ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 3, 2010

ಎರಡೇ ಎರಡು ಹನಿಗಳು

‍ನಿಲುಮೆ ಮೂಲಕ

ದಯಾಳು

 ಯಾಕೋ ಇಂದು
ಧರಣಿ ಮಂಡಲ ಮಧ್ಯದೊಳಗೆ
ಹಾಡು ನೆನಪಾಗುತಿದೆ
ಪುಣ್ಯಕೋಟಿಯ ಜೊತೆ

ಚಂಡವ್ಯ್ಯಾಘ್ರನ ನೆನಪೂ
ಬಹಳ ಕಾಡುತಿದೆ
ಆತನೇನು ಕಡಿಮೆ ದಯೆಯಲ್ಲಿ
ಪುಣ್ಯಕೋಟಿಗಿಂತ

ಕವಿತೆಯ ಸಾಲು

ನಾ ಬರೆದ ಕವಿತೆಯ ಸಾಲು
ಮರೆತು ಹೋಗಿದೆ
ನೀನೆಲ್ಲಿ ಸಖಿ?
ನನ್ನ ಸಾಲುಗಳನ್ನು ನೆನಪಿಸಲಾರೆಯಾ?

ಮರೆತು ಹೋದ ಸಾಲುಗಳಲ್ಲಿ
ನೀನಿದ್ದೆಯೋ ನಾನರಿಯೆ
ಇಂದು ಆ ಸಾಲುಗಳಿಲ್ಲ
ನಿನ್ನ ಹಾಗೆಯೇ

ಸಂದೀಪ್ ಶೆಟ್ಟಿ
ಉಪನ್ಯಾಸಕರು
ಪ್ರಾಚ್ಯಶಾಸ್ತ್ರ ವಿಭಾಗ
ಕುವೆಂಪು ವಿವಿ, ಶಂಕರಘಟ್ಟ

 ಚಿತ್ರಕೃಪೆ: ಗೂಗಲ್ ಇಮೇಜ್

Read more from ಕವನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments