ವಿಷಯದ ವಿವರಗಳಿಗೆ ದಾಟಿರಿ

ಜನವರಿ 9, 2011

3

ಪ್ರೀತಿಯ (?) ರಾಜಕಾರಣಿಗಳಿಗೆ ೩ ಪ್ರಶ್ನೆ-೧ ಸಲಹೆ

‍ನಿಲುಮೆ ಮೂಲಕ

ಪ್ರಶಾಂತ್ ಯಾಳವಾರಮಠ

ಇಂದಿನ ನಮ್ಮ ರಾಜಕೀಯ ಪರಿಸ್ತಿತಿಯೇನ್ನು ನೋಡಿ ನಮ್ಮ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆಗಳನ್ನು ಕೇಳೋಣ ಅಂತ ಅಂದುಕೊಂಡಿದಿನೀ…

೧. ನಿಮಗೆ ಸಾಮಾನ್ಯರಂತೆ ಬದುಕಲು ಆಗುವುದಿಲ್ಲವೇ?

ಇಂದು ಯಾವುದೇ ಪಕ್ಷ ಅತವಾ ವ್ಯಕ್ತಿಯನ್ನ ತಗೊಳ್ಳಿ ಎಲ್ಲರೂ ದುಡ್ಡು ದುಡ್ಡು ಅಂತಿದ್ದಾರೆ.ಒಬ್ಬ ಸಾಮಾನ್ಯ ವ್ಯಕ್ತಿ ಎಲ್ಲ ಸವಲತ್ತುಗಳನ್ನು ಪಡೆದು, ಮನೆ ಮಟ ಮಾಡಿ, ಮಕ್ಕಳನ್ನ ಒಳ್ಳೆ ಶಾಲೆಗಳಿಗೆ ಸೇರಿಸಿ  ಸಂತೋಷದಿಂದ ಬದುಕಲು ಕೇವಲ ೧ ಕೋಟಿಗಿಂತ [ಬೆಂಗಳೂರಲ್ಲಿ] ಕಡಿಮೆ ದುಡ್ಡು ಸಾಕು.

ಆದರೆ ಇವತ್ತು ರಾಜಕೀಯದಲ್ಲಿರೋ ಎಲ್ಲರೂ [೯೯%] ಕೋಟ್ಯದಿಪತಿಗಳೇ ಇದ್ದೀರಾ… ಆದರು ನಿಮಗೆ ಯಾಕೆ ಇಷ್ಟೊಂದು ಆಸೆ ಯಾರಿಗೋಸ್ಕರ ಇಷ್ಟೆಲ್ಲಾ ಆಸ್ತಿಯನ್ನ ಮಾಡ್ತಾ ಇದ್ದೀರಾ … ನಿಮಗೂ ಗೊತ್ತು ನಮಗೂ ಗೊತ್ತು ಎಲ್ಲರೂ ಹೋಗುವಾಗ ಏನನ್ನು ತೆಗೆದುಕೊಂಡು ಹೋಗೋದಿಲ್ಲ ಅಂತ ಆದರೂ …

೨. ನೀವು ಯಾಕೆ ಆತ್ಮವಂಚಕರಾಗಿ ಬದುಕುತ್ತಾ ಇದ್ದೀರಿ?

ನೀವು ಎಷ್ಟೊಂದು ತಪ್ಪುಗಳನ್ನ ಮಾಡಿದ್ದಿರೀ, ಮಾಡುತ್ತ ಇದ್ದೀರಿ ಅಂತ ನಮಗಿಂತ ನಿಮಗೆ ಚೆನ್ನಾಗಿ ಗೊತ್ತು ಆದರು ನೀವು ಏನು ಮಾಡಿಯೇ ಇಲ್ಲ ಅಂತೀರಾ.

ನೀವು ಮಾಡಿದ್ದೂ ತಪ್ಪು ಅಂತ ಒಬ್ಬ ಸಾಮಾನ್ಯನು ಹೇಳುತ್ತಾನೆ… ಲಂಚ ತೊಗೊತಿರಿ, ಧಮಕಿ ಹಾಕಸ್ತಿರಿ, ಸರಕಾರಿ ದುಡ್ಡನ್ನ/ಜಾಗವನ್ನ/ವಸ್ತುಗಳನ್ನ/ಮೋಟಾರುಗಳನ್ನ ಗುಳುಂ ಅನಸ್ತಿರಿ, ಗುಂಡಾಗಳನ್ನ ಸಾಕುತ್ತಿರೀ …ಅಬ್ಬಾ ಒಂದಾ ಎರಡಾ …. ಇಷ್ಟೆಲ್ಲಾ ಮಾಡಿದ್ದು ನಿಮಗೂ ಗೊತ್ತು ಆದರು ಯಾಕೆ ನೀವು ಆತ್ಮವಂಚಕರಾಗಿ, ಸಭ್ಯರತರ ನಟಸ್ತೀರಿ ಅಥವಾ ನಿಮಗೆ ಆತ್ಮ ಅನ್ನೋದೇ ಇಲ್ಲವಾ ಹೇಗೆ?

೩. ನಿಮ್ಮ ನಡವಳಿಕೆ ಅಧಿಕಾರದಲ್ಲಿದ್ದಾಗ ಬೇರೆ ಇಲ್ಲದಿದ್ದಾಗ ಬೇರೆ ಯಾಕೆ ?

ನಾನು ಎಷ್ಟೊಂದು ರಾಜಕೀಯ ವ್ಯಕ್ತಿಗಳ ಬಗೆಗಿನ ವಿವರಗಳನ್ನ ನೋಡಿದೆ ಎಲ್ಲರೂ ಎಷ್ಟೊಂದು ಒಳ್ಳೆಯವರು,ಎಷ್ಟೊಂದು ಹೋರಾಟಗಳನ್ನ ಮಾಡಿದ್ದಾರೆ, ಒಳ್ಳೊಳ್ಳೆಯ ಮಾತುಗಳನ್ನ ಆಡಿದ್ದಾರೆ, ಬಡಬಗ್ಗರಿಗೆ ಸಹಾಯ ಮಾಡಿದ್ದಾರೆ ಆದರೆ ಈ  ಎಲ್ಲವನ್ನು ಅವರು ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದಾರೆ. ಅಂದರೆ ಇವೆಲ್ಲ ನೀವು ಅಧಿಕಾರ ಹಿಡಿಯಲು ಮಾಡಿರುವ/ಆಡಿರುವ ನಾಟಕಗಳಾ? ಏಕೆಂದರೆ ಅದೇ ವ್ಯಕ್ತಿಗಳು ಅಧಿಕಾರ ಹಿಡಿದಮೇಲೆ ಎಷ್ಟೊಂದು ಭ್ರಷ್ಟಾಚಾರ, ಅನ್ಯಾಯಗಳನ್ನ ಮಾಡಿದ್ದಾರೆ ಅಂದರೆ ಅವುಗಳಿಗೆ ಲೆಕ್ಕವಿಲ್ಲ. ಇದು ಯಾಕೆ ಹೀಗೆ, ಅಧಿಕಾರದ ಮುಂದೆ ಒಳ್ಳೆಯತನ ನಿಲ್ಲೋದಿಲ್ಲವಾ? ಇದು ನಿಜ ಅಂದರೆ ನೀವು ಅಧಿಕಾರದಲ್ಲಿ ಇರೋದೇ ಬೇಡಾ.

ಸಲಹೆ :

ದಯವಿಟ್ಟು ನೀವು ದುಡ್ಡುಮಾಡೋದಕ್ಕೆ ರಾಜಕೀಯ ಸೇರಬೇಡಿ … ಯಾಕಂದರೆ ದುಡ್ಡು ಮಾಡೋದಕ್ಕೆ ನಾನಾ ದಾರಿಗಳಿವೆ.ನಿಮ್ಮ ಮಕ್ಕಳಿಗೆ ಚೆನ್ನಾಗಿ ಜೀವನ ಮಾಡಲು ಕಲಿಸೋ ಶಕ್ತಿ ಇಲ್ಲಾ ಅಂದರೆ ಮಕ್ಕಳನ್ನ ಹಡಿಯಬೇಡಿ ಯಾಕಂದರೆ ನೀವು ಮಾಡೋ ಎಲ್ಲ ತಪ್ಪುಗಳು ನಿಮ್ಮ ಮಕ್ಕಳಿಗೊಸ್ಕರನೆ.ಇನ್ನು ಉಳಿದ ಸಲಹೆಗಳನ್ನ ಈ ಕೆಳಗಿನ ಗೆಳೆಯರು ಕೊಡ್ತಾರೆ ಕೇಳಿ 🙂

(ಚಿತ್ರ ಕೃಪೆ : connect.in.com)
Read more from ರಾಜಕೀಯ
3 ಟಿಪ್ಪಣಿಗಳು Post a comment
  1. Ananth's avatar
    Ananth
    ಜನ 11 2011

    ನೀವು ಕೇಳಿರುವ ಪ್ರಶ್ನೆಗಳು ಮೊದಲು ರಾಜಕೀಯ ಪುಡಾರಿಗಳನ್ನು ತಲುಪತ್ತೇವಯೇ? ಎಂಬ ಬಗ್ಗೆ ವಿಮರ್ಶೆ ಮಾಡಬೇಕಾದ ಹಂತಕ್ಕೆ ನಾವು ಇಂದು ತಲುಪಿದ್ದೇವೆ. ಹಾಗೂ ಇಂದು ಯಾವುದೇ ರಾಜಕೀಯ ಪಕ್ಷಗಳಿಗೆ ಸಿದ್ದಾಂತದ ಮೇಲೆ ರಾಜಕಾರಣ ಮಾಡಬೇಕು ಅಂತ ಇಲ್ಲ ಆದ್ದರಿಂದ ಗಾಳಿ ಬಂದಾಗ ತೂರಿ ಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ೮೦ ದಶಕದಲ್ಲಿ ರಾಜಕಾರಣಿಗಳು ಹಣದ ಬಗ್ಗೆ ವ್ಯಾಮೋಹ ಇದ್ದರು ಜನರಿಗೆ ಸೇವಾ ಮನೋಭಾವನೆಯಿಂದ ತಮ್ಮ ಕೈಯಲ್ಲಿ ಅದಷ್ಟು ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಇಂದು ರಾಜಕೀಯ ಪಕ್ಷಗಳಲ್ಲಿ ಬಿ ಫಾರಂ ನೀಡಬೇಕಾದರೆ ಇಂತಿಷ್ಟು ಅಭ್ಯರ್ಥಿ ನೀಡಬೇಕು ಅಂತ ಇರುವಾಗ ಇವರು ಜನಸೇವೆ ಮಾಡಲು ಬರುತ್ತಾರೆಂದು ಊಹಿಸುವುದು ಮಾತ್ರ ತಪ್ಪು. ನೈತಿಕತೆ ಇಲ್ಲದ ಇಂದಿನ ರಾಜಕೀಯ ದುಡ್ಡ ಒಂದನ್ನು ಬಿಟ್ಟು ಇನ್ನಾವುದರ ಮೇಲೆ ನಿಲ್ಲುತ್ತದೆ ಎಂಬುದೆ ಎಲ್ಲರ ಪ್ರಶ್ನೆಯಾಗಿದೆ.

    ಅನಂತಮುದಗಂದೂರು.

    ಉತ್ತರ
  2. Aravind's avatar
    ಜನ 11 2011

    ರಾಮನ ರಾಜ್ಯದ ಕನಸು ತೋರಿ,
    ಜನತೆಯ ಕೋಮುಗಲಭೆಗೆ ತೂರಿ,
    ಕೀಟಲೆಯ ಮಾಡುತ,
    ಯಡವಟ್ಟು ಮಾಡುವುದೇ ರಾಜಕೀಯ

    ಅರವಿಂದ್

    ಉತ್ತರ
  3. ಹೌದು ಅನಂತ್ ! ಇಂದಿನ ನಮ್ಮ ರಾಜಕೀಯ ನಾಯಕರನ್ನ, ಅವರ ವ್ಯಕ್ತಿತ್ವಗಳನ್ನ, ಅವರು ಮಾಡೋ ಕೆಲಸಗಳನ್ನ ನೋಡಿದರೆ, ನಾನು ನಿಸ್ಸಹಾಕನಗಿ ನಿಂತಂತೆ ಭಾಸವಾಗುತ್ತೆ ! 😦
    ಇದನ್ನು ಸರಿಪಡಿಸೋದು ಹೇಗೆ ಎಂದು ವಿಚಾರ ಮಾಡಿದರೆ ದಾರಿ ಕಾಣದಂತೆ ಅನಿಸುತ್ತೆ. ಜನರಿಗೆ ಒಳ್ಳೆಯವರನ್ನ ಆಯ್ಕೆ ಮಾಡಿ ಅಂತ ಹೇಳಿದರೆ ಯಾರು ಒಳ್ಳೆಯರು ???? ಪ್ರಶ್ನೆ ಬರುತ್ತೆ.
    ಎ ವಿಚಾರದಲ್ಲಿ ನಾನು/ ನೀವು ನಿಸ್ಸಹಾಯಕರೆ!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments