ಕೃಷ್ಣಾ ತೀರ್ಪು:100 ಟಿ.ಎಂ.ಸಿ ನೀರು ಸುಮ್ಮನೆ ಬಿಟ್ಟು ಬಿಡುವುದಕ್ಕೆ ಅದೇನು 100 ಬಕೆಟ್ ನೀರಲ್ಲ..!
ಚೇತನ್ ಜೀರಾಳ್
ನಾಲ್ಕು ದಶಕಗಳ ಸುಧೀರ್ಘ ಹೋರಾಟದ ನಂತರ ಕೃಷ್ಣ ನದಿ ನೀರು ಹಂಚಿಕೆಯ ತೀರ್ಪು ಹೊರಬಿದ್ದಿದೆ. ಮೇಲ್ನೋಟಕ್ಕೆ ನಮಗೆ ಸಂಪೂರ್ಣ ನ್ಯಾಯ ದಕ್ಕಿದೆ ಅಂತ ಅನ್ನಿಸಿದರೂ ಸಹ ಕೆಲವು ಪ್ರಮುಖ ವಿಷಯಗಳಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲವೇನೋ ಅನ್ನಿಸುತ್ತದೆ. ಇದುವರೆಗೂ ಮಾಧ್ಯಮಗಳು ಹಾಗೂ ಅಂತರ್ಜಾಲದಲ್ಲಿ ದೊರಕಿರುವ ಮಾಹಿತಿಯ ಪ್ರಕಾರ,ಸ್ಕೀಮ್ ಬಿಯಲ್ಲಿ ಒಟ್ಟು ಲಭ್ಯವಿರುವ 448 ಟಿ.ಎಂ.ಸಿ ನೀರಿನ ಹಂಚಿಕೆಯ ವಿವರಗಳು ಇಂತಿದೆ: ಮಹಾರಾಷ್ಟ್ರಕ್ಕೆ 81 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ, ಕರ್ನಾಟಕಕ್ಕೆ 177 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ ಹಾಗೂ ಆಂಧ್ರ ಪ್ರದೇಶಕ್ಕೆ 190 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ.
ಇದರ ಜೊತೆಗೆ ರಾಜ್ಯದ ದಶಕಗಳ ಬೇಡಿಕೆಯಾಗಿದ್ದ ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು 519 ಮೀಟರ್ ನಿಂದ 524.26 ಮೀಟರ್ ವರೆಗೆ ಏರಿಸಲು ಇದ್ದ ಅಡಚಣೆಯನ್ನು ನಿವಾರಿಸಿ ನ್ಯಾಯಾಧಿಕರಣ ಅವಕಾಶ ನೀಡಿದೆ. ಕೃಷ್ಣ ನದಿಯ ಒಟ್ಟು ನೀರು ಹಂಚಿಕೆಯಲ್ಲಿ ಕರ್ನಾಟಕದ ಪಾಲಿಗೆ 911 ಟಿ.ಎಂ.ಸಿ ನೀರು ಸಿಕ್ಕಿದೆ, ಮಹಾರಾಷ್ಟ್ರದ ಪಾಲಿಗೆ 666 ಟಿ.ಎಂ.ಸಿ ಹಾಗೂ ಆಂಧ್ರ ಪ್ರದೇಶಕ್ಕೆ 1001 ಟಿ.ಎಂ.ಸಿ ನೀರು ಸಿಕ್ಕಿದೆ. ಇದರ ಜೊತೆಗೆ ಕರ್ನಾಟಕ ಪ್ರತಿ ವರ್ಷ ಜೂನ್-ಜುಲೈ ತಿಂಗಳಿನಲ್ಲಿ 8-10 ಟಿ.ಎಂ.ಸಿ ನೀರು ಆಂಧ್ರಕ್ಕೆ ಬಿಡಬೇಕು ಎಂದು ತೀರ್ಪು ನೀಡಿದೆ. ಹಾಗದರೆ ರಾಜ್ಯಕ್ಕೆ ಅನ್ಯಾಯವಾಗಿರುವುದೆಲ್ಲಿ???
ರಾಜ್ಯಕ್ಕೆ ಅನ್ಯಾಯವಾಗಿರುವುದೆಲ್ಲಿ?
ಮೊದಲನೆಯದಾಗಿ ಬಚಾವತ್ ಆಯೋಗ ತನ್ನ ತೀರ್ಪಿನಲ್ಲಿ ಕೃಷ್ಣಾ ನದಿಯ ಕೊಳ್ಳದಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ಕ್ರಮವಾಗಿ 50%, 25% ಹಾಗೂ 25% ಹಂಚಬೇಕು ಎಂದು ತೀರ್ಪು ನೀಡಿತ್ತು. ಆದರೆ ಬಂದಿರುವ ತೀರ್ಪಿನಲ್ಲಿ ಕರ್ನಾಟಕಕ್ಕೆ ಬರಬೇಕಾಗಿದ್ದ 50% ನೀರಿನ ಬದಲು ಸಿಕ್ಕಿರುವುದು ಕೇವಲ 39.5% ನಷ್ಟು ಮಾತ್ರ. ಆಂಧ್ರಕ್ಕೆ ಸಿಗಬೇಕಾಗಿದ್ದ 25% ಬದಲು ಇಂದು ಸಿಕ್ಕಿರುವುದು 42.41% ಹಾಗೂ ಮಹಾರಾಷ್ಟ್ರಕ್ಕೆ ಸಿಗಬೇಕಾಗಿದ್ದ 25% ನಲ್ಲಿ ಸಿಕ್ಕಿರುವುದು ಕೇವಲ 18.08% ಮಾತ್ರ. ಕರ್ನಾಟಕ ತನ್ನ ಪಾಲಿಗೆ ಬರಬೇಕಾಗಿದ್ದ ಸುಮಾರು 100 ಟಿ.ಎಂ.ಸಿ ಯಷ್ಟು ನೀರನ್ನು ಕಳೆದುಕೊಂಡಿದೆ. ಮತ್ತಷ್ಟು ಓದು 




