ರಾಜ್ಯ ರಾಜಕೀಯ ಗದ್ದಲಕ್ಕೆ ಗುದ್ದು ನೀಡಿದ ಐಟಿ ದಾಳಿ
ಒಂದೆಡೆ ರಾಜ್ಯ ರಾಜಕೀಯದಲ್ಲಿ ಅಭದ್ರತೆ. ಇನ್ನೊಂದೆಡೆ ಸರಕಾರದ ಉಳಿವಿಗಾಗಿ ಅಪರೇಷನ್ ಕಮಲದ ಮೂಲಕ ಇತರ ಪಕ್ಷಗಳ ಶಾಸಕರನ್ನು ದತ್ತು ತೆಗೆದುಕೊಳ್ಳುವ ಹಾವಳಿ. ಇದಕ್ಕಾಗಿ ಕೋಟಿ ಕೋಟಿ ರೂಪಾಯಿಗಳ ವ್ಯಯ. ಇದನ್ನೆಲ್ಲಾ ನೋಡಿ ರೋಸಿ ಹೋಗಿರುವ ಜನತೆಗೆ ರಾಜಕೀಯವೆಂದರೆ ಇದೇನಾ ಎಂಬ ಭಾವನೆ ಹುಟ್ಟಿಕೊಂಡಿದೆ. ಸರಕಾರದ ಉಳಿವಿಗಾಗಿ ಮುಖ್ಯಮಂತ್ರಿಯಾದಿಗಳು ಹಣದ ಮೂಲಕ ಶಾಸಕರನ್ನು ಖರೀದಿಸುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖಾಧಿಕಾರಿಗಳು (೩೦೦ ಕ್ಕೂ ಹೆಚ್ಚಿನ ಅಧಿಕಾರಿಗಳಿದ್ದರು) ರಾಜ್ಯದ ಆರುವತ್ತು ಸ್ಥಳಗಳಲ್ಲಿ ಶಾಸಕರ ನಿವಾಸ, ಕಚೇರಿಗೆ ದಾಳಿ ಮಾಡಿದ್ದಾರೆ. ಇದನ್ನು ಬಿಜೆಪಿ ಕಾಂಗ್ರೆಸ್ಸಿಗರ ಪಿತೂರಿ ಎಂದು ದೂರುತ್ತಿದ್ದಾರೆ. ಇಂತಹ ದಾಳಿ ಆದ ಸಂದರ್ಭದಲ್ಲಿ ಇಂತಹ ಆರೋಪಗಳನ್ನು ರಾಜಕೀಯ ಪಕ್ಷಗಳು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.
ಇದೇ ರೀತಿ ಈ ಹಿಂದೆ ತಾಜ್ ಕಾರಿಡಾರ್ ಪ್ರಕರಣದಲ್ಲಿ ಮಾಯಾವತಿ ವಿರುದ್ಧ ಅಕ್ರಮ ಸಂಪತ್ತು ಕ್ರೋಡಿಕರಣದ ಆರೋಪಕ್ಕೆ ಸಂಬಂಧಿಸಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಕೇಂದ್ರ ಸರಕಾರ ಸಿಬಿಐಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಐಟಿ ದಾಳಿ ನಡೆದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದ ಶಾಸಕರು ಇದೊಂದು ಪಿತೂರಿ, ಷಡ್ಯಂತ್ರ ಎಂದು ಆರೋಪಿಸುವುದು ಎಷ್ಟು ಸರಿ? ಪ್ರಾಮಾಣಿಕತೆಯಿಂದ ಸಂಪತ್ತು ಗಳಿಸಿದ ಶಾಸಕರು ಈ ರೀತಿಯ ಆರೋಪ ಮಾಡಲು ಸಾಧ್ಯವೇ? ನಮ್ಮದು ಪ್ರಾಮಾಣಿಕ ಮಾರ್ಗದಲ್ಲಿ ಸಂಗ್ರಹಿಸಿದ ಹಣ, ಸಂಪತ್ತು ಎಂದು ಹೇಳಿಕೊಳ್ಳುವ ಶಾಸಕರು, ಸಚಿವರು ತಮ್ಮ ತೆರಿಗೆಯ ಪೂರ್ಣ ಪ್ರಮಾಣದ ದಾಖಲೆಗಳನ್ನು ತೆರಿಗೆ ಇಲಾಖಾಧಿಕಾರಿಗಳು ಸಲ್ಲಿಸಲು ಹಿಂದೆಡೆ ಹಾಕುವುದೇಕೆ? ಇದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಕೇವಲ ಅಧಿಕಾರ ಲಾಲಸೆ, ರಾಜಕೀಯದಲ್ಲಿ ಸರ್ವಾಧಿಕಾರಿ ಮೆರೆಯಲು ಕೋಟಿ ಕೋಟಿ ಹಣ ನೀಡಿ, ರಾಜಕೀಯ ಸಿದ್ಧಾಂತಗಳನ್ನು ಅಪಮೌಲ್ಯ ಮಾಡಿ ಇತರ ಪಕ್ಷದ ಶಾಸಕರನ್ನು ಖರೀದಿಸುವುದು ನೈತಿಕತೆಯೇ? ಅಥವಾ ಸಂವಿಧಾನದ ಪರಿಮಿತಿಯಲ್ಲಿ ಬರುವ ಚಟುವಟಿಕೆಯೇ? ಅಲ್ಲ. ಇದೊಂದು ಮಿತಿಮೀರಿದ ಚಟುವಟಿಕೆಯಾಗಿದೆ. ಮತ್ತಷ್ಟು ಓದು 
ಎಂ.ಜಿ.ಎಂ. ಯಕ್ಷಗಾನ ಕೇಂದ್ರದವರು ನಡೆಸಿಕೊಟ್ಟ ಹಿಡಿಂಬಾ ವಿವಾಹ
ಕರುಣಾಕರ ಬಳ್ಕೂರು
ಕೌಟುಂಬಿಕ ಕಲಹ, ಹೆಣ್ಣು, ಮಣ್ಣು, ಹೊನ್ನುಗಾಗಿ ಹೋರಾಟ, ಸರಕಾರದಲ್ಲಿ ಕುರ್ಚಿಗಾಗಿ ಗುದ್ದಾಟ ಎಲ್ಲವು ಒಳಜಗಳ ಮೂಲಕ ತಾನು ಬದುಕಲು ಇನ್ನೊಂದನ್ನು ಆಹುತಿ ಮಾಡುವ ಪ್ರವೃತ್ತಿ ಇಂದು ಜೀವಂತವಾಗಿರುವ ಮೌಲ್ಯಗಳು.
ಒಡಹುಟ್ಟುತಾ ಅಣ್ಣತಮುಂದಿರು, ಬೆಳೆ ಬೆಳೆಯುತ್ತಾ ದಾಯಾದಿಗಳು ಪೂರ್ವಜರು ಮಾಡಿರುವ ಗಾದೆ ನೂರಕ್ಕೆ ನೂರು ಸತ್ಯ ಎನ್ನುವುದುನು ಸಾಕಾರಮಾಡಿದೆ ಕುರು-ಪಾಂಡವರ ನಡುವಿನ ಕುಟುಂಬ ದ್ವೇಷವೇ ಸಾಕ್ಷಿ. ಕೌರವ ಮತ್ತು ಪಾಂಡವರು ಸಮಸ್ತರಾಗಿದ್ದರು ಹಸ್ತಿನಾವತಿಯ ಆಳ್ವಿಕೆಯನ್ನು ನಾವು ಮಾಡಬೇಕು ಎನ್ನುವ ಕೌರವರ ಹೆಬ್ಬಯಕೆ. ಲೋಕ ಅಪವಾದ ಬರಬಾರದು ಎನ್ನುವುದಕ್ಕಾಗಿ ಪಾಂಡವರಿಗೆ ವಾರಾಣವತಿ೦iiನ್ನು ವಹಿಸಿಕೊಡುವುದು. ಮನೆತನದ ಪಟ್ಟಕ್ಕಾಗಿ ಕೌರವರು ಮಾಡುವ ಕುತಂತ್ರದ ರಾಜಕೀಯ. ಮನೆತನದ ಅನ್ನವನ್ನು ಕೌರವರೆ ಉಣ್ಣಬೇಕು ಎನ್ನುವ ಭೀಷ್ಮರ ಅಭಿಮತ.
ರಾಜಕೀಯದ ರಂಗದಲ್ಲಿ ಮನಸ್ಸಿಗೆ ಬಂದಂತೆ ಪಾಂಡವರನ್ನು ಕುಣಿಸುವುದು, ಅರಗಿನ ಮನೆಯನ್ನು ನಿರ್ಮಿಸಿ ಕೊಡುವುದು. ಮತ್ತೆ ಪುರೊಚನನ್ನು ಕಳುಹಿಸಿ ಬೆಂಕೆ ಹಚ್ಚುವುದು, ಭೀಮನಿಗೆ ವಿಧುರನ ಮೂಲಕ ಕೌರವರು ಹೆಣದಿರುವ ರಾಜಕೀ ತಂತ್ರವನ್ನು ಬೇದಿಸುವುದು. ತಾಯಿ, ಅಣ್ಣ ತಮ್ಮಂದಿರನ್ನು ರಕ್ಷಿಸಲು ಸುರಂಗ ಮಾರ್ಗವನ್ನು ನಿರ್ಮಿಸಿವುದು, ಪಾಂಡವರ ಬದಲಿಗೆ ಅಮಾಯಕ ಬ್ರಾಹ್ಮಣ ಕುಟುಂಬ ಅರಗಿಮನೆಯ ಬೆಂಕಿಗೆ ಆಹುತ್ತಿಯಾಗುವುದು. ಸುರಂಗ ಮಾರ್ಗದಲ್ಲಿ ಅರಗಿನ ಮನೆಯಿಂದ ತಪ್ಪಿಸಿಕೊಂಡು ಕಾಡು ಮಾರ್ಗದಲ್ಲಿ ನಡೆದು ಬಸವಳಿದು ಅಲೆದಾಟದಲ್ಲಿ ಕಲ್ಲು-ಮುಳ್ಳಗಳ ಮೇಲೆ ನಡೆದು ಕುಸಿದು ಬೀಳುವುದು. ಕಗ್ಗತ್ತಲ ರಾತ್ರಿಯಲ್ಲಿ ಕಾಡು ಪ್ರಾಣಿ, ರಕ್ಕಸರು ಇರುವ ಸ್ಥಳ, ಆದ್ರೆ ಭೀಮನಿಗೆ ತನ್ನವರನ್ನು ಹೇಗಾದ್ರು ಮಾಡಿ ರಕ್ಷಿಸುವ ಹೊಣೆ ಆ ಕಾರಣಕ್ಕೆ ಮರಗಿಡಗಳ ಸೊಪ್ಪು, ಕಲ್ಲುಬಂಡೆಗಳಿಂದ ಕೋಟೆಯನ್ನು ನಿರ್ಮಿಸಿ ಕಾವಲು ಕಾಯುತ್ತಾನೆ.





