ಕರಾವಳಿಯ ಸಿತಾರ್ ಲೋಕದ ಯುವ ಕಲಾವಿದ ಅಂಕುಶ್
ಕರುಣಾಕರ ಬಳ್ಕೂರು

ಕರಾವಳಿಯ ಜಿಲ್ಲೆಯಲ್ಲಿ ಏನುಂಟು ಏನಿಲ್ಲ ಹೇಳಿ, ಎಲ್ಲವುಂಟು. ಕಲೆ ಸಂಸ್ಕೃತಿಗಳ ತುಳುನಾಡು. ವಿಶಿಷ್ಟ ಪ್ರತಿಭೆಗಳನ್ನು ನೀಡುತ್ತಿರುವ ಬೀಡು. ಅದೆಷ್ಟೋ ಪ್ರತಿಭೆಗಳು ಎಲೆ ಮರೆಯಲ್ಲಿದ್ದಾವೆ. ಬುದ್ದಿವಂತರ ಜಿಲ್ಲೆಯೆಂದೆ ಮನೆ ಮಾತಾಗಿರುವ ದಕ್ಷಿಣ ಕನ್ನಡ ಜಿಲ್ಲೆ, ನೂರಾರು ಪ್ರತಿಭೆಗಳನ್ನು ಸೃಷ್ಟಿಸುತ್ತಿರುವ ತಾಣವಿದು. ಕಲೆ, ಸಾಹಿತ್ಯ, ವಾಣಿಜ್ಯ, ರಾಜಕೀಯ, ಶಿಕ್ಷಣ, ವಿಜ್ಞಾನ, ಸಮಾಜಸೇವೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಕರಾವಳಿಯವರು ತಮ್ಮ ಸಾಧನೆಯ ಮುದ್ರೆಯನ್ನು ಒತ್ತಿದ್ದಾರೆ. ಇದಕ್ಕೆ ಸಂಗೀತ ಕ್ಷೇತ್ರವು ಹೊರತಲ್ಲ. ಹೀಗೆ ಅದ್ಭುತ ಪ್ರತಿಭೆಗಳನ್ನು ಹೊಂದಿರುವ ಕಲಾವಿದರ ಗೂಡು. ಯುವ ಸಮುದಾಯದಿಂದ ಆರಂಭವಾಗಿ ಪ್ರೌಢ ಪ್ರತಿಭೆಗಳ ಸರಮಾಲೆ ನಮ್ಮಲಿವೆ.
ಬನ್ನಿ ಕರಾವಳಿಯ ಹುಡುಗ ಮಾಡಿರುವ ಸಾಧನೆಯ ಹಾದಿಯನ್ನು ನೋಡಿ ಬರೋಣ..
ಹೆಸರು: ಅಂಕುಶ್ ಎನ್.ನಾಯಕ್
ತಂದೆ: ನರೇಂದ್ರ ಎಲ್.ನಾಯಕ್
ತಾಯಿ: ಉಷಾಪ್ರಭಾ ಎನ್.ನಾಯಕ್
ಸಾಧನೆ ಮಾಡಿರುವ ಕ್ಷೇತ್ರ: ಸಿತಾರ್
ಗುರು: ಉಸ್ತಾದ್ ರಫೀಕ್ ಖಾನ್
ವಿದ್ಯಾಭ್ಯಾಸ: ಎಕ್ಸ್‌ಪರ್ಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರಸ್ತುತ ಸುರತ್ಕಲ್‌ನ ಎನ್‌ಐಟಿಕೆ ವಿದ್ಯಾರ್ಥಿ.
ಹವ್ಯಾಸ: ಸಂಗೀತ ಆಲಿಸುವುದು
ಇದು ಇವನ ಸರಳ ಬೈಯುವ ಡಾಟ್ ಅಲ್ಲ, ಬೈಯೋಡಾಟ.. ಬಾಲ್ಯದಲ್ಲಿ ಪಂ.ರಫೀಕ್ ಖಾನ್ ಅವರ ಸಿತಾರ್ ವಾದನವನ್ನು ಕೇಳಿ ಮೂಕವಿಸ್ಮಿತನಾಗಿ, ಅಂದೆ ದೃಢ ನಿರ್ಧಾರ ಮಾಡಿ ನಾನೇಕೆ ಇವರಂತೆ ಸಿತಾರ್ ವಾದಕನಾಗಬಾರದು?. ಸಿತಾರ್ ವಾದನದ ಧ್ವನಿಯನ್ನು ಕೇಳಿ ‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕ್ಕೆ ನನ್ನನ್ನು..’ ಎನ್ನುವ ಹಾಗೆ ಇವನ್ನನ್ನು ಸಂಗೀತ ಕ್ಷೇತ್ರಕ್ಕೆ ಸೆಳೆದೆ ಬಿಟ್ಟಿತು. ಮತ್ತಷ್ಟು ಓದು 
ಶಿವರಾಮ ಕಾರ೦ತರ ಸಾಹಿತ್ಯವನ್ನು ಪಸರಿಸಲು ಸಾಹಿತ್ಯಾಸಕ್ತರ ನೆರವು ಕೋರಿ

ಮಿತ್ರ ಮಹನೀಯರುಗಳೇ ಹಾಗೂ ಓದುಗ ಬ೦ಧುಗಳೇ,
೧೦-೧೦-೨೦೧೦ ರ೦ದು ದ್ಯುತಿ ಟೆಕ್ನಾಲಜೀಸ್ (ಶ್ರೀಹರ್ಷ ಸಾಲೀಮಠ್)ಹಾಗೂ ಕು೦ಭಾಶಿ ಸ೦ಪತ್ ಕುಮಾರ್ ನೇತೃತ್ವದ ತ೦ಡದ ಶ್ರಮದಿ೦ದ ಹಾಗೂ ಸಾಹಿತ್ಯ ಕಕ್ಕುಲತೆಯಿ೦ದ ಕೋಟ ಶಿವರಾಮ ಕಾರ೦ತರ ಅಧಿಕೃತ ವೆಬ್ ಸೈಟ್ http://www.shivaramkarantha.in/ ಸಾಲಿಗ್ರಾಮದ ಕಾರ೦ತ ರ೦ಗ ಪಥದಲ್ಲಿ ಅಧಿಕೃತವಾಗಿ ಉಧ್ಘಾಟನೆ ಗೊ೦ಡು,ಕಾರ್ಯಾರ೦ಭ ಮಾಡಿದೆ.ಈ ಹಿ೦ದೆಯೇ ತಿಳಿಸಿದ೦ತೆ, ಕಾರ೦ತರ ಎಲ್ಲಾ ಗ್ರ೦ಥಗಳನ್ನು ಹಾಗೂ ಹಸ್ತಪ್ರತಿಗಳನ್ನು ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಸಾಹಿತ್ಯ ಪ್ರೇಮಿಗಳೆಲ್ಲರಿಗೂ ನೀಡಬೇಕೆ೦ಬುದು ಸಾಲೀಮಠ್ ತ೦ಡದ ಬಯಕೆ. ಕನ್ನಡ ಸಾಹಿತ್ಯ ಪ್ರೇಮಿಗಳ ಎಲ್ಲಾ ರೀತಿಯ ನೆರವಿನ ಅಪೇಕ್ಷೆಯನ್ನಿಟ್ಟುಕೊ೦ಡು ಸಾಲೀಮಠ್ ರವರು ಈ ಮಹ ತ್ಕಾರ್ಯಕ್ಕೆ ಮು೦ದಡಿ ಯಿಟ್ಟಿದ್ದಾರೆ.ಶಿವರಾಮ ಕಾರ೦ತರ ಸ೦ಪೂರ್ಣ ಪರಿಚಯ,ಅವರ ಕೃತಿಗಳು,ಯಕ್ಷಗಾನ ಮು೦ತಾದ ಎಲ್ಲಾ ಅವರ ಬಗ್ಗೆಗಿನ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು,ಕನ್ನದ ಸಾಹಿತ್ಯಾಸಕ್ತರು, ಅಭಿಮಾನಿಗಳು,ಕೋಟ ಶಿವರಾಮ ಕಾರ೦ತರ ಅನುಯಾಯಿಗಳು ಈ ಆನ್ ಲೈನ್ ವೆಬ್ ಸೈಟಿನ ಸ೦ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆ೦ದು, ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಪದಾಧಿಕಾರಿಗಳು, ಶ್ರೀದ್ಯುತಿ ಟೆಕ್ನಾಲಜೀಸ್ ನ ಶ್ರೀಹರ್ಷ ಸಾಲೀಮಠರು ಆಶಿಸಿದ್ದಾರೆ.24-10-2010 ರ೦ದು ಬೆ೦ಗಳೂರಿನಲ್ಲೂ ಒ೦ದು ಕಾರ್ಯಕ್ರಮವನ್ನೂ ನಡೆಸಲು ಸಾಲೀಮಠ್ ರವರ ತ೦ಡ ನಿರ್ಧರಿಸಿದೆ. ಮತ್ತಷ್ಟು ಓದು 
ಕನ್ನಡ ಲೈಬ್ರೆರಿ – ಐಫೋನ್ ಮೂಲಕ ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಓದಿರಿ
ಸುನಿಲ್ ಜಯಪ್ರಕಾಶ್, ಬೆಂಗಳೂರು
ಗೆಳೆಯರೆ,
ನೀವೂ ನನ್ನಂತೆಯೇ ಯೋಚಿಸುವವರಾದರೆ, ನೀವು ಎಲ್ಲೇ ಹೋದರೂ, ಹೇಗೇ ಹೋದರೂ ಕೈಯಲ್ಲಿ ಓದಲು ಒಂದು ಕನ್ನಡ ಪುಸ್ತಕವಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಯೋಚಿಸುತ್ತೀರಿ. ಉದಾ: ಬಸ್ಸಿನಲ್ಲಿಯೋ, ರೈಲಿನಲ್ಲಿಯೋ ಅಥವಾ ಫ್ಲೈಟಿನಲ್ಲಿಯೋ ಹೋಗುತ್ತಿರಬೇಕಾದರೆ, ಹೊರದೇಶಕ್ಕೆ ಹೋಗಬೇಕಾದಾಗ, ಹೀಗೆ. ಈ ರೀತಿಯ ಯೋಚಿನೆ ತಲೆಯಲ್ಲಿ ಇರುವಾಗ ಮೊಬೈಲಿನ ಮೂಲಕ ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಓದಲು ಸಾಧ್ಯವಾಗಿಸುವಂತಹ ಅಪ್ಲಿಕೇಶನ್ ಸಿಕ್ಕರೆ ಸಂತೋಷವಾಗುವುದಿಲ್ಲವೇ ? ಈ ಯೋಚನೆಯನ್ನು ಸಾಕಾರಗೊಳಿಸಲೆಂದೇ ನಾನು ಒಂದು ಐ-ಫೋನ್ ಅಪ್ಲಿಕೇಶನ್ ಬರೆದಿದ್ದೇನೆ. ಇದನ್ನು ಬಳಸಿ, ಐಫೋನಿನ ಮೂಲಕ ನೀವು ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಓದಬಹುದು. ಹೇಗೆ ಸಾಧ್ಯ ? ಅಂತೀರ .. ಮುಂದೆ ಓದಿ
೧. ಈ ಐಫೋನ್ ಅಪ್ಲಿಕೇಶನ್ನಿನ ಹೆಸರು “ಕನ್ನಡ ಲೈಬ್ರೆರಿ”.
೨. ಇಂಟರ್ನೆಟ್ಟಿನಲ್ಲಿ ಲಭ್ಯವಿರುವ ಕನ್ನಡ ಪುಸ್ತಗಳ ಇಂಡೆಕ್ಸ್ ಅನ್ನು ನಿಮಗೆ ನೀಡುತ್ತದೆ. ನೀವು ಯಾವುದೇ ತಲೆನೋವಿಲ್ಲದೆ ಆಯಾ ಪುಸ್ತಕದ ಹೆಸರಿನ ಮೇಲೆ ಚಿಟುಕಿದರೆ ಸಾಕು, ಆ ಪುಸ್ತಕ ನಿಮಗೆ ಲಭ್ಯವಾಗುತ್ತದೆ.
೩. ಇದನ್ನು ಬಳಸಲು ಇಂಟರ್ನೆಟ್ ಬೇಕು. ಆದರೆ ಒಮ್ಮೆ ಒಂದು ಪುಟವನ್ನು ಓದಿದರೆ, ಮತ್ತೊಮ್ಮೆ ಓದಲು ಇಂಟರ್ನೆಟ್ ಬೇಕಿಲ್ಲ, ಹಾಗಾಗಿ ನಿಮಗೆ ಇಂಟರ್ನೆಟ್ ಬಲ್, ಅಥ್ವಾ ಐಫೋನಿನಲ್ಲಾದರೆ ಜಿಪಿಆರ್ಎಸ್ ಬಿಲ್ಲಿನ ಮೇಲೆ ಭಾರಿ ಹೊಡೆತ ಬೀಳುವುದಿಲ್ಲ.
೪. ಉಳಿಸಲಾದ ಪುಟಗಳನ್ನು ನೀವು ಯಾವಾಗ ಬೇಕಾದರೂ ತೆಗೆಯಬಹುದು.
೫. ಆಯಾ ಪುಸ್ತಕದ ಯಾವ ಪುಟವನ್ನು ತಾವು ಓದುತ್ತಿದ್ದೀರಿ ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಂಡಿರುತ್ತದೆ. ಹಾಗಾಗಿ ಪುಸ್ತಕವನ್ನು ಓದುತ್ತ ಅರ್ಧಕ್ಕೆ ನಿಲ್ಲಿಸಿದ್ದರೆ, ಮತ್ತೊಮ್ಮೆ ತೆರೆದಾಗ, ಆಯಾ ಪುಟ ತಂತಾನೇ ತೆರೆದುಕೊಳ್ಳುತ್ತದೆ.
ಈ ಅಪ್ಲಿಕೇಶನ್ ಅನ್ನು ೧೦ ದಿನಗಳ ಹಿಂದೆ Apple Storeಗೆ ಸಬ್ಮಿಟ್ ಮಾಡಿದ್ದೆ. ಕಳೆದ ಶುಕ್ರವಾರ ಇದು ಅಪ್ರೂವ್ ಆಗಿ, Apple App Storeನಲ್ಲಿ ಲಭ್ಯವಿದೆ.
Apple Store ಕೊಂಡಿ – http://itunes.apple.com/in/app/kannada-library/id397350933
ಅಪ್ಲಿಕೇಶನ್ ಪಾಪೆಗಳು – ಸೂಚನೆ – ಕೆಲವು ಪುಸ್ತಕಗಳ ಹೆಸರು ಇಂಗ್ಲೀಶಿನಲ್ಲಿರುತ್ತದೆ.
‘ತೆರೆಮರೆಯ ರಾಜಕೀಯ ದೊಂಬರಾಟ, ಜನತೆಗೆ ಉಚಿತ ಮನೋರಂಜನೆ’
ಕರುಣಾಕರ ಬಳ್ಕೂರು
ಕನ್ನಡ ಉಪನ್ಯಾಸಕ, ಎಕ್ಸ್ ಪರ್ಟ್ ಪಿ.ಯು.ಕಾಲೇಜು, ಮಂಗಳೂರು
ಕರ್ನಾಟಕ ರಾಜ್ಯಕ್ಕೆ ಏನ್ ಗತಿ ಬಂತು ಅಂತ? ಏನ್ ಗ್ರಹಚಾರ ತಾಗಿದೆಯೊ? ಯಾರ ಕೆಟ್ಟ ಕಣ್ಣು ಬಿದ್ದಿದೆಯೋ? ದೇವರೆ ಬಲ್ಲ! ರಾಜಕೀಯ ತಂತ್ರ-ಕುತಂತ್ರಗಳಿಂದ ಎಲ್ಲಾ ಪಕ್ಷಗಳು ಹೊಲಸೆದ್ದೋಗಿದೆ. ಇಷ್ಟೊಂದು ಕೆಳಮಟ್ಟದ ರಾಜಕೀಯ ಸೃಷ್ಟಿಯಾಗುತ್ತೆ? ಎಂದು ಯಾವ ಪ್ರಜೆಗಳು ಕನಸು ಮನಸುಲೂ ಅಂದುಕೊಂಡಿಲ್ಲ. ‘ಜನರ ಸೇವೆಯೇ ಜರ್ನಾಧನ ಸೇವೆ’ ಎಂದು ಅಧಿಕಾರ ವಹಿಸಿಕೊಂಡು ಇಂದು ಮತಿಭ್ರಮಣಯಾದವರಂತೆ ವರ್ತಿಸುತ್ತಿದ್ದಾರೆ, ಇದು ನಾಚಿಕೆಗೇಡು. ರಾಜ್ಯ ಉದ್ಧಾರ ಮಾಡ್ತಾರೆ ಅಂತ ಅಧಿಕಾರ ಕೊಡಿಸಿದ್ರೆ, ರಾಜ್ಯದ ಮಾನಮರ್ಯಾದೆಯನ್ನು 3 ಕಾಸಿಗೆ ಹರಾಜ್ ಹಾಕ್ತಾ ಇದ್ದಾರೆ. ಮಹಾಭಾರತದಲ್ಲೂ ಕೂಡ ಇಂತಹ ಕಳಪೆ ಮಟ್ಟದ, ಹೊಲಸು ರಾಜಕೀಯ ಮಾಡಿಲಾ.
ಹೆಣ್ಣು, ಮಣ್ಣು, ಹೊನ್ನುಗೋಸ್ಕರ ಎಷ್ಟೊಂದು ಕೆಳಮಟ್ಟಕ್ಕೆ ಇಲಿಯುತ್ತಾರೆ ಎನ್ನುವುದಕ್ಕೆ, ನೈಜ ಚಿತ್ರಣವೇ ಸಾಕ್ಷಿ. ವಿಧಾನಸೌಧಕ್ಕೆ ಎಷ್ಟು ಪಾವಿತ್ರ್ಯ ಇದೆ, ಕೆಲವು ಕಳಹೀನರು ಮನ ಬಂದಂತೆ ತಳಿಸಿರುವುದು ನೋಡಿ, ಮತಿಭ್ರಮಣೆ ಆಗಿದೆಯೇ ಎನ್ನುವ ಪ್ರಶ್ನೆಯೂ ಕಾಡಿತು. ಕಳಪೆ ರಾಜಕೀಯಕ್ಕೆ ತುತ್ತಾಗುತ್ತಿರುವುದು ನಮ್ಮ ದುರಂತ. ಇಂದಿನ ರಾಜಕಾರಣಿಗಳು ಪ್ರಜಾ ಪ್ರಭತ್ವ ವ್ಯವಸ್ಥೆಗೆ ಬಗೆದ ದ್ರೋಹ. ಅಧಿಕಾರ ಕೈಗೆ ಬಂದಿದ್ದೆ ಬಂದಿದ್ದು, ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ‘ಯಥಾ ರಾಜ ತಥಾ ಪ್ರಜಾ’- ರಾಜ ಸುಖಿಯಾಗಿದ್ದರೆ ಪ್ರಜೆಗಳು ಸುಖಿಯಾಗಿರುತ್ತಾರೆ. ರಾಜ್ಯ ಉದ್ಧಾರ ಮಾಡ್ತಾರೆ ಅಂತ ತಿಳ್‌ಕೊಂಡ್ರೆ, ಗುಡಿಸಿ ಗುಂಡಾಂತರ ಮಾಡ್ತಾ ಇದ್ದಾರೆ. ಕಾಯುವವವರೆ ಹೊಡೆದಾಡಿ ಕೊಳ್ಳುತ್ತಿದ್ದರೆ. ಇನ್ನೂ ಜನ ಸಾಮಾನ್ಯರ ಸ್ಥಿತಿ ಅದೋಗತಿ. ಕುರ್ಚಿ ಆಸೆಗಾಗಿ ವ್ಯಕ್ತಿತ್ವದ ಬಗ್ಗೆ ಆಲೋಚಿಸದೆ ಹಣದ ಹೊಳೆಯಲ್ಲಿ ರಾಜಕೀಯದ ನೈತಿಕತೆಯನ್ನು ಬುಡಮೇಲು ಮಾಡಿದ್ದಾರೆ. ಅಧಿಕಾರ ಬರುವ ಮುಂಚೆ ಸಾಧುವಂತೆ, ಸೌಜನ್ಯಶೀಲತೆ, ಪರಿಪೂರ್ಣ ವ್ಯಕ್ತಿತ್ವ ಹೊಂದಿರುವವಂತೆ ವರ್ತಿಸಿ, ಅಧಿಕಾರ ಬಂದ ತಕ್ಷಣ ತಾನು ಎಲ್ಲಿದಿನಿ ಎನ್ನುವ ಪರಿಜ್ಞಾನವು ಇಲ್ಲದೆ ವ್ಯವಹರಿಸುತ್ತಿರುವ ರಾಜಕಾರಣಿಗಳಿಗೇನು ನಮ್ಮಲಿ ಬರಗಾಲವಿಲ್ಲ. ಮತ್ತಷ್ಟು ಓದು 
ಶೌಚ ಪುರಾಣ
ವಿನಯ

ಮೊದಲೇ ಹೇಳಿಬಿಡುತ್ತೇನೆ ಲೇಖನ ಓದಿ ಆದ ಮೇಲೆ ನೀವು ನನ್ನನ್ನ ಇವನೆಂತ ಗಲೀಜು , ಹೊಲಸು , ಭಂಡ , ನಾಚಿಕೆ ಇಲ್ಲದವ ಅಂತ ಏನಾದ್ರೂ ಬೈಕೊಳ್ಳಿ ಪರವಾಗಿಲ್ಲ ಯಾಕಂದ್ರೆ ಹೆತಿದ್ದನ್ನು ಇಲ್ಲ ಅನ್ನೋದು ಕಷ್ಟ.ಹಾಗೆ ಏನಾದರು ತಿನ್ನುತ್ತಾ ಇದ್ದರೆ ದಯಮಾಡಿ ಅದನ್ನ ಬದಿಗಿಟ್ಟು ಇದನ್ನ ಓದಿ.ಆಮೇಲೆ ನಾನು ಮುನ್ನೆಚ್ಚರಿಕೆಗಳನ್ನ ಹೇಳಿಲ್ಲ ಅಂತ ನೀವು ನನ್ನನ್ನ ದೂರುವ ಹಾಗೆ ಇಲ್ಲ.
ನೋಡಿ ಜಗತ್ತಿನಲ್ಲಿ ಸಾವು ಕೂಡ ಹೇಳಿಕೇಳಿ ಬರಬಹುದು ಆದರೆ ನಾನು ಹೇಳ ಹೊರಟಿರುವ ಆ ಹೇಲು ಮಾತ್ರ ಹಾಗಲ್ಲ , ಯಾವಾಗ ಬರುತ್ತೆ ಅಂತ ಹೇಳೋದು ಕಷ್ಟ.ಹೇಗೆ ದೇವರೊಬ್ಬ ನಾಮ ಹಲವು ಅಂತ ಹೇಳ್ತಾರೋ ಹೇಲಿನ ವಿಷಯದಲ್ಲೂ ಅದೇ ಮಾತು ಅನ್ವಯವಾಗುತ್ತೆ. ನಾಚಿಕೆ ಇಲ್ಲದ ನನ್ನೊಂತೋರು ಹೇಲು ಅಂತ ಕರೆದರೆ , ಕೆಲವರು ಕಕ್ಕಸ್ಸು ಅಂತಾಲು,ಉತ್ತರ ಕನ್ನಡ ಕಡೆಯವರು ಸಂಡಾಸ್ ಅಂತಲೂ , ಸ್ವಲ್ಪ ನಾಚಿಕೆ ಸ್ವಭಾವದವರು ನಂಬರ್ ೨ ಅಂತಾಲು ಮತ್ತು ಆಧುನಿಕ ಜಗತ್ತಿನ ಜನ ಅನ್ನಿಸಿಕೊಂಡೋರು ರೆಸ್ಟ್ ರೂಂ ಗೆ ಹೋಗೋದು ಅಂತಾಲು ಕರೆಯುತ್ತಾರೆ ( ಇಲ್ಲಿ ಯಾರಿಗೆ ರೆಸ್ಟ್ ಅಂತ ಮಾತ್ರ ಕೇಳಬೇಡಿ).ಇನ್ನು ನಮ್ಮ ಸರ್ಕಾರದವರು ಇದನ್ನ ಮಲ ಅಂತಾಲು ಕರೆಯುತ್ತಾರೆ.
ಈ ಹೇಲಿನ ಜೊತೆಗೆ ಹೊಂದಿಕೊಂಡಿರೋದು ಹುನ್ಸ್ , ಇವೆರಡದ್ದು ಸಕತ್ ಕಾಮ್ಬಿನಶನ್.ಅದರ ವಿಚಾರಕ್ಕೆ ಆಮೇಲೆ ಬರೋಣ ಮೊದಲು ಈ ಹೇಲಿನ ಪುರಾಣ ಮುಗಿಸೋಣ. ನಾ ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ಶೌಚಾಲಯ ಇರಲಿಲ್ಲ , ಈಗಲೂ ಊರಿನ ಕೆಲವರ ಮನೆಯಲ್ಲಿ ಶೌಚಾಲಯ ಇಲ್ಲ.ಅವಾಗ ಹೇಲು ಬಂದ್ರೆ ಸಾಕು ಹಳ್ಳದ ಕಡೆಗೋ ಅಥವಾ ದರ್ಕಸ್ಕೋ ಅಥವಾ ಗುಡ್ಡದ ಕಡೆಗೋ ನಮ್ಮ ಓಟ ಶುರುವಾಗುತ್ತಿತ್ತು. ನನ್ನ ಅಚ್ಚು ಮೆಚ್ಚಿನ ಜಾಗ ಗುಡ್ಡದ ಪಕ್ಕದಲ್ಲಿರುವ ಒಂದು ಸಣ್ಣ ಕಾಲುವೆಯಾಗಿತ್ತು.ಸಂಡಾಸ್ ಮಾಡಲಿಕ್ಕೆ ಪ್ರಸಕ್ತವಾದ ಸ್ಥಳ ಅಂತಾನೆ ಹೇಳಬಹುದು. ಪಕ್ಕದ ಕಾಲುವೆಯಲ್ಲಿ ಸಂಡಾಸ್ ಮಾಡಿ ಕಾಲುವೆಯಲ್ಲಿ ಸ್ವಚ್ಛ ಮಾಡಿಕೊಳ್ಳೋದು ಸಕತ್ ಮಜಾ ಕೊಡೊ ವಿಚಾರ.ಕೆಲವೊಮ್ಮೆ ಸೋಂಬೇರಿತನ ಬಂದು ಕುನ್ದೆಯನ್ನೆ ಕಾಲುವೆಗೆ ಆದ್ದಿದ್ದು ಉಂಟು.ಮಳೆಗಾಲ ಶುರುವಾಯಿತೆಂದರೆ ಇನ್ನು ಒಂದು ಮಜಾ ಕಾಲುವೆಯ ನಡುವೆ ಸೇತುವೆಯಂತೆ ಹರಡಿರುವ ಬಳ್ಳಿಗಳ ಮೇಲೆ ಕೂತು ನೇರವಾಗಿ ಕಾಲುವೆಗೆ ಪ್ರಸಾದ ಹಾಕ್ತ ಇದ್ದೆವು.ಅಷ್ಟೇ ಅಲ್ಲ ನಾನು ಅಣ್ಣ ಒಟ್ಟಿಗೆ ಸಂಡಾಸ್ ಗೆ ಹೋಗ್ತಾ ಇದ್ದಿದ್ದರಿಂದ ಯಾರದು ಮುಂದೆ ಹೋಗುತ್ತೆ ಅನ್ನೋ ಬೆಟ್ ಬೇರೆ , ಏನೇ ಹೇಳಿ ಅದರ ಮಜವೇ ಬೇರೆ. ಮತ್ತಷ್ಟು ಓದು 
ಪ್ರಿಯೆ ಏಕೆ ನನ್ನ ಕಾಡುವೆ ಪ್ರತಿದಿನ
ನಾಗರಾಜ್ ಬೆಂಗಳೂರು
ಪ್ರಿಯೆ ಏಕೆ ನನ್ನ ಕಾಡುವೆ ಪ್ರತಿದಿನ ನಿನಗಾಗಿ ಕಾದಿರುವೆನು ಪ್ರತಿದಿನ ಬಂದು ಹೋಗುವೆಯಾ ಒಂದು ದಿನ ನಿನ್ನ ನೋಡಿ ಕಳೆದವು ಹಲವು ದಿನ ಎಲ್ಲಿ ಹೋದರು ನಿನ್ನ ನೆನೆಪುಗಳೇ ಕಾಡುತ್ತಿದೆ ಚಿನ್ನಾ…. ಆ ಸಂಜೆ ನಿನಗೆ ನೆನಪಿದೆಯಾ ಚಿನ್ನಾ, ನನ್ನ ಜೊತೆ ನೀ ಕಡೇ ಬಾರಿ ಇದ್ದ ಕ್ಷಣ, ಮರೆಯದ ಆ ಮುಸ್ಸಂಜೆ. ಈ ನನ್ನ ಕಣ್ಣೊಳಗೆ ಕೆಂಪಾದ ಸೂರ್ಯ, ನನ್ನೆದೆಯೊಳಗೆ ಬಿಸಿಯಾದ ಆ ತಂಗಾಳಿಯನ್ನ ಮರೆಯೋಕಾಗತ್ತಾ ಹೇಳು. ಕಡಲ ತೀರಕ್ಕೆ ಪ್ರತಿಸಲ ನಾನೇ ಕರೆದುಕೊಂಡು ಹೋಗುತ್ತಿದ್ದೆ. ಆದರೆ ಆ ದಿನ ‘ಏನೋ ಮಾತಾಡ್ಬೇಕು ಕಣೋ’……. ಅಂತ ನೀನೆ ಕರೆದುಕೊಂಡು ಹೋದೆ ನೋಡು, ಆಗಲೇ ನನ್ನಲ್ಲಿ ಅದಾವುದೋ ಒಂದು ಸಣ್ಣ ಭಯ ನನಗೇ ಗೊತ್ತಿಲ್ಲದೇ ಶುರುವಾಗಿತ್ತು. ಈ ಮನಸ್ಸು ಚಟಪಡಿಸ್ತಾ ಇತ್ತು. ಏಕೋ ಗೊತ್ತಿಲ್ಲ ಚಿನ್ನು, ನಿನ್ನ ಜೊತೆಗೆ ಆ ಮೂರು ದಿನಗಳಿಂದ ಮಾತಾಡ್ದೆ, ನೋಡದೆ ಇರದಿದ್ದರಿಂದಾನೋ ಏನೋ, ನಾನು ಮೌನಕ್ಕೆ ಶರಣಾಗಿದ್ದೆ. ಆದರೆ, ಗುಲಾಬಿಯಂತೆ ನಗು ತುಂಬಿ ಆದರಿಸುತ್ತಿದ್ದ ಆ ನಿನ್ನ ಕೆಂಪಾದ ತುಟಿಗಳಲ್ಲಿ ಅದೆಂಥದೋ ನಡುಕವಿತ್ತು. ಕೋಮಲದಂಥ ಆ ನಿನ್ನ ಕಣ್ಣುಗಳು ನನ್ನ ನೋಡಲು ಅಳಕುತ್ತಿದ್ದವು. ಮೌನದಿ ನಾ ನೋಡಿದಾಗ, ಒಂದೇ ಸಮನೆ ಉಸಿರು ಬಿಗಿದಪ್ಪಿ ದಯವಿಟ್ಟು ನನ್ನನ್ನು ಕ್ಷಮಿಸು, ನನ್ನನ್ನು ಮರೆತುಬಿಡು ಎಂದು, ಎರಡು ಕೈಗಳನ್ನ ಮುಚ್ಚಿಕೊಂಡು ದುಃಖಿಸಿ ಅಳುತ್ತಾ ಕುಳಿತು ಬಿಟ್ಟೆ ನೋಡು, ಆಗ ನನ್ನ ಜಿವಾನೇ ಹೋದಂತಾಯ್ತು. 😦
ನೀನೆಂದೂ ನನ್ನ ನೋಡಬಾರದು, ನನ್ನ ಹಿಂದೆ ಬರಬಾರದು. ಹಾಗೇನಾದರು ಮಾಡಿದರೇ ನನ್ನಾಣೆ ಎಂದೇಳಿ ನನ್ನನ್ನು ಮಾತನಾಡಲೂ ಬಿಡದೇ, ನನ್ನೆಡೆಗೆ ಬೆನ್ನು ತೋರಿ ಎದ್ದು ನಡೆದು ಬಿಟ್ಟೆ. ಆ ಸಂಜೆಯಲಿ ನಿನ್ನೊಂದಿಗೆ ಕಳೆದು ಹೋದ ಆ ಸೂರ್ಯ ಮತ್ತೆಂದಿಗೂ ನನ್ನ ಬಾಳಲ್ಲಿ ಬೆಳಕಾಗಿ ಬಂದಿಲ್ಲ ಹಾಗೆ ಬರಲೆನ್ನುವ ಸಣ್ಣ ನಿರೀಕ್ಷೆಯು ಈಗ ನನ್ನಲ್ಲಿಲ್ಲ. 😦 ಚೀನ್ನಾ ನಿನೇನೋ ಸುಲಭವಾಗಿ ಮರೆತುಬಿಡು ಅಂತ ಹೇಳಿಬಿಟ್ಟೇನೋ ಹೋದೆ ಕಣೋ. ಆದರೆ, ಮರೆಯುವುದು ಹೇಗೆ ಅಂತ ಮಾತ್ರ ಹೇಳಿ ಹೋಗಲಿಲ್ಲ ನೋಡು. ಅದಕ್ಕೇ ಅನ್ಸತ್ತೆ, ಇಂದಿಗೂ ನನ್ನಿಂದ ನಿನ್ನ ಮರೆಯೋದಕ್ಕೆ ಸಾಧ್ಯ ಆಗಿಲ್ಲ. ನಿನ್ನೊಂದಿಗಿನ ಆ ಮಧುರ ಕ್ಷಣಗಳು, ನಿನ್ನ ರೇಗಿಸಿ ಖುಷಿಪಡಿಸುತ್ತಿದ್ದ ಆ ದಿನಗಳು; ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸುಖಿಸುತ್ತಿದ್ದ ಆ ಕ್ಷಣಗಳು ಮರೆಯಲು ಸಾಧ್ಯನಾ? ಚಿನ್ನಾ ನೆನಪಿದೆಯಾ ಆ ದಿನ ಅಳುತ್ತಾ ‘ನನ್ನನ್ನು ಯಾವತ್ತಿಗೂ ಕೈ ಬಿಡೋಲ್ಲಂತ ಭಾಷೆ ಕೊಡು’ ಎಂದೇಳಿ ಭಾಷೆ ತೆಗೆದುಕೊಂಡಿದ್ದ ನಿನ್ನಿಂದಲೇ ನನ್ನ ಮರೆಯಲು ಅದ್ಹೇಗೆ ಸಾಧ್ಯ?! ನಿಜ ಹೇಳ್ಲಾ, ನೀನು ಹಪಹಪಿಗೆ ಬಿದ್ದು ಕೇಳಿದ ಅದೆಷ್ಟೋ ಮಾತುಗಳು, ನನ್ನೊಳಗೂ ಇದ್ದರು ಆದೆಕೋ ಬರೀ ಮೌನವಾಗಿಯೇ ಉಳಿದು ಬಿಟ್ಟೆವು. ಈಗೀಗ ಅನಿಸ್ತಿದೆ, ನೀನಿರದ ಈ ಬಾಳು ಬರಡು ಅಂತ. ನೀನಿಲ್ಲದ ಈ ಜಗವೆಲ್ಲ ಶೂನ್ಯವಾಗಿರುವಾಗ, ಒಳ ಹೋಗಿ ಬಂದ ಪ್ರತಿ ಉಸಿರು ‘ನೀನೆಲ್ಲಿ’… ಎಂದು ಕೇಳುವಾಗ, ಅವುಗಳಿಗೆಲ್ಲ ಏನೆಂದು/ಏನಂತ ಉತ್ತರ ಕೊಡಲಿ ಹೇಳು ಚಿನ್ನು? ಮತ್ತಷ್ಟು ಓದು 
ಹೇಳುವ ಮೊದಲು ಮಾಡಿ ತೋರಿಸಬೇಕು…
ಸಾತ್ವಿಕ್ ಎನ್ ವಿ, ಮಂಗಳೂರು
ತಮಿಳರನ್ನು ನಾವು ಭಾಷಾಂಧತೆಗೆ ಉದಾಹರಣೆಯಾಗಿ ಬಳಸುತ್ತೇವೆ. ಆದರೆ ಕನ್ನಡಿಗರಾದ ನಾವು ಅವರಿಂದ ಕಲಿಯಬೇಕಾದ ವಿಷಯಗಳೇ ಇಲ್ಲವೇ? ಇದೆಯೆಂದಾದರೆ ಇಲ್ಲೊಂದು ಪ್ರಸಂಗವಿದೆ.
ದ್ರಾವಿಡರ ಮುಖ್ಯ ಲಕ್ಷಣವಾದ ಕಪ್ಪು ವರ್ಣದ ದೇಹ. ಗುಂಗುರು ಕೂದಲು. ಎಲ್ಲಕ್ಕಿಂತ ತಾನೂ ತಮಿಳನೆಂಬ ಹೆಮ್ಮೆ, ಇಷ್ಟು ಅಂಶಗಳು ಮೇಳೈಸಿದರೆ ನಮ್ಮ ಕಾಲೇಜಿನ ನೌಕರ ರಾಜನ್ ರೆಡಿ. ದೈಹಿಕ ಶಿಕ್ಷಣ ವಿಭಾಗದಲ್ಲಿ ಕೆಲಸ. ಬಿಸಿಲಿನಲ್ಲಿ ರೋಲರ್ ಉರುಳಿಸುತ್ತಾ ಟೆನ್ನಿಸ್ ಪಿಚ್ ಅನ್ನು ಹದ ಮಾಡುವ ಕಾಯಕ. ಮಂಗಳೂರಿನ ಕಡು ಬಿಸಿಲಿನಲ್ಲೂ ಒಂದಿಷ್ಟು ಮುಖ ಸಿಂಡರಿಸದೇ ಮಧ್ಯಾಹ್ನದವರಗೆ ದುಡಿಮೆ. ಅನಂತರ ತಣ್ಣೀರ ಸ್ನಾನ ಮುಗಿಸಿ ಊಟ ಮಾಡಿದ ನಂತರ ಸುಮಾರು ಒಂದು ತಾಸು ಪತ್ರಿಕೆಗಳ ಓದು. ಕರಾವಳಿಯ ಕನ್ನಡ ಸಂಜೆಪತ್ರಿಕೆ ಜಯಕಿರಣ, ತಮಿಳಿನ ದಿನಕರನ್, ದಿನತಂತಿ ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಾರೆ. ಆಮೇಲೆ ಅವುಗಳನ್ನು ತನ್ನಂತೆ ಓದಲು ಆಸಕ್ತರಾದ ಕಾಸು ಕೊಟ್ಟು ಪತ್ರಿಕೆ ಕೊಳ್ಳದ ಕನ್ನಡಿಗರಿಗೆ ಓದಲು ಕೊಡುತ್ತಾರೆ. ಕನ್ನಡಿಗರು ಕನ್ನಡ ಪತ್ರಿಕೆಯನ್ನು ಓದಿಯಾರು. ಆದರೆ ತಮಿಳು ಪತ್ರಿಕೆಯನ್ನು ಓದುವುದು ಹೇಗೆ? ಸಮಸ್ಯೆಯೇ ಇಲ್ಲ, ಅದನ್ನು ಓದಿ ಭಾಷಾಂತರ ಮಾಡಲು ರಾಜನ್ ಯಾವಾಗಲೂ ಸಿದ್ಧ. ತನ್ನ ರಾಜ್ಯದ ವಿವಿಧ ವಿಷಯಗಳನ್ನು ಬಹಳ ಆಸಕ್ತಿಯಿಂದ ವಿವರಿಸುವ ರೀತಿ ಎಂತಹ ವ್ಯಕ್ತಿಯನ್ನು ಒಂದು ಸಲ ತಮಿಳಿನ ವಿಷಯಗಳ ಕುರಿತು ಯೋಚಿಸುವಂತೆ ಮಾಡುತ್ತದೆ.
ಆ ವ್ಯಕ್ತಿಯಲ್ಲಿ ಇರಬಹುದಾದ ಇನ್ನೊಂದು ಆಸಕ್ತಿದಾಯಕ ಸಂಗತಿಯೆಂದರೆ ಇಡೀ ದಕ್ಷಿಣ ಭಾರತೀಯರೆಲ್ಲರೂ ದ್ರಾವಿಡರು, ತಮಿಳು ಎಲ್ಲ ದ್ರಾವಿಡ ಭಾಷೆಗಳ ತಾಯಿಯೆಂಬ ನಂಬಿಕೆ. ಈ ಕುರಿತು ಆತನು ಮಾತಾಡಲು ಆರಂಭಿಸಿದರೆ ಎಂಥವರು ಒಂದು ಕ್ಷಣ ಹೌದಲ್ಲವೇ ಎಂದುಕೊಳ್ಳಬೇಕು, ಹಾಗಿರುತ್ತದೆ ಆತನ ವಾದ ಸರಣಿ. ಇದಿಷ್ಟು ಸಾಮಾನ್ಯ ನೌಕರಿ ಮಾಡುವ ತಮಿಳು ವ್ಯಕ್ತಿಯೊಬ್ಬನ ಭಾಷಾಪ್ರೇಮದ ಗಾಥೆ. ಮತ್ತಷ್ಟು ಓದು 
ಯುವ ಜನರೇ ಆತ್ಮಹತ್ಯೆಗೆ ಮುನ್ನ ಯೋಚಿಸಿ ?
ಅರವಿಂದ್
ಬದುಕಿನ ಕಟ್ಟಕಡೆಯ ಸಂಧರ್ಭವಾದರು, ಯಾರಿಗೂ ತಿಳಿಯದ ನಿಗೂಢ, ಇಂದಿನ ಯುವ ಜನರ ಮನದಲ್ಲಿ ಸಾವು ಎಂಬುದು ಆಟಿಕೆಯ ವಸ್ತುವೇ ? ಸಾವನ್ನು ಅಷ್ಟು ಸುಲಭವಾಗಿ ಆಸ್ವಾದಿಸುವುದಾದರೆ ಎಷ್ಟೋ ಸಮಸ್ಯೆಗಳಿಗೆ ಜೀವವೇ ಇರುತ್ತಿರಲಿಲ್ಲ. ಇಂದಿನ ಧಾವಂತದದ ಯುಗದಲ್ಲಿ ಎಲ್ಲೆಲ್ಲೂ ಪ್ಯೆಪೋಟಿ, ಎಲ್ಲರನ್ನು ಹಿಂದುಕ್ಕುವಂತ ನಾಗಾಲೋಟದ ಮನಸ್ಸಿಗೆ ಅಷ್ಟು ಸುಲಭವಾಗಿ ಸಾವು ಬಂತಂದರೆ ಅಥವಾ ಸಾವಿನ ನಿರ್ಣಯವನ್ನು ಕ್ಯೆಗೆತ್ತುಕೊಂಡರೆ ಅದಕ್ಕಿಂತಲೂ ಹೇಡಿತನ ಮತ್ತೊಂದಿಲ್ಲ.
ಅಸಲಿಗೆ ನಮ್ಮ ಯುವ ಜನರಲ್ಲಿ ಸಮಸ್ಯೆಗಳ ಪರಿಹಾರವನ್ನು ಹುಡುಕಿಕೊಳ್ಳುವ ತಾಳ್ಮೆಯೇ ಇಲ್ಲದಾಗಿದೆಯೇ ? ಅಥವಾ ಪ್ಯೆಪೋಟಿ ಜಗತ್ತಿಗೆ ಅವರನ್ನು ಒಡ್ಡಿಕೊಳ್ಳುವ ಛಲವೇ ಮರೆತು ಹೋಗಿದೆಯೇ ? ಸಮಸ್ಯೆ ಕೌಟುಂಬಿಕದ್ದೆ ಇರಲಿ, ಅಥವಾ ನೌಕರಿಯದೆ ಇರಲಿ, ಪ್ರತಿ ಸಮಸ್ಯೆಗಳು ಸೃಷ್ಟಿಗಳಿಗೂ ಕಾರಣ ಪರಿಹಾರವಿಲ್ಲದೆ ಇಲ್ಲ. ಈಗ್ಗೆ ಕೆಲವು ವರುಷಗಳಿಂದ ಸ್ವಾಭಾವಿಕ ಸಾವಿನ ಸಂಖ್ಯೆ ಇಳಿಮುಖವಾದರು, ಅಸ್ವಾಭಾವಿಕವಾಗಿ ಸಾವನ್ನು ಬರಮಾಡಿಕೊಳ್ಳುವ ಯುವ ಜನರಲ್ಲಿ ಮಾನಸಿಕ ಸ್ಥ್ಯೇರ್ಯ, ಸಮಸ್ಯೆಗಳ ಸ್ವರೂಪದಲ್ಲಿರುವ ಗೋಜಲುಗಳು, ಅರ್ಥಮಾಡಿಕೊಳ್ಳುವದರಲ್ಲಿ ಸಂಯಮವೇ ಕಳೆದು ಹೋಗಿದೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಯಾರನ್ನೋ ಹೊಣೆಯನ್ನಾಗಿ ಮಾಡುವ, ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿರುವ, ಮತ್ತು ಅದರ ಕೂತೂಹಲಕ್ಕೆ ಪ್ರಯತ್ನಿಸುವ ಮಿತ್ರರೇ, ಒಮ್ಮೆ ನಿಮ್ಮ ಸಮಸ್ಯೆಯಾ ಬಗ್ಗೆ ಚಿಂತನೆ ನಡೆಸಿ, ಸಾಧ್ಯವಾದರೆ ನಿಮ್ಮ ಆಪ್ತರೊಡನೆ ಒಮ್ಮೆ ಚರ್ಚಿಸಿ,
ನನ್ನ ಮಿತ್ರನೊಬ್ಬ ಕಳೆದ ವರುಷಗಳ ಹಿಂದೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾದ, ಅವನ ಸಮಸ್ಯೆ ಕೇವಲ ದುಡ್ಡಿಗೆ ಸಂಭಂದಿಸಿದ್ದು, ತಂಗಿಯ ಮದುವೆಗೆ ಸಾಲ ಮಾಡಿದ್ದ ಜವಾಬ್ದಾರಿಯುತ ವ್ಯಕ್ತಿ, ಸಾಲ ತೀರಿಸಲಾಗದೆ ಸಾವನ್ನು ಬರಮಾಡಿಕೊಂಡಿದ್ದ. ಒಂದಿಬ್ಬರು ಗೆಳೆಯರಲ್ಲಿ ಸಣ್ಣ ಪುಟ್ಟ ಸಾಲ ಇತ್ತಾದರೂ ಅದ್ಯಾವುದು ಅವನ ಸಾವಿನಿಂದ ಪರಿಹಾರವಾಗುವ ಸಮಸ್ಯೆಯಲ್ಲ. ತನ್ನ ೧೮ನೇ ವಯಸ್ಸಿಗೆ ಸಾಲ ಮಾಡಿ ಆಟೋ ಖರೀದಿಸಿದ ಹುಡುಗ, ಸಮಯದ ಪರಿವೆಯೇಯಿಲ್ಲದೆ ದುಡಿದು ಎರಡು ವರುಷಗಳಲ್ಲೇ ಸಾಲ ತೀರಿಸಿದವನು, ತನ್ನ ತಂಗಿಯ ಮದುವೆಗೆ ಮಾಡಿದ ಸಾಲ ತೀರಿಸದೆ ಹೋದಾನೆ, ಅದು ಕೇವಲ ಒಂದೂವರೆ ಲಕ್ಷ. ಆತನ ಪರಿಸ್ಥಿತಿಗೆ ಅದು ದೊಡ್ಡದೇ ಇರಬಹುದು, ಸಾವಿನಿಂದ ಅದು ಪರಿಹಾರವಾಗಲಿಲ್ಲ. ಈಗ ಅವನ ಸಾಲವೂ ಬೆಳೆದಿದೆ. ಅವನ ತಾಯಿಗೆ ವಯಸ್ಸಾಗಿದ್ದರೂ ದುಡಿದು ಸಾಲ ತೀರಿಸುವ ಹಂಬಲ. ಆದರೆ ಆರೋಗ್ಯ ಕ್ಯೆಕೊಟ್ಟಿದೆಯಾದರೂ, ಒಬ್ಬರಲ್ಲಿ ಅವಲಂಬನೆಯಾಗದ ತುಡಿತ. ಆಕೆಯೇ ಮಗನಂತೆ ಸಾವಿಗೆ ಶರಣಾಗಿದ್ದಾರೆ ? ಮತ್ತಷ್ಟು ಓದು 
ಹಿಂದೂ ಹಾಗೆಂದರೇನು?
ಸಂತೋಷ್ ಕುಮಾರ್ ಪಿ.ಕೆ
ಸಂಶೋಧಕರು, ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಸಂಸ್ಥೆ
ಕುವೆಂಪು ವಿ ವಿ, ಶಂಕರಘಟ್ಟ
ಆಧುನಿಕ ಜಗತ್ತಿನ ಬುದ್ದಿಜೀವಿಗಳ ವಲಯದಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿರುವ ವಿಷಯವೆಂದರೆ ಹಿಂದೂಯಿಸಂ, ಈ ಹಿಂದೂಯಿಸಂನ ಅಧ್ಯಯನಕ್ಕಾಗಿ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಬೃಹತ್ ಮಟ್ಟದ ಸಂಸ್ಥೆಗಳು ಹುಟ್ಟಿಕೊಂಡಿವೆ. ಈ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬಹುತೇಕ ಬುದ್ದಿಜೀವಿಗಳು ಹಿಂದೂಯಿಸಂ ಎಂಬ ರಿಲಿಜನ್ ಅಸ್ಥಿತ್ವದಲ್ಲಿದ್ದು ಅದರ ಸಾಧಕ ಬಾಧಕಗಳ ಕುರಿತು ಆಲೋಚಿಸುವ ಸಂದರ್ಭದಲ್ಲಿ ಕೊಂಚ ವಿಭಿನ್ನವಾಗಿ ಪರ್ಯಾಯಾವಲೋಚಿಸುವ ಕುರಿತು ಇಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ನಾವು ನಮ್ಮದಲ್ಲದ ವಿಚಾರಗಳನ್ನು ನಮ್ಮದೇ ಎಂದು ಹೇಗೆ ತಿಳಿದುಕೊಂಡಿದ್ದೇವೆ ಹಾಗು ಅವುಗಳು ನಮ್ಮವೇ ಎಂದು ಸ್ಪಷ್ಟಪಡಿಸುವಲ್ಲಿ ಇತರ ಅಂಶಗಳ ಪಾತ್ರಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿದ್ದೇನೆ. ಪ್ರಸಕ್ತ ಲೇಖನದಲ್ಲಿ ಈ ಕೆಳ ಕಾಣಿಸಿರುವ ಅಂಶಗಳ ಮೇಲೆ ಬೆಳಕನ್ನು ಹರಿಸಲು ಪ್ರಯತ್ನಿಸಿದ್ದೇನೆ.
1. ಹಿಂದೂ ಪದದ ಉಗಮ, ಬೆಳವಣಿಗೆ ಮತ್ತು ಅದರ ಇಂದಿನ ಬಳಕೆ
2. ಹಿಂದೂಯಿಸಂನ ಉಗಮ ಮತ್ತು ಅದರ ಪ್ರಸಕ್ತತೆ
1. ಹಿಂದೂಯಿಸಂನ ಕುರಿತು ಚರ್ಚಿಸುವ ಮುನ್ನ ಈ ಹಿಂದೂ ಎಂಬ ಪದವು ಹೇಗೆ ಅಸ್ಥಿತ್ವಕ್ಕೆ ಬಂದಿತೆಂದು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಭಾರತದವರು ಹಿಂದುಗಳು ಎಂಬ ಕಲ್ಪನೆ ಬಹಳಷ್ಟು ಜನರಿಗೆ ಬೇರೂರಿದೆ, ಪ್ರೌಢಶಾಲಾ ಶಿಕ್ಷಣ ಮುಗಿಸಿದವರಿಗೆ ನೆನಪಿರಬಹುದು, ಹಿಂದೂ ಎಂಬ ಪದ ಹೇಗೆ ಬಂತೆಂದು. ಪರ್ಷಿಯನ್ನರು ಮೊದಲು ಭಾರತಕ್ಕೆ ಬಂದಾಗ ಸಿಂಧೂ ನದಿಯ ಬಯಲಿನಲ್ಲಿ ವಾಸಿಸುತ್ತಿದ್ದ ಜನರನ್ನು ಹಿಂದೂಗಳೆಂದು ಕರೆದರು, ಈ ವಿಷಯಕ್ಕೆ ಸಂಬಂಧಿಸಿದಂತೆ ಆಧಾರವನ್ನು ಒದಗಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ, ಕಾರಣ ಪ್ರೌಢಶಾಲಾ ಪಠ್ಯಪುಸ್ತಕಗಳಲ್ಲಿ ದೊರಕುವ ಸರ್ವೇಸಾಮಾನ್ಯ ಮಾಹಿತಿಯಾಗಿದೆ. ಆದರೆ ಹಿಂದೂಸ್ಥಾನ ಎಂಬ ಹೆಸರು ಬಹಳ ಹಿಂದಿನಿಂದಲೂ ಭಾರತಕ್ಕೆ ಇತ್ತು ಆದ ಕಾರಣ ಇಲ್ಲಿ ವಾಸಿಸುವವರಿಗೆ ಹಿಂದೂಗಳೆಂದು ಹೆಸರು ಬಂದಿರುವುದು ಎಂಬುದು ಕೆಲವರ ವಾದ ಇರಬಹುದು, ಆದರೆ ನಾನು ಆ ರೀತಿಯ ಗೊಂದಲ ಚರ್ಚೆಗೆ ಇಳಿಯಬಸುವುದಿಲ್ಲ, ಬದಲಿಗೆ ನಾ ಹೇಳ ಹೊರಟಿರುವುದು, ಹಿಂದೂ ಎಂಬುದು ಹೇಗೆ ಅಸ್ಥಿತ್ವಕ್ಕೆ ಬಂದಿತು ಮತ್ತು ಅದರ ಬಳಕೆ ಪ್ರಸಕ್ತ ಕಾಲದಲ್ಲಿ ಯಾವ ರೀತಿ ಆಗುತ್ತಿದೆ ಎಂಬುದನ್ನು ವಿಶ್ಲೇಷಿಸುತ್ತೇನೆ. ನಮಗೆ ಈ ವಿಷಯಗಳು ತಿಳಿದಿದ್ದರೂ ಅದರ ಕುರಿತು ಆಲೋಚಿಸುವಾಗ ಸ್ವಲ್ಪ ಎಡವಿರುವುದು ಬುದ್ದಿಜೀವಿಗಳ ಆಲೋಚನಾ ಕ್ರಮಗಳನ್ನು ನೋಡಿದರೆ ತಿಳಿಯುತ್ತದೆ. ಮತ್ತಷ್ಟು ಓದು 
ದೇಶವನ್ನು ಆತಂಕಕ್ಕೀಡು ಮಾಡಿರುವ ಮರ್ಯಾದ ಹತ್ಯೆ ಪ್ರಕರಣ
-ಶಂಶೀರ್, ಬುಡೋಳಿ
ಪತ್ರಕರ್ತ
ದೇಶದಲ್ಲಿ ಆತಂಕಕ್ಕೀಡು ಮಾಡಿರುವ ಪ್ರಕರಣವೆಂದರೆ ಮರ್ಯಾದ ಹತ್ಯೆ ಪ್ರಕರಣ. ಚಂಡೀಗಢದ ವಕೀಲರಾದ ಅನಿಲ್ ಮಲೋತ್ರ ಮತ್ತು ರಂಜಿತ್ ಮಲೋತ್ರ ಮರ್ಯಾದ ಹತ್ಯೆ ಪ್ರಕರಣಕ್ಕೆ ಕುರಿತಾದ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಉತ್ತರಪ್ರದೇಶ, ಹರ್ಯಾಣ, ಪಂಜಾಬ್‌ಗಳಲ್ಲಿ ವರ್ಷಕ್ಕೆ ೯೦೦ ರಷ್ಟು ಮರ್ಯಾದ ಹತ್ಯೆಗಳು ನಡೆಯುತ್ತಿದೆ. ಮಾತ್ರವಲ್ಲ, ಇತರ ರಾಜ್ಯಗಳಲ್ಲಿ ೨೦೦ರಿಂದ ೩೦೦ರಷ್ಟು ಮರ್ಯಾದ ಹತ್ಯೆಗಳು ನಡೆಯುತ್ತದೆ ಎಂಬ ಆತಂಕಕಾರಿ ವಿಚಾರ ಕೂಡಾ ಬಹಿರಂಗಗೊಂಡಿದೆ. ಅಂತರ್‌ಜಾತಿ, ಸಗೋತ್ರ ಮದುವೆಯ ಕಾರಣದಿಂದಾಗಿ ಹಾಗೂ ಕುಟುಂಬ ಮತ್ತು ಸಮುದಾಯದ ಮರ್ಯಾದೆ, ಗೌರವ, ಪ್ರತಿಷ್ಠೆಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಮರ್ಯಾದೆ ಹತ್ಯೆಗಳು ನಡೆಯುತ್ತಿದ್ದು ಇದು ಆತಂಕಕಾರಿ ವಿಚಾರವಾಗಿದೆ.
ಮರ್ಯಾದೆ ಹತ್ಯೆ ಪ್ರಕರಣಕ್ಕೊಳಗಾದವರು ಇವತ್ತು ಸಾಮಾಜಿಕವಾಗಿ ಅವಮಾನಕ್ಕೊಳಗಾಗುತ್ತಿದ್ದಾರೆ. ಖಾಪ್ಸ್ ಪಂಚಾಯತಿಗಳು ಅಣ್ಣ-ತಂಗಿಯೆಂದು ಘೋಷಿಸಿ ಹೆಣ್ಣು- ಗಂಡನ್ನು ಸಗೋತ್ರದ ಹಿನ್ನೆಲೆಯಲ್ಲಿ ಪ್ರತ್ಯೇಕ ಮಾಡುತ್ತಿದ್ದಾರೆ. ಒಟ್ಟಾರೆ ಮರ್ಯಾದೆ ಹತ್ಯಾ ಪ್ರಕರಣಗಳು ಭೀಕರತೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಬಬುದು. ಈ ಮರ್ಯಾದ ಹತ್ಯೆಯೆಂಬುದು ಇವತ್ತು ನಿನ್ನೆಯ ರೋದನವಲ್ಲ. ರೋಮಿಯೋ-ಜೂಲಿಯೆಟ್ ಘಟನೆಯಿಂದಲೂ ಇವರೆಗೆ ಹೆಚ್ಚುತ್ತಾ ಬಂದಿರುವ ಆತಂಕಕಾರಿ ವಿಚಾರವಾಗಿದೆ. ಹೀಗಾಗಿ ಮರ್ಯಾದ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮರ್ಯಾದೆ ಎಂಬ ಪದದ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಕ್ಕೊಳಪಡಿಸುವ ಅಗತ್ಯವಿದೆ. ಈ ಕುರಿತು ವಿವಿಧ ಮಾನವ ಹಕ್ಕು ಸಂಘಟನೆಗಳು, ಜನಪರ ಸಂಘಟನೆಗಳು ದಿ ಇಂಡಿಯನ್ ಎವಿಡೆನ್ಸ್ ಆಕ್ಟ್, ದಿ ಇಂಡಿಯನ್ ಸಿವಿಲ್ ಕೋಡ್ ಆಕ್ಟ್, ಸ್ಪೆಷಲ್‌ಮ್ಯಾರೇಜ್ ಆಕ್ಟ್‌ನಲ್ಲಿ ಬದಲಾವಣೆಗಳನ್ನು ಹಾಗೂ ಹತ್ಯೆಗಳನ್ನು ತಡೆಗಟ್ಟಲು ವಿವಿಧ ಮಾರ್ಗಗಳನ್ನು ಸೂಚಿಸಬೇಕೆಂದು ಕೇಂದ್ರ ಸರಕಾರದ ಮುಂದೆ ಬೇಡಿಕೆಯಿಟ್ಟಿವೆ.
೨೦೦೭ರ ಜೂನ್ ನಿಮಗೆ ನೆನಪಿರಬೇಕು. ಹರ್ಯಾಣ ರಾಜ್ಯದ ಕೈತಾಲ್ ಜಿಲ್ಲೆಯಲ್ಲಿ ಒಂದು ಘಟನೆ ನಡೆಯಿತು. ಬಾಬ್ಲಿ-ಮನೋಜ್ ಇವರು ಸ್ವಗೋತ್ರದವರು. ಇವರಿಬ್ಬರು ಮದುವೆಯಾದ ಒಂದೇ ಒಂದು ಕಾರಣಕ್ಕಾಗಿ ಇವರಿಬ್ಬರನ್ನು ಕೊಲೆ ಮಾಡಲಾಯಿತು. ಆಗ ಖಾಪ್ಸ್ ಪಂಚಾಯತಿ ಪ್ರಶ್ನೆಗೊಳಗಾಗಿತ್ತು. ಇವರನ್ನು ಕೊಂದ ಕೊಲೆಗಾರರಿಗೆ ಶಿಕ್ಷೆಯಾಯಿತಾದರೂ ಅಮಾಯಕ ಎರಡು ಜೀವ ಬಲಿಯಾದದ್ದು ಮಾತ್ರ ದೇಶವನ್ನೇ ತಲ್ಲಣಗೊಳಿಸಿತ್ತು.
ಮತ್ತಷ್ಟು ಓದು 








