ತೀರ್ಪು
ಕರ್ಫ್ಯೂ ವಿಧಿಸಿದ ಬೀದಿ ಬೀದಿಯಲಿ
ಆತಂಕದ ನಡುವೆ
ರಾಮನ ಜಪತಪ
ಪುರಾಣ ಪುಣ್ಯಕತೆಗಳ
ಕೆದಕಿ ಮತ್ತೆ ಮುಂದಿಟ್ಟ
ತ್ರೇತಾ ಯುಗದ
ನಂಬುಕೆಯ ಕಗ್ಗಂಟು.
ಬಿಡಿಸಲಾಗದ ಮಹಾಪುರುಷರದಷ್ಟೇ
ವಾದ ಅಪ್ಪ ಹೇಳಿದ ಕಥೆಯಲಿ
ರಾಮನುಟ್ಟಿದ ‘ಅಯೋಧ್ಯೆಯಲಿ’.
ತಂದೆಗೆ ತಕ್ಕ ಮಗ ‘ರಾಮ’
ಬಿಟ್ಟು ನಡೆದ ಕಾಡಿಗೆ ‘ರಾಜ್ಯವ’
ಮರ್ಯಾದ ಪುರುಷೋತ್ತಮ ‘ಶ್ರೀರಾಮ’
ಅಟ್ಟಿದ ಕಾಡಿಗೆ ಮಡದಿಯ
ಒಡ್ಡಿದ ಅಗ್ನಿಗೆ ತನ್ನೊಡತಿಯ
‘ನಿಷ್ಕರುಣಿ’ ರಾಮ. ಮತ್ತಷ್ಟು ಓದು 
‘ರಾವಣನ ಹೊಸ ಮುಖ ಅನಾವರಣಗೊಳಿಸಿದ ವಿಶಿಷ್ಟ ರಂಗ ಪ್ರಯೋಗ :- ಏಕಾದಶಾನನ ’
ಕರುಣಾಕರ ಬಳ್ಕೂರು
ವೇದವ್ಯಾಸ ರಾಮಾಯಣದ ಸಣ್ಣ ಎಳೆಯೊಂದನ್ನು ತೆಗೆದು ನಾಟಕರಂಗಕ್ಕೆ ಅಳವಡಿಸಿದ ರೀತಿ ಸೃಜನಶೀಲವಾದದ್ದು. ‘ಜಯ ರಾಮ ಜಯ ಜಯ ರಾಮ’ ಎನ್ನುವ ರಾಮ ನಾಮ ಸ್ಮರಣೆಯನ್ನು ಹೊಗಳುತ್ತ ಭಕ್ತರ ಗುಂಪಿನ ಆಗಮನ, ಇಂದು ರಾಮನ ಪಟ್ಟಾಭಿಷೇಕವಂತೆ.., ಭರ್ಜರಿ ಊಟ, ಮನೋರಂಜನೆ ಹಾ.. ಹಾ.. ಎಲ್ಲರ ಮೊಗದಲ್ಲಿಯೂ ಸಂತೋಷದ ಹೂಮಳೆ. ಅಯೋಧ್ಯೆಯ ನಗರಕ್ಕೆ ರಾಜ ಮಹಾರಾಜರು, ಪುರಜನರು, ಬಂಧುಗಳು, ರಾಮನ ಭಕ್ತರು, ಹಿತೈಷಿಗಳು ಹೀಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ದ್ವಾರಪಾಲಕನಂತೂ ಬಂದವರನ್ನು ಸುಧಾರಿಕೆ ಮಾಡುವ ದೊಡ್ಡ ಕೆಲಸವನ್ನು ಲವವಿಕೆಯಿಂದ ನಿಭಾಯಿಸುವುದು ನಾಟಕದ ಆರಂಭಕ್ಕೆ ಮುನ್ನುಡಿಯಾಗಿದೆ.
ಬಂದಿರುವವರ ಕುದುರೆಗಳನ್ನು ಇಲ್ಲಿ ಕಟ್ಟಿ, ಅಲ್ಲಿ ಕಟ್ಟಿ, ದೂರದ ರಾಜರುಗಳಿಗೆ ಉಳಿಯಲು ಅತಿಥಿ ಗೃಹ ಅಲ್ಲಿದೆ, ರಾಮನ ಪಟ್ಟಾಭೀಷೇಕಕ್ಕೆ ಚಿನ್ನ, ಬೆಳ್ಳಿ, ಹಣವನ್ನು ಕಾಣಿಕೆಯಾಗಿ ತಂದವರು ಭಂಡಾರದಲ್ಲಿ ಕೊಟ್ಟು ರಶೀದಿಯನ್ನು ತಪ್ಪದೇ ಪಡೆಯಿರಿ, ಮತ್ತೆ ಊಟ ಮಾಡುವಲ್ಲಿ ನೂಕು ನೂಗ್ಗಲು ಮಾಡದಿರಿ ಎಂದು ಆಗಮಿಸಿರುವ ಸರ್ವರಲ್ಲಿ ಬಿನ್ನೈಸಿಕೊಳ್ಳುತ್ತ ದ್ವಾರಪಾಲಕನು ರಾಮನ ಪಟ್ಟಾಭಿಷೇಕಕ್ಕೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾನೆ.
ಎರಡನೆ ದೃಶ್ಯದಲ್ಲಿ ಕೌಸಲ್ಯೆ ಮತ್ತು ರಾಮನು ಕಷ್ಟ-ಸುಖಗಳ ಬಗ್ಗೆ ಕುಳಿತು ಹರಟೆ ಹೊಡೆಯುತ್ತಾರೆ. ಆಗ ರಾಮ, ರಾಮಣನ ಪರವಹಿಸಿ ಮಾತನಾಡಿದಾಗ ಕೌಸಲ್ಯೆ ಕೆಂಡಮಂಡಲವಾಗಿ ರಾವಣನನ್ನು ದೂಷಿಸುತ್ತಾ ಆಕ್ರೋಶವನ್ನು ವ್ಯಕ್ತಪಡಿಸುತ್ತಾಳೆ. ಆದರೆ ರಾಮ, ರಾವಣನ ಅಂತಃಕರಣವನ್ನು ಮನಸಾರೆ ಮೆಚ್ಚಿ ತನ್ನ ಅನುಭವದ ನುಡಿಗಳನ್ನು ಕೌಸಲ್ಯೆಯಲ್ಲಿ ಬಿಚ್ಚಿಡುತ್ತಾನೆ. ನಾಟಕದ ನಡುವೆಯೇ ಹಿಂದೆ ನಡೆದ ಎಲ್ಲಾ ಘಟನೆಗಳು ರಂಗಮಂಟಪದ ಮೇಲೆ ಒಂದರ ಮೇಲೆ ಒಂದರಂತೆ ಚಿತ್ರ ಪಟಲಗಳ ಮೂಲಕ ಬಂದು ಹೋಗುವಾಗ ರಾಮಾಯಣದ ಕಥೆಯು ಅನಾವರಣಗೊಳ್ಳುತ್ತದೆ. ಇದು ನಿರ್ದೇಶಕರ ಕೈಚಳಕದಿಂದ ವಿನೂತನವಾಗಿ ಮೂಡಿಬಂದಿದೆ. ಮತ್ತಷ್ಟು ಓದು 








