ವಿಷಯದ ವಿವರಗಳಿಗೆ ದಾಟಿರಿ

Archive for

26
ಆಕ್ಟೋ

‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !?

ರಾಕೇಶ್ ಶೆಟ್ಟಿ

ಶೀರ್ಷಿಕೆ ನೋಡಿ ಬಹಳಷ್ಟು ಮಂದಿಗೆ ನಗು ಬಂದಿರುತ್ತೆ,ಫೋಟೋ ನೋಡಿ ಇನ್ನ ನಗು ಬಂದು,ಈ ಹುಡ್ಗನಿಗೆ ಹುಚ್ಚು,ಅಹಂ ಅಥವಾ ತಿರುಕನ ಕನಸು ಅನ್ನಿಸಿರುತ್ತೆ ಅಲ್ವಾ? ಅನ್ನಿಸೊದು ಸಹಜ ಬಿಡಿ.ಆ ತರ ಅನ್ನಿಸೋದೊರೆಲ್ಲ ಅದನ್ನ ಈ ರೀತಿ ಓದ್ಕೊಳ್ಳಿ (ರಾಕೇಶ್ ಶೆಟ್ಟಿ= ಭಾರತದ ಸಾಮನ್ಯ ಪ್ರಜೆ.ಇಲ್ಲಿ ನನ್ನ ಹೆಸರು ಕಿತ್ತಾಕಿ ನಿಮ್ದೆ ಹಾಕೊಂಡು ಓದಿ,ನಾನೇನು ಪಿ.ಎಂ ಸೀಟಿಗಾಗಿ ಕಾಯ್ತಿಲ್ಲವಾದ್ದರಿಂದ ಖಂಡಿತ ಬೇಜಾರ್ ಮಾಡ್ಕೊಳ್ಳೋದಿಲ್ಲ ;) )

ಸರಿ.ನಾನ್ ಪಿ.ಎಂ ಆಗ್ಬಹುದಾ? ಯಾಕ್ ಆಗಲ್ಲ, ಎಷ್ಟಾದ್ರೂ ನಮ್ದು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲೊಂದು.ಇಲ್ಲಿ ಅರ್ಹತೆಯಿರುವ ಯಾವುದಾದರು ಸಾಮನ್ಯ ಪ್ರಜೆ ಪಿ.ಎಂ ಆಗಬಹುದು ಬಿಡಪ್ಪ ಅಂತ ನೀವ್ಯಾರು ಹೇಳೋದಿಲ್ಲ.  ಹೇಳೋಕೆ ಸಾಧ್ಯಾನೆ ಇಲ್ಲ ಬಿಡಿ.ಈ ದೇಶದಲ್ಲಿ ಸದ್ಯ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರೋದು ’ವಂಶ ಪ್ರಭುತ್ವ’ ಸದ್ಯಕ್ಕೆ ಈ ವಿಷಯದಲ್ಲಿ ಲೆಫ್ಟ್ ಪಾರ್ಟಿ ಅವ್ರು ಮಾತ್ರ ರೈಟ್ ಆಗಿದ್ದಾರೆ.ಉಳಿದಂತೆ ರೈಟ್ ಪಾರ್ಟಿಗಳು ಲೆಫ್ಟ್ ಆಗ್ಬಿಟ್ಟಿವೆ.ಇನ್ನ ೧೨೫ ವರ್ಷಗಳ ಇತಿಹಾಸ ಹೊಂದಿರೋ ಈ ದೇಶದ ರಾಷ್ಟ್ರೀಯ ಪಕ್ಷದ ಕತೆ ಕೇಳೋದೇ ಬೇಡ ಬಿಡಿ.ಇನ್ನ ೧೨೫ ವರ್ಷಗಳ ಇತಿಹಾಸ ಹೊಂದಿರೋ ಈ ದೇಶದ ರಾಷ್ಟ್ರೀಯ ಪಕ್ಷದ ಕತೆ ಕೇಳೋದೇ ಬೇಡ ಬಿಡಿ.ಸ್ವತಃ ಗಾಂಧೀ ತಾತನೆ ಅಪ್ಪ (ಮೋತಿಲಾಲ್ ನೆಹರು) ಕೂತಿದ್ದ್ (ನೆಟ್ಟಿದ್ ಅಲ್ಲ ;) ) ಮನೆ ಒಳ್ಗೆ ನೀನ್ ಕೂತ್ಕೊ ಬಾ ಅಂತ ಮಗನ (ಚಾಚ ನೆಹರು) ಕರ್ಕೊಂಡು ಬಂದು ವಂಶ ವೃಕ್ಷ ನೆಟ್ಟು ಹೋದ್ರು.ಆ ವೃಕ್ಷ ಇವತ್ತಿಗೆ ಅದ್ಯಾವ ಪರಿ ಗಟ್ಟಿಯಾಗಿ ಬೆಳೆದು ನಿಂತಿದೆ ಅಂದ್ರೆ ೧೨೫ ವರ್ಷಗಳ ಪುರಾತನ ಮನೆಯ ಬುಡ ಅಲುಗಾಡಿ ಬಕ್ಕಾ ಬೋರಲು ಬಿದ್ದು ‘ ಆ ವಂಶ’ದ ಪಾಲಾಗಿದೆ.. ಮತ್ತಷ್ಟು ಓದು »