ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 28, 2010

ಪ್ರಾಮಾಣಿಕ ಐಎಎಸ್ ಅಧಿಕಾರಿ ವಿ.ಪೊನ್ನುರಾಜ್ ಅವರಿಗೊಂದು ಶುಭವಿದಾಯ

‍ನಿಲುಮೆ ಮೂಲಕ

ಕರುಣಾಕರ ಬಳ್ಕೂರು

ಸರ್,

ದಕ್ಷಿಣಕನ್ನಡದ 120ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು, ಜಿಲ್ಲೆಯ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ ಅಂದಿನಿಂದಲೇ ಮಾದರಿ ಜಿಲ್ಲೆಯನ್ನಾಗಿಸುವ ಕನಸುನ್ನು ಕಂಡವರು ನೀವು, ಅಷ್ಟೇ ಅಲ್ಲ ಆ ಕನಸುನ್ನು ನನಸಾಗಿರುವ ಕೀರ್ತಿಯೂ ನಿಮ್ಮದು.

ಅಧಿಕಾರ ಸ್ವೀಕರಿಸುವಾಗ ದಿನದಿಂದ ನುಡಿದಂತೆ ನಡೆದವರು, ಆ ಮುಖೇನ ದಕ್ಷ, ಪ್ರಾಮಾಣಿಕ ಎನ್ನುವ ಹೆಸರುಗಳು ನಿಮ್ಮಪಾಲಿಗಾಯಿತು. ಕಾರ್ಯ ವೈಖರಿಯಲ್ಲಿ ಸೋಲದೆ ಇಡೀ ಜಿಲ್ಲಾಡಳಿತದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದೀರಿ. ಕಾರ್ಯ ನಿವರ್ಹಹಿಸುವಾಗ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನೇರ, ದಿಟ್ಟವಾಗಿ ಎದುರಿಸಿದವರು. ಅಕ್ರಮ ಮರಳುಗಾರಿಕೆ ವಿರುದ್ಧ ನಿಯಂತ್ರಣಕ್ಕೆ ಲಾರಿಗಳಿಗೆ ಜಿಪಿಎಸ್ ಯಂತ್ರ ಅಳವಡಿಕೆ, ನಗರದ ಪ್ರಮುಖ ರಸ್ತೆಗಳು ಸೇರಿದಂತೆ, ವಿಟ್ಲ, ಬಿ.ಸಿ ರೋಡ್ ವಿಸ್ತರಣೆ, ಸಂಸದರ/ಶಾಸಕರ ಪ್ರದೇಶಾಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಕಡಿವಾಣ, ಕಳಪೆ ಕಾಮಗಾರಿಯ ಹಣ ಬಾಕಿ ಹೀಗೆ ಅಭಿವೃದ್ಧಿಗೆ ಹಿನ್ನಡೆ ಉಂಟಾದಲ್ಲಿ ಸರ್ಜರಿ ಮಾಡಿ ಕೆಲವರ ನಿದ್ದೆಯನ್ನು ಕೆಡಿಸಿದ್ದೀರಿ. ಇದು ನಿಮ್ಮ ಕಾರ್ಯದಕ್ಷತೆಯ ಹೆಚ್ಚುಗಾರಿಕೆಯೆಂದು ಕರೆಯಬೇಕು. ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ಪೂರ್ಣ ಖಾರಿ ಪಡಿಸಿಕೊಳ್ಳದೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೇ ಇರುವುದು, ವಿವಿಧ ಇಲಾಖೆಗಳ ಸಂಪೂರ್ಣ ಗಣಕೀರಣ ಸೇರಿದಂತೆ ಜಿಲ್ಲಾಡಳಿತಕ್ಕೆ ವಿನೂತನವಾಗಿ ತನ್ನ ಕಾರ್ಯ ವೈಖರಿಯ ಮೂಲಕ ಸಾಧಿಸಿ ತೋರಿಸಿದ್ದರ ಫಲವೆಂಬಂತೆ ಸರಕಾರದಿಂದ ಬಹುಮಾನವಾಗಿ ಅವರನ್ನು ವರ್ಗಾವಣೆ ಮಾಡಿರುವುದು ದುರಂತವೇ ಸರಿ. ಎಷ್ಟರ ಮಟ್ಟಿಗೆ ಸರಿ ಎನ್ನುವ ಬಗ್ಗೆ ಜನಪ್ರತಿನಿಧಿಗಳು ಜನತೆಗೆ ಉತ್ತರ ಕೊಡಬೇಕಾಗಿದೆ?.

ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲು ಕಾಣದ ಕೈಗಳು ಮಾಡಿದ ಕೆಲಸಕ್ಕೆ ಕೊನೆಗೂ ಫಲ ಲಭಿಸಿದೆ. ಆದರೆ ಇದರಿಂದ ಜಿಲ್ಲೆಗೆ ನಷ್ಟ ಆಗಿರುವುದು ಅಷ್ಟೇ ಕಟು ಸತ್ಯ. ಇನ್ನೂ ತಿಮಿಂಗಿಲಗಳಂತೆ ಅವರು ಆಡಿದೇ ಆಟ..? ಒಳ್ಳೆಯವರಿಗೆ ಕಾಲ ಇಲ್ಲರೀ, ದ.ಕ ಜಿಲ್ಲೆಯ 120ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ತನ್ನ ಹುದ್ಧೆಗೆ ನ್ಯಾಯ ಒದಗಿಸಿದ್ದಾರೆ. ಆರಂಭದಲ್ಲಿ ಅಧಿಕಾರ ವಹಿಸಿಕೊಂಡಾಗ ನೂರಾರು ಸಮಸ್ಯೆಗಳು ಬೆನ್ನತಿ ಬಂದರು ಕುಗ್ಗದೇ ಮುನ್ನಡೆದು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದರು. ಜಿಲ್ಲೆ ಬಹು ದೊಡ್ಡ ಸಮಸ್ಯೆಯಾದ ಕೋಮು ಗಲಭೆಯಂತಹ ಹಲವಾರು ಪ್ರಕರಣಗಳ ಸಂದರ್ಭಗಳಲ್ಲೂ ಇತರರ ಸಹಕಾರ ಪಡೆದು ಸನ್ನಿವೇಶವನ್ನು ನಿಭಾಯಿಸಿದ್ದಾರೆ.

ಜಾತಿ-ಪ್ರಮಾಣ ಪತ್ರ, ನೆಮ್ಮದಿಕೇಂದ್ರ ವ್ಯವಸ್ಥೆ, ಪಡಸಾಲೆ ಸೇವೆ ಹೀಗೆ ಹಲವಾರು ಯೋಜನೆಗಳನ್ನು ಕಾರ್ಯಗತ ಗೊಳಿಸಿ, ಜಿಲ್ಲೆಯ ಅಭಿವೃದ್ಧಿಗಾಗಿ ದುಡಿದ್ದೀರಿ. ಇದರ ಪರಿಣಾಮಮೋ ಅಥವಾ ಬಹುಮಾನವೋ ಇದೀಗ ವರ್ಗಾವಣೆ. ಇದು ದಕ್ಷಿಣ ಕನ್ನಡ ಜಿಲ್ಲೆಗೆ ತುಂಬಲಾರದ ನಷ್ಟ. ಮಳೆ, ಬಿಸಿಲು ಎಂದು ಯಾವತ್ತು ಹಿಂದೇಟು ಹಾಕದೇ ಕಾರ್ಯತ್ಪರತೆಯಿಂದ ಜನತೆಯ ಸೇವೆಯನ್ನು ನಿರ್ವಹಿಸಿದ್ದೀರಿ. ಕಲೆ, ಸಾಹಿತ್ಯ, ಕ್ರೀಡೆ, ಸಂಸ್ಕೃತಿಗಳ ಬಗ್ಗೆಯೂ ಕೂಡ ಬಹಳ ಅಭಿರುಚಿ ಇದ್ದವರು ಹೌದು. ಈಗ ಆಗಿರುವ ನಷ್ಟವನ್ನು ತುಂಬಲು ಕಷ್ಟಸಾಧ್ಯ? ಆದರೂ ಜಿಲ್ಲೆಯ ಮೇಲೆ ನಿಜವಾದ ಅಭಿವೃದ್ಧಿಯ ಕಾಳಜಿ ಇದ್ದದೇ ಹೌದಾಗಿದ್ದರೆ ಮತ್ತೆ ವಿ.ಪೊನ್ನುರಾಜ್ ಅವರನ್ನು ಇಲ್ಲಿಯೇ ಕಾರ್ಯನಿರ್ವಹಿಸುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಈ ಕೆಲಸ ನಮ್ಮ ಜನಪ್ರತಿನಿಧಿಗಳಿಂದ ಆಗುತ್ತದೆಯೇ ಎನ್ನುವುದು ಕಾದುನೋಡಬೇಕಾಗಿದೆ?

ಈಲ್ಲಾಧಿಕಾರಿಗಳೇ ನಿಮ್ಮಂದ ಇನ್ನಷ್ಟು ವರ್ಷಗಳ ಸೇವೆ/ ಸರ್ಜರಿ ಜಿಲ್ಲೆಗೆ ಆಗಬೇಕಿತು. ಆದರೆ ಜಿಲ್ಲೆಯ ಜನತೆ ನಿಮ್ಮ ಸೇವೆಯಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿ. ಏನೇ ಇರಲಿ ಮತ್ತೆ ನಮ್ಮ ಜಿಲ್ಲೆಗೆ ಬನ್ನಿ. ಇದುವರೆಗೂ ಜಿಲ್ಲೆಗಾಗಿ/ಜನತೆಗಾಗಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ನಿಮಗೆ ದ.ಕ.ಜಿಲ್ಲೆಯ ಸರ್ವ ಜನತೆಯ ಪರವಾಗಿ ಅಭಿನಂದನೆಗಳು..!

ಚಿತ್ರಕೃಪೆ:ಗೂಗಲ್ ಇಮೇಜ್

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments