲದೇ ಅದು ಸಾಮಾನ್ಯ ವಿದ್ಯಾಮಾನದಲ್ಲಿ ದ್ರವ್ಯರಾಶಿ ಸಮೀಕರಣತೆಯ ನಿಯಮವನ್ನು ವಿರೋಧಿಸುತ್ತದೆ. ಈ ಬಗ್ಗೆ ಬೇರೆ ಯಾವ ವಿಜ್ಞಾನಿಗಳು ಈವರೆಗೂ ಇದನ್ನು ಗುರುತಿಸಿರಲಿಲ್ಲ. ಇವರೊಂದಿಗೆ ೨೦೦೮ರಲ್ಲಿ ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸ್‌ನ ಭೌತಶಾಸ್ತ್ರದ ಉಪನ್ಯಾಸಕ ಸಂಜೀವ್ ಚರ್ತುರ್ ವೇದಿ, ಮತ್ತು ಜೀವಶಾಸ್ತ್ರದ ಉಪನ್ಯಾಸಕ ರಾಜೇಶ್ ಶುಕ್ಲ ಅವರು ಜೊತೆಗೂಡಿ ಗುಣಮಟ್ಟದ ಶಿಕ್ಷಣಕ್ಕಾಗಿ ಆವಿಷ್ಕಾರಕ್ಕೆ ಶ್ರಮಿಸುತ್ತಿದ್ದಾರೆ.
ಶರ್ಮ ಅವರು ಸೂಚಿಸಿರುವ ಸಮೀಕರಣವನ್ನು ವೈಜ್ಞಾನಿಕ ಸಮಾಜವು ಒಪ್ಪಿಕೊಂಡರೆ. ಭೌತಶಾಸ್ತ್ರದಲ್ಲಿ ಒಂದು ಮೈಲಿಗಲ್ಲಾಗುವುದರಲ್ಲಿ ಎರಡು ಮಾತಿಲ್ಲ. ಈ ಸಮೀಕರಣಕ್ಕೆ ಮನ್ನೆಣೆ ಸಿಕ್ಕರೆ ಭೌತಶಾಸ್ತ್ರದ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಆದಷ್ಟು ಬೇಗ ಈ ಸಮೀಕರಣದ ಬಗ್ಗೆ ತಂಡ ಪರೀಕ್ಷಿಸಿ, ಗೌರವಿಸಲಿ ಎಂದು ಹಾರೈಸೋಣ.
ಹೆಚ್ಚಿನ ಮಾಹಿತಿಗಾಗಿ: ChatSanjeev32@yahoo.co.in ಸಂಪರ್ಕಿಸಬಹುದು.





Now world is changing.
People from developing c ountries are getting opportunities
to express themselves.
I see Einstein left his work incomplete , to be completed.
INDIAN GOVERNMENT MUST LOOK AT THIS WORK SERIOUSLY.
Anjana
please let me know the paramaters of the formula DE =DAmc2.