ಜೀವನದ ಬಂಡಿ
ಗುಡಿಸಲೊಳಗೆ ಗಾಳಿ ಬೆಳಕಿನ ಸುದ್ದಿಯೇ ಇಲ್ಲ
ಚಿಗುರುವ ಕನಸುಗಳನ್ನು ಕೆದುಕುತಲಿ
ನಿತ್ಯದ ಕಾಯಕದಿ
ಪಾತ್ರೆಪಗಡೆಯ ತೊಳೆದು, ಕಸವನ್ನು ಗುಡಿಸಿ
ತೊಟ್ಟಿಲ ಕೂಸಿಗೆ
ಜೋಗುಳವಾ ಹಾಡಿ
ಬೀದಿಯಲ್ಲಾಡುವ ಮಕ್ಕಳನ್ನು ಕಂಡು
ಆ ಕಣ್ಣುಗಳು ಅರಳುತ್ತಿತ್ತು
ಶಾಲೆಯ ಮುಖ ಕಾಣದವಳು
ಕನಸು ಕಂಗಳು ನೋಡುತಿತ್ತು
ಭೂತ ಭವಿಷ್ಯದ ನಡುವೆ
ಜಗವು ನಗುತ್ತಿರಲು,
ಆಕೆ…ಗುಡಿಸಲೊಳಗೆ
ರೊಟ್ಟಿ ತಟ್ಟುವ ಸಂಭ್ರಮದಿ
ಮನಸ್ಸು ಆಗೊಮ್ಮೆ ಈಗೊಮ್ಮೆ ಕುಣಿಯುತಲಿತ್ತು
ಕಿಚ್ಚನ್ನು ಹಚ್ಚಿ ಮುಸುರೆ ತಿಕ್ಕುತಲಿ
ಮಾತು ಮಾತಿಗೂ
ಸಕ್ಕರೆಯ ನಗುವ ಚೆಲ್ಲುತ್ತಾಳೆ
ಅಡುಗೆ ಮನೆಯ ಪಾತ್ರೆ ಪಗಡೆಗಳೊಂದಿಗೆ
ನೆನಪುಗಳ ಈರುಳ್ಳಿ ಹಚ್ಚುತ್ತಾಳೆ ..!
ನವ ಕನಸುಗಳ ಹೊತ್ತ ಆ ಕಂಗಳು
ಬದುಕನ್ನು ಅಡವಿಟ್ಟು
ಜೀವನವೆಂಬ ಮೆರವಣಿಗೆಯಲ್ಲಿ
ದೇಹವೇ ಬರಡಾಗಿ
ಅಲೆಯುತಾ ಊರಿಂದ ಊರಿಗೆ
ದಾರಿ ಹಿಡಿಯುವವಳು
ಅದೇ ಆಕೆಯ ಬದುಕಿನ ಬಂಡಿ….!






karun kavite chennagide