” ಸೇವೆಯಲ್ಲೇ ಸಂಘ ದಕ್ಷ”
ರಾಜೇಶ್ ಪದ್ಮಾರ್, ಬೆಂಗಳೂರು
ಅಕ್ಟೋಬರ್ ೨೫ರ ಆರೆಸ್ಸೆಸ್ ಪ್ರಾಂತ ಪ್ರಚಾರಕ್ ಮುಕುಂದ ಅವರ ಲೇಖನಕ್ಕೆ ಪ್ರತಿಯಾಗಿ ನಿನ್ನೆ ಸಚ್ಚಿದಾನಂದ ಜೋಷಿಯವರ ಪ್ರತಿಕ್ರಿಯೆ ಮೂಡಿಬಂದ ರೀತಿ ನೀರಸ ಮಾತ್ರವಲ್ಲ, ಒಂಥರಾ ಚಡಪಡಿಸುವಿಕೆಯಿಂದ ಜನ್ಮ ತಾಳಿದ ಲೇಖನದಂತೆ ಭಾಸವಾಯಿತು. ಸಾರ್ವಜನಿಕವಾಗಿ ತುಸು ಮೌನಿಯಾಗಿರುವ ಆರೆಸ್ಸೆಸ್ ನಂಥಹಾ ಸಂಘಟನೆಯ ಪ್ರಮುಖರು ಮಂಡಿಸಿದ ಸಂಘಟನಾತ್ಮಕ ಅಭಿಪ್ರಾಯಗಳು ಬಿಜೆಪಿ ಮಾತ್ರವಲ್ಲ, ರಾಜಕೀಯ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತನಾಗಿರುವ ಓರ್ವಸಾಮಾನ್ಯ ವ್ಯಕ್ತಿಗೂ ಆಲೋಚನೆಗೀಡುಮಾಡುವ ಅಂಶಗಳನ್ನು ಉದಾಹರಿಸಿತ್ತು.
‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’ ಎಂಬ ಅಂಶವು ಸಣ್ಣ ಮಾತೇನಲ್ಲ. ದಶಕಗಳ ಸಾಮಾಜಿಕ ಸಂಘಟನಾ ಕೌಶಲ್ಯ ಹೊಂದಿರುವ, ಸಾಮಾಜಿಕ ಧ್ಯೇಯಕ್ಕಾಗಿಯೇ ಜೀವನ-ಸಮಯ ಮೀಸಲಿಟ್ಟ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರ ಚಿಂತನೆಯಿಂದ ಮೊಗೆದು ಬಂದ ಧೃಡ ಮಾನಸಿಕತೆಯ ಪ್ರತೀಕ ಅದು. ಸೃಷ್ಟಿ-ನಾಶ-ಮರುಸೃಷ್ಟಿ ಈ ಮೂರೂ ಸಾಧ್ಯ ಎಂದು ಆತ್ಮವಿಶ್ವಾಸದಿಂದಲೇ ಆರೆಸ್ಸೆಸ್ ಪ್ರಮುಖರಾದ ಮುಕುಂದ ಹೇಳಿರುವುದನ್ನು ಲೇಖನದಲ್ಲಿ ಗಮನಿಸಬಹುದು. ಸಾರ್ವಜನಿಕವಾಗಿ ಈ ರೀತಿಯ ಹೇಳಿಕೆ ಕೊಡುವ ಮುಂಚೆ ಖಂಡಿತವಾಗಿಯೂ ತನ್ನ ಶಕ್ತಿ-ಸಾಮರ್ಥ್ಯದ, ಹೇಳಿಕೆ ಮಾಡಬಹುದಾದ ಪರಿಣಾಮಗಳ, ಇತರ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಆರೆಸ್ಸೆಸ್ ಯೋಚಿಸುತ್ತದೆ ಎಂದೇಕೆ ಸಚ್ಚಿದಾನಂದ ಜೋಶಿಯವರಿಗೆ ಅನಿಸದು? ಮತ್ತಷ್ಟು ಓದು 
ನೆನಪು ನೆನಪಿಸಲೊಂದು ನೆಪ
ಪ್ರವೀಣ ಚಂದ್ರ ಪುತ್ತೂರು
ನಿನಗೆ ಶೇಷಮ್ಮ ಟೀಚರ್‌ನ ನಂಬರ್ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್, ಮೇಸ್ಟ್ರು, ಊರು, ಕಾಡುಗುಡ್ಡ, ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ ಬಿಟ್ಟರೆ ಹಿಂದಿನ ಹಾಗೇ ಇದೆ.
ಬಾಲ್ಯದ ಕನವರಿಕೆಯಿಂದ ಶೇಷಮ್ಮ ಟೀಚರ್‌ಗೆ ಫೋನ್ ಮಾಡಿದೆ. ಮನಸಿನ ತುಂಬಾ ಬಾಲ್ಯದ ಪ್ರವೀಣನೇ ತುಂಬಿಕೊಂಡಿದ್ದ. ಹೆಸರು ಹೇಳಿದಾಕ್ಷಣ ಗುರುತು ಹಿಡಿದು ಮಾತನಾಡಿದ್ದೇ ಮಾತನಾಡಿದ್ದು. ಅಮ್ಮ ಹೇಗಿದ್ದಾರೆ? ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ ಅಂತ ಇಡೀ ನನ್ನೂರಿನ ಆರೋಗ್ಯ ವಿಚಾರಿಸಿಕೊಂಡರು. ನಾನು ತಲುಪಿದ ನೆಲೆಯನ್ನು ಕೇಳಿ ಸಂತೋಷ ಪಟ್ಟರು. ಎಲ್ಲ ಅಬ್ಬೆಪಾರಿಯಾಗುತ್ತನೆಂದುಕೊಂಡಿದ್ದ ಹುಡುಗ ಇವನೇನಾ ಅಂತ ಅನಿಸಿರಬೇಕು.
ಶೇಷಮ್ಮ ಟೀಚರ್ ಎಂದರೆ ಮನದಲ್ಲಿ ಮೂಡುವುದು ಹಲವು ಮುಖಗಳು. ಕೋಪಗೊಂಡಾಗ ದುರ್ಗೆ. ಪ್ರೀತಿಯಿಂದ ಮಾತನಾಡುವಾಗ ಅಮ್ಮ. ಲೆಕ್ಕ ಹೇಳಿಕೊಡುವುದರಲ್ಲಿ ಸರಸ್ವತಿ. ಕ್ಲಾಸ್‌ನಲ್ಲಿ ನಾನು ಏನು ತಪ್ಪು ಮಾಡಿದರೂ ಮನೆಗೆ ಬಂದು ದೂರು ಹೇಳುತ್ತಿದ್ದರು. ನಾನು ಏಳನೇ ತರಗತಿ ಮುಗಿಸೋವರೆಗೂ ಅವರಿಗೆ ಮದುವೆಯಾಗಿರಲ್ಲಿಲ್ಲ. ನಂತರ ಮದುವೆಯಾಗಿ ದೂರದೂರಿಗೆ ಟ್ರಾನ್ಸ್‌ಫಾರ್ ಆಗಿದ್ದರು. ಇನ್ನು ಇವರು ನೋಡಲು ಸಿಗಲಾರರು ಅಂತ ಅಂದುಕೊಂಡಿದ್ದೆ. 10-12 ವರ್ಷಗಳ ನಂತರ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಹೊಡೆಯುವುದನ್ನು ಹೊರತು ಪಡಿಸಿದರೆ ಶೇಷಮ್ಮ ಟೀಚರ್ ಕೆಟ್ಟವರಾಗಿರಲ್ಲಿಲ್ಲ. ಶಾರದ ಪೂಜೆಯಂದು ಅವರ ಮಡಿಲಲ್ಲಿ ಕುಳಿತುಕೊಂಡು ಅಕ್ಕಿಯ ಮೇಲೆ ಮೊದಲಾಕ್ಷರ ಕಲಿತಿದ್ದೆ. ಪ್ರವೀಣ್ ಅನ್ನೋ ಹೆಸರಿಗೆ ಚಂದ್ರನನ್ನು ಸೇರಿಸಿದ್ದು ಕೂಡ ಇವರೇ. ಮತ್ತಷ್ಟು ಓದು 
‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !?
ರಾಕೇಶ್ ಶೆಟ್ಟಿ

ಶೀರ್ಷಿಕೆ ನೋಡಿ ಬಹಳಷ್ಟು ಮಂದಿಗೆ ನಗು ಬಂದಿರುತ್ತೆ,ಫೋಟೋ ನೋಡಿ ಇನ್ನ ನಗು ಬಂದು,ಈ ಹುಡ್ಗನಿಗೆ ಹುಚ್ಚು,ಅಹಂ ಅಥವಾ ತಿರುಕನ ಕನಸು ಅನ್ನಿಸಿರುತ್ತೆ ಅಲ್ವಾ? ಅನ್ನಿಸೊದು ಸಹಜ ಬಿಡಿ.ಆ ತರ ಅನ್ನಿಸೋದೊರೆಲ್ಲ ಅದನ್ನ ಈ ರೀತಿ ಓದ್ಕೊಳ್ಳಿ (ರಾಕೇಶ್ ಶೆಟ್ಟಿ= ಭಾರತದ ಸಾಮನ್ಯ ಪ್ರಜೆ.ಇಲ್ಲಿ ನನ್ನ ಹೆಸರು ಕಿತ್ತಾಕಿ ನಿಮ್ದೆ ಹಾಕೊಂಡು ಓದಿ,ನಾನೇನು ಪಿ.ಎಂ ಸೀಟಿಗಾಗಿ ಕಾಯ್ತಿಲ್ಲವಾದ್ದರಿಂದ ಖಂಡಿತ ಬೇಜಾರ್ ಮಾಡ್ಕೊಳ್ಳೋದಿಲ್ಲ
)
ಸರಿ.ನಾನ್ ಪಿ.ಎಂ ಆಗ್ಬಹುದಾ? ಯಾಕ್ ಆಗಲ್ಲ, ಎಷ್ಟಾದ್ರೂ ನಮ್ದು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲೊಂದು.ಇಲ್ಲಿ ಅರ್ಹತೆಯಿರುವ ಯಾವುದಾದರು ಸಾಮನ್ಯ ಪ್ರಜೆ ಪಿ.ಎಂ ಆಗಬಹುದು ಬಿಡಪ್ಪ ಅಂತ ನೀವ್ಯಾರು ಹೇಳೋದಿಲ್ಲ. ಹೇಳೋಕೆ ಸಾಧ್ಯಾನೆ ಇಲ್ಲ ಬಿಡಿ.ಈ ದೇಶದಲ್ಲಿ ಸದ್ಯ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರೋದು ’ವಂಶ ಪ್ರಭುತ್ವ’ ಸದ್ಯಕ್ಕೆ ಈ ವಿಷಯದಲ್ಲಿ ಲೆಫ್ಟ್ ಪಾರ್ಟಿ ಅವ್ರು ಮಾತ್ರ ರೈಟ್ ಆಗಿದ್ದಾರೆ.ಉಳಿದಂತೆ ರೈಟ್ ಪಾರ್ಟಿಗಳು ಲೆಫ್ಟ್ ಆಗ್ಬಿಟ್ಟಿವೆ.ಇನ್ನ ೧೨೫ ವರ್ಷಗಳ ಇತಿಹಾಸ ಹೊಂದಿರೋ ಈ ದೇಶದ ರಾಷ್ಟ್ರೀಯ ಪಕ್ಷದ ಕತೆ ಕೇಳೋದೇ ಬೇಡ ಬಿಡಿ.ಇನ್ನ ೧೨೫ ವರ್ಷಗಳ ಇತಿಹಾಸ ಹೊಂದಿರೋ ಈ ದೇಶದ ರಾಷ್ಟ್ರೀಯ ಪಕ್ಷದ ಕತೆ ಕೇಳೋದೇ ಬೇಡ ಬಿಡಿ.ಸ್ವತಃ ಗಾಂಧೀ ತಾತನೆ ಅಪ್ಪ (ಮೋತಿಲಾಲ್ ನೆಹರು) ಕೂತಿದ್ದ್ (ನೆಟ್ಟಿದ್ ಅಲ್ಲ
) ಮನೆ ಒಳ್ಗೆ ನೀನ್ ಕೂತ್ಕೊ ಬಾ ಅಂತ ಮಗನ (ಚಾಚ ನೆಹರು) ಕರ್ಕೊಂಡು ಬಂದು ವಂಶ ವೃಕ್ಷ ನೆಟ್ಟು ಹೋದ್ರು.ಆ ವೃಕ್ಷ ಇವತ್ತಿಗೆ ಅದ್ಯಾವ ಪರಿ ಗಟ್ಟಿಯಾಗಿ ಬೆಳೆದು ನಿಂತಿದೆ ಅಂದ್ರೆ ೧೨೫ ವರ್ಷಗಳ ಪುರಾತನ ಮನೆಯ ಬುಡ ಅಲುಗಾಡಿ ಬಕ್ಕಾ ಬೋರಲು ಬಿದ್ದು ‘ ಆ ವಂಶ’ದ ಪಾಲಾಗಿದೆ.. ಮತ್ತಷ್ಟು ಓದು 
ಜೀವನದ ಬಂಡಿ
ಗುಡಿಸಲೊಳಗೆ ಗಾಳಿ ಬೆಳಕಿನ ಸುದ್ದಿಯೇ ಇಲ್ಲ
ಚಿಗುರುವ ಕನಸುಗಳನ್ನು ಕೆದುಕುತಲಿ
ನಿತ್ಯದ ಕಾಯಕದಿ
ಪಾತ್ರೆಪಗಡೆಯ ತೊಳೆದು, ಕಸವನ್ನು ಗುಡಿಸಿ
ತೊಟ್ಟಿಲ ಕೂಸಿಗೆ
ಜೋಗುಳವಾ ಹಾಡಿ
ಬೀದಿಯಲ್ಲಾಡುವ ಮಕ್ಕಳನ್ನು ಕಂಡು
ಆ ಕಣ್ಣುಗಳು ಅರಳುತ್ತಿತ್ತು
ಶಾಲೆಯ ಮುಖ ಕಾಣದವಳು
ಕನಸು ಕಂಗಳು ನೋಡುತಿತ್ತು
ಭೂತ ಭವಿಷ್ಯದ ನಡುವೆ
ಜಗವು ನಗುತ್ತಿರಲು,
ಆಕೆ…ಗುಡಿಸಲೊಳಗೆ
ರೊಟ್ಟಿ ತಟ್ಟುವ ಸಂಭ್ರಮದಿ
ಮನಸ್ಸು ಆಗೊಮ್ಮೆ ಈಗೊಮ್ಮೆ ಕುಣಿಯುತಲಿತ್ತು
ಕಿಚ್ಚನ್ನು ಹಚ್ಚಿ ಮುಸುರೆ ತಿಕ್ಕುತಲಿ
ಮಾತು ಮಾತಿಗೂ
ಸಕ್ಕರೆಯ ನಗುವ ಚೆಲ್ಲುತ್ತಾಳೆ
ಅಡುಗೆ ಮನೆಯ ಪಾತ್ರೆ ಪಗಡೆಗಳೊಂದಿಗೆ
ನೆನಪುಗಳ ಈರುಳ್ಳಿ ಹಚ್ಚುತ್ತಾಳೆ ..!
ನವ ಕನಸುಗಳ ಹೊತ್ತ ಆ ಕಂಗಳು
ಬದುಕನ್ನು ಅಡವಿಟ್ಟು
ಜೀವನವೆಂಬ ಮೆರವಣಿಗೆಯಲ್ಲಿ
ದೇಹವೇ ಬರಡಾಗಿ
ಅಲೆಯುತಾ ಊರಿಂದ ಊರಿಗೆ
ದಾರಿ ಹಿಡಿಯುವವಳು
ಅದೇ ಆಕೆಯ ಬದುಕಿನ ಬಂಡಿ….!
ನಿಮಗೂ ನಿಮ್ಮೂರು ನೆನಪಾಗುತ್ತಾ? ಭಾಗ-೨
ಜೂನ್ ತಿಂಗಳ ೧ನೇ ತಾರೀಕು ನಮ್ಮ ಶಾಲೆಯ ಆರಂಭ. ಅಂದೇ ಮಳೆರಾಯನು ನಮ್ಮನ್ನು ಚಂಡಿ-ಪುಂಡಿ ಮಾಡಿ ಖುಷಿ ಪಡುತ್ತಿದ್ದ(ಇತ್ತೀಚಿಗಿನ ದಿನಗಳಲ್ಲಿ ಜುಲೈ ತಿಂಗಳು ಮುಗಿದರೂ ಮಳೆಯರಾಯನ ಮುಖ ನೊಡಲು ಸಾಧ್ಯವಾಗುತ್ತಿಲ್ಲ!!). ಅಕ್ಕನೊಂದಿಗೆ ದೊಡ್ಡ ಕೊಕ್ಕೆ ಕೊಡೆ ಹಿಡಿದು ಕುಣು-ಕುಣು ಹೆಜ್ಜೆ ಹಾಕುತ್ತಾ ನಾನು ಶಾಲೆಗೆ ಹೋಗುತ್ತಿದ್ದೆ. ಮೊದಲನೆ ದಿನದ ಜಿಟಿ-ಜಿಟಿ ಮಳೆಯಲ್ಲೂ, ಶಾಲೆಗೆ ಹೋಗಲು ಏನೋ ಒಂಥರಾ ಸಂಭ್ರಮ. ಕಾಡು ದಾರಿಯಲ್ಲಿ ಮಣ ಭಾರದ ಬ್ಯಾಗು ಹೊತ್ತು ಕೊಂಡು, ಶಾಲೆಗೆ ಹೋಗಿ ಕಾಲು ನೋಡಿದರೇ ಜಿಗಣೆಗಳು ನೇರಳೆಹಣ್ಣಿನ ಗಾತ್ರವಾಗಿ ರಕ್ತ ಹೀರುತಿರುತ್ತಿದ್ದವು. ಒದ್ದೆಯಾದ ಕಾಲಿನಿಂದ ಜಿಗಣೆ ಬಿಡಿಸುವುದು ಬಲು ಕಷ್ಟ. ಹೇಗೋ ಹುಡುಕಿ ಕಿತ್ತೆಸೆಯುತ್ತಿದಂತೆ, ಕಚ್ಚಿದಲ್ಲಿಂದ ರಕ್ತದ ನಾಗಾಲೋಟ ಶುರುವಾಗುತ್ತಿತ್ತು. ಗಾಯಕ್ಕೆ ಪೇಪರ್ ಚೂರು ಅಂಟಿಸಿದ ಮೇಲೆಯೇ ರಕ್ತಸ್ರಾವ ನಿಲ್ಲುತ್ತಿತ್ತು. ಮನೆಯಿಂದ ೨ ಕಿ.ಮೀ. ದೂರದಲ್ಲಿದ್ದ ‘ಕಾಟಕೇರಿ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿ ನಾನು ಎರಡನೇ ತರಗತಿ ಓದುತ್ತಿದೆ. ನನ್ನಕ್ಕ ಅದೇ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿದ್ದಳು. ಮತ್ತಷ್ಟು ಓದು 
ಉಪ್ಪಿಗಿಂತ ರುಚಿಯಿಲ್ಲ, ಅತಿಯಾದರೆ ಅಪಾಯ ತಪ್ಪಿದ್ದಲ್ಲ
ಡಾ.ಪ್ರಶಾಂತ ನಾಯ್ಕ ಬೈಂದೂರು
ಜೀವವಿಜ್ಞಾನ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ
‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎನ್ನುವ ಗಾದೆ ಮಾತು ಸರ್ವತಾ ಸತ್ಯ. ಸಕ್ಕರೆ ಇಲ್ಲದ ಚಹಾ, ಕಹಿಕಹಿ ಎನಿಸಿದರೂ ಕುಡಿಯಬಹುದು. ಆದರೆ ಉಪ್ಪಿಲ್ಲದೆ ಮಾಡಿದ ಅಡುಗೆಯನ್ನು ಊಟ ಮಾಡುವುದು ಬಹಳ ಕಷ್ಟ. ಉಪ್ಪು ಕೇವಲ ರುಚಿಗೆ ಸೀಮಿತವಲ್ಲ. ನಮ್ಮ ದೇಹದಲ್ಲಿ ನಡೆಯುವ ಅನೇಕ ಶಾರೀರಿಕ ಕ್ರಿಯೆಗಳಿಗೆ ಬೇಕಾಗಿರುವ ಸೋಡಿಯಂ ಮತ್ತು ಕ್ಲೋರೈಡ್ ಎನ್ನುವ ಎರಡು ವಿದ್ಯುದ್ವಾಹಕ ಲವಣಗಳನ್ನು ಪೂರೈಸಲು ಉಪ್ಪು ಅಗತ್ಯ. ಶರೀರದಲ್ಲಿ ದ್ರವಗಳ ಸಮತೋಲನೆಯನ್ನು ಕಾಪಾಡಲು, ಆಮ್ಲ-ಪ್ರತ್ಯಾಮ್ಲತೆಯನ್ನು ಸಮಸ್ಥಿತಿಯಲ್ಲಿಡಲು, ನರವ್ಯೂಹದ ಕಾರ್ಯನಿರ್ವಹಣೆಯಲ್ಲಿ, ಸ್ನಾಯುಗಳ ಚಲನಾಕ್ರಿಯೆಗೆ, ರಕ್ತದೊತ್ತಡವನ್ನು ನಿಯಂತ್ರಿಸಲು, ಉಪ್ಪಿನಲ್ಲಿರುವ ಸೋಡಿಯಂ ಮತ್ತು ಕ್ಲೋರೈಡ್ ಲವಣಗಳು ವಹಿಸುವ ಪಾತ್ರ ಮುಖ್ಯವಾದದ್ದು. ಈ ಎಲ್ಲ ಶಾರೀರಿಕ ಕ್ರಿಯೆಗಳಿಗೆ ಅತ್ಯವಶ್ಯವಿರುವ ಈ ಎರಡು ಲವಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಈ ಎರಡು ಲವಣಗಳು ಇತರ ಆಹಾರ ಮೂಲಗಳಿಂದ (ಹಣ್ಣು, ತರಕಾರಿ, ಧಾನ್ಯ, ಹಾಲು, ಮೀನು, ಮಾಂಸ ಇತ್ಯಾದಿ) ಸಿಗುತ್ತದೆಯಾದರೂ,
ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಅವುಗಳನ್ನು ಪಡೆಯಲು ಉಪ್ಪನ್ನು ಉಪಯೋಗಿಸಲೇಬೇಕು. ನಾವು ಉಪಯೋಗಿಸುವ ಉಪ್ಪುಗಳಲ್ಲಿ ಮೂರು ವಿಧ. ಐಯೋಡಿನ್‌ಯುಕ್ತ ಉಪ್ಪು (ಇದರಲ್ಲಿ ಸೋಡಿಯಂ-ಕ್ಲೋರೈಡ್ ಜೊತೆಗೆ ಥೈರಾಡ್ ಹಾರ್ಮೋನ್‌ಗಳ ಉತ್ಪತ್ತಿಗೆ ಅವಶ್ಯವಿರುವ ಅಯೋಡಿನ್ ಇರುತ್ತದೆ), ಸಂಸ್ಕರಿಸಿದ/ಶುದ್ಧ ಉಪ್ಪು (ಸೋಡಿಯಂ ಮತ್ತು ಕ್ಲೋರೈಡ್ ಲವಣಗಳನ್ನು ಮಾತ್ರ ಹೊಂದಿರುತ್ತದೆ) ಮತ್ತು ಸಮುದ್ರ ಉಪ್ಪು (ಕಲ್ಲುಪ್ಪು). ಮತ್ತಷ್ಟು ಓದು 
ಚೆನ್ನಾಗಿರುವವರನ್ನು ಕಂಡರೆ ದೇವರಿಗೂ ಹೊಟ್ಟೆ ಕಿಚ್ಚಂತೆ!
ಶಿವು.ಕೆ
(“ವೆಂಡರ್ ಕಣ್ಣು ” ಕೃತಿಯ ಲೇಖಕ)
ಮಹಡಿ ಮನೆಯ ಕಿಟಕಿಯಲ್ಲಿ ನಾನು ಇಣುಕಿದಾಗ ಹಾಲ್‍ನ ಬಲಬದಿಯ ಆಡುಗೆ ಮನೆಯ ಬಾಗಿಲಿನಲ್ಲಿ ಅವರ ನೆರಳು ಕಾಣಿಸಿದ್ದು ನೋಡಿ ನನಗೆ ಸಮಾಧಾನವಾಗಿತ್ತು. “ಸಾರ್” ಅಂತ ಜೋರಾಗಿ ಕೂಗಿದೆ. ಆವರಿಗೆ ಗೊತ್ತಾಗಲಿಲ್ಲ. ಕಾಲಿಂಗ್ ಬೆಲ್ ಒತ್ತಿದೆ, ತಿರುಗಿ ನೋಡಲಿಲ್ಲ. ಬಾಗಿಲು ಬಡಿದೆ. ಹೂಹೂಂ…ಆತ ತಿರುಗಿ ನೋಡಲಿಲ್ಲ. ಇದ್ಯಾಕೋ ಸರಿಬರಲಿಲ್ಲವೆಂದು ಮತ್ತೆ ನಾಲ್ಕೈದು ಬಾರಿ ಬೆಲ್ ಮಾಡಿದೆ. ಬಾಗಿಲು ತಟ್ಟಿದೆ…”ಸಾರ್, ಸಾರ್,” ಜೋರಾಗಿ ಕೂಗಿದೆ. ನನ್ನ ಕೂಗಿಗೆ ಕೆಳಗಿನ ಮನೆಯವರು ಕೇಳಿಸಿಕೊಂಡು ಮಾತಾಡಿದರೇ ಹೊರತು ಆತನಿರಲಿ, ಆತನ ನೆರಳೂ ಕೂಡ ನನ್ನ ಕೂಗಿಗೆ ಓಗೊಡಲಿಲ್ಲ.

ಇನಿದನಿ
ಅರವಿಂದ್
ಕುಹೂ ಕುಹೂ ಎಂದೆನಿಸುತಾ
ಕೂಗಳತೆಯ ದೂರದಲ್ಲಿದ್ದರೂ
ಕಾಣದ ಇನಿದನಿಯೇ
ಏನಾಯಿತು ನಿನಗೆ
ಕಾಣದಂತೆ ನೀನು ಕೇಳುಸುತಿರುವೆ ದನಿಯನು ?
ಕುಹೂ ಕುಹೂ ಎಂದೆನಿಸುತಾ
ಕಣ್ಣಳತೆಯ ಮೀರಿ ನೋಡಿತಾ
ನಿಂತಿರುವೆ ಇನಿದನಿಯೇ
ಏನಾಯಿತು ನಿನಗೆ
ಕೇಳಿಸಿದರೂ ನೀನು ಕಾಯಿಸುತಿರುವೆ ಯಾರನು ?
ಕುಹೂ ಕುಹೂ ಎಂದೆನಿಸುತಾ
ಮನದ ಎಲ್ಲೆ ಮೀರಿ ನಗುತಾ
ಕುಳಿತಿರವೆ ಇನಿದನಿಯೇ
ಏನಾಯಿತು ನಿನಗೆ
ಮನಸಿದ್ದರೂ ಅರಿಯರಲಾರೆಯಾ ನನ್ನನು ?
ಕುಹೂ ಕುಹೂ ಎಂದೆನಿಸುತಾ
ಜಗದ ಎಲ್ಲರ ಕರೆಯುತಾ
ಕರೆಯುತಿರುವೇ ಇನಿದನಿಯೇ
ಏನಾಯಿತು ನಿನಗೆ
ಜಗತ್ತಿಗೆ ನನ ಪ್ರೀತಿ ಕೇಳಿಸಿದರು ಕಾಣದಾಯ್ತೇ ಮನವನು ?
ಕುಹೂ ಕುಹೂ ಎಂದೆನಿಸುತಾ
ಮನಗೆದ್ದಯಲ್ಲೇ ನಲಿಯುತಾ
ಕರೆಯಿತಿರುವೇ ಇನಿದನಿಯೇ
ಏನಾಯಿತು ನಿನಗೆ
ಮನವ ಕದ್ದು ಕೊಂಡೊಯ್ದದ್ದೆಲ್ಲಿಗೆ ನನ್ನ ಪಾಡೇನು ?
ನಗುತಾ ನಗಸ್ತಾ ಬಾಳಿದವರು
ನಗುತಾ ನಗುತಾ ಬಾಳು …
ನೀನು ನೂರು ವರ್ಷ…
ಹೌದು ರೀ ನಗುತಾ ನಗುತಾ ಇರಬೇಕು ಅವಾಗಲೇ ತಾನೆ ಜೀವನಾ ಸವಿ ಜೇನಿನ ಹಾಗೆ ಸಿಹಿಯಾಗಿರೂದು.
ಆದರೆ ಕೇವಲ ನಾವಷ್ಟೇ ನಗತಾ ಇದ್ದರೆ ಹೇಗೆ? ನಮ್ಮ ಜೊತೆ ಸುತ್ತಮುತ್ತಲಿನ ಜನರನ್ನು ನಗಸಿದರೆ ಅದಕ್ಕೆ ಒಂದು ಅರ್ಥ ಸಿಗತ್ತೆ ಅಲ್ವಾ?
ನಿಜಾ ಅನಸತ್ತೆ ಅಲ್ಲಾ? ನಿಜಾನೆ. ನಗುವಿನಿಂದ ನಮ್ಮ ಜೀವನಾ ಸ್ವಾರ್ಥಕತೆ ಕಂಡುಕೊಳ್ಳುತ್ತೆ. ಅದಕ್ಕೆ
ತನ್ನದೇ ಆದ ಒಂದು ಮೌಲ್ಯವಿದೆ. ಈ ನಗು ಬಗ್ಗೆ ನಗಸು ಬಗ್ಗೆ ಮಾತನಾಡುವಾಗ ಮನಸ್ಸಿನಲ್ಲಿ ಥಟ್ಟನೆ ಒಂದು ಚಿತ್ರಣ ಮೂಡುತ್ತದೆ, ಅದು ಯಾರದು ಅಂತ ಹೇಳಿ ನೋಡೋಣಾ?
ಯೋಚಿಸಿದ್ರರಾ? ಗೊತ್ತಾಗಲ್ಲಿಲ್ವಾ ? ಅಯ್ಯೋ ಅದೇರಿ ಟಿವಿ ಯಲ್ಲಿ ತನ್ನ ವಾಕಿಂಗ್ ಸ್ಟೀಕ್ ಹಿಡಿದುಕೊಂಡು ಕಲಾತ್ಮಕವಾಗಿ ಆಡಿಸುತ್ತ ತನ್ನ ಮೆಣಸಿನಕಾ ಮೀಸೆ ಕುಣಿಸುತ್ತ ತಲೆಯ ಮೇಲಿನ ಹ್ಯಾಟ್ ಹಾರಿಸುತ್ತ ಕಪ್ಪು ಕೋರ್ಟನೊಂದಿಗೆ ಬರತ್ತಾರಲ್ಲ ಅವರೆ ರೀ ನಮ್ಮೆಲ್ಲರ ನೆಚ್ಚಿನ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ .
ಇವರೊಬ್ಬ ಮಹಾನ್ ಕಲಾವಿದ. ಜೀವನವನ್ನು ಸೀರಿಯಸ್ ಆಗಿ ತಗೆದುಕೊಳ್ಳದೇ ನಗುತಾ ನಗಸ್ತಾ ಕಾಲ ಕಳಿಯಬೇಕೆಂದು ತಿಳಿಸಿಕೊಟ್ಟ ಫಿಲಾಸಫರ್. ಮಕ್ಕಳ ಹಾಗೂ ದೊಡ್ಡವರ ರಿಯಲ್ ರೋಲ್ ಮಾಡೆಲ್ ಆದ ಇವರು ತಮ್ಮ ಹಾವ ಭಾವದಿಂದಲೇ ಎಲ್ಲರನ್ನು ನಗೆಯಲ್ಲಿ ತೇಲಿಸಿದ ಪುಣ್ಯಾತ. ಮತ್ತಷ್ಟು ಓದು 
ವಿಜ್ಞಾನಿ ಅಜಯ್ ಶರ್ಮ ಅವರಿಂದ ವಿನೂತನ ಆವಿಷ್ಕಾರ
ಕರುಣಾಕರ ಬಳ್ಕೂರು
ದ್ರವ್ಯ ರಾಶಿ ಶಕ್ತಿ ಸಮಾನತೆಯ E=mc2ಇದನ್ನು ನೀವು ಬಾಲ್ಯದಿಂದ ವಿಜ್ಞಾನ ಓದಿದ್ದರೆ ನೋಡಿದ ತಕ್ಷಣ ನೆನಪಿಗೆ ಬಂದೇ ಬರುತ್ತೆ. ಈ ಸೂತ್ರದ ಹರಿಕಾರ ಶ್ರೇಷ್ಠ ವಿಜ್ಞಾನಿ ಐನ್‌ಸ್ಟೀನ್. ಈತ ವಿಜ್ಞಾನ ಕ್ಷೇತ್ರಕ್ಕೆ ತನ್ನದೇ ಆದ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾನೆ. ಭೌತಶಾಸ್ತ್ರ ಕ್ಷೇತ್ರದಲ್ಲಿ ಆಗಿರುವ ವಿಸ್ಮಯಗಳು ಐನ್‌ಸ್ಟೀನ್‌ನ ಆವಿಷ್ಕಾರಗಳನ್ನು ವಿಜ್ಞಾನ ಕ್ಷೇತ್ರ ಒಪ್ಪಿಕೊಂಡಿದೆ. ಆದರೆ ಹಲವು ದಿನಗಳಿಂದ ‘ದ್ರವ್ಯ ರಾಶಿ ಶಕ್ತಿ ಸಮಾನತೆಯ E=mc2ಸೂತ್ರದ’ ಬಗ್ಗೆ ಇತರ ವಿಜ್ಞಾನಿಗಳು ತಕರಾರು ಎvರುವ ಪ್ರಶ್ನೆಗಳು ಗೊತ್ತಿರಬಹುದು. ಹಲವು ವರ್ಷಗಳಿಂದ ವಿಜ್ಞಾನಿಗಳಿಗೆ ಈ ಸೂತ್ರವು ಅಷ್ಟೊಂದು ಸಮರ್ಪಕವಾಗಿಲ್ಲ ಎಂದು ಕೆಲವೊಂದು ವಿಜ್ಞಾನಿಗಳ ತಂಡ ಬಹಿರಂಗಪಡಿಸಿದೆ. ಭೌತಶಾಸ್ತ್ರದಲ್ಲಿ ಈ ಸೂತ್ರ ಅಷ್ಟೊಂದು ಸಮರ್ಪಕವಾಗಿಲ್ಲ ಎನ್ನುವ ಬಗ್ಗೆ ಹಲವಾರು ವಿಜ್ಞಾನಿಗಳಿಂದ ಆಕ್ಷೇಪಗಳು ಹಿಂದಿನಿಂದಲು ಕೇಳಿಬರುತ್ತಿತು. ಮತ್ತೆ ಇದು ಹುರುಳಿಲ್ಲದ ಸೂತ್ರ ಎನ್ನುವ ಬಗ್ಗೆಯೂ ವಿಮರ್ಶಕರು ಕರೆದ್ದುಂಟು. ಆದರೆ ಇದೀಗ ಎಲ್ಲರ ಊಹಾಪೋಹಗಳಿಗೆ ತೆರೆಬಿದ್ದಿದೆ. ಈ ಸೂತ್ರದ ಬಗ್ಗೆ ಆಳವಾಗಿ ಅದ್ಯಾಯನ ಮಾಡಿ, ಸೂತ್ರಕ್ಕೆ ಮೋಕ್ಷವನ್ನು ಕೊಡುವಲಿ ಕಾರಣಿಕರ್ತರಾದವರು ಪ್ರಖ್ಯಾತ ವಿಜ್ಞಾನಿ ಅಜಯ್ ಶರ್ಮ. ವಿನೂತನ ಆವಿಷ್ಕಾರದ ಮೂಲಕ ಯಶಸ್ವಿಯಾಗಿದ್ದಾರೆ.
ಬನ್ನಿ ಅಜಯ್ ಶರ್ಮ ಅವರ ಹೊಸ ಸೂತ್ರದ ವಿವರಣೆಯನ್ನು ತಿಳಿದುಬರೋಣ. ಐನ್‌ಸ್ಟೀನಿನ ದ್ರವ್ಯ ರಾಶಿ ಶಕ್ತಿ ಸಮಾನತೆಯ E=mc2 ಸೂತ್ರಕ್ಕೆ ಹೊಸ ರೂಪವಾಗಿ DE= DAmc2 ಅನ್ನು ಸಿದ್ಧಪಡಿಸಿ ಮಂಡಿಸಿದ್ದಾರೆ. ಆ ಮುಖೇನ ಹೊಸ ಕ್ರಾಂತಿಯನ್ನೆ ಮಾಡಿದ್ದಾರೆ. ಅಜಯ್ ಶರ್ಮರವರು ಆಕ್ಸ್‌ಫರ್ಡ್ ಮತ್ತು ಹಾವರ್ಡ್ ವಿಶ್ವವಿದ್ಯಾನಿಲಯಗಳಿಂದ ಗುರುತಿಸಲ್ಪಟ್ಟು ಅಂತರಾಷ್ಟ್ರೀಯ ಪ್ರಖ್ಯಾತಿ ಪಡೆದ ವಿಜ್ಞಾನಿ. ಮೂಲತಃ ಹಿಮಾಚಲ ಪ್ರದೇಶದವರು.
ಅಜಯ್ ಶರ್ಮರವರು ಸುಮಾರು ೨೮ ವರ್ಷಗಳ ಕಾಲ ಈ ಸಮೀಕರಣದ ಮೇಲೆ ಪ್ರಯೋಗಾತ್ಮಕವಾಗಿ ಅಧ್ಯಾಯನ ಮಾಡಿದರು. ಸತತ ಪ್ರಯೋಗದ ಮೂಲಕ ಕೊನೆಗೂ ಯಶಸ್ಸನ್ನು ಈ ಸಮೀಕರಣದಲ್ಲಿ ಕಂಡುಕೊಂಡಿದ್ದಾರೆ. ಈ ವಿಷಯದ ಕುರಿತಂತೆ ಇಂಗ್ಲೇಂಡ್, ಯು.ಎಸ್.ಎ, ಕೆನಡಾ, ಮಾಸ್ಕೋ, ಪೊಲಾಂಡ್, ಮುಂತಾದ ಹಲವಾರು ದೇಶಗಳಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಈ ಸೂತ್ರದ ಬಗ್ಗೆ ಮಂಡಿಸಿ ಸಮರ್ಥಿಸಿದ್ದಾರೆ. ಈ ವಿಷಯಕ್ಕೆ ಸಂಬದಿಸಿದಂತೆ ಸುಮಾರು ೧೮ ಲೇಖನಗಳನ್ನು ವಿವಿಧ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ೨೦೦೯-೧೦ರಲ್ಲಿ ಯು.ಎಸ್.ಎ ಮತ್ತು ಜರ್ಮನಿಯಲ್ಲಿ ಎರಡು ಪುಸ್ತಕಗಳನ್ನು ಪ್ರಕಟಗೊಳಿಸಿದ್ದಾರೆ. ಮತ್ತಷ್ಟು ಓದು 







