ವಿಷಯದ ವಿವರಗಳಿಗೆ ದಾಟಿರಿ

Archive for

25
ಆಕ್ಟೋ

ಜೀವನದ ಬಂಡಿ

ಕರುಣಾಕರ ಬಳ್ಕೂರು

ಗುಡಿಸಲೊಳಗೆ ಗಾಳಿ ಬೆಳಕಿನ ಸುದ್ದಿಯೇ ಇಲ್ಲ
ಚಿಗುರುವ ಕನಸುಗಳನ್ನು ಕೆದುಕುತಲಿ
ನಿತ್ಯದ ಕಾಯಕದಿ
ಪಾತ್ರೆಪಗಡೆಯ ತೊಳೆದು, ಕಸವನ್ನು ಗುಡಿಸಿ
ತೊಟ್ಟಿಲ ಕೂಸಿಗೆ
ಜೋಗುಳವಾ ಹಾಡಿ
ಬೀದಿಯಲ್ಲಾಡುವ ಮಕ್ಕಳನ್ನು ಕಂಡು
ಆ ಕಣ್ಣುಗಳು ಅರಳುತ್ತಿತ್ತು
ಶಾಲೆಯ ಮುಖ ಕಾಣದವಳು
ಕನಸು ಕಂಗಳು ನೋಡುತಿತ್ತು
ಭೂತ ಭವಿಷ್ಯದ ನಡುವೆ
ಜಗವು ನಗುತ್ತಿರಲು,
ಆಕೆ…ಗುಡಿಸಲೊಳಗೆ
ರೊಟ್ಟಿ ತಟ್ಟುವ ಸಂಭ್ರಮದಿ
ಮನಸ್ಸು ಆಗೊಮ್ಮೆ ಈಗೊಮ್ಮೆ ಕುಣಿಯುತಲಿತ್ತು
ಕಿಚ್ಚನ್ನು ಹಚ್ಚಿ ಮುಸುರೆ ತಿಕ್ಕುತಲಿ
ಮಾತು ಮಾತಿಗೂ
ಸಕ್ಕರೆಯ ನಗುವ ಚೆಲ್ಲುತ್ತಾಳೆ
ಅಡುಗೆ ಮನೆಯ ಪಾತ್ರೆ ಪಗಡೆಗಳೊಂದಿಗೆ
ನೆನಪುಗಳ ಈರುಳ್ಳಿ ಹಚ್ಚುತ್ತಾಳೆ ..!
ನವ ಕನಸುಗಳ ಹೊತ್ತ ಆ ಕಂಗಳು
ಬದುಕನ್ನು ಅಡವಿಟ್ಟು
ಜೀವನವೆಂಬ ಮೆರವಣಿಗೆಯಲ್ಲಿ
ದೇಹವೇ ಬರಡಾಗಿ
ಅಲೆಯುತಾ ಊರಿಂದ ಊರಿಗೆ
ದಾರಿ ಹಿಡಿಯುವವಳು
ಅದೇ ಆಕೆಯ ಬದುಕಿನ ಬಂಡಿ….!

ಚಿತ್ರಕೃಪೆ : http://us.123rf.com/
25
ಆಕ್ಟೋ

ನಿಮಗೂ ನಿಮ್ಮೂರು ನೆನಪಾಗುತ್ತಾ? ‍ಭಾಗ-೨

ದೀಪಕ್ ಮದೆನಾಡು

ಜೂನ್ ತಿಂಗಳ ೧ನೇ ತಾರೀಕು ನಮ್ಮ ಶಾಲೆಯ ಆರಂಭ. ಅಂದೇ ಮಳೆರಾಯನು ನಮ್ಮನ್ನು ಚಂಡಿ-ಪುಂಡಿ ಮಾಡಿ ಖುಷಿ ಪಡುತ್ತಿದ್ದ(ಇತ್ತೀಚಿಗಿನ ದಿನಗಳಲ್ಲಿ ಜುಲೈ ತಿಂಗಳು ಮುಗಿದರೂ ಮಳೆಯರಾಯನ  ಮುಖ ನೊಡಲು ಸಾಧ್ಯವಾಗುತ್ತಿಲ್ಲ!!). ಅಕ್ಕನೊಂದಿಗೆ ದೊಡ್ಡ ಕೊಕ್ಕೆ ಕೊಡೆ ಹಿಡಿದು ಕುಣು-ಕುಣು ಹೆಜ್ಜೆ ಹಾಕುತ್ತಾ ನಾನು  ಶಾಲೆಗೆ ಹೋಗುತ್ತಿದ್ದೆ. ಮೊದಲನೆ ದಿನದ ಜಿಟಿ-ಜಿಟಿ ಮಳೆಯಲ್ಲೂ,  ಶಾಲೆಗೆ ಹೋಗಲು ಏನೋ ಒಂಥರಾ ಸಂಭ್ರಮ. ಕಾಡು ದಾರಿಯಲ್ಲಿ ಮಣ ಭಾರದ ಬ್ಯಾಗು ಹೊತ್ತು ಕೊಂಡು,  ಶಾಲೆಗೆ ಹೋಗಿ ಕಾಲು ನೋಡಿದರೇ ಜಿಗಣೆಗಳು ನೇರಳೆಹಣ್ಣಿನ ಗಾತ್ರವಾಗಿ ರಕ್ತ ಹೀರುತಿರುತ್ತಿದ್ದವು. ಒದ್ದೆಯಾದ ಕಾಲಿನಿಂದ ಜಿಗಣೆ ಬಿಡಿಸುವುದು ಬಲು  ಕಷ್ಟ. ಹೇಗೋ ಹುಡುಕಿ ಕಿತ್ತೆಸೆಯುತ್ತಿದಂತೆ, ಕಚ್ಚಿದಲ್ಲಿಂದ ರಕ್ತದ ನಾಗಾಲೋಟ ಶುರುವಾಗುತ್ತಿತ್ತು. ಗಾಯಕ್ಕೆ ಪೇಪರ್ ಚೂರು ಅಂಟಿಸಿದ ಮೇಲೆಯೇ ರಕ್ತಸ್ರಾವ ನಿಲ್ಲುತ್ತಿತ್ತು. ಮನೆಯಿಂದ   ೨ ಕಿ.ಮೀ. ದೂರದಲ್ಲಿದ್ದ ‘ಕಾಟಕೇರಿ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿ ನಾನು ಎರಡನೇ ತರಗತಿ ಓದುತ್ತಿದೆ. ನನ್ನಕ್ಕ ಅದೇ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿದ್ದಳು. ಮತ್ತಷ್ಟು ಓದು »

25
ಆಕ್ಟೋ

ಉಪ್ಪಿಗಿಂತ ರುಚಿಯಿಲ್ಲ, ಅತಿಯಾದರೆ ಅಪಾಯ ತಪ್ಪಿದ್ದಲ್ಲ

ಡಾ.ಪ್ರಶಾಂತ ನಾಯ್ಕ ಬೈಂದೂರು
ಜೀವವಿಜ್ಞಾನ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ

‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎನ್ನುವ ಗಾದೆ ಮಾತು ಸರ್ವತಾ ಸತ್ಯ. ಸಕ್ಕರೆ ಇಲ್ಲದ ಚಹಾ, ಕಹಿಕಹಿ ಎನಿಸಿದರೂ ಕುಡಿಯಬಹುದು. ಆದರೆ ಉಪ್ಪಿಲ್ಲದೆ ಮಾಡಿದ ಅಡುಗೆಯನ್ನು ಊಟ ಮಾಡುವುದು ಬಹಳ ಕಷ್ಟ. ಉಪ್ಪು ಕೇವಲ ರುಚಿಗೆ ಸೀಮಿತವಲ್ಲ. ನಮ್ಮ ದೇಹದಲ್ಲಿ ನಡೆಯುವ ಅನೇಕ ಶಾರೀರಿಕ ಕ್ರಿಯೆಗಳಿಗೆ ಬೇಕಾಗಿರುವ ಸೋಡಿಯಂ ಮತ್ತು ಕ್ಲೋರೈಡ್ ಎನ್ನುವ ಎರಡು ವಿದ್ಯುದ್ವಾಹಕ ಲವಣಗಳನ್ನು ಪೂರೈಸಲು ಉಪ್ಪು ಅಗತ್ಯ. ಶರೀರದಲ್ಲಿ ದ್ರವಗಳ ಸಮತೋಲನೆಯನ್ನು ಕಾಪಾಡಲು, ಆಮ್ಲ-ಪ್ರತ್ಯಾಮ್ಲತೆಯನ್ನು ಸಮಸ್ಥಿತಿಯಲ್ಲಿಡಲು, ನರವ್ಯೂಹದ ಕಾರ್ಯನಿರ್ವಹಣೆಯಲ್ಲಿ, ಸ್ನಾಯುಗಳ ಚಲನಾಕ್ರಿಯೆಗೆ, ರಕ್ತದೊತ್ತಡವನ್ನು ನಿಯಂತ್ರಿಸಲು, ಉಪ್ಪಿನಲ್ಲಿರುವ ಸೋಡಿಯಂ ಮತ್ತು ಕ್ಲೋರೈಡ್ ಲವಣಗಳು ವಹಿಸುವ ಪಾತ್ರ ಮುಖ್ಯವಾದದ್ದು. ಈ ಎಲ್ಲ ಶಾರೀರಿಕ ಕ್ರಿಯೆಗಳಿಗೆ ಅತ್ಯವಶ್ಯವಿರುವ ಈ ಎರಡು ಲವಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಈ ಎರಡು ಲವಣಗಳು ಇತರ ಆಹಾರ ಮೂಲಗಳಿಂದ (ಹಣ್ಣು, ತರಕಾರಿ, ಧಾನ್ಯ, ಹಾಲು, ಮೀನು, ಮಾಂಸ ಇತ್ಯಾದಿ) ಸಿಗುತ್ತದೆಯಾದರೂ,
ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಅವುಗಳನ್ನು ಪಡೆಯಲು ಉಪ್ಪನ್ನು ಉಪಯೋಗಿಸಲೇಬೇಕು. ನಾವು ಉಪಯೋಗಿಸುವ ಉಪ್ಪುಗಳಲ್ಲಿ ಮೂರು ವಿಧ. ಐಯೋಡಿನ್‌ಯುಕ್ತ ಉಪ್ಪು (ಇದರಲ್ಲಿ ಸೋಡಿಯಂ-ಕ್ಲೋರೈಡ್ ಜೊತೆಗೆ ಥೈರಾಡ್ ಹಾರ್ಮೋನ್‌ಗಳ ಉತ್ಪತ್ತಿಗೆ ಅವಶ್ಯವಿರುವ ಅಯೋಡಿನ್ ಇರುತ್ತದೆ), ಸಂಸ್ಕರಿಸಿದ/ಶುದ್ಧ ಉಪ್ಪು (ಸೋಡಿಯಂ ಮತ್ತು ಕ್ಲೋರೈಡ್ ಲವಣಗಳನ್ನು ಮಾತ್ರ ಹೊಂದಿರುತ್ತದೆ) ಮತ್ತು ಸಮುದ್ರ ಉಪ್ಪು (ಕಲ್ಲುಪ್ಪು). ಮತ್ತಷ್ಟು ಓದು »

25
ಆಕ್ಟೋ

ಚೆನ್ನಾಗಿರುವವರನ್ನು ಕಂಡರೆ ದೇವರಿಗೂ ಹೊಟ್ಟೆ ಕಿಚ್ಚಂತೆ!

ಶಿವು.ಕೆ

(“ವೆಂಡರ್ ಕಣ್ಣು ” ಕೃತಿಯ ಲೇಖಕ)

ಮಹಡಿ ಮನೆಯ ಕಿಟಕಿಯಲ್ಲಿ ನಾನು ಇಣುಕಿದಾಗ ಹಾಲ್‍ನ ಬಲಬದಿಯ ಆಡುಗೆ ಮನೆಯ ಬಾಗಿಲಿನಲ್ಲಿ ಅವರ ನೆರಳು ಕಾಣಿಸಿದ್ದು ನೋಡಿ ನನಗೆ ಸಮಾಧಾನವಾಗಿತ್ತು. “ಸಾರ್” ಅಂತ ಜೋರಾಗಿ ಕೂಗಿದೆ. ಆವರಿಗೆ ಗೊತ್ತಾಗಲಿಲ್ಲ. ಕಾಲಿಂಗ್ ಬೆಲ್ ಒತ್ತಿದೆ, ತಿರುಗಿ ನೋಡಲಿಲ್ಲ.  ಬಾಗಿಲು ಬಡಿದೆ.  ಹೂಹೂಂ…ಆತ ತಿರುಗಿ ನೋಡಲಿಲ್ಲ.  ಇದ್ಯಾಕೋ ಸರಿಬರಲಿಲ್ಲವೆಂದು ಮತ್ತೆ ನಾಲ್ಕೈದು ಬಾರಿ ಬೆಲ್ ಮಾಡಿದೆ. ಬಾಗಿಲು ತಟ್ಟಿದೆ…”ಸಾರ್, ಸಾರ್,” ಜೋರಾಗಿ ಕೂಗಿದೆ. ನನ್ನ ಕೂಗಿಗೆ ಕೆಳಗಿನ ಮನೆಯವರು ಕೇಳಿಸಿಕೊಂಡು ಮಾತಾಡಿದರೇ ಹೊರತು ಆತನಿರಲಿ, ಆತನ ನೆರಳೂ ಕೂಡ ನನ್ನ ಕೂಗಿಗೆ ಓಗೊಡಲಿಲ್ಲ.

ಒಳಗಿನಿಂದ ಲಾಕ್ ಮಾಡಿದ ಬಾಗಿಲ ಹೊರಗೆ ನಿಂತು ಕೂಗಿ,ಬಾಗಿಲು ತಟ್ಟಿ, ಬೆಲ್ ಮಾಡಿದರೂ ಒಳಗೆ ಹಾಲ್‍ನ ಬಲಬದಿಯಲ್ಲಿ ಕೇವಲ ಐದು ಆಡಿ ದೂರದಲ್ಲಿ ನಿಂತಿರುವ ವ್ಯಕ್ತಿಯೊಬ್ಬ ತಿರುಗಿ ನೋಡದಿದ್ದಲ್ಲಿ ಯಾರಿಗೇ ಆದರೂ ಸಿಟ್ಟು ಬರದಿರುತ್ತದೆಯೇ? ನೀವು ಹತ್ತುನಿಮಿಷ ಅಲ್ಲಿಯೇ ನಿಂತು ಕೂಗಿದರೂ ಆ ವ್ಯಕ್ತಿ ತಿರುಗಿನೋಡದಿದ್ದಲ್ಲಿ ಖಂಡಿತವಾಗಿ ನಿಮ್ಮ ಸಿಟ್ಟು ನೆತ್ತಿಗೇರಿಬಿಡುತ್ತಿತ್ತೇನೋ.  ಆದ್ರೆ ನಾನು ಸಿಟ್ಟು ಮಾಡಿಕೊಳ್ಳುವಂತಿಲ್ಲ. ಏಕೆಂದರೆ ಆವರಿಗೆ ಕಿವಿ ಕೇಳುವುದಿಲ್ಲ. ಆವರು ತಿರುಗುವವರೆಗೆ ನಾನು ಕೂಗಿ, ಕಿರುಚಿ, ಬಾಗಿಲು ಬಡಿದು….ಇನ್ನೈದು ನಿಮಿಷ ಕಳೆದರೂ ಆತ ನನ್ನ ಕಡೆಗೆ ನೋಡಲು ಏನಾದರೂ ಮಾಡುತ್ತಿರಬೇಕು..” ಮತ್ತೆರಡು ನಿಮಿಷ ಕಳೆಯಿತು. ನಿದಾನವಾಗಿ ಅಡುಗೆ ಮನೆಯ ಬಾಗಿಲಿಗೆ ನೇತುಹಾಕಿದ್ದ ಸಣ್ಣ ಕರವಸ್ತ್ರದಲ್ಲಿ  ಆ ನೆರಳು ಕೈವರೆಸಿಕೊಂಡು ಹಾಲ್‍ನೆಡೆಗೆ ಬರುತ್ತಿರುವುದು ಕಾಣಿಸಿತು. ಸದ್ಯ ನಾನು ಇಷ್ಟು ಹೊತ್ತು ಕಾದಿದ್ದಕ್ಕೂ ಸಾರ್ಥಕವಾಯಿತು ಅಂದುಕೊಂಡೆ. ಹಾಲ್‍ಗೆ ಬರುತ್ತಿದ್ದಂತೆ ಕೈಯಾಡಿಸಿದೆ.  ಆತ ನನ್ನನ್ನು ನೋಡುತ್ತಿದ್ದರೂ ಏನೂ ಪ್ರತಿಕ್ರಿಯಿಸುತ್ತಿಲ್ಲ.  ನನಗ್ಯಾಕೋ ಇವತ್ತು ಗಿಟ್ಟುವ ಕೆಲಸವಲ್ಲ ಎನಿಸಿ ಬೇಸರವಾಗತೊಡಗಿತ್ತು. ಆತ ಮತ್ತೆರಡು ಹೆಜ್ಜೆ ಬಾಗಿಲ ಕಡೆಗೆ ಬಂದರಲ್ಲ!   ನಾನು ಕಿಟಕಿಯಾಚೆ ಕೈಯಾಡಿಸುತ್ತಿರುವುದು ಆವರಿಗೆ ಕಾಣಿಸಿತು. ಮತ್ತಷ್ಟು ಓದು »
25
ಆಕ್ಟೋ

ಇನಿದನಿ

ಅರವಿಂದ್

ಕುಹೂ ಕುಹೂ ಎಂದೆನಿಸುತಾಇನಿದನಿ ರೂಪವಾದಾಗ
ಕೂಗಳತೆಯ ದೂರದಲ್ಲಿದ್ದರೂ
ಕಾಣದ ಇನಿದನಿಯೇ
ಏನಾಯಿತು ನಿನಗೆ
ಕಾಣದಂತೆ ನೀನು ಕೇಳುಸುತಿರುವೆ ದನಿಯನು ?

ಕುಹೂ ಕುಹೂ ಎಂದೆನಿಸುತಾ
ಕಣ್ಣಳತೆಯ ಮೀರಿ ನೋಡಿತಾ
ನಿಂತಿರುವೆ ಇನಿದನಿಯೇ
ಏನಾಯಿತು ನಿನಗೆ
ಕೇಳಿಸಿದರೂ ನೀನು ಕಾಯಿಸುತಿರುವೆ ಯಾರನು ?

ಕುಹೂ ಕುಹೂ ಎಂದೆನಿಸುತಾ
ಮನದ ಎಲ್ಲೆ ಮೀರಿ ನಗುತಾ
ಕುಳಿತಿರವೆ ಇನಿದನಿಯೇ
ಏನಾಯಿತು ನಿನಗೆ
ಮನಸಿದ್ದರೂ ಅರಿಯರಲಾರೆಯಾ ನನ್ನನು ?

ಕುಹೂ ಕುಹೂ ಎಂದೆನಿಸುತಾ
ಜಗದ ಎಲ್ಲರ ಕರೆಯುತಾ
ಕರೆಯುತಿರುವೇ ಇನಿದನಿಯೇ
ಏನಾಯಿತು ನಿನಗೆ
ಜಗತ್ತಿಗೆ ನನ ಪ್ರೀತಿ ಕೇಳಿಸಿದರು ಕಾಣದಾಯ್ತೇ ಮನವನು ?

ಕುಹೂ ಕುಹೂ ಎಂದೆನಿಸುತಾ
ಮನಗೆದ್ದಯಲ್ಲೇ ನಲಿಯುತಾ
ಕರೆಯಿತಿರುವೇ ಇನಿದನಿಯೇ
ಏನಾಯಿತು ನಿನಗೆ
ಮನವ ಕದ್ದು ಕೊಂಡೊಯ್ದದ್ದೆಲ್ಲಿಗೆ ನನ್ನ ಪಾಡೇನು ?

25
ಆಕ್ಟೋ

ನಗುತಾ ನಗಸ್ತಾ ಬಾಳಿದವರು

ಕವಿತಾ ಆನಂದ ಹಳ್ಳಿ

ನಗುತಾ ನಗುತಾ  ಬಾಳು …
ನೀನು ನೂರು ವರ್ಷ…
ಹೌದು ರೀ ನಗುತಾ ನಗುತಾ ಇರಬೇಕು ಅವಾಗಲೇ ತಾನೆ ಜೀವನಾ ಸವಿ ಜೇನಿನ ಹಾಗೆ ಸಿಹಿಯಾಗಿರೂದು.
ಆದರೆ ಕೇವಲ ನಾವಷ್ಟೇ ನಗತಾ ಇದ್ದರೆ ಹೇಗೆ? ನಮ್ಮ ಜೊತೆ ಸುತ್ತಮುತ್ತಲಿನ ಜನರನ್ನು ನಗಸಿದರೆ ಅದಕ್ಕೆ ಒಂದು ಅರ್ಥ ಸಿಗತ್ತೆ ಅಲ್ವಾ?
ನಿಜಾ ಅನಸತ್ತೆ ಅಲ್ಲಾ? ನಿಜಾನೆ. ನಗುವಿನಿಂದ ನಮ್ಮ ಜೀವನಾ ಸ್ವಾರ್ಥಕತೆ ಕಂಡುಕೊಳ್ಳುತ್ತೆ. ಅದಕ್ಕೆ
ತನ್ನದೇ ಆದ ಒಂದು ಮೌಲ್ಯವಿದೆ. ಈ ನಗು ಬಗ್ಗೆ ನಗಸು ಬಗ್ಗೆ ಮಾತನಾಡುವಾಗ ಮನಸ್ಸಿನಲ್ಲಿ ಥಟ್ಟನೆ ಒಂದು ಚಿತ್ರಣ ಮೂಡುತ್ತದೆ, ಅದು ಯಾರದು ಅಂತ ಹೇಳಿ ನೋಡೋಣಾ?
ಯೋಚಿಸಿದ್ರರಾ?  ಗೊತ್ತಾಗಲ್ಲಿಲ್ವಾ ? ಅಯ್ಯೋ ಅದೇರಿ ಟಿವಿ ಯಲ್ಲಿ ತನ್ನ ವಾಕಿಂಗ್ ಸ್ಟೀಕ್ ಹಿಡಿದುಕೊಂಡು ಕಲಾತ್ಮಕವಾಗಿ ಆಡಿಸುತ್ತ ತನ್ನ ಮೆಣಸಿನಕಾ ಮೀಸೆ ಕುಣಿಸುತ್ತ ತಲೆಯ ಮೇಲಿನ ಹ್ಯಾಟ್ ಹಾರಿಸುತ್ತ ಕಪ್ಪು ಕೋರ್ಟನೊಂದಿಗೆ ಬರತ್ತಾರಲ್ಲ ಅವರೆ ರೀ ನಮ್ಮೆಲ್ಲರ ನೆಚ್ಚಿನ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ .
ಇವರೊಬ್ಬ ಮಹಾನ್  ಕಲಾವಿದ. ಜೀವನವನ್ನು ಸೀರಿಯಸ್ ಆಗಿ ತಗೆದುಕೊಳ್ಳದೇ ನಗುತಾ ನಗಸ್ತಾ ಕಾಲ ಕಳಿಯಬೇಕೆಂದು ತಿಳಿಸಿಕೊಟ್ಟ ಫಿಲಾಸಫರ್. ಮಕ್ಕಳ ಹಾಗೂ ದೊಡ್ಡವರ ರಿಯಲ್ ರೋಲ್ ಮಾಡೆಲ್ ಆದ ಇವರು ತಮ್ಮ ಹಾವ ಭಾವದಿಂದಲೇ ಎಲ್ಲರನ್ನು ನಗೆಯಲ್ಲಿ ತೇಲಿಸಿದ ಪುಣ್ಯಾತ. ಮತ್ತಷ್ಟು ಓದು »