ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 28, 2010

1

‘ಪುರಭವನದಲ್ಲಿ ಪ್ರೇಕ್ಷಕನಿಗೆ ರಸದೌತಣ, ನಿರುಪಮಾ ರಾಜೇಂದ್ರಾ ಅವರ ಕಥಕ್ ನೃತ್ಯ’

‍ನಿಲುಮೆ ಮೂಲಕ

ಕರುಣಾಕರ ಬಳ್ಕೂರು

ರತ ಭೂಮಿಯಲ್ಲಿ ಭಾರತೀಯ ಸಂಸ್ಕೃತಿಗೆ ತನ್ನದೇ ಆದ ವಿಶೇಷತೆಯಿದೆ. ಕಲೆ, ಸಾಹಿತ್ಯ, ಅಭಿನಯ, ನೃತ್ಯ, ಸಂಗೀತ ಹೀಗೆ ಎಲ್ಲವು ಮೆಳೈಯಿಸಿದಾಗ ಸುಂದರ ಲೋಕವೊಂದು ಸೃಷ್ಟಿಯಾಗುವುದರಲ್ಲಿ ಎರಡು ಮಾತಿಲ್ಲ. ರಾಜರ ಆಳ್ವಿಕೆಯಲ್ಲಿ ಕಲೆಗೂ ರಾಜರ ಆಸ್ಥಾನದಲ್ಲಿ ರಾಜನ ಪ್ರೋತ್ಸಾಹದೊಂದಿಗೆ ಬಂದಿರವುದನ್ನು ಕಾಣಬಹುದು. ರಾಜರುಗಳನ್ನು ಮೆಚ್ಚಿಸಲು ಮೇಧಾವಿ, ವಿದ್ವುತ್‌ಗಳನ್ನು ಹೋಂದಿರುವ ಕಲಾವಿದರು ತಮ್ಮ ಕಲಾ ಪ್ರೌಡುಮೆಯನ್ನು ತೋರಿಸುತ್ತಿದ್ದರು. ಭಾರತಿಯ ರಾಜರುಗಳು ಕಲೆಗೆ ನೀಡಿದಷ್ಟೇ ಪ್ರಾಶಸ್ತ್ಯವನ್ನು ಮುಸ್ಲಿಂ ಅರಸುರುಗಳು ನಿಡಿದ್ದಾರೆ. ಮುಸ್ಲಿಂ ಆಳ್ವಿಕೆಯಲ್ಲಿ ಆಸ್ಥಾನದಲ್ಲಿ ತಬಲಗಾರರ ಬಡಿತಕ್ಕೆ ನೃತ್ಯ ಮಾಡುವ ಕಲಾವಿದರು ಇದ್ದರು. ಇರ್ವರ ನಡುವೆಯೂ ಸ್ವರ್ಧೆ ಮಾತ್ರ ಪ್ರಬಲವಾಗಿತು. ಅಲ್ಲಿ ನೊಡುವವರಿಗೆ ಒಂದು ಸುಂದರ ಕಲೆಯನ್ನು ಆಸಾಧ್ವಿಸುವ  ಕ್ಷಣ ಅರದಾಗಿತು. ಇಂದು ಕಲೆಗೆ ಯಾವುದೇ ಪ್ರೋತ್ಸಾಹವು ಇಲ್ಲದಿದ್ದರೂ ನಮ್ಮ ನಾಡಿನಲ್ಲಿ ಅದ್ಭುತ ಕಲಾ ತಂಡಗಳು ಇವೆ. ಬನ್ನಿ ಸಂಗೀತ ಭಾರತಿ ಪ್ರತಿಷ್ಠಾನ ಸಂಯೋಜಿಸಿರುವ ಎಂಆರ್‌ಪಿಎಲ್ ‘ನೂಪುರ ನಿನಾದ’ ಕಾರ್ಯಕ್ರಮ ನೀಡಲು ಬೆಂಗಳೂರಿನ ನಿರುಪಮಾ ಮತ್ತು ರಾಜೇಂದ್ರಾ ಮಂಗಳೂರಿಗೆ ಆಗಮಿಸಿದಾಗ  ತೆರೆದಿಟ್ಟ ಮನದಾಳದ ಮಾತುಗಳು ನಿಮಗಾಗಿ..

ಅದರಲ್ಲಿ ಅಭಿನಯ ನೃತ್ಯ ಸಂಸ್ಥೆ ಒಂದು. ಇರ್ವರು ಕಥಕ್ ನೃತ್ಯ ಪ್ರಕಾರದಲ್ಲಿ ಸತತ ಅಭ್ಯಾಸ ಮಾಡಿ  ಅಭಿನವ ಸಂಸ್ಥೆಯನ್ನು ಹುಟ್ಟುಹಾಕಿ ರಾಜ್ಯ-ದೇಶ-ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಕಥಕ್ ನೃತ್ಯ ಲೋಕದಲ್ಲಿ ಕಲಾವಿದರಾಗಿ ಬೆಳದು ಸಾಂಪ್ರದಾಯಿಕ ನೃತ್ಯ ಕಲೆಗೆ ಎಲ್ಲಿಯೂ ಧಕ್ಕೆಯಾಗದಂತೆ ‘ಗ್ಲೋಬಲ್’ ಎನ್ನುವ ನೃತ್ಯವನ್ನು ಕಥಕ್‌ಗೆ ಅಳವಡಿಸಿಕೊಂಡಿದ್ದಾರೆ. ನೃತ್ಯ ತಂಡದಲ್ಲಿ ಸುಮಾರು 80ಕ್ಕೂ ಮಿಕ್ಕಿ ಕಲಾವಿದರು ಇದ್ದಾರೆ. ‘ಅಭಿನವ’ ಎನ್ನುವ ತಂಡ ನೂರಾರು ಕಥಕ್ ಕಲಾವಿದರನ್ನು ಸೃಷ್ಠಿಮಾಡಿದೆ. ‘ಅಭಿನವ’ ಎನ್ನುವ ಕಲಾ ಸಂಸ್ಥೆ ನಿರುಪಮಾ ಮತ್ತು ರಾಜೇಂದ್ರಾ ಜೋಡಿಗಳ ಕನಸಿನ ಕೂಸು. ಇರ್ವರು 22 ವರ್ಷಗಳಿಂದ ಕಥಕ್‌ನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಈಗಾಗಲೇ ಸಂಯೋಜಿಸಿರುವ ಕಥಕ್‌ನಲ್ಲಿ ಸಾಂಪ್ರದಾಯಿಕ ನೃತ್ಯದೊಂದಿಗೆ ಆಧುನಿಕ ಸಂಗೀತದ ಸ್ವರ್ಶವನ್ನು ಅಳವಡಿಕೊಂಡಿದ್ದಾರೆ. ಶಾಂತಿಮಂತ್ರದಂತಹ ಭಾವನಾತ್ಮಕ ನೃತ್ಯ, ಚತುರಂಗ್, ಶೃಂಗಾರ ರಾಮ, ತರನಾ, ರಾಸಲೀಲೆ, ಕದಂ ಕದಂ ಹೀಗೆ ವಿನೂತನ ಮಾದರಿಯ ನೃತ್ಯ ಪ್ರಕಾರಗಳನ್ನು ವೇದಿಕೆಯ ಮೇಲೆ ತಂದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ರಾಸಲೀಲೆ’ ಎನ್ನುವುದು ರಾಮ-ಸೀತೆಯರ ‘ಶೃಂಗಾರ ಮಿಲನ’ದ ಭಾವ ಲಹರಿ ನೃತ್ಯವಿದು, ಉಪನಿಷತ್‌ನ ಮಂತ್ರಗಳನ್ನು ಸಂಗೀತಕ್ಕೆ ಅಳವಡಿಸಿ ನೃತ್ಯಕ್ಕೆ ತಂದಾಗ ಅಲ್ಲಿ ಸಿಗುವ ಖುಷಿ, ನೆಮ್ಮದಿ, ಎಲ್ಲವು ವಿಭಿನ್ನ. ‘ಕದಂ ಕದಂ’ ಎನ್ನುವ ನೃತ್ಯ ಹೆಜ್ಜೆ ನಂತರ ಹೆಜ್ಜೆ ಹಾಕುವ ಮುಖೇನ ನೆರೆದಿರುವ ಪ್ರೇಕ್ಷಕನ ಮನಸ್ಸಿನಗಂಳದಲ್ಲಿ ಹೆಜ್ಜೆಯನ್ನು ಹಾಕುವುದು. ಈ ಮೂಲಕ ಜೀವನದಲ್ಲಿ ಕಲೆಯನ್ನು ಒಂದಾಗಿಸುವ ಸೌಂದರ್ಯ ಶಕ್ತಿ, ನಾವೆಲ್ಲರೂ ಒಂದೇ ಎನ್ನುವ ಭಾವವನ್ನು ತರುವುದು. ನೋವು. ಬದುಕಿನ ಜಂಜಾಟ, ಒತ್ತಡದಿಂದ ಬಿಡುಗಡೆ ಹೊಂದಲು ಕಲಾ ಪ್ರಕಾರಗಳು ಇಂದು ಅನಿವಾರ್ಯವಾಗಿದೆ.

ಕ್ರಿಯೇಟಿವ್ ರೀತಿಯಲ್ಲಿ ಆಲೋಚಿಸಿ ನೃತ್ಯವನ್ನು ವೇದಿಕೆಯ ಮೇಲೆ ತಂದಾಗ ಜನ ನಲ್ಮೆಯಿಂದ ಸ್ವೀಕರಿಸುತ್ತಾರೆ. ನಾವು ಏನ್ನನ್ನು ಒಳ್ಳೆಯದನ್ನು ಕೊಡುತೀವೋ ಅದನ್ನು ಪ್ರೇಕ್ಷಕರು ಖಂಡಿತ ಸ್ವೀಕರಿಸುತ್ತಾರೆ. ಆದರೆ ಅಲ್ಲಿ ಗುಣಮಟ್ಟ ಇರಬೇಕು ಮತ್ತು ಸಂಪ್ರದಾಯಕ್ಕೆ ಧಕ್ಕೆ ತರುವ ಯಾವುದೇ ಕಲೆಯನ್ನು ಪ್ರಸ್ತುತ ಪಡಿಸಬಾರದು. ಭಾರತೀಯ ಕಲೆಯನ್ನು ಹೊಸ ಹುರುಪಿನೊಂದಿಗೆ ಪ್ರೇಕ್ಷಕರಿಗೆ ಉಣಬಡಿಸುವುದು ಅಭಿನವ ಕಲಾತಂಡದ ಮುಖ್ಯ ಗುರಿ. ತಂಡದಲ್ಲಿ 250ಕ್ಕೂ ಹೆಚ್ಚು ಕಲಾವಿದರನ್ನು  ಕೂಡಿಕೊಂಡು ಈಗಾಗಲೇ ದೇಶ-ವಿದೇಶಗಳಲ್ಲಿ ಹತ್ತು ಹಲವು ಕಾರ್ಯಕ್ರ್ಮಗಳನ್ನು ನಿಡಿ ಜನರ ಮನಸೂರೆಗೊಳಿಸಿದ್ದಾರೆ. ತಂಡದಲಿ ವಿಶೇಷವಾಗಿ ವಿಭನ್ನವಾಗಿ ಸಂಗೀತ, ವಸ್ತ್ರ ವಿನ್ಯಾಸ, ಬೆಳಕು, ರಂಗ ಸಜ್ಜಿಕೆ ಹೀಗೆ ವೇಷ ಭೂಷಣ ಅಳವಡಿಸಿಕೊಂಡು ಪ್ರಸ್ತುತಪಡಿಸುವುದು. ಕಲಾವಿದನಿಗೆ ಮುಖ್ಯವಾಗಿಕಲೆಯ ಗುಣಮಟ್ಟವನು  ಕಡಿಮೆಗೊಳಿಸದೇ ಹೊಸ ಪ್ರಯೋಗಗಳನು ಮಾಡುತ್ತಾ ಪ್ರೇಕ್ಷಕ ಆಹಾ ಆಹಾ ಎನ್ನುವ ಹಾಗೆ ತೊರಿಸುವ ಸವಾಲುಗಳು ಇವೆ. ಭಾರತೀಯ ನೃತ್ಯದೊಂದಿಗೆ ಗ್ಲೋಬಲ್ ಸಂಗೀತವನು ಅಳವಡಿಸ್ಕೊಳ್ಳಲಾಗಿದೆ.

ಇಂದು ಯುವ ಸಮುದಾಯ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಿಗೆ ಮೂಗು ಮೂರಿಯುವ ಪರಿಸ್ಥಿತಿ ಬಂದೋದಗಿದೆ. ಈ ನಿಟ್ಟಿನಲ್ಲಿ ಯುವ ಜನಾಂಗವನ್ನು ಸೆಳೆಯಲು ಶಾಸ್ತ್ರೀಯ ಕಲೆಗೆ ಗ್ಲೋಬಲ್ ಸ್ವರ್ಶ ನಿಡಲಾಗಿದೆ ಎಂದು ನೃತ್ಯ ಕಲಾವಿದೆ ನಿರುಪಮಾ ಹೇಳುತಾರೆ. ಇಂದಿನ ಆಧುಅನಿಕ ಜೀವನ ಶೈಲಿಯಲ್ಲಿ ಸಾಂಪ್ರದಾಯಿಕ ಗಳ ಯುಅವ ಸಮುದಾಯದಿಂದ ಬಹು ದೂರಹೋಗುತ್ತಿವೆ ಮತ್ತೆ ಇವುಗಳಿಗೆ ಜೀವ ತುಂಬಬೇಕಾಗಿದೆ. ಇಂದು ಜೀವನ ಸಾಲಿ ಬದಲಾವಣೆ ಆಗಿರುವುದರಿಂದ ಮನಸ್ಸಿಗೆ ನೆಮ್ಮದಿಯ ಬದುಕುಬೇಕಾಗಿದೆ ಈ ನಿಟ್ಟಿನಲ್ಲಿ ಒತ್ತಡವನು ಕಡಿಮೆ ಮಾಡಲು ಕಥಕ್ ನೃತ್ಯದ ಮೂಲಕ ಶಾಂತಿ ಮಂತ್ರದೊಂದಿಗೆ ನೃತ್ಯ ಸಂಯೋಜಿಸಲಾಗಿದೆ. ರಾಸಲೀಲೆ, ಕದಂ, ತದಾ, ಮೀರಾ/ಯುಗಲ್, ವಿನೂತನ ರೀತಿಯಲ್ಲಿ ವೇದಿಕೆಯ ಮೇಲೆ ನೃತ್ಯಗಳನ್ನು ಸಂಯೋಜಿಸಲಾಗುತ್ತದೆ.

ಮುಸ್ಸಂಜೆಯ ಹೊತ್ತಿನಲ್ಲಿ ಕಿಕ್ಕಿರಿದ ಜನದಂಧಣಿಯಲ್ಲಿ ಬೆಳಕಿನೊಂದಿಗೆ ಪುರಭವನದ ವೇದಿಕೆಯ ಮೇಲೆ ಶಾಂತಿಮಂತ್ರದ ಸಂಗೀತದೊಂದಿಗೆ ಕಲಾವಿದರು ಹೆಜ್ಜೆಯ ಮೇಲೆ ಹೆಜ್ಜೆನಿಕ್ಕೂತಾ ಕಥಕ್ ನೃತ್ಯಕ್ಕೆ ಮುನ್ನುಡಿ ಬರೆದರು. ಆರಂಭದಿಂದ ಅಂತ್ಯ ತನಕ ‘ಅಭಿನವ ಕಲಾ ತಂಡ’ ಬೆಂಗಳೂರು ಇವರು ನೀಡುರುವ ಎಂಆರ್‌ಪಿಎಲ್ ‘ನೂಪುರ ನಿನಾದ’ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂತು. ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಸಂಯೋಜಿಸಿರುವ ಕಾರ್ಯಕ್ರಮವು ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಶಾಂತಿ ಮಂತ್ರದ ಮೂಲಕ ಯುವ ಕಲಾವಿದರು ವೇದಿಕೆಯ ಮೇಲೆ ‘ಅಸತೋಮ ಸದ್ಗಮಯ’ ಎನ್ನುವ ಹಾಡಿಗೆ ಹೆಜ್ಜೆ ಹಾಕುತ್ತಾ ಬರುತ್ತಿದ್ದಂತೆ ಪ್ರೇಕ್ಷಕರ ಚಪ್ಪಾಳೆ ಗಗನದೆತ್ತರಕ್ಕೆ ಏರಿತು. ಬಣ್ಣ ಬಣ್ಣದ ಬೆಳಕಿನ ಆಟ, ಕಣ್ಣನ್ನು ಮೋಹಗೊಳಿಸುವ ವಿನೂತನ ಬಣ್ಣದ ಲೋಕಕ್ಕೆ ತೋಂ ತನನ ತೋಂ ತನನ.. ಎನ್ನುತಾ ಹೆಜ್ಜೆಯನ್ನು ಹಾಕಿದರು.

‘ಓಂ ಶಾಂತಿ ಓಂ ಶಾಂತಿ’ ಎನ್ನುವ ಶಾಂತಿ ಮಂತ್ರವು ನೆರೆದಿರುವ ಎಲ್ಲಾ ಪ್ರೇಕ್ಷಕರಲ್ಲಿ ಒತ್ತಡದ ಜೀವನದಿಂದ ಹೊರಬರುವಂತೆ ಪ್ರೇರೆಪಿಸಿತು. ಕಥಕ್ ನೃತ್ಯ ಮಾಡುವುದರಿಂದ ಎಷ್ಟೊಂದು ವ್ಯಾಯಾಮ ಆಗುತ್ತದೆ ಎನ್ನುವುದಕ್ಕೆ ‘ಯುಗಲ್ ನೃತ್ಯವೇ’ ಸಾಕ್ಷಿಯಾಯಿತು. ಚಕ್ರ ಆಕಾರದಲ್ಲಿ ನೃತ್ಯ ಆರಂಭವಾಗಿ ಇಲ್ಲಿ ವಿಶೇಷವಾಗಿ ೮ ಮಂದಿ ನೃತ್ಯ ಮಾಡಿ, ಒಬ್ಬರಿಗೊಬ್ಬರು ಸ್ವರ್ಶವಾಗದೇ ಅತಿ ವೇಗದಲ್ಲಿ ಹೆಜ್ಜೆಯನ್ನು ಹಾಕಿ ಪ್ರೇಕ್ಷಕರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ಕಾಲ್‌ಗೆಜ್ಜೆಯ ನಾದ ಝೆಕಾಂರಕ್ಕೆ ಪ್ರೇಕ್ಷಕ ಕ್ಲಿನ್ ಬೋರ್ಡ್ ಆಗಿದ್ದಂತು ಅಷ್ಟೇ ಸತ್ಯ. ನಂತರ ಮೂಡಿ ಬಂದಿರುವುದು ‘ಚತುರಂಗ್ ನೃತ್ಯ’ ಯುವ ಸಮುದಾಯಕ್ಕೆ ಅಂತಾನೆ ಸಂಗೀತ, ನೃತ್ಯ, ಸಾಹಿತ್ಯವೆಲ್ಲವು ತುಂಬಿ ಯುವ ಮನಸ್ಸುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇಂದು ಆಧುನಿಕ ಭರಾಟೆಯಲ್ಲ್ಲಿ ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗುವ ಯುವ ಮನಸ್ಸುಗಳ್ನು ಸೆರೆಹಿಡಿಯಲು ಕಲಾವಿದರ  ಪ್ರಯತ್ನ ಸಾರ್ಥಕವಾಯಿತು.

ಶೃಂಗಾರ ರಾಮ- ಸನ್ನಿವೇಶವಂತು ಕಲಾತ್ಮಕವಾಗಿ ರಂಗದ ಮೇಲೆ ಮುಡಿಬಂತು.ರಾಮಾಯಣದಂತಹ ಕಥಾವಸ್ತುವಿನ ಸಣ್ಣ ಎಳೆಯನ್ನು ತೆಗೆದುಕೊಂಡು ಈ ನೃತ್ಯ ಸಂಯೋಜಿಸಿರುವುದು ಫಲ ರಾಜೇಂದ್ರಾ ಮತ್ತು ನಿರುಪಮಾ ಸೀತೆಯಾಗಿ ನಿರುಪಮಾ ಅವರು ವನದಲ್ಲಿ ಹೂಗಳನ್ನು ಕೊಯುತ್ತಾ ಬೃಂದಾವನಕ್ಕೆ ಬರುವುದು, ಹೂಗಳನ್ನು ಹುಡುಕುತ್ತಾ ಖುಡುಕುತ್ತಾ ಅಲ್ಲಿ ಶ್ರೀರಾಮನನ್ನು ನೊಡುವುದು.  ರಾಮನ ಸೌಂದರ್ಯವನ್ನ್ನು ನೋಡಿ ಬೆರಗಾಗಿ ಅರೆಕ್ಷಣ ಅಲ್ಲೆ ಸ್ಥ್ಭಳಾಗಿ ನಿಲ್ಲುವುದು. ರಾಮನ ಪಾತ್ರಧಾರಿಯಾಗಿ ರಾಜೇಂದ್ರ ಕಾಣಿಸಿಕೊಳ್ಳುತ್ತಾರೆ. ಲಕ್ಷ್ಮಣನ ಜೊತೆ ಭೇಟೆಯಾಡುತ್ತಾ ಧಣಿವನ್ನು ಆರಿಸಿಕೊಳ್ಳಲು ಅಲ್ಲೇ ಕುಳಿತು ಅತ್ತ-ಇತ್ತ  ನೋಡುವಾಗ ಸೀತೆಯನ್ನು ಕಂಡು ಮೋಹಗಳುವುದು, ಮತ್ತೆ ಇರ್ವರು ನೃತ್ಯದೊಂದಿಗೆ ಮಿಲನವಾಗುವುದು ದುಂಭಿ ಹೂ ಹುಡುಕಿ ಹೋರಟಂತೆ ರಾi ಸೀತೆಯನ್ನುಕಂಡು ಜೇನ್ ನನ್ನು ಹೀರುಲು ಮುಂದಾಗುವುದು ಮತ್ತೆ ಇರ್ವರು ಬೇರೆ ಬೇರೆ ಯಾಗುವುದುಹೋಗಲು ಮನಸ್ಸಿಲ್ಲದೇ ಒಲ್ಲದ ಮನಸ್ಸಿನಿಂದ ನಿರ್ಗಮಿಸಿವಿದಿ ಹೀಗೆ ಆ ಮಿಥಲ ಬೃಂದಾವನದಲ್ಲಿ ರಾಮ ಸೀತೆಯರ ಸಂಧಿಸಿದ ಕ್ಷಣವನ್ನು ಮನೋಜ್ಞವಾಗಿ ನರ್ತಿಸಿ ತೋರಿಸಿದ್ದಾರೆ. ಸಂಗೀತವಂತೂ ಅಬ್ಬರದ ಬಡಿತವಿಲ್ಲದೆ ಕರ್ಣಗಳಿಗೆ ಆನಂದವನ್ನುಂಟು ಮಾಡುವಂತೆ ಇನ್ನು ಬೇಕೆನ್ನಿಸುವಷ್ಟು ಅದ್ಭುತವಾಗಿ ನರ್ತಿಸಿದರು.

‘ರಾಸಲೀಲೆ’ ನೃತ್ಯವಂತೂ ಪ್ರೇಕ್ಷಕನಿಗೆ ಮರೆಯಲು ಸಾಧ್ಯವೇ ಇಲ್ಲ. ಬಣ್ಣ ಬಣ್ಣದ, ಅಂದಚೆಂದ ಉಡುಗೆಗಳನ್ನು ತೊಟ್ಟು, ಕೃಷ್ಣನನ್ನು ಮೋಹಗೊಳಿಸಿದ ಗೋಪಿಕಾಸ್ತ್ರೀಯರು ನೃರ್ತನ ಮನಮೋಹಕವಾಗೊ ಮೂಡಿಬಂತು.಼ ಭಾಗವತ ಪುರಾಣದಿಂದ ಆಯ್ದದ ಭಾಗ. ಕೃಷ್ಣ, ಗೋಪಿಕಾಸ್ತ್ರೀಯರು, ರಾಧೆ ಒಂದಾಗಿ ಕುಣಿದು ಕುಪ್ಪಳಿಸಿ ಕಥಕ್ ಲೋಕದಲ್ಲಿ ತೇಲಾಡಿಸಿದರು. ಗೋಪಿಕಾಸ್ತ್ರೀಯರು ಮತ್ತು ರಾಧೆ ಬಹಳ ಅಹಂಕಾರ ದಿಂದ ಇರುತ್ತಾರೆ. ಆಗ ಕೃಷ್ಣ ಅದನ್ನರಿತು ಇವರಿಗೆ ನಾ ಇಲ್ಲದಿದ್ದರೆ ನಿಮ್ಮ ಅಂದಚೆಂದೆಕ್ಕೆ ಹೇಗೆ ಬೆಲೆ ಬರುತ್ತದೆ? ಎಂದು ಅವರಿಂದ ಮಾಯವಾಗುತ್ತಾನೆ. ಆ ಸಂದರ್ಭದಲ್ಲಿ ಗೋಪಿಕೆಯರಿಗೆ, ರಾಧೆಗೆ ಎಲ್ಲಿಲ್ಲದ ದುಃಖ, ಬೇಸರ ವ್ಯಕ್ತವಾಗುತ್ತದೆ. ಮತ್ತೆ ಕೃಷ್ಣನನ್ನು ಹುಡುಕುತಾ ಹುಡುಕುತಾ ತೆರಳುವುದು, ಕೊಳಲು ಧ್ವನಿ ಕೇಳಿದಾಕ್ಷಣ ಮತ್ತೆ ಕೃಷ್ನನನ್ನು ಕುರಿತು ನಮ್ಮದು ತಪ್ಪಾಯಿತು ನೀನೆ ಶ್ರೇಷ್ಠ ಎಂದು ಅವನೊಂದಿಗೆ ನರ್ತನಕ್ಕಿಳಿಯುವುದು. ಕೋಲಾಟದೊಂದಿಗೆ ‘ರಾಸಲೀಲೆ’ಗೆ ತೆರೆಬಿತ್ತು. ಗೋಪಿ ಚಕ್ರವನ್ನು ರಚಿಸಿ ಅದರೊಳಗೆ ಕೃಷ್ಣ, ರಾಧೆಯರ ರಂಗಿನಾಟವ ಆಡಿ ರಾಧೆಯ ಮನ ಗೆದ್ದ ಕೃಷ್ಣ, ಕೃಷ್ಣನ ಮನ ಗೆದ್ದ ರಾಧೆ ಹೀಗೆ ಪ್ರೀತಿಯ ಲೋಕದಲ್ಲಿ ಎಲ್ಲರನ್ನು ತೇಲಾಡಿಸಿದರು.

ಗೋಪಿಕಾ ಸ್ತ್ರೀಯರು ಸೇರಿದಂತೆ ಕೃಷ್ಣ, ರಾಧೆ ನೀರಾಟವನ್ನು  ಆಡಿದರು. ಬಣ್ಣ ಬಣ್ಣದ ಕೋಲುಗಳನ್ನು ಹಿಡಿದು ಕೋಲಾಟ ಆಡುತ್ತಾ ಆಡುತ್ತಾ ತನ್ಮಯದಿಂದ ತಮ್ಮನ್ನು ತಾವೇ ಮರೆತು ಬಿಡುತ್ತಾರೆ. ತಾಳಕ್ಕೆ ಲಯ ಬದ್ಧವಾಗಿ ಪ್ರೇಕ್ಷಕರಿಂದ ಕರಾಡತನ ಮುಗಿಲುಮುಟ್ಟಿತು. ಪ್ರೇಕ್ಷಕರು ಕೃಷ್ಣ, ರಾಧೆಯರ ನರ್ತನಕ್ಕೆ ಮನಸೋತು ನೃತ್ಯ ಲೋಕದಲ್ಲಿ ಮೈಮರೆತು ಅದ್ಬುತ ಪ್ರಪಂಚಕ್ಕೆ ಹೋಗಿಬರುತ್ತಾರೆ. ಕೃಷ್ಣ, ಕೃಷ್ಣ, ಕೃಷ್ಣ.. ಎನ್ನುತಾ ಭಕ್ತಿಲೋಕದಲ್ಲಿ ತೇಲಿಹೋದರು.

ಕಥಕ್ ನೃತ್ಯದಲ್ಲಿ ‘ತರಾನ’ ತಾಳಕ್ಕೆ ತನ್ನದೆ ಆದ ವಿಶಿಷ್ಟೆತೆ ಇದೆ. ರಾಗ ಲಯದೊಂದಿಗೆ ತಾಳದ ವೇಗ ಹೆಚ್ಚಿದಂತೆ ಕಲಾವಿದನ ಹೆಜ್ಜೆಯ ವೇಗ ಹೆಚ್ಚಿ ನೋಡುಗನಿಗೆ ಅದ್ಭುತ ಕ್ಷಣಗಳನ್ನ ನೀಡುತ್ತಾರೆ. ಇದು ಕಲಾವಿದನ ಕಠಿಣ ಪರಿಶ್ರಮ, ಅಭ್ಯಾಸ, ಆಸಕ್ತಿ, ಏಕಾಗ್ರತೆ, ಮನಸ್ಸಿನ ಹತೋಟಿ, ಎಲ್ಲವು ಒರೆಹಚ್ಚುತ್ತದೆ. ಇಲ್ಲಿ ವಿನೂತನವಾದ ಸಂಗೀತವನ್ನು ಬಳಸಿಕೊಂಡು ತರನಾ.. ತದಾ.. ಕದಂ.. ಕದಂ.. ಕದಂ..! ಹೆಜ್ಜೆಯ ಮೇಲೆ ಹೆಜ್ಜೆನಿಕ್ಕುತ್ತಾ ನೊಡುಗನನ್ನು ಮೂಕವಿಸ್ಮಿತರಾಗುವಂತೆ ಕಲಾವಿದರು ಇಲ್ಲಿ ಚಾಣಕ್ಯವನ್ನು ಪ್ರದರ್ಶನ ಮಾಡಿರುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ಇಡೀ ಕಥಕ್ ನೃತ್ಯದ ಮೂಲಕ ವೇದಿಕೆಯ ಮೇಲೆ ನೃತ್ಯದ ಭಾಷೆಗೂ, ಸಂಗೀತದ ಭಾಷೆಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದನ್ನು  ತೋರಿಸಿದ ಕೀರ್ತಿ ಬೆಂಗಳೂರಿನ ನಿರುಪಮಾ ಮತ್ತು ರಾಜೇಂದ್ರಾ ಜೊಡಿಗೆ ಸಲ್ಲುತ್ತದೆ. ಹೀಗೆ ಕಥಕ್ ನೃತ್ಯ ಲೋಕದಲ್ಲಿ ಇನ್ನಷ್ಟು ಅರಳಲಿ ಎಂದು ಹಾರೈಸೋಣ..!

1 ಟಿಪ್ಪಣಿ Post a comment
  1. ranjith's avatar
    ranjith
    ಆಕ್ಟೋ 29 2010

    all the best kathk team and good artical karun

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments