ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 25, 2010

ನಗುತಾ ನಗಸ್ತಾ ಬಾಳಿದವರು

‍ನಿಲುಮೆ ಮೂಲಕ

ಕವಿತಾ ಆನಂದ ಹಳ್ಳಿ

ನಗುತಾ ನಗುತಾ  ಬಾಳು …
ನೀನು ನೂರು ವರ್ಷ…
ಹೌದು ರೀ ನಗುತಾ ನಗುತಾ ಇರಬೇಕು ಅವಾಗಲೇ ತಾನೆ ಜೀವನಾ ಸವಿ ಜೇನಿನ ಹಾಗೆ ಸಿಹಿಯಾಗಿರೂದು.
ಆದರೆ ಕೇವಲ ನಾವಷ್ಟೇ ನಗತಾ ಇದ್ದರೆ ಹೇಗೆ? ನಮ್ಮ ಜೊತೆ ಸುತ್ತಮುತ್ತಲಿನ ಜನರನ್ನು ನಗಸಿದರೆ ಅದಕ್ಕೆ ಒಂದು ಅರ್ಥ ಸಿಗತ್ತೆ ಅಲ್ವಾ?
ನಿಜಾ ಅನಸತ್ತೆ ಅಲ್ಲಾ? ನಿಜಾನೆ. ನಗುವಿನಿಂದ ನಮ್ಮ ಜೀವನಾ ಸ್ವಾರ್ಥಕತೆ ಕಂಡುಕೊಳ್ಳುತ್ತೆ. ಅದಕ್ಕೆ
ತನ್ನದೇ ಆದ ಒಂದು ಮೌಲ್ಯವಿದೆ. ಈ ನಗು ಬಗ್ಗೆ ನಗಸು ಬಗ್ಗೆ ಮಾತನಾಡುವಾಗ ಮನಸ್ಸಿನಲ್ಲಿ ಥಟ್ಟನೆ ಒಂದು ಚಿತ್ರಣ ಮೂಡುತ್ತದೆ, ಅದು ಯಾರದು ಅಂತ ಹೇಳಿ ನೋಡೋಣಾ?
ಯೋಚಿಸಿದ್ರರಾ?  ಗೊತ್ತಾಗಲ್ಲಿಲ್ವಾ ? ಅಯ್ಯೋ ಅದೇರಿ ಟಿವಿ ಯಲ್ಲಿ ತನ್ನ ವಾಕಿಂಗ್ ಸ್ಟೀಕ್ ಹಿಡಿದುಕೊಂಡು ಕಲಾತ್ಮಕವಾಗಿ ಆಡಿಸುತ್ತ ತನ್ನ ಮೆಣಸಿನಕಾ ಮೀಸೆ ಕುಣಿಸುತ್ತ ತಲೆಯ ಮೇಲಿನ ಹ್ಯಾಟ್ ಹಾರಿಸುತ್ತ ಕಪ್ಪು ಕೋರ್ಟನೊಂದಿಗೆ ಬರತ್ತಾರಲ್ಲ ಅವರೆ ರೀ ನಮ್ಮೆಲ್ಲರ ನೆಚ್ಚಿನ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ .
ಇವರೊಬ್ಬ ಮಹಾನ್  ಕಲಾವಿದ. ಜೀವನವನ್ನು ಸೀರಿಯಸ್ ಆಗಿ ತಗೆದುಕೊಳ್ಳದೇ ನಗುತಾ ನಗಸ್ತಾ ಕಾಲ ಕಳಿಯಬೇಕೆಂದು ತಿಳಿಸಿಕೊಟ್ಟ ಫಿಲಾಸಫರ್. ಮಕ್ಕಳ ಹಾಗೂ ದೊಡ್ಡವರ ರಿಯಲ್ ರೋಲ್ ಮಾಡೆಲ್ ಆದ ಇವರು ತಮ್ಮ ಹಾವ ಭಾವದಿಂದಲೇ ಎಲ್ಲರನ್ನು ನಗೆಯಲ್ಲಿ ತೇಲಿಸಿದ ಪುಣ್ಯಾತ.
ಚಾಪ್ಲಿನ ತನ್ನಲ್ಲಿಯೇ  ಒಂದು ಹಾಸ್ಯವನ್ನು ಹುಟ್ಟಿಸುತ್ತಾರೆ. ಎಲ್ಲರಲ್ಲಿ ನಗೆಯ ಕಡಲನ್ನು ಕೆರಳಿಸುತ್ತಾರೆ. ನಗಿಸುತ್ತಾ ನಗಿಸುತ್ತಾ ಕೊನೆಯಲ್ಲಿ ಜೀವನದ ನೈಜ ಸ್ಥಿತಿಯನ್ನು ತೋರಿಸುತ್ತಾರೆ. ಇವರು ನಿರ್ವ”ಸಿದ ಪಾತ್ರಗಳೆ ಅಂತಹವು. ಬಡತನದ ಬೆಗೆಯಲ್ಲಿ ಬೆಂದ ಹಾಗೂ ಕಣ್ಣಿರಿನ ಕಥೆಯ ಚಿತ್ರಗಳು.
ಗೋಲ್ಡ ರಶ್ ಚಿತ್ರದಲ್ಲಿ  ಹಸಿವಿನಿಂದ ಬಳಲಿ ಕೊನೆಗೆ ತನ್ನ ಶೂ ಬೇಸಿ ತಿಂದು ಬಡತನದ ತೀವ್ರ್ತೆಯನ್ನು ನಗುತ್ತಲೇ ತಿಳಿಸಿಕೊಟ್ಟ ಚಾಪ್ಲಿನ ನಿಜವಾಗ್ಲು ಗ್ರೇಟ್ ಅನಸ್ತಾರೆ.
ನಗಿಸಿದವೆ  ಬಯೊಡಟಾ
ಇವರ ಅಮ್ಮ ಹೆನ್ನಾ ಹಾಲ್ ಹಾಡುಗಾರ್ತಿ. ಇವರು ವೇದಿಕೆಗಳ ಮೇಲೆ ಹಾಡಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದರು. ಒಂದು ದಿನ ಇವರು ವೇದಿಕೆ ಮೇಲೆ ಹಾಡುತ್ತಿದ್ದಾಗ ಅವರ ಧ್ವನಿ ಅರ್ಧಕ್ಕೆ ನಿಂತು ಹೋತು. ಎಷ್ಟು ಪ್ರಯತ್ನಿಸಿದರೂ ಅವರ ಧ್ವನಿಯೆ ಬರಲಿಲಾ. ಆ ಕ್ಷಣ ಏನು ಮಾಡುಬೇಕು ಎಂದು ತಿಳಿಯಲಾಗದೇ ಪರದಾಡುತ್ತಿದ್ದಾಗ ಅವರ ಹತ್ತಿರ ನಿಂತಿದ್ದ ೫ ವರ್ಷ ವಯಸ್ಸಿನ ಮಗ ಚಾಪ್ಲಿನ್ ತಕ್ಷಣ ತನ್ನ ತಾ ಅರ್ಧಕ್ಕೆ ನಿಲಿಸಿದ್ದ ಹಾಡನ್ನು ಪೂರ್ತಿಯಾಗಿ ಹಾಡಿ ಮುಗಿಸಿ ಎಲ್ಲರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡ, ಇವರೇ ಮುಂದೆ ಖ್ಯಾತ ಹಾಸ್ಯ ನಟನಾಗಿ ತುಂಬಾ ಹೆಸರು ಗಳಿಸಿದರು.
ಇವರು ೪ ಜನ ಹೆಂಡತಿಯರ  ಸರದಾರ. ತಮ್ಮ ೩ ಜನ ಹೆಂಡತಿಯರ ಜೊತೆ ವಿಚ್ಚೇದನ ಪಡೆದಿದ್ದರು. ೯ ಜನ ಮಕ್ಕಳ ತಂದೆಯಾಗಿದ್ದ ಇವರು ತಮ್ಮ ಜೀವನದ ಕೊನೆಯ ಗಳಿಗೆಯಲ್ಲಿ ೪ ಹೆಂಡತಿ ಊನಾ ಜೊತೆ ಕಾಲ ಕಳೆದರು.
ನಟಿಸಿದ ಚಿತ್ರಗಳು
ಇವರು ನಡಿಸಿದ ಪ್ರಥಮ ಚಿತ್ರ ಮೇಕಿಂಗ್ ಆಫ್ ಲೀವಿಂಗ್. ನಂತರ ಬಂದಿದ್ದು ದಿ ಟ್ರಾಂಫ್. ೧೯೩೫ ರಲ್ಲಿ ಬಿಡುಗಡೆಯಾದ ಸಿಟಿ ಲೈಟ್ಸ. ಚಾರ್ಲಿ ಚಾಪ್ಲಿನ ನಿರ್ದೇಸಿಶಿದ ಮೊದಲ ಮೂಕಿ ಚಿತ್ರ ಗ್ರೇಟ್ ಡಿಕ್ಟೇಟರ್. ಆಮೇಲೆ ಒಂದರ ನಂತರ ಒಂದು ಚಿತ್ರಗಳು ಸಾಲಾಗಿ ತೆರೆಕಂಡವು. ಮಾಡರ್ನ್ ಟೈಂ. ಗೋಲ್ಡ ರಶ್ . ಇವರ ಕೊನೆಯ ಚಿತ್ರ ಎ ಕೌಂಟಲೇಸ್ ಫ್ರಾಂ ಹಾಂಗ ಕಾಂಗ.
ಇವರು ಕೇವಲ ನಟನೆಯನ್ನು  ಮಾಡದೇ ಅದರ ಜೊತೆ ಚಿತ್ರಗಳನ್ನು ನಿರ್ದೇಶಿಸಿದರು. ಮುಂದೆ ಕಥೆಗಾರ, ನಿರ್ಮಾಪಕ, ನಿರ್ದೆಶಕ, ಸಂಗೀತ ನಿರ್ದೆಶಕರಾಗಿ ತಮ್ಮ ಜೀವನವನ್ನು ವಿವಿಧ ಬಗೆಯ ಪಾತ್ರಗಳಾಗಿ ನಿರ್ಮಿಸಿ ಯಶಸ್ವಿ ಪಯಣ ದತ್ತ ಸಾಗಿದರು.
ನನ್ನನ್ನು ಅಳಿಸಿದ ಜಗತ್ತನ್ನು ನಾನು ನಗಿಸುತ್ತೇನೆ. ನಾನು ಅಳುವುದಾದರೆ ಮಳೆಯಲ್ಲಿಯೇ ಅಳುತ್ತೇನೆ ಏಕೆಂದರೆ ನಾನು ಅತ್ತದ್ದು ಯಾರಿಗೂ ಗೊತ್ತಾಗ ಬಾರದು ಎಂದು ಹೇಳುತ್ತಿದ್ದ ಚಾಪ್ಲಿನ ೧೯೭೭ ಡಿಸೆಂಬರ್ ೧೫ ರಂದು
ಸ್ವಿಡ್ಜರ್‌ಲ್ಯಾಂಡ್ನಲ್ಲಿ ದೂರದ ಲೋಕಕ್ಕೆ ನಮ್ಮನೆಲ್ಲಾ ಬಿಟ್ಟು ನಗುತ್ತಲೆ ಹೋದರು.
ಚಾರ್ಲಿ ಚಾಪ್ಲಿನ ಈ ಲೋಕ  ತ್ಯಜಿಸಿ ಒರೋಬ್ಬರಿ ೩೨ ವರ್ಷಗಳು ಸಂದಿವೆ. ಆದರೂ ಕೂಡ ಅವರು ಕಲಿಸಿ ಕೊಟ್ಟ ನಗೆಯ ಮೌಲ್ಯಗಳು ಇಂದಿಗೂ ನಮ್ಮಲ್ಲಿ ಅಳಸದೆ ಜೀವಂತವಾಗಿ ಉಳಿದಿವೆ.
ಅಯ್ಯೋ ಸಾರಿ ರೀ ಇದು   ಟ್ರ್ಯಾಜಡಿ ಸ್ಟೋರಿ ಅಂತಾ ಬೇಜಾರಾಯ್ತಾ? ಇದನೆಲ್ಲಾ ಕೇಳಿ ಅವರ ನೆನಪಾಯ್ತಾ?
ಹಾಗಾದ್ರೆ ಅಲ್ಲಿ ನೋಡ್ರೀ ಯಾರೋ ನಿಮ್ಮ ಟಿವಿಯಲ್ಲಿ ಹಳೆಯ ಕಪ್ಪು ಕೊರ್ಟ ಅದಕ್ಕೊಂದು ಜೋತು ಬಿದ್ದ ಯಾವುದೋ ಕಾಲದ ಪ್ಯಾಂಟು, ತಲೆಯ ಮೇಲೆ ಕುಣಿಯುವ ಟೋಪಿ ಕೈಯಲ್ಲಿ ತಿರಗತ್ತಾ ಇರೋ ವಾಕಿಂಗ್ ಸ್ಟೀಕ ಮೂಗಿನ ಕೆಳಗೆ ಚಿಕ್ಕದಾದ ಮೀಸೆಯ ಚಾರ್ಲಿ ಚಾಪ್ಲಿನ ಪ್ರತ್ಯಕ್ಷವಾಗಿದ್ದಾರೆ ನಗತಾ ಇದ್ದಿರಾ ನನಗೆ ಗೊತ್ತು ರೀ ನೀವೆಲ್ಲಾ ನಗತಾ ಇದ್ದಿರಾ ಅಂತ.
ಇದೇ ರೀ ಒಳ್ಳೆ ಮಾರ್ಗ ಅವರನ್ನು ನೆನಸಿ ಅವರ ಜೀವನದ  ಮೌಲ್ಯಗಳನ್ನು ಅಮ್ಮಲ್ಲಿ ಅಳವಡಿಸಿಕೊಂಡು  ಬಿಂದಾಸ ಆಗಿ ನಗತಾ ಜೀವನಾ ಮಾಡೋದು. ಈ ಮೂಲಕ ಅವರಿಗೆ ನಾವು ಗೌರವ ಸಲ್ಲಿಸಿ ಹಾಗೇ ಅಗುತ್ತೆ. ಅವರು ಇಲ್ಲದಿದ್ದರೆ ಏನುತು ಅವರ ನಗು ಅವರ ನೆನಪುಗಳು ನಮ್ಮ ಜೊತೆ ಸದಾ ಇರುತ್ತವೆ, ಇದಕ್ಕೆ ನೀವು ಏನ್ ಅಂತೀರಿ?
ಚಿತ್ರಕೃಪೆ: ಗೂಗಲ್ ಇಮೇಜ್

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments