ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 31, 2010

ಎಂ.ಜಿ.ಎಂ. ಯಕ್ಷಗಾನ ಕೇಂದ್ರದವರು ನಡೆಸಿಕೊಟ್ಟ ಹಿಡಿಂಬಾ ವಿವಾಹ

‍ನಿಲುಮೆ ಮೂಲಕ

ಕರುಣಾಕರ ಬಳ್ಕೂರು

ಯಕ್ಷಗಾನದ ಆರಂಭದಲ್ಲಿ ತೆರೆ ಹಿಡಿದಿರುವುದುಕೌಟುಂಬಿಕ ಕಲಹ, ಹೆಣ್ಣು, ಮಣ್ಣು, ಹೊನ್ನುಗಾಗಿ ಹೋರಾಟ, ಸರಕಾರದಲ್ಲಿ ಕುರ್ಚಿಗಾಗಿ ಗುದ್ದಾಟ ಎಲ್ಲವು ಒಳಜಗಳ ಮೂಲಕ ತಾನು ಬದುಕಲು ಇನ್ನೊಂದನ್ನು ಆಹುತಿ ಮಾಡುವ ಪ್ರವೃತ್ತಿ ಇಂದು ಜೀವಂತವಾಗಿರುವ ಮೌಲ್ಯಗಳು.
ಒಡಹುಟ್ಟುತಾ ಅಣ್ಣತಮುಂದಿರು, ಬೆಳೆ ಬೆಳೆಯುತ್ತಾ ದಾಯಾದಿಗಳು ಪೂರ್ವಜರು ಮಾಡಿರುವ ಗಾದೆ ನೂರಕ್ಕೆ ನೂರು ಸತ್ಯ ಎನ್ನುವುದುನು ಸಾಕಾರಮಾಡಿದೆ ಕುರು-ಪಾಂಡವರ ನಡುವಿನ ಕುಟುಂಬ ದ್ವೇಷವೇ ಸಾಕ್ಷಿ. ಕೌರವ ಮತ್ತು ಪಾಂಡವರು ಸಮಸ್ತರಾಗಿದ್ದರು ಹಸ್ತಿನಾವತಿಯ ಆಳ್ವಿಕೆಯನ್ನು ನಾವು ಮಾಡಬೇಕು ಎನ್ನುವ ಕೌರವರ ಹೆಬ್ಬಯಕೆ. ಲೋಕ ಅಪವಾದ ಬರಬಾರದು ಎನ್ನುವುದಕ್ಕಾಗಿ ಪಾಂಡವರಿಗೆ ವಾರಾಣವತಿ೦iiನ್ನು ವಹಿಸಿಕೊಡುವುದು. ಮನೆತನದ ಪಟ್ಟಕ್ಕಾಗಿ ಕೌರವರು ಮಾಡುವ ಕುತಂತ್ರದ ರಾಜಕೀಯ. ಮನೆತನದ ಅನ್ನವನ್ನು ಕೌರವರೆ ಉಣ್ಣಬೇಕು ಎನ್ನುವ ಭೀಷ್ಮರ ಅಭಿಮತ.
ರಾಜಕೀಯದ ರಂಗದಲ್ಲಿ ಮನಸ್ಸಿಗೆ ಬಂದಂತೆ ಪಾಂಡವರನ್ನು ಕುಣಿಸುವುದು, ಅರಗಿನ ಮನೆಯನ್ನು ನಿರ್ಮಿಸಿ ಕೊಡುವುದು. ಮತ್ತೆ ಪುರೊಚನನ್ನು ಕಳುಹಿಸಿ ಬೆಂಕೆ ಹಚ್ಚುವುದು, ಭೀಮನಿಗೆ ವಿಧುರನ ಮೂಲಕ ಕೌರವರು ಹೆಣದಿರುವ ರಾಜಕೀ ತಂತ್ರವನ್ನು ಬೇದಿಸುವುದು. ತಾಯಿ, ಅಣ್ಣ ತಮ್ಮಂದಿರನ್ನು ರಕ್ಷಿಸಲು ಸುರಂಗ ಮಾರ್ಗವನ್ನು ನಿರ್ಮಿಸಿವುದು, ಪಾಂಡವರ ಬದಲಿಗೆ ಅಮಾಯಕ ಬ್ರಾಹ್ಮಣ ಕುಟುಂಬ ಅರಗಿಮನೆಯ ಬೆಂಕಿಗೆ ಆಹುತ್ತಿಯಾಗುವುದು. ಸುರಂಗ ಮಾರ್ಗದಲ್ಲಿ ಅರಗಿನ ಮನೆಯಿಂದ ತಪ್ಪಿಸಿಕೊಂಡು ಕಾಡು ಮಾರ್ಗದಲ್ಲಿ ನಡೆದು ಬಸವಳಿದು ಅಲೆದಾಟದಲ್ಲಿ ಕಲ್ಲು-ಮುಳ್ಳಗಳ ಮೇಲೆ ನಡೆದು ಕುಸಿದು ಬೀಳುವುದು. ಕಗ್ಗತ್ತಲ ರಾತ್ರಿಯಲ್ಲಿ ಕಾಡು ಪ್ರಾಣಿ, ರಕ್ಕಸರು ಇರುವ ಸ್ಥಳ, ಆದ್ರೆ ಭೀಮನಿಗೆ ತನ್ನವರನ್ನು ಹೇಗಾದ್ರು ಮಾಡಿ ರಕ್ಷಿಸುವ ಹೊಣೆ ಆ ಕಾರಣಕ್ಕೆ ಮರಗಿಡಗಳ ಸೊಪ್ಪು, ಕಲ್ಲುಬಂಡೆಗಳಿಂದ ಕೋಟೆಯನ್ನು ನಿರ್ಮಿಸಿ ಕಾವಲು ಕಾಯುತ್ತಾನೆ.

ಇತ್ತ ಹಿಡಿಂಬಾ ವನದಲ್ಲಿ ಹಿಡಿಂಬಾಸುರ ನರಮನುಷ್ಯರ ವಾಸನೆಯಿಂದ ಹಸಿವನ್ನುನಿಗಿಲು, ತನ್ನ ತಂಗಿಯನ್ನು ಕರೆದು ನರಮನುಷ್ಯರ ಮಾಂಸವನ್ನು ತರಲು ನೇಮಿಸುವುದು. ಹಿಡಿಂಬೆ ಕಾಡಿಗೆ ತೆರಳಿ ಭೀಮನ ರೂಪ, ಲಾವಣ್ಯಕ್ಕೆ ಮನಸೋತು, ಅವನ್ನ್ನೇ ವರಿಸಬೇಕು, ಸಂಸಾರ ನಡೆಸಿ, ಮನುಷ್ಯಳಾಗಿ ಬದುಕಿ ಕೌರ್ಯ, ಹಿಂಸೆಗಳನ್ನು ಕಳಚಿಕೊಳ್ಳಬೇಕು ಎನ್ನುವ ತೊಳಲಾಟಕ್ಕೆ ಒಳಗುವುದು. ಇದಕ್ಕೆ ಕಾರಣವು ಇದೆ ಮೂಲತಃ ಈಕೆ ದೇವಕನ್ಯೆ, ದೇವೇಂದ್ರ ಆಸ್ಥಾನದಲ್ಲಿ ಆತನ ರೂಪಕ್ಕೆ ಮನಸೋತು, ದೇವೇಂದ್ರನ ಹೆಂಡತಿ ಸಚಿದೇವಿಯಿಂದ ಶಾಪಕ್ಕೆ ಒಳಗಾದವಳು.
ಹಿಂಡಾಂಬಾಸುರ ಹಸಿವೆಯನ್ನು ತಾಳದೇ, ಮಾಂಸವನ್ನು ತರಲು ಹೋಗಿರುವ ತಂಗಿ ಇನ್ನೂ ಬಂದಿಲ್ಲ ಕಾಡಿಗೆ ಬಂದು ನೊಡಿದರೆ ಭೀಮನಲ್ಲಿ ಆಕೆ ಸರಸ ಸಲ್ಲಾಪಕ್ಕೆ ಇಳಿದಿರುವುದು. ಅತನನ್ನೆ ಮದುವೆಯಾಗುತ್ತನೆ ಎಂದು ಹಠ ಹಿಡಿಯುವುದು. ಅಣ್ಣ ಕೋಪಕೊಳಗಾಗಿ ಹಿಂದೆಮುಂದೆ ನೋಡದೆ  ಅವಳ ಕತ್ತನ್ನು ಕತ್ತರಿಸಲು ಮುಂದಾಗ ಭೀಮ ಅವನ ವಿರುದ್ಧ ಯುದ್ಧಕ್ಕೆನಿಂತು ಹೋರಾಡಿ ಹಿಡಿಂಬಾಸುರರನ್ನು ನೆಲಕ್ಕುರುಳಿಸುತ್ತಾನೆ. ಇಲ್ಲಿ ಆರಂಭದಲ್ಲಿ ಭೀಮ ಹಿಡಿಂಬೆ ಮದುವೆಯಾಗಬೇಕು ಎಂದಾಗ ಅದನ್ನು ನಿರಾಕರಿಸಿದವನು ಇಲ್ಲಿ, ಅವಳ ಮೇಲೆ ಇರುವ ಆಸೆಯಿಂದಲೋ ಎಂಬಂತೆ ಆಕೆಯನ್ನು ಕಾಪಾಡುತ್ತಾನೆ.
ಇದೇ ಸಂದರ್ಭಕ್ಕೆ ವೇದವ್ಯಾಸರು ಆಗಮಿಸಿ ಭೀಮ ನೀನು ಹಿಡಿಂಬೆಯನ್ನು ಮದುವೆಯಾಗಲೇ ಬೇಕು ಮತ್ತು ಎಲ್ಲಾ ವೃತ್ತಾಂತವನ್ನು ತಿಳಿ ಹೇಳುತ್ತಾರೆ. ಮುಂದೆ ನಿನಗೆ ಈಕೆಯಿಂದ ಹುಟ್ಟವ ಗಂಡು ಮಗುವಿನಿಂದ ಒಂದು ರಾತ್ರಿ ಕುರುಕ್ಷೇತ್ರ ಯುದ್ಧ ನಡೆಯಲಿದೆ ಎನ್ನುತ್ತಾನೆ. ಭೀಮ ಆರಂಭದಲ್ಲಿ ಆಕೆ ರಕ್ಕಸಿ ಎನ್ನುವುದಕ್ಕಾಗಿ ನಿರಾಕರಣೆ ಮಾಡಿದವನು ಆಕೆಯನ್ನು ಮದುವೆಯಾಗುವುದು, ತಮಗೆ ಏನಾದರೂ ಲಾಭ ಇದ್ದರೆ ಮಾತ್ರ ಯವ ಕೆಲಸಕ್ಕೂ ಸೈ ಎನಿಸಿಕೊಳ್ಳವುದನ್ನು ನಾವು ಇಲ್ಲಿ ಕಾಣಬಹುದು. ಒಟ್ಟಿನಲ್ಲಿ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ಉಡುಪಿ ಎಂ.ಜಿ.ಎಂ. ಯಕ್ಷಗಾನ ಕೇಂದ್ರದವರು ನಡೆಸಿಕೊಟ್ಟ ಬಡಗು ತಿಟ್ಟು ಯಕ್ಷಗಾನ ‘ಹಿಡಿಂಬಾ ವಿವಾಹ’ ಉತ್ತಮವಾಗಿ ಮೂಡಿಬಂದಿರುವುದರಲ್ಲಿ ಎರಡುಮಾತಿಲ್ಲ.
ಭೀಮ, ಹಿಡಿಂಬೆ, ಹಿಡಿಂಬಾಸುರ ಪಾತ್ರಗಳು ಕೊನೆ ತನಕ ಜೀವಂತಿಕೆಯನ್ನು ಉಳಿಸಿಕೊಂಡಿದ್ದವು. ಭೀಮನಾಗಿ ಮೊಘವ ಗಣೇಶ ನಾಯಕ್, ಧರ್ಮರಾಯನಾಗಿ ನಾಗರಾಜ್ ಭಟ್, ನಕುಲನಾಗಿ ಅವಿನಾಶ್, ಸಹದೇವನಾಗಿ ಕಾರ್ತಿಕ್ ಸುಬ್ರಹ್ಮಣ್ಯ, ಅರ್ಜುನನಾಗಿ ಶ್ರೀನಾಥ್, ದ್ರೌಪದಿಯಾಗಿ ಪ್ರಸಾದ್ ಮೊಗಬೆಟ್ಟು, ಹಿಡಿಂಬಾಸುರನಾಗಿ ಕೃಷ್ಣಮೂರ್ತಿ ಉರಾಳ, ಹಿಡೆಂಬೆಯಾಗಿ ಪೇತ್ರಿ ಗಣೇಶ್ ನಾಯಕ್, ಮಾಯ ಹಿಡಿಂಬೆಯಾಗಿ ಪ್ರತೀಶ್ ಕುಮಾರ್, ಪ್ರಾರ್ಥನೆ ಮತ್ತು ವೇದವ್ಯಾಸ ಸಂಜೀವ ಸುರ್ವಣ, ಪುರೋಚನ ವಿಠಲಾಚಾರ್ಯ, ಹಿಮ್ಮೇಳದಲ್ಲಿ ಭಾಗವತರು ಸತೀಶ ಕೆದಲಾಯ, ಮದ್ದಲೆ-ದೇವದಾಸ ರಾವ್,  ಚಂಡೆ-ಕೃಷ್ಣಮೂರ್ತಿ ಭಟ್, ಶುತಿ-ಮಿಥನ್, ತೆರೆಯಲ್ಲಿ ನಿತೀಶ್, ರಕ್ಷಿತ್ ಆಳ್ವಾ ಅಭಿನಯಿಸಿದರು. ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುವುದು ಕಂಡುಬಂದಿರುವುದು ಸ್ವಲ್ಪ ಮಟ್ಟಿಗೆ ನಿರಾಶೆ ಉಂಟುಮಾಡುವಂತಾಯಿತು.

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments