ಭಾರತಕ್ಕೆ ರಾಹುಲ್ ಡೇಂಜರ್!
’ಭಾರತಕ್ಕೆ ರಾಹುಲ್ ಡೇಂಜರ್!’ ಅನ್ನೋ ಹೇಳಿಕೆಯನ್ನ ಕೊಟ್ರೆ ಕಾಂಗ್ರೆಸ್ಸಿಗರು,ರಾಹುಲ್ ಅಭಿಮಾನಿಗಳಿಗೆ ನನ್ನ ಅಟ್ಟಾಡಿಸಿಕೊಂಡು ಹೊಡಿಬೇಕು ಅನ್ನಿಸೋದಿಲ್ವಾ? ಅವ್ರಿಗ್ ಯಾಕೆ ಬೇರೆಯವರಿಗೂ ಇದೆಂತ ಎಡಬಿಡಂಗಿ ಹೇಳಿಕೆ ಮಾರಾಯ? ಅಂತ ಅನ್ನಿಸ್ಬಹುದು.ಆದ್ರೆ,ಒಂದ್ನಿಮಿಷ ಕೆಳಗೆ ಓದಿಬಿಡೀಪ್ಪಾ 😉
ಜಗತ್ತಿನ ರಾಜತಾಂತ್ರಿಕರ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಇಬ್ಬಗೆ ನೀತಿಯನ್ನ ಬಯಲು ಮಾಡುತ್ತ ಬಂದ ಜುಲಿಯನ್ ಅಸಾಂಜ್ನ ವಿಕಿಲೀಕ್ಸ್ ವರದಿಯಿಂದ ಈವರೆಗೂ ಭಾರತದಲ್ಲಿ ಅಂತ ಹಂಗಾಮವೇನು ಆಗಿರ್ಲಿಲ್ಲ,ಆದ್ರೆ ಮೊನ್ನೆ ಮೊನ್ನೆ ಕಾಂಗ್ರೆಸ್ಸಿನ ಪ್ರಧಾನಿ ರಾಹುಲ್ ಗಾಂಧಿ (ಸದ್ಯ! ಭಾರತದ ಪ್ರಧಾನಿ ಅಲ್ಲ! 😉 ) “ಮುಸ್ಲಿಂ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾದಂಥ ಸಂಘಟನೆಗಳಿಗೆ ಭಾರತದ ಕೆಲ ಮುಸ್ಲಿಂ ಸಂಘಟನೆಗಳಿಂದ ಬೆಂಬಲವಿದೆ. ಆದರೆ, ಅವರಿಗಿಂತ ಹಿಂದೂ ಉಗ್ರವಾದಿಗಳಿಂದ ಹೆಚ್ಚು ಆತಂಕವನ್ನು ಭಾರತ ಎದುರಿಸುತ್ತಿದೆ” ಅಂತ ಅಮೆರಿಕಾದ ರಾಜತಾಂತ್ರಿಕನ ಜೊತೆ ಹೇಳ್ಕೊಂಡಿದ್ರು ಅನ್ನೋ ಕೇಬಲ್ ಬಿಡುಗಡೆ ಮಾಡಿದಾಗ ನಂಗೂ ಮೇಲೆ ಹೇಳಿದಂತೆ ಅನ್ನಿಸಿತ್ತು,ಕಾಮನ್ ಸೆನ್ಸ್ ಇರೋ ಭಾರತದ ಬಹುತೇಕರಿಗೆ ರಾಹುಲ್ನ ಹೇಳಿಕೆಯು ಎಡಬಿಡಂಗಿತನದ್ದು ಅನ್ನಿಸಿರಿಬಹ್ದು. ಮತ್ತಷ್ಟು ಓದು 
ಹೊಲಸು ತುಂಬಿದ ರಾಜಕೀಯವೂ….. ಮಹಿಳಾ ರಾಜಕೀಯದ ಹೊಸ ಬದಲಾವಣೆಯೂ…
-ಶಂಶೀರ್, ಬುಡೋಳಿ, ಪತ್ರಕರ್ತ
ನಿಮಗೆ ಇದನ್ನು ಹೇಳಲೇಬೇಕು. ಕರ್ನಾಟಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಇರುವುದು ನಿಮಗೆ ತಿಳಿದಿರಬಹುದು. ಈ ಯೋಜನೆ ಕರ್ನಾಟಕದಲ್ಲಿ ಇನ್ನಷ್ಟೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಗೊಳ್ಳಬೇಕಷ್ಟೇ. ಹೀಗಾಗಿ ಈ ಯೋಜನೆಯ ಯಶಸ್ಸಿನ ಕುರಿತು ಈಗ ಮಾತನಾಡುವುದು ಔಚಿತ್ಯವಲ್ಲ. ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಮಹಿಳೆಯರು ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಹೊಸ ರಾಜಕೀಯದ ಭಾಷ್ಯಕ್ಕೆ ಮುನ್ನುಡಿ ಬರೆದರು. ಕಳೆದ ಚುನಾವಣೆ ಸಂದರ್ಭದಲ್ಲಿ ಕೇರಳದಲ್ಲಿ ಶೇಕಡಾ ೫೦ರಷ್ಟು ಮಹಿಳೆಯರು ಚುನಾವಣಾ ಕಣಕ್ಕಿಳಿದಿದ್ದರು. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ರೈತ ಮಹಿಳೆ, ಟೈಲರಿಂಗ್ ವೃತ್ತಿಯಲ್ಲಿರುವ , ಬೀದಿ ಬದಿ ವ್ಯಾಪಾರ ಮಾಡುವ, ಲೆಕ್ಕಪರಿಶೋಧಕಿಯರ ಜೊತೆಗೆ ಸ್ನಾತಕೋತ್ತರ ಪದಧರೆಯರು ಕೇರಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದವರು. ಇವರಲ್ಲಿ ಹೆಚ್ಚಿನವರು ಕೇರಳದಲ್ಲಿ ಬಹಳ ಯಶಸ್ಸನ್ನು ಗಳಿಸಿಕೊಂಡಿರುವ ಕುಟುಂಬಶ್ರೀ ಯೋಜನೆಯಡಿಯಲ್ಲಿ ಪಳಗಿದವರಾಗಿದ್ದಾರೆ. ವಿವಿಧ ಪಕ್ಷಗಳಲ್ಲಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೇರಳಿ ಮಹಿಳೆಯರು ಹೊಸ ರಾಜಕೀಯದ ಭಾಷ್ಯ ಬರೆಯುವತ್ತ ದಾಪುಗಾಲು ಇಟ್ಟಿದ್ದಾರೆ ಎಂದು ಹೇಳಬಹುದು. ಮತ್ತಷ್ಟು ಓದು 






