ಪ್ರಾಮಾಣಿಕ ಐಎಎಸ್ ಅಧಿಕಾರಿ ವಿ.ಪೊನ್ನುರಾಜ್ ಅವರಿಗೊಂದು ಶುಭವಿದಾಯ
ಕರುಣಾಕರ ಬಳ್ಕೂರು
ದಕ್ಷಿಣಕನ್ನಡದ 120ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು, ಜಿಲ್ಲೆಯ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ ಅಂದಿನಿಂದಲೇ ಮಾದರಿ ಜಿಲ್ಲೆಯನ್ನಾಗಿಸುವ ಕನಸುನ್ನು ಕಂಡವರು ನೀವು, ಅಷ್ಟೇ ಅಲ್ಲ ಆ ಕನಸುನ್ನು ನನಸಾಗಿರುವ ಕೀರ್ತಿಯೂ ನಿಮ್ಮದು.
ಅಧಿಕಾರ ಸ್ವೀಕರಿಸುವಾಗ ದಿನದಿಂದ ನುಡಿದಂತೆ ನಡೆದವರು, ಆ ಮುಖೇನ ದಕ್ಷ, ಪ್ರಾಮಾಣಿಕ ಎನ್ನುವ ಹೆಸರುಗಳು ನಿಮ್ಮಪಾಲಿಗಾಯಿತು. ಕಾರ್ಯ ವೈಖರಿಯಲ್ಲಿ ಸೋಲದೆ ಇಡೀ ಜಿಲ್ಲಾಡಳಿತದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದೀರಿ. ಕಾರ್ಯ ನಿವರ್ಹಹಿಸುವಾಗ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನೇರ, ದಿಟ್ಟವಾಗಿ ಎದುರಿಸಿದವರು. ಅಕ್ರಮ ಮರಳುಗಾರಿಕೆ ವಿರುದ್ಧ ನಿಯಂತ್ರಣಕ್ಕೆ ಲಾರಿಗಳಿಗೆ ಜಿಪಿಎಸ್ ಯಂತ್ರ ಅಳವಡಿಕೆ, ನಗರದ ಪ್ರಮುಖ ರಸ್ತೆಗಳು ಸೇರಿದಂತೆ, ವಿಟ್ಲ, ಬಿ.ಸಿ ರೋಡ್ ವಿಸ್ತರಣೆ, ಸಂಸದರ/ಶಾಸಕರ ಪ್ರದೇಶಾಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಕಡಿವಾಣ, ಕಳಪೆ ಕಾಮಗಾರಿಯ ಹಣ ಬಾಕಿ ಹೀಗೆ ಅಭಿವೃದ್ಧಿಗೆ ಹಿನ್ನಡೆ ಉಂಟಾದಲ್ಲಿ ಸರ್ಜರಿ ಮಾಡಿ ಕೆಲವರ ನಿದ್ದೆಯನ್ನು ಕೆಡಿಸಿದ್ದೀರಿ. ಇದು ನಿಮ್ಮ ಕಾರ್ಯದಕ್ಷತೆಯ ಹೆಚ್ಚುಗಾರಿಕೆಯೆಂದು ಕರೆಯಬೇಕು. ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ಪೂರ್ಣ ಖಾರಿ ಪಡಿಸಿಕೊಳ್ಳದೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೇ ಇರುವುದು, ವಿವಿಧ ಇಲಾಖೆಗಳ ಸಂಪೂರ್ಣ ಗಣಕೀರಣ ಸೇರಿದಂತೆ ಜಿಲ್ಲಾಡಳಿತಕ್ಕೆ ವಿನೂತನವಾಗಿ ತನ್ನ ಕಾರ್ಯ ವೈಖರಿಯ ಮೂಲಕ ಸಾಧಿಸಿ ತೋರಿಸಿದ್ದರ ಫಲವೆಂಬಂತೆ ಸರಕಾರದಿಂದ ಬಹುಮಾನವಾಗಿ ಅವರನ್ನು ವರ್ಗಾವಣೆ ಮಾಡಿರುವುದು ದುರಂತವೇ ಸರಿ. ಎಷ್ಟರ ಮಟ್ಟಿಗೆ ಸರಿ ಎನ್ನುವ ಬಗ್ಗೆ ಜನಪ್ರತಿನಿಧಿಗಳು ಜನತೆಗೆ ಉತ್ತರ ಕೊಡಬೇಕಾಗಿದೆ?. ಮತ್ತಷ್ಟು ಓದು 
ಭಾವನೆಗಳಿಗೆ ಪೆಟ್ಟು ಕೊಟ್ಟು ನೀ ಯಾಕೆ ದೂರಾದೆ ?
ಜಗನ್ನಾಥ್ ಶಿರ್ಲಾಲ್
“ನನಗೆ ನೀನಂದರೆ ತುಂಬಾ ಇಷ್ಟ, ನನಗೆ ನೀನೆ ಬೇಕು ನಿನ್ನಲ್ಲಿ ತುಂಬಾ ಮಾತಾಡಬೇಕು, ನೀನು ಎಲ್ಲೇ ಇದ್ದರೂ ನಾನಲ್ಲೇ ಇರುವೆ, ನಿನ್ನಲ್ಲಿ ಮಾತಾಡದೆ ಒಂದು ಕ್ಷಣವೂ ಇರಲಾರೆ, ನಿನ್ನ ಧ್ವನಿಯನ್ನು ಕೇಳದ ನನ್ನ ಕಿವಿಯು ಬೇರೇನನ್ನು ಆಲಿಸಲ್ಲ ನಿನ್ನ ನೋಡದೆ ನನ್ನ ಕಣ್ಣಿಗೂ ನಿದ್ದೆ ಬರಲ್ಲಾ, ನೀನಂದರೆ ಪ್ರಾಣ, ಹೃದಯದ ಬಡಿತ ” ಎನ್ನುತ್ತಿದ್ದ ನೀನು ಯಾಕೆ ನನ್ನ ಬಿಟ್ಟು ದೂರಾದೆ ?
ಗೆಳೆತಿ ನಾವಿಬ್ಬರು ಆಪ್ತರಾದ ಸಂದರ್ಭ ನೆನಪಿದೆಯ ? ಕಾಲೇಜಿನ ಆ ಮೊದಲ ದಿನ ಹೊಸ ಮುಖಗಳ ಪರಿಚಯದ ಕುತೂಹಲ, ಅನಿರೀಕ್ಸಿತವಾಗಿ ಪಿಳಿಪಿಳಿ ನೋಡ್ದುತ್ತಿದ್ದ ಕಣ್ಣುಗಳು ಅದೇನೋ ಮೋಡಿ ಮಾಡಿದವೋ ನನ್ನನೆ ತಟ್ಟನೆ ನೋಡುವ ನಾಚಿಕೆಯಿಂದ ತಿರುಗುತ್ತಿದ ನೀನು, ಮೊದಮೊದಲು ಪರಸ್ಪರ ಕಣ್ಣಲ್ಲಿ ಕಣ್ಣು ಇಟ್ಟು ನೋಡದೆ ಮಾತಾಡುವ ನಿನ್ನ ಅ ಮಾತುಗಳಿಂದ ನಮ್ಮಿಬ್ಬರನ್ನು ಸೇಹಿತರನ್ನಗಿಸಿದವು. ಪ್ರೀತಿ ಏನೆಂಬುದು ತಿಳಿಯದ ನಮಗೆ, ನಾವು ಕಂಡುಕೊಂಡ ಪ್ರೀತಿ ಬಾವನೆಯ ಮಾತೆ ಪ್ರೀತಿ. ಪ್ರೀತಿ ಹೇಗಿರಬೇಕೆಂದು ತೋರಿಸಿಕೊಟ್ಟ ನಾವು ಹಲವಾರು ನೋವುಗಳನ್ನು ಎದುರಿಸಿದರು ನಾವಿಬ್ಬರು ನೈಜ ಸ್ನಹಿತರಾಗಿದ್ದೆವು . ಸಮಾಜದ ಎಲ್ಲರೆದುರು ನಮ್ಮ ನಡೆ ನುಡಿಗಳನ್ನು ತೋರ್ಪಡಿಸಿ ಕೆಲವೊಬ್ಬರ ಕುರುಡು ಕಣ್ಣಿಗೆ ಮತ್ಸರ ಮಾಡಿದೆವು. ನಮ್ಮಿಬ್ಬರಲ್ಲಿ ಎಷ್ಟೇ ಜಗಳ , ಕೋಪ ತಾಪಗಳಿದ್ದರು ಕ್ಷಣ ಮಾತ್ರದಲ್ಲಿ ಕರಗಿ ಹೋಗಿ ಮನಸಿನೊಡನೆ ಮಾತಾಡುತ್ತಿದ್ದೆವು. ನನ್ನ ಪ್ರತಿ ಉಸಿರಿನಲ್ಲೂ ನಿನ್ನ ನಾಮಂಕುರವಾಗುತ್ತಿತು, ನನ್ನ ಕನಸು ಮನಸಿನಲ್ಲು ನಿನ್ನದೇ ಚಿತ್ರ ಮೂಡುತ್ತಿತ್ತು. ನಾನು ಭಾವನಾತ್ಮಕ ಜೀವಿಯದೆ. ನಿನಗೆ ನೋವಾದರೆ ನನಗು ಸಂಕಟವಾಗುತ್ತಿತು. ಮೌನವಾಗಿರುತಿದ್ದ ನಮ್ಮ ಮನಸುಗಳು ಅಂತರಾಳದಲ್ಲಿ ಮಾತಾಡಿಕೊಲ್ಲುತಿದ್ದವು. ನಾನು ನಿನ್ನನು ತುಂಬಾ ಇಷ್ಟ ಪಡುತಿದ್ದೆ. ಆದರೆ ಇದ್ದಕಿದ್ದ ಹಾಗೆ ನಿನ್ನ ಮನಸ್ಸು ಯಾಕೆ ಬದಲಾಯಿತು? ಯಾಕೆ ಮಾತು ನಿಲ್ಲಿಸಿಬಿಟ್ಟೆ? ನನ್ನ ಮುಖವನ್ನೇ ನೋಡಲು ತಪ್ಪಿಸಿದೆ. ನಾವಿಬ್ಬರು ದೂರ ಇದ್ದ ಕಾರಣ ನನ್ನ ದೂರವಾಣಿ ಕರೆಯನ್ನು ಸ್ವಿಕರಿಸದೇ ನಿರ್ಲಕ್ಸಿದಲ್ಲದೆ… ದ್ವೇಷಿಸಿದೆ…. ಮತ್ತಷ್ಟು ಓದು 
‘ಪುರಭವನದಲ್ಲಿ ಪ್ರೇಕ್ಷಕನಿಗೆ ರಸದೌತಣ, ನಿರುಪಮಾ ರಾಜೇಂದ್ರಾ ಅವರ ಕಥಕ್ ನೃತ್ಯ’
ಕರುಣಾಕರ ಬಳ್ಕೂರು
ಭರತ ಭೂಮಿಯಲ್ಲಿ ಭಾರತೀಯ ಸಂಸ್ಕೃತಿಗೆ ತನ್ನದೇ ಆದ ವಿಶೇಷತೆಯಿದೆ. ಕಲೆ, ಸಾಹಿತ್ಯ, ಅಭಿನಯ, ನೃತ್ಯ, ಸಂಗೀತ ಹೀಗೆ ಎಲ್ಲವು ಮೆಳೈಯಿಸಿದಾಗ ಸುಂದರ ಲೋಕವೊಂದು ಸೃಷ್ಟಿಯಾಗುವುದರಲ್ಲಿ ಎರಡು ಮಾತಿಲ್ಲ. ರಾಜರ ಆಳ್ವಿಕೆಯಲ್ಲಿ ಕಲೆಗೂ ರಾಜರ ಆಸ್ಥಾನದಲ್ಲಿ ರಾಜನ ಪ್ರೋತ್ಸಾಹದೊಂದಿಗೆ ಬಂದಿರವುದನ್ನು ಕಾಣಬಹುದು. ರಾಜರುಗಳನ್ನು ಮೆಚ್ಚಿಸಲು ಮೇಧಾವಿ, ವಿದ್ವುತ್‌ಗಳನ್ನು ಹೋಂದಿರುವ ಕಲಾವಿದರು ತಮ್ಮ ಕಲಾ ಪ್ರೌಡುಮೆಯನ್ನು ತೋರಿಸುತ್ತಿದ್ದರು. ಭಾರತಿಯ ರಾಜರುಗಳು ಕಲೆಗೆ ನೀಡಿದಷ್ಟೇ ಪ್ರಾಶಸ್ತ್ಯವನ್ನು ಮುಸ್ಲಿಂ ಅರಸುರುಗಳು ನಿಡಿದ್ದಾರೆ. ಮುಸ್ಲಿಂ ಆಳ್ವಿಕೆಯಲ್ಲಿ ಆಸ್ಥಾನದಲ್ಲಿ ತಬಲಗಾರರ ಬಡಿತಕ್ಕೆ ನೃತ್ಯ ಮಾಡುವ ಕಲಾವಿದರು ಇದ್ದರು. ಇರ್ವರ ನಡುವೆಯೂ ಸ್ವರ್ಧೆ ಮಾತ್ರ ಪ್ರಬಲವಾಗಿತು. ಅಲ್ಲಿ ನೊಡುವವರಿಗೆ ಒಂದು ಸುಂದರ ಕಲೆಯನ್ನು ಆಸಾಧ್ವಿಸುವ ಕ್ಷಣ ಅರದಾಗಿತು. ಇಂದು ಕಲೆಗೆ ಯಾವುದೇ ಪ್ರೋತ್ಸಾಹವು ಇಲ್ಲದಿದ್ದರೂ ನಮ್ಮ ನಾಡಿನಲ್ಲಿ ಅದ್ಭುತ ಕಲಾ ತಂಡಗಳು ಇವೆ. ಬನ್ನಿ ಸಂಗೀತ ಭಾರತಿ ಪ್ರತಿಷ್ಠಾನ ಸಂಯೋಜಿಸಿರುವ ಎಂಆರ್‌ಪಿಎಲ್ ‘ನೂಪುರ ನಿನಾದ’ ಕಾರ್ಯಕ್ರಮ ನೀಡಲು ಬೆಂಗಳೂರಿನ ನಿರುಪಮಾ ಮತ್ತು ರಾಜೇಂದ್ರಾ ಮಂಗಳೂರಿಗೆ ಆಗಮಿಸಿದಾಗ ತೆರೆದಿಟ್ಟ ಮನದಾಳದ ಮಾತುಗಳು ನಿಮಗಾಗಿ.. ಮತ್ತಷ್ಟು ಓದು 





