ಬದಲಾವಣೆಗೆ ತೆರೆದುಕೊಂಡ ಮನಸ್ಸು:ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಭಾಷಣದಲ್ಲಿ ಕವಿ ವೆಂಕಟೇಶಮೂರ್ತಿ
ಕನ್ನಡ ಮನಸ್ಸು-ಜೀವನ ಮೌಲ್ಯಗಳು
೧.ಸಾವಿರಾರು ವರ್ಷಗಳಿಂದ ತನ್ನ ಪಾತ್ರವನ್ನು ತಿದ್ದಿಕೊಳ್ಳುತ್ತಾ ಬಂದ ಕನ್ನಡ ಮನಸ್ಸಿನ ಅಭಿವ್ಯಕ್ತಿಯನ್ನು ಅದು ಹಿಂದೆ ಹಿಂದೆ ಉಳಿಸುತ್ತಾ ಹೋದ ನೆನಪುಗಳಲ್ಲಿ ಹುಡುಕಬೇಕಾಗುತ್ತೆ.
೨.ಕಲೆ, ಸಾಹಿತ್ಯ, ವಾಸ್ತು ಮುಂತಾಗಿ ಎಲ್ಲೆಲ್ಲಿ ಕನ್ನಡಿಗನ ಮನಸ್ಸು ನಿರ್ಭಿಡೆಯಿಂದ ಮುಕ್ತ ಅಭಿವ್ಯಕ್ತಿ ಸಾಧಿಸಿದೆಯೋ ಅಲ್ಲಲ್ಲೆಲ್ಲಾ ನಾವು ಕನ್ನಡ ಮನಸ್ಸಿನ ಪಾತ್ರ ನಿರ್ಮಿತಿಯನ್ನು ಗ್ರಹಿಸುತ್ತಾ ಹೋಗಬೇಕಾಗುತ್ತದೆ.
೩. ಮಹತ್ವಾಕಾಂಕ್ಷೆ
ವಿನಯ
ಕೂಡುಬಾಳು
ಬದಲಾವಣೆಗೆ ತೆರೆದುಕೊಂಡ ಮನಸ್ಸು-ಇವು ಕನ್ನಡ ಮನಸ್ಸಿನ ಮುಖ್ಯ ಲಕ್ಷಣಗಳಾಗಿವೆ.
ಅ.ಮಹತ್ವಾಕಾಂಕ್ಷೆ: ಕನ್ನಡ ಸಾಹಿತ್ಯ ಚರಿತ್ರೆ ಗಮನಿಸಿದಾಗ ನಿರಂತರವಾಗಿ ಬೃಹತ್ ಕಾವ್ಯಗಳ ನಿರ್ಮಾಣ ನಡೆಯುತ್ತಾ ಬಂದಿರುವುದನ್ನು ಗಮನಿಸಬಹುದು. ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕುಮಾರವ್ಯಾಸ ಭಾರತ, ಭರತೇಶವೈಭವ, ಶ್ರೀ ರಾಮಾಯಣ ದರ್ಶನಂ…ಹೀಗೆ. ಇಪ್ಪತ್ತನೇ ಶತಮಾನವನ್ನಷ್ಟೇ ಗಮನಿಸಿದರೂ ಮಹತ್ವಾಕಾಂಕ್ಷೆಯ ಕಾದಂಬರಿಗಳು ನಮ್ಮಲ್ಲಿ ನಿರ್ಮಿತವಾಗಿರುವುದನ್ನು ನೋಡಬಹುದು. ಬೃಹತ್ ಮತ್ತು ಮಹತ್ ಒಮ್ಮೈಗೂಡಬೇಕೆಂಬುದು ಕನ್ನಡ ಮನಸ್ಸಿನ ಯಾವತ್ತಿನ ಅಭಿಲಾಷೆ. ಆಧುನಿಕ ಸಾಹಿತ್ಯದಿಂದಲೂ ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಮತ್ತಷ್ಟು ಓದು 
ಹೊಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ‘ಆಳ್ವಾಸ್ ನುಡಿಸಿರಿ’ಯ ಅಧ್ಯಕ್ಷಗಿರಿ
ಕರುಣಾಕರ ಬಳ್ಕೂರು
ಹೋಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ಆಳ್ವಾಸ್ ನುಡಿಸಿರಿಯ ಅಧ್ಯಕ್ಷಗಿರಿ. ಇದ್ ನಮ್ ಊರಿಗೆ ಬಾರಿ ಖುಷಿ ವಿಷಯ ಕಾಣಿ. ಕುಂದಾಪ್ರ ಹೆನ್ಮಗಳ ಸಾಧನೆಗೆ ಕುಂದಾಪ್ರದಲ್ಲಿ ಸಂಭ್ರಮ, ಸಡಗರ ತುಂಬಿ ತುಳುಕುತ್ತಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವೈದೇಹಿಯವರ ಹೆಸರು ಇಂದು ಅಗ್ರ ಪಂಥಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ತನ್ನದೇ ಆದ ಭಾವನೆಗಳನ್ನು ಬರವಣಿಗೆಯ ಮೂಲಕ ಬರೆಯುತ್ತಾ ಬಂದವರು. ಈಗಲು ಬರೆಯುತ್ತಿರುವವರು. ಮಾತನಾಡುವ ಶೈಲಿಯಲ್ಲಿ ಅಚ್ಚ ಕುಂದಾಪ್ರಗನ್ನಡದ ಸೊಗಡು, ಸಾಹಿತ್ಯದ ಮೆರಗು ಹೀಗೆ ವೈದೇಹಿ ಅಂದ್ರೆ ಎಲ್ಲರಿಗೂ ಮಸ್ತ್ ಖುಷಿ. ಅವರ ಬರವಣಿಗೆಯಲ್ಲಿ ಮಗುವಿನ ಮುಗ್ಧತೆ, ಎಲ್ಲವನ್ನು ಕುತೂಹಲದಿಂದ ನೊಡುವ ಮನಸ್ಸು, ಭಾವ ಪ್ರಧಾನವಾದ ಅವರ ಆಲೋಚನೆಗಳು ಹೀಗೆ ಎಲ್ಲಾವು ವ್ಯಕ್ತಿತ್ವದಲ್ಲಿ ತುಂಬಿಕೊಂಡಿವೆ. ಮಾತಿಗೆ ಸಿಕ್ಕರಂತು ‘ಇಲ್ಕಾಣಿ’ ಎನ್ನುವ ಕುಂದಾಪ್ರ ಭಾಷೆಯ ಸೊಗಡಿನ ನುಡಿಗಳನ್ನು ಅವರ ಬಾಯಿಂದಲೇ ಕೇಳಲು ಎಷ್ಟೊಂದು ಸೊಗಸು.
ನಗುಮೊಗದಿ, ಸರಳ ಸಜ್ಜಿನಿಕೆಯೊಂದಿಗೆ ಅಚ್ಚ ಕುಂದಾಪ್ರ ಕನ್ನಡದಲ್ಲಿ ಮಾತ್ನಾಡಿಲ್ಲಿಕೆ ಕುಳಿತರೆ ಕಷ್ಟ-ಸುಖದ ಸರಮಾಲೆಗಳ ಮಾತಿನ ಮಂಟಪವನ್ನೆ ಕಟ್ಟುವ ಗುಣವರಲ್ಲಿದೆ. ತನ್ನ ಮನಸಿನ ಭಾವನೆಗಳನ್ನು ಯಾರ ಹಂಗಿ ಇಲ್ಲದೆ, ಸಾಹಿತ್ಯದ ಮೂಲಕ ತೆರೆದಿಡುತ್ತಾ ಬಂದಿದ್ದಾರೆ. ಅವರ ಕೃತಿಗಳಲ್ಲಿ ಮಹಿಳಾ ಸಂವೇಧನೆ ಹಾಸುಹೊಕ್ಕಾಗಿರುವುದರಿಂದ ಅವರನ್ನು ಮಹಿಳಾ ಸಾಹಿತ್ಯ ಕೈ ಬೀಸಿಕರೆದಿದೆ. ಮಹಿಳೆಯರಿಗೆ ಕೂಡ ತನ್ನದೇ ಆದ ಖಾಸಗಿ ಬದುಕಿದೆ ಎನ್ನುವುದನ್ನು ಗುರುತಿಸಿದವರು. ಕನಸನ್ನು ಕಾಣುವ ಸ್ವಾತಂತ್ರ್ಯ ಇದೆ ಎನ್ನುವ ಮೂಲಕ ಸ್ತ್ರೀಲೋಕಕ್ಕೆ ತನ್ನನ್ನು ತೆರೆದುಕೊಳ್ಳುವ ಮೂಲಕ ವಿಮರ್ಶಕರ ಪಾಲಿಗೆ ಹಲವು ದಾರಿಗಳನ್ನು ಮಾಡಿಕೊಟ್ಟಿದ್ದಾರೆ.
ವೈದೇಹಿ ಅವರ ಬರವಣಿಯು ಎಲ್ಲರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾರಸ್ವತ ಲೋಕದೊಳಗೆ ಹೊಸ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ‘ಕುಂದಾಪ್ರ’ ಪುಟ್ಟ ಜಗತ್ತನ ಆಚಾರ-ವಿಚಾರ, ಕಲೆ ಸಂಸ್ಕೃತಿ, ಭಾಷೆಗಳೆಲ್ಲವನ್ನೂ ಒಳಗೊಂಡ ಸೂಕ್ಷ್ಮ ಕಸೂತಿ ಎಳೆಗಳ ಹಾಗೆ ಬಿಡಿಸುವ ವೈದೇಹಿಯವರ ಶೈಲಿ ಅನನ್ಯವಾದದ್ದು. ಹಾಗಾಗೀ ಓದುಗರಿಗೆ ಹೊಸಪ್ರಪಂಚವೇ ಸರಿ. ಮತ್ತಷ್ಟು ಓದು 





