ಹೊಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ‘ಆಳ್ವಾಸ್ ನುಡಿಸಿರಿ’ಯ ಅಧ್ಯಕ್ಷಗಿರಿ
ಕರುಣಾಕರ ಬಳ್ಕೂರು
ಹೋಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ಆಳ್ವಾಸ್ ನುಡಿಸಿರಿಯ ಅಧ್ಯಕ್ಷಗಿರಿ. ಇದ್ ನಮ್ ಊರಿಗೆ ಬಾರಿ ಖುಷಿ ವಿಷಯ ಕಾಣಿ. ಕುಂದಾಪ್ರ ಹೆನ್ಮಗಳ ಸಾಧನೆಗೆ ಕುಂದಾಪ್ರದಲ್ಲಿ ಸಂಭ್ರಮ, ಸಡಗರ ತುಂಬಿ ತುಳುಕುತ್ತಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವೈದೇಹಿಯವರ ಹೆಸರು ಇಂದು ಅಗ್ರ ಪಂಥಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ತನ್ನದೇ ಆದ ಭಾವನೆಗಳನ್ನು ಬರವಣಿಗೆಯ ಮೂಲಕ ಬರೆಯುತ್ತಾ ಬಂದವರು. ಈಗಲು ಬರೆಯುತ್ತಿರುವವರು. ಮಾತನಾಡುವ ಶೈಲಿಯಲ್ಲಿ ಅಚ್ಚ ಕುಂದಾಪ್ರಗನ್ನಡದ ಸೊಗಡು, ಸಾಹಿತ್ಯದ ಮೆರಗು ಹೀಗೆ ವೈದೇಹಿ ಅಂದ್ರೆ ಎಲ್ಲರಿಗೂ ಮಸ್ತ್ ಖುಷಿ. ಅವರ ಬರವಣಿಗೆಯಲ್ಲಿ ಮಗುವಿನ ಮುಗ್ಧತೆ, ಎಲ್ಲವನ್ನು ಕುತೂಹಲದಿಂದ ನೊಡುವ ಮನಸ್ಸು, ಭಾವ ಪ್ರಧಾನವಾದ ಅವರ ಆಲೋಚನೆಗಳು ಹೀಗೆ ಎಲ್ಲಾವು ವ್ಯಕ್ತಿತ್ವದಲ್ಲಿ ತುಂಬಿಕೊಂಡಿವೆ. ಮಾತಿಗೆ ಸಿಕ್ಕರಂತು ‘ಇಲ್ಕಾಣಿ’ ಎನ್ನುವ ಕುಂದಾಪ್ರ ಭಾಷೆಯ ಸೊಗಡಿನ ನುಡಿಗಳನ್ನು ಅವರ ಬಾಯಿಂದಲೇ ಕೇಳಲು ಎಷ್ಟೊಂದು ಸೊಗಸು.
ನಗುಮೊಗದಿ, ಸರಳ ಸಜ್ಜಿನಿಕೆಯೊಂದಿಗೆ ಅಚ್ಚ ಕುಂದಾಪ್ರ ಕನ್ನಡದಲ್ಲಿ ಮಾತ್ನಾಡಿಲ್ಲಿಕೆ ಕುಳಿತರೆ ಕಷ್ಟ-ಸುಖದ ಸರಮಾಲೆಗಳ ಮಾತಿನ ಮಂಟಪವನ್ನೆ ಕಟ್ಟುವ ಗುಣವರಲ್ಲಿದೆ. ತನ್ನ ಮನಸಿನ ಭಾವನೆಗಳನ್ನು ಯಾರ ಹಂಗಿ ಇಲ್ಲದೆ, ಸಾಹಿತ್ಯದ ಮೂಲಕ ತೆರೆದಿಡುತ್ತಾ ಬಂದಿದ್ದಾರೆ. ಅವರ ಕೃತಿಗಳಲ್ಲಿ ಮಹಿಳಾ ಸಂವೇಧನೆ ಹಾಸುಹೊಕ್ಕಾಗಿರುವುದರಿಂದ ಅವರನ್ನು ಮಹಿಳಾ ಸಾಹಿತ್ಯ ಕೈ ಬೀಸಿಕರೆದಿದೆ. ಮಹಿಳೆಯರಿಗೆ ಕೂಡ ತನ್ನದೇ ಆದ ಖಾಸಗಿ ಬದುಕಿದೆ ಎನ್ನುವುದನ್ನು ಗುರುತಿಸಿದವರು. ಕನಸನ್ನು ಕಾಣುವ ಸ್ವಾತಂತ್ರ್ಯ ಇದೆ ಎನ್ನುವ ಮೂಲಕ ಸ್ತ್ರೀಲೋಕಕ್ಕೆ ತನ್ನನ್ನು ತೆರೆದುಕೊಳ್ಳುವ ಮೂಲಕ ವಿಮರ್ಶಕರ ಪಾಲಿಗೆ ಹಲವು ದಾರಿಗಳನ್ನು ಮಾಡಿಕೊಟ್ಟಿದ್ದಾರೆ.
ವೈದೇಹಿ ಅವರ ಬರವಣಿಯು ಎಲ್ಲರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾರಸ್ವತ ಲೋಕದೊಳಗೆ ಹೊಸ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ‘ಕುಂದಾಪ್ರ’ ಪುಟ್ಟ ಜಗತ್ತನ ಆಚಾರ-ವಿಚಾರ, ಕಲೆ ಸಂಸ್ಕೃತಿ, ಭಾಷೆಗಳೆಲ್ಲವನ್ನೂ ಒಳಗೊಂಡ ಸೂಕ್ಷ್ಮ ಕಸೂತಿ ಎಳೆಗಳ ಹಾಗೆ ಬಿಡಿಸುವ ವೈದೇಹಿಯವರ ಶೈಲಿ ಅನನ್ಯವಾದದ್ದು. ಹಾಗಾಗೀ ಓದುಗರಿಗೆ ಹೊಸಪ್ರಪಂಚವೇ ಸರಿ.
ವೈದೇಹಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣುವ ಹೆಸರು. ಸಣ್ಣಕಥೆ, ಕಾವ್ಯ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ಮಕ್ಕಳ ನಾಟಕ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಲೇಖಕಿ. ವೈದೇಹಿಯವರ ಮೊದಲ ಹೆಸರು ಜಾನಕಿ ಶ್ರೀನಿವಾಸ ಮೂರ್ತಿ, ಕಾವ್ಯನಾಮ ವೈದೇಹಿ, ಊರು/ವಿದ್ಯಾಭ್ಯಾಸ ಎಲ್ಲವು ಕುಂದಾಪುರ ತಾಲೂಕಿನಲ್ಲಿ. ಸೇರಿದೂರು ಶಿವಮೊಗ್ಗ, ಬಿ. ಕಾಮ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಮಣಿಪಾಲದಲ್ಲಿರುವ ಅನಂತ ನಗರದಲ್ಲಿ ‘ಇರುವಂತಿಗೆ’ ನಿವಾಸದಲ್ಲಿ ವಾಸ. ಕುಂದಾಪುರದ ದಿ. ಶ್ರೀ ಎ. ವಿ. ಎನ್ ಹೆಬ್ಬಾರ್, ವಕೀಲರು, ದಿ. ಶ್ರೀಮತಿ ಮಹಾಲಕ್ಷ್ಮಿಯಮ್ಮ ಅವರ ದಂಪತಿಗಳ ಮಗಳಾಗಿ ಹುಟ್ಟಿದರು. ‘ಜೀವನ’ ಎನ್ನುವ ಪಯಣಕ್ಕೆ ಸಾರಥಿಯಾದವರು ಕೆ.ಎಲ್. ಶ್ರೀನಿವಾಸ ಮೂರ್ತಿ, ಪಲ್ಲವಿ ರಾವ್ ಮತ್ತು ನಯನಾ ಕಾಶ್ಯಪ್ ಇರ್ವರು ಹೆಣ್ಣು ಮಕ್ಕಳು, ಬಾಲಾಜಿ ಕಾಶ್ಯಪ್, ಮಡಿಕೇರಿ ಮತ್ತು ಟಿ. ಅನಿಲ್ ಕುಮಾರ್, ಪೋರ್ ಬಂದರ್, ಅಳಿಯಂದಿರು. ಗೌರಿ ಕಾಶ್ಯಪ್, ಅಖಿಲ್ ಕುಮಾರ.ಟಿ ಮೊಮ್ಮಕ್ಕಳು.
ಕನ್ನಡ ಸಾಹಿತ್ಯ ಲೋಕಕ್ಕೆ ಬರೆದ ‘ಮರ ಗಿಡ ಬಳ್ಳಿ’, ‘ಅಂತರಂಗದ ಪ್ಯಟಗಳು’, ‘ಗೋಲ, ಸಮಾಜ ಶಾಸ಼ಜ್ಞೆಯ ಟಿಪ್ಪಣಿಗಳು’, ‘ಕಥಾ ಸಂಕಲನಗಳು’, ‘ಅವ್ಮ್ಮಚ್ಚಿ ಎಂಬ ನೆನಪು’, ‘ಕ್ರೌಂಚ ಪಕ್ಷಿಗಳು'(೨೦೦೫), ‘ಬಿಂದು ಬಿಂದೆಗೆ’, ‘ಪಾರಿಜಾತ ಕವನ ಸಂಕಲನ’, ‘ಅಸ್ಪ್ರಶ್ಯರು’ ಕಾದಂಬರಿ, ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’, ಶ್ರೀ ಕೋ.ಶಿ. ಕಾರಂತರ ಬದುಕಿನ ನೆನಪುಗಳ ಸಂಗ್ರಹ, ‘ಇಲ್ಲಿರಲಾರೆ ಅಲ್ಲಿಗೆ ಹೊಗಲಾರೆ’, ‘ದಿ.ಬಿ.ವಿ.ಕಾರಂತರ ಬದುಕಿನ ನೆನಪು ಅನುಭವಗಳ ಕಥನ’, ‘ಭಾರತೀಯ ಮಹಿಳೆಯರ ಸ್ವಾತಂತ್ರ್ಯ’, ‘ಕಮಲಾದೇವಿ ಚಟ್ಟೋಪಾಧ್ಯಾಯ ಬರೆದ ‘‘Indian Women’s Struggle for Freedom’’ನ ಅನುವಾದ, ‘ಬೆಳ್ಳಿಯ ಸಂಕೋಲೆಗಳು’, ‘ಭಾರತೀಯ ಮಹಿಳೆಯರ ಸ್ಥಿತಗತಿಯ ಕುರಿತು ಶ್ರೀಮತಿ ಮೈತ್ರೀಏಯಿ ಮುಖ್ಯೋಪಾಧ್ಯಾಯ ಬರೆದ ‘Silver Shackles’’ನ ಅನುವಾದ, ಸಂಗೀತ ಸಂವಾದ (೧೯೯೯), ಸಂಗೀತ ವಿದ್ವಾಂಸ ಡಾ. ಭಾಸ್ಕರ್ ಚಂದಾವರ್ಕರ್ ಅವರ ಉಪನ್ಯಾಸಗಳ ಭಾಷಾಚಿತರ, ಧಾಂ ಧೂಂ ಸುಂಟರಗಾಳಿ (೧೯೯೨), ಮೂಕನ ಮಕ್ಕಳು (೧೯೯೨), ಗೊಂಬೆ ಮ್ಯಾಕ್ಬೆತ್ (೧೯೯೨) : ಐದು ಮಕ್ಕಳ ನಾಟಕಗಳು, ಢಾಣಾ ಢಂಗುರ (೧೯೯೨), ನಾಯಿಮರಿ ನಾಟಕ (೧೯೯೨), ಸೂರ್ಯ ಬಂದ (೧೯೯೭), ಝುಂ ಝಾಂ ಆನೆ ಮತ್ತು ಪುಟ್ಟ (೧೯೯೭) : ಮೂರು ಮಕ್ಕಳ ನಾಟಕಗಳು, ಕೋಟು ಗುಮ್ಮ (೧೯೯೭) , ಹಕ್ಕಿ ಹಾಡು (೨೦೦೨), ಅರ್ಧಚಂದ್ರ ಮಿಠಾಯಿ (೨೦೦೨), ಎರಡು ಮಕ್ಕಳ ನಾಟಕಗಳು, ಸೋಮಾರಿ ಓಲ್ಯಾ (೨೦೦೪), ಮಕ್ಕಳ ನಾಟಕ, ಸೂರ್ಯ ಕಿನ್ನರಿಯರು (೧೯೯೬), ಸ್ವಪ್ನಾ ದತ್ತ ಅವರ ಖಿhe Suಟಿ ಈಚಿಡಿies ನ ಅನುವಾದ, ಸೇಡಿಯಾಪು ನೆನಪುಗಳು (೧೯೯೬), ಪಂಡಿತ ಸೇಡಿಯಾಪು ಕೃಷ್ಣ ಭಟ್ಟರ ನೆನಪುಗಳ ಸಂಗ್ರಹ, ಮಲ್ಲಿನಾಥನ ಧ್ಯಾನ (೧೯೯೬), ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ , ಜಾತ್ರೆ (೧೯೯೮), ಸ್ಮೃತಿ ಕಥನ ಅಲೆಗಳಲ್ಲಿ ಅಂತರಂಗ (೨೦೦೬), ೧೯೭೯ರಿಂದ ೨೦೦೪ರವರೆಗಿನ ಕಥೆಗಳ ಸಂಗ್ರಹ, ಮೇಜು ಮತ್ತು ಬಡಗಿ (೨೦೦೭), ಲೇಖನ, ಕತೆ, ಸಂದರ್ಶನ ಅನುವಾದಗಳ ಮಿಶ್ರಸಂಗ್ರಹ, ಮುಂತಾದ ಕೆಲ ಪುಟಗಳು ( ೨೦೦೮), ಲೇಖಕಿ ಶ್ರೀಮತಿ ಸರಸ್ವತಿ ಬಾಯಿ ರಾಜವಾಡೆಯವರ ಬದುಕಿನ ಕಥನ, ‘ಅಳಿಲು ರಾಮಾಯಣ’ ಮತ್ತು ‘ಸತ್ರು ಅಂದ್ರೆ ಸಾಯ್ತಾರ?’ಮಕ್ಕಳ ಎರಡು ನಾಟಕಗಳು ಇವಿಷ್ಟು ಇವರಿಂದ ಪ್ರಕಟಗೊಂಡವು, ಆಯ್ದ ಕಥೆಗಳು: ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆಯಿಂದ ಪ್ರಕಟಿತ, ಅಂತರೀಚಿ ಪಾನೇ: ಮರಾಠಿಗೆ ಅನುವಾದಿತ ಕಥೆಗಳ ಸಂಗ್ರಹ, ಅನುವಾದಕಿ: ಉಮಾ ಕುಲಕರ್ಣಿ, ಆಯ್ದ ಒಂಭತ್ತು ಕಥೆಗಳು/ಅಸ್ಪೃಶ್ಯರು: ಮಂಗಳೂರು ವಿ.ವಿ.ದಲ್ಲಿ ಪಠ್ಯ, ವೈದೇಹಿಯವರ ಆಯ್ದ ಕಥೆಗಳು: ಬೆಂಗಳೂರು ವಿ.ವಿ.ದಲ್ಲಿ ಪಠ್ಯ, ವೈದೇಹಿಯವರ ಆಯ್ದ ಕಥೆಗಳು-ಶ್ರೀ ಕೆ.ವಿ. ಸುಬ್ಬಣ್ಣ ನೆನಪಿನ ಪುಸ್ತಕ ಮಾಲೆ ‘ಮೊದಲ ಓದು’ ನಲ್ಲಿ ಪ್ರಕಟಿತ, ವೈದೇಹಿಯವರ ಆಯ್ದ ಕವನಗಳು- Gulabi Talkies and other stories- English Translations of 20 stories, edited by Mrs. Tejswini Niranjana and Published by Penguin Publications India Ltd. 2006, Jathre- the temple fair, Translated by Mrs. Nayana Kashyap, published by Oxford University Press in an anthology of Novellas. (2008) ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು’ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಸಿನಿಮಾ ‘ಗುಲಾಬಿ ಟಾಕೀಸು’ (೨೦೦೮), ಬೆಂಗಳೂರು ದೂರದರ್ಶನ ಕೇಂದ್ರ ದಿಂದ ‘ಅಕ್ಕು’ ಕತೆ ಆಧರಿಸಿ ಟೆಲಿಚಿತ್ರದ ನಿರ್ಮಾಣ, ಟೆಲಿಪ್ರಸಾರ, ‘ಶಕುಂತಲೆಯೊಂದಿಗೆ ಕಳೆದ ಅಪರಾಹ್ನ’ ಅಸ್ಸಾಮಿನಲ್ಲಿ ಈಗ ನೆಲೆಸಿರುವ ನೀನಾಸಂ ಪದವೀಧರೆ ಕನ್ನಡಿತಿ ನಟಿ ಭಾಗೀರಥೀ ಬಾಯಿ ಕದಂ ‘ಏಕವ್ಯಕ್ತಿ ಪ್ರದರ್ಶನ’ವಾಗಿ ಹಿಂದೀ, ಕನ್ನಡ ಮತ್ತು ಅಸ್ಸಾಮೀ ಭಾಷೆಗಳಲ್ಲಿ ದೇಶದ ಅನೇಕ ಕಡೆ (ಎನ್‌ಎಸ್‌ಡಿ,ಯನ್ನೂ ಸೇರಿ) ಪ್ರದರ್ಶನ ನೀಡುತ್ತಾಳೆ. ಅತ್ಯಂತ ಯಶಸ್ವೀ ಪ್ರದರ್ಶನವಾಗಿ ಇದು ಹೆಸರು ಪಡೆದಿದೆ, ಬೆಂಗಳೂರಿನ ಧ್ಯಾನ ರೆಪರ್ಟರಿ ತಂಡ ತನ್ನ ‘ಮಲ್ಲಿನಾಥ ಧ್ಯಾನ’ ಎಂಬ ಮೂರು ನಾಟಕ ಗುಚ್ಛದಲ್ಲಿ ಶಕುಂತಲೆಯೊಂದಿಗೆ ಅಪರಾಹ್ನ, ಆಭಾ ಮತ್ತು ಸೌಗಂಧಿಯ ಸ್ವಗತಗಳು ಕತೆಗಳನ್ನು ನಾಟಕಗಳನ್ನಾಗಿ ಆಡಿ ಹೆಸರು ಗಳಿಸಿದೆ, ಹಲವು ಕಥೆಗಳು ಮರಾಠಿ, ಮಲೆಯಾಳಿ, ತಮಿಳು, ತೆಲುಗು, ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ, ಮೈಸೂರು ವಿ.ವಿ. ಮತ್ತು ಕರ್ನಾಟಕ ಪದವಿಪೂರ್ವ ಮಂಡಳಿಯ ಪಠ್ಯಗಳಲ್ಲಿ ಆಯ್ದ ಕವನಗಳು ಪ್ರಕಟಿತ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಂಗ್ರಹದಲ್ಲಿ ಕಥೆ ಕವನಗಳು ಪ್ರಕಟಿತ, ‘The Inner Courtyard’ (Editor Smt. Lakshmi Holmstorm, Published by Virag Press, London), ‘From Kaveri to Godavari’ (Editor Dr. Ramachandra Sharma, Published by Penguin), ‘Women Writing in India’ (Editors Ms. Susie Tharu and K. Lalitha, Published by The Feminist Press, New York), ‘The Southern Harvest’ (Editor Smt. Githa Hariharan, Published by KATHA), ‘In Their Own Voice’ (Editor Arlene R.K. Zide, The Penguin Anthology of Contemporary Indian Women Poets) ಮುಂತಾದ ಎಂಥೋಲಜಿಯಲ್ಲಿ ಕಥೆ ಕವನಗಳು ಪ್ರಕಟಗೊಂಡಿವೆ.
ಸಾಹಿತ್ಯ ಕೃಷಿಗೆ ಹುಡುಕಿ ಬಂದಿರುವ ಗೌರವ ಪ್ರಶಸ್ತಿ-ಪುರಸ್ಕಾರಗಳು:
ಪ್ರಶಸ್ತಿಗಳು ಸಂಗೀತಾ ದೇಸಾಯಿ ದತ್ತಿ ನಿಧಿ ಪ್ರಶಸ್ತಿ ‘ಬಿಂದುಬಿಂದಿಗೆ’ ಮತ್ತು ‘ಅಂತರಂಗದ ಪುಟಗಳು’ ೧೯೮೫, ೧೯೯೨, ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಗೋಲ-೧೯೯೨, ‘ಕಥಾ’ ಪ್ರಶಸ್ತಿ(ಹಗಲು ಗೀಚಿದ ನೆಂಟ)೧೯೯೪, ಅನುಪಮಾ ಪ್ರಶಸ್ತಿ (ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ)೧೯೯೪, ಎಂ.ಕೆ. ಇಂದಿರಾ ಪ್ರಶಸ್ತಿ(ಅಸ್ಪೃಶ್ಯರು)೧೯೯೪, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಐದು ಮಕ್ಕಳ ನಾಟಕಗಳು)೧೯೯೪, ಸುಧಾ ಯುಗಾದಿ ಕಾದಂಬರಿ ಸ್ಪರ್ಧೆ ವಿಶೇಷ ಬಹುಮಾನ ೧೯೮೨ (ಅಸ್ಪೃಶ್ಯರು-ಕಾದಂಬರಿ), ‘ಕಥಾ’ ಪ್ರಶಸ್ತಿ (ಅಮ್ಮಚ್ಚಿಯೆಂಬ ನೆನಪು)೧೯೯೭, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಮಲ್ಲಿನಾಥನ ಧ್ಯಾನ)೧೯೯೭, ಅತ್ತಿಮಬ್ಬೆ ಪ್ರಶಸ್ತಿ(ಅತ್ತಿಮಬ್ಬೆ ಪ್ರತಿಷ್ಠಾನ, ಬೆಂಗಳೂರು)೧೯೯೮, ಕರ್ನಾಟಕ ರಾಜ್ಯದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ೧೯೯೮, ಭಾರ್ಗವ ಪ್ರಶಸ್ತಿ ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ, ಬೆಂಗಳೂರು ೨೦೦೧-೨೦೦೩, ಸತ್ಯಕಾಮ ಪ್ರಶಸ್ತಿ ಸತ್ಯಕಾಮ ಪ್ರತಿಷ್ಠಾನ, ೨೦೦೧, ಸದೋದಿತ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ(ಶಾಶ್ವತಿಟ್ರಸ್ಟ್‌ಬೆಂಗಳೂರು), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೯ (ಕ್ರೌಂಚಪಕ್ಷಿಗಳು ಕಥಾಸಂಕಲನಕ್ಕೆ) ಪ್ರದಾನ ೨೦೧೦, ಕೇಂದ್ರ ಸಾಹಿತ್ಯ ಅಕಾಡೆಮಿಯ ‘ರೈಟರ್-ರೆಸಿಡೆಂಟ್’ ಫೆಲೊಶಿಪ್೨೦೦೯, ಕನ್ನಡ ಸಾಹಿತ್ಯ ಸಾರಸ್ವತ ಸಮ್ಮಾನ್-ಗೊಯೆಂಕಾ ಪ್ರತಿಷ್ಠಾನದಿಂದ ೨೦೧೦.
ಪಾಲ್ಗೊಂಡಿರುವ ಕೆಲ ಮುಖ್ಯ ಗೋಷ್ಠಿಗಳು,ಕಮ್ಮಟಗಳು:
ಭೋಪಾಲದಲ್ಲಿ ೧೯೮೬ ಮತ್ತು ೧೯೮೯ರಲ್ಲಿ ಅಖಿಲ ಭಾರತೀಯ ಲೇಖಕರ ಸಾಹಿತ್ಯ ಗೋಷ್ಠಿಗಳಲ್ಲಿ, ‘ಕಥಾ’ ಸಂಸ್ಥೆ ೧೯೯೨ರಲ್ಲಿ ದೆಹಲಿಯಲ್ಲಿ ನಡೆಸಿದ ‘ಕಥಾ’ ಪ್ರಶಸ್ತಿ ಸಂದರ್ಭದ ಸಾಹಿತ್ಯ ಸಂಕಿರಣದಲ್ಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ನ್ಯಾಶನಲ್ ಬುಕ್ ಟ್ರಸ್ಟ್ ೧೯೯೬ರ ಫೆಬ್ರವರಿಯಲ್ಲಿ ೧೨ನೇ ವಿಶ್ವ ಪುಸ್ತಕ ಮೇಳ (ವರ್ಲ್ಡ್ ಬುಕ್ ಫೇರ್) ನಿಮಿತ್ತ ನಡೆಸಿದ ದಕ್ಷಿಣ ಏಷ್ಯಾ ದೇಶಗಳ(ಸೌತ್ ಏಷ್ಯನ್ ಕಂಟ್ರೀಸ್) ಸಾಹಿತ್ಯ ಗೋಷ್ಠಿಯಲ್ಲಿ ಭಾರತದ ಪ್ರತಿನಿಧಿಗಳಲ್ಲಿ ಒಬ್ಬಳಾಗಿ, ೧೯೯೭ ಜನವರಿಯಲ್ಲಿ ಕೇರಳದ ತಿರೂರಿನಲ್ಲಿ ಎಡುತಚ್ಚನ್ ಸ್ಮರಣಾರ್ಥ ನಡೆದ ಸಾಹಿತ್ಯ ಗೋಷ್ಠಿಯಲ್ಲಿ, ನೀನಾಸಮ್ ಹೆಗ್ಗೋಡು ೧೯೮೩ರಲ್ಲಿ ನಡೆಸಿದ ಸಿನೆಮಾ ರಸಗ್ರಹಣ ಶಿಬಿರದಲ್ಲಿ ಶಿಬಿರಾರ್ಥಿ-೧೦ ದಿನಗಳ ಕಾಲ. ಆ ಮೇಲೆ ಸತತ ಪ್ರತೀ ವರ್ಷ ಸಾಧ್ಯವಿರುವಷ್ಟು ದಿನ, ನೀನಾಸಮ್ ಸಂಸೃತಿ ಶಿಬಿರಗಳಲ್ಲಿ ಭಾಗವಹಿಸುವಿಕೆ, ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ – ಮಾರ್ಚ್ ೧,೧೯೯೭, ಅನೇಕ ಜಿಲ್ಲಾ, ರಾಜ್ಯಮಟ್ಟದ ಸಾಹಿತ್ಯ ಗೋಷ್ಠಿಗಳಲ್ಲಿ, ಕವಿಗೋಷ್ಠಿಗಳಲ್ಲಿ (ಬೇಂದ್ರೆ ಶತಮಾನೋತ್ಸವ, ರಾಮಚಂದ್ರ ಶರ್ಮ-೭೦, ಕನ್ನಡ ಸಾಹಿತ್ಯ ಪರಿಷತ್ತಿನ ಅಮೃತೋತ್ಸವ, ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ, ಇತ್ಯಾದಿ) ಭಾಗವಹಿಸುವಿಕೆ, ಕೇಂದ್ರ ಸಾಹಿತ್ಯ ಅಕಾಡೆಮಿ ನಡೆಸಿದ ಮಹಿಳಾ ಸಾಹಿತ್ಯ ಸಂಕಿರಣ (೨೦೦೨,ಫೆಬ್ರವರಿ) ಕಥಾ ಸಂಕಿರಣ (೨೦೦೨ ಡಿಸೆಂಬರ್) ದಕ್ಷಿಣ ವಲಯ ಕವಿಗೋಷ್ಠಿ ಮುಂತಾದವುಗಳಲ್ಲಿ ಆಮಂತ್ರಿತಳಾಗಿ ಸಕ್ರಿಯವಾಗಿ ಭಾಗವಹಿಸುವಿಕೆ, ‘ಅನ್ವೇಷಿ’ ಮಹಿಳಾ ಸಂಘಟನೆ ಹೈದರಾಬಾದ್‌ನಲ್ಲಿ ನಡೆಸಿದ ಮೂರು ದಿನಗಳ ಸಂಕಿರಣದಲ್ಲಿ ಭಾಗವಹಿಸುವಿಕೆ(೨೦೦೧ಜುಲೈ), ನ್ಯೂಯಾರ್ಕ್‌ನಲ್ಲಿ ೨೦೦೩ ಸೆಪ್ಟೆಂಬರ್ ೨೫-೨೮ರವರೆಗೆ ನಡೆದ ಅಖಿಲ ಭಾರತ ಸಾಹಿತ್ಯ ಸಮಾವೇಶದಲ್ಲಿ ಕನ್ನಡ ಸಾಹಿತ್ಯದ ಪ್ರತಿನಿಧಿಯಾಗಿ ಡಾ. ಕಂಬಾರರ ಜೊತೆ ಭಾಗವಹಿಸುವಿಕೆ, ವಿಮೆನ್ಸ್ ವರ್ಲ್ಡ್ ಏರ್ಪಡಿಸಿದ ದಕ್ಷಿಣ ಏಷ್ಯಾ ಲೇಖಕಿಯರ ಸಮಾವೇಶದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ-೨೦೦೭ ಭಾಗವಹಿಸುವಿಕೆ.
ಹೀಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಕುಂದಾಪ್ರದಗಳು ಪ್ರಜ್ವಲಿಸುತ್ತಿರುವುದು ಹೆಮ್ಮಯ ವಿಚಾರ. ಇದೀಗ ವೈದೇಹಿಯವರ ಸಾಹಿತ್ಯ ಪ್ರತಿಭೆಗೆ ‘ಆಳ್ವಾಸ್ ನುಡಿಸಿರಿ’ ಸಮ್ಮೇಳದ ಅಧ್ಯಕ್ಷಗಿರಿ. ಇನ್ನು ಮುಂದೆಯೂ ಕನ್ನಡ ಸಾಹಿತ್ಯ ಲೋಕದಲ್ಲಿ ಧುವತಾರೆಯೆಂತೆ ಸದಾ ಬೆಳಗುತ್ತಿರಲಿ. ಕುಂದಾಪ್ರದ ಹೆಣ್ಮಗಳ ಸಾಧನೆಯೂ ಕನ್ನಡ ಸಾಹಿತ್ಯಲೋಕದ ಮೂಲಕ ವಿಶ್ವ ಸಾಹಿತ್ಯಕ್ಕೆ ಪಸರಿಸಲಿ ಎಂದು ಹಾರೈಸೋಣ..!
ಚಿತ್ರಕೃಪೆ:ಗೂಗಲ್ ಇಮೇಜ್





Trackbacks & Pingbacks