ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಳ್ಳಿಮೋಡ ಸೇರಿದಂತೆ ತೆರೆಕಂಡ ೧೬ ಸಿನಿಮಾಗಳು
ಕರುಣಾಕರ ಬಳ್ಕೂರು
ಸಿನಿಮಾ ಅಂದ್ರೆ ಯಾರಿಗೆ ಇಷ್ಟಯಿಲ್ಲ ಹೇಳಿ? ಊಟ-ತಿಂಡಿ ಬಿಟ್ಟು 5-6 ಸಿನಿಮಾಗಳನ್ನು ನೊಡುವವರಿಗೇನು ನಮ್ಮಲ್ಲಿ ಬರವಿಲ್ಲ. ಆದರೆ ಇವತ್ತು ಕಲಾತ್ಮಕ ಸಿನಿಮಾಗಳನ್ನುನೋಡುವವರು ಮಾತ್ರ ಬೆರೆಳಣಿಯಷ್ಟೇ ಜನ ಸಿಗತ್ತಾರೆ? ಆದರೆ ಅವರಿಗೆ ನೋಡುವ ಅವಕಾಶ ಕೊಟ್ಟರೆ ಸಿನಿಮಾ ನೋಡುತ್ತಾರೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವೇ ಸಾಕ್ಷಿಯಾಯಿತು. ತೆರೆಯ ಮೇಲೆ ಬೆಳ್ಳಿಮೋಡ ಅನಾವರಣ ಕಂಡಾಗ ಪ್ರೇಕ್ಷಕನ ಮೈರೋಮಾಂಚನ ಗೊಂಡಿರುವುದು ಆಶ್ಚರ್ಯದ ಸಂಗತಿ.
ಸಿನಿಮಾ ನಿರ್ಮಾಣಕ್ಕೆ ಕೋಟಿಗಟ್ಟಲೆಯಷ್ಟು ಹಣವನ್ನು ಖರ್ಚು ಮಾಡಿ ರಾಜಕಾರಣ, ಭೃಷ್ಠಾಚಾರ, ಸಮಾಜದ ಸಮಸ್ಯೆ. ಕುಟುಂಬಗಳ ಎಳೆಗಳನ್ನು ತೋರಿಸುವಲ್ಲಿ ಯಶಸ್ವಿಯಾಗುತ್ತಿವೆ. ಮಂಗಳೂರಿನ ಡಾನ್ ಬಾಸ್ಕೋ ಆಡಿಟೋರಿಯಂನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 14 ವಿದೇಶಿ ಭಾಷೆಗಳ ಮತ್ತು 2 ದೇಶಿ ಭಾಷೆಗಳ ಚಿತ್ರಗಳು 4 ದಿನದಲ್ಲಿ ಪ್ರದರ್ಶನ ಸಂಪನ್ನಗೊಂಡಿತ್ತು. ಆದರೆ ಪ್ರೇಕ್ಷಕರ ಕೊರತೆ ಮಾತ್ರ ಅಲ್ಲಿ ಎದ್ದು ಕಂಡಿದ್ದು ನಿಜ. ಮೊದಲ ದಿನದ ಮೊದಲ ಚಿತ್ರ ತ್ರಿವೇಣಿಯವರ ಕಾದಂಬರಿ ಆಧಾರಿತ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಬೆಳ್ಳಿಮೋಡ ಸಿನಿಮಾ ಯುವ ಸಮುದಾಯಕ್ಕೆ ಹೊಸ ಹುರುಪನ್ನೇ ನೀಡಿತು. ಕಲ್ಪನಾ, ಅಶ್ವಥ್, ಪಂಡರೀಬಾಯಿ, ದ್ವಾರ್‌ಕೀಶ್ ಮುಂತಾದವರು ವಿಭಿನ್ನವಾಗಿ ಮನೋಜ್ಞವಾದ ಅಭಿನಯದ ಮೂಲಕ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸಿತು. ಮನುಷ್ಯನ ಬದುಕಿನಲ್ಲಿ ಹಣ ಮುಖ್ಯವಲ್ಲ, ಆದರೆ ಪ್ರೀತಿ, ಸ್ನೇಹ, ಮಮತೆ, ಕರುಣೆಯೇ ಮುಖ್ಯ ಎನ್ನುವ ಸಂದೇಶವನ್ನು ನೋಡುಗನಲ್ಲಿ ಅನಾವರಣಗೊಳಿಸಿತು.
ಬೆಳ್ಳಿಮೋಡ ಸೇರಿದಂತೆ ಟೈಡ್ ಹ್ಯಾಂಡ್ಸ್, ರ್ಟುಟೆಲ್ಸ್ ಕ್ಯಾನ್ ಪ್ಲೈ, ಸ್ಪ್ರಿನ್ಗ್ ಸುಮ್ಮೆರ್ ಫ಼ಲ್ಲ್ ವಿನ್ಟೆರ್, ಟ್ರೈನ್ ಇನ್ ದಿ ಟೆನ್ಥ್ ಪ್ಲೂರ್, ಜುಮ್ಪಿನ್ಗ್ ಒವೆರ್ ದಿ ಪುಡ್ಡ್ಲೆ ಅಗೈನ್, ಯೆಸ್ಟೆರ್ಡಯ್, ದಿ ಚೊರೆಉಸ್, ದಿ ಬಟ್ಟ್ಲೆ ಆಫ್ ಎಲ್ಹಿಎರ್ಸ್ಸ್, ಸಿಟಿ ಲೈಟ್ಸ್, ಪಿಕ್ ಪೊಕೆಟ್, ದಿ ರೆಟರ್ನ್, ಪಸನಗ, ದಿ ಪ್ರೆಸಿದೆನ್ಟ್ಸ್ ಬರ್ಬೆರ್, ವ್ಹಿಟೆ ಬಲ್ಲೂನ್, ದಿ ರೋಡ್ ಹೊಮ್ ಸಿನಿಮಾಗಳು ಪ್ರದರ್ಶನಗೊಂಡವು.
ಕ್ರಿಯಾತ್ಮಕ, ಸೃಜನಾತ್ಮಕ, ಮನೋರಂಜನೆಯನ್ನು ನೀಡುವ, ಜನರಲ್ಲಿ ಸಾಮಾಜಿಕ ಜಾಗ್ರತಿಯನ್ನು ಮೂಡಿಸುವ ಚಿತ್ರಗಳು ತೆರೆ ಕಂಡವು. ಇಲ್ಲಿ ತೆರೆ ಕಮ್ಡ ಎಲ್ಲಾ ಸಿನಿಮಾಗಳು ಕಲಾತ್ಮಕ ಚಿತ್ರಗಳಾಗಿ ತನ್ಮೂಲಕ ಚಿತ್ರ ಪ್ರೇಮಿಗಳಲ್ಲಿ ಹೊಸ ಚಿಂತನೆ ಮೂಡುವಂತೆ ಮಾಡುತ್ತದೆ. ಆದರೆ ಇಂದು ಕಲಾತ್ಮಕ ಚಿತ್ರಗಳು ಬಂದಾಗ ಪ್ರೇಕ್ಷಕರು ನಿರಾಸ್ತಕಿ ತೋರಿಸುತ್ತಿರುವುದು ಬೇಸರದ ಸಂಗತಿ. ಪರಾಭಾಷೆ ಚಿತ್ರಗಳಿಗೆ ಕೊಡುವ ಆಸ್ತಕಿ ಕನ್ನಡದ ಸಿನಿಮಾಗಳಿಗೆ ನೀಡುತ್ತಿಲ್ಲ. ಸೃಜನಶೀಲ ಚಿತ್ರಗಳಗಳನ್ನು ತೆರೆಯ ಮೇಲೆ ತಂದು ಚಿತ ಪ್ರೇಮಿಗಳಿಗೆ ರಸದೌತಣ ಉಣಬಡಿಸುವುದು ನಿರ್ದೇಶಕರ ಕರ್ತವ್ಯ. ಆದರೆ ನಿರ್ಮಾಪಕರ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಹಾಕಿದ ಹಣ ಬರುತ್ತದೋ ಇಲ್ಲವೋ ಲೆಕ್ಕಚಾರ ಆರಂಭವಾಗುತ್ತದೆ. ಹೀಗೆ ಮುಂದೆ ನಡೆದರೆ ಚಿತ್ರೋದ್ಯಮ ಅಳಿವು-ಉಳಿವಿನ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ. ಹಿಂದೆ ಬಂದಿರುವ ಎಲ್ಲಾ ಚಿತ್ರಗಳು ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಮೌಲ್ಯಗಳನ್ನು ಸಂದೇಶಗಳನ್ನು ನೀಡುತ್ತಿದ್ದವು. ಆದರೆ ಇಂದು ಕೇವಲ ಹೊಡಿಮಗಾ-ಬಡಿಮಗಾ, ಕತ್ತಿ, ಲಾಂಗ್-iಚ್ಚು, ರಕ್ತದ ಓಕುಳಿಯನ್ನೇ ಹರಿಸುವ ಸಿನಿಮಾಗಳನ್ನು ಮನೆಮಂದಿಯೆಲ್ಲಾ ಕುಳಿತು ನೋಡಲು ಹೇಗೆ ಸಾಧ್ಯ?
ಅಪರೂಪಕೊಮ್ಮೆ ‘ನಾನು ನನ್ನ ಕನಸು’, ‘ಎರಡನೇ ಮದುವೆ’ಯಂತಹ ಸಿನಿಮಾಗಳು ಬಂದಾಗ ಖಂಡಿತ ಪ್ರೇಕ್ಷಕರು ಸ್ವೀಕಾರ ಮಾಡುತ್ತಾರೆ. ನಿರ್ದೇಶಕರು ಕೆಟ್ಟ ಸಿನಿಮಾಗಳನ್ನು ನೀಡಿದರೆ ಜನ ಮೂಗು ಮೂರಿಯುವುದರಲ್ಲಿ ಎರಡು ಮಾತಿಲ್ಲ. ಹಿಂದೆ ‘ಒಡ ಹುಟ್ಟಿದವರು’ ‘ಆಕಸ್ಮಿಕ’ ಅಂತಹ ಸಿನಿಮಾಗಳು 100ಕ್ಕೂ ಹೆಚ್ಚು ದಿನಗಳವರೆಗೆ ತೆರೆ ಕಾಣುತ್ತಿದ್ದವು. ಇಂದೇಕೆ ಕನ್ನಡ ಸಿನಿಮಾಗಳ ಹಿನ್ನೆಡೆ ಬಗ್ಗೆ ನಿರ್ದೇಶಕರು, ನಿರ್ಮಾಪಕರು, ನಟರು ಆಲೋಚಿಸಬೇಕಾಗಿದೆ. ಒಟ್ಟಿನಲ್ಲಿ ಸಿನಿಮಾ ಕ್ಷೇತಕ್ಕ್ರೆ ದುರಂತದ ಸ್ಥಿತಿ ಬಂದಿರುವುದು ಅಷ್ಟೇ ಕಠೋರ ಸತ್ಯ. ಕನ್ನಡ ನಾಡಿನಲ್ಲಿ ಕನ್ನಡ ಸಿನಿಮಾಗಳೇ ಹೆಚ್ಚಾಗಿ ಕಲಾತ್ಮಕ ಮತ್ತು ಸದಭಿರುಚಿಯ ಸಿನಿಮಾಗಳು ಮೂಡಿಬರಲಿ ಎಂದು ಹಾರೈಸೋಣ.





