ಕರ್ನಾಟಕವೂ ಸಹ ಭಾರತದ ಭಾಗವಾಗಿರಲಿಲ್ಲ!
– ರಾಕೇಶ್ ಶೆಟ್ಟಿ
ಅಲ್ಲಿ ರಾಷ್ಟ್ರ ಧ್ವಜ ಹಾರುತ್ತದೋ ಇಲ್ವೋ? ಹಾರಿದರೆ ಏನಾಗುತ್ತೆ? ಅನ್ನೋದಕ್ಕೆಲ್ಲ ಬಹುಷಃ ಜನವರಿ ೨೬ರ ಇಂದಿನ ದಿನ ಉತ್ತರ ಸಿಗಲಿದೆ.Fine ನಾನೀಗ ಅರುಂಧತಿ ರಾಯ್ ಅವರ ಹೇಳಿಕೆಯ ಸುತ್ತ ಮಾತಾಡ ಹೊರಟೆ.
‘ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ’ ಅಂತೇಳಿದ ಸುದ್ದಿ ಜೀವಿ ಅರುಂಧತಿ ರಾಯ್ ಅವರಿಗೆ ‘ಕರ್ನಾಟಕವೂ ಸಹ ಭಾರತದ ಭಾಗವಾಗಿರಲಿಲ್ಲ’, ಹಾಗೆ ಇನ್ನ ಸ್ವಲ್ಪ ಕೆದಕುತ್ತ ಹಿಂದೆ ಹೋದರೆ ಖುದ್ದು ‘ಭಾರತವೂ ಸಹ ಭಾರತದ ಭಾಗವಾಗಿರಲಿಲ್ಲ’ ಅನ್ನೋದು ಗೊತ್ತಿಲ್ಲ ಅನ್ನಿಸುತ್ತೆ.
ಅಸಲಿಗೆ ಉಪಖಂಡವನ್ನ ಆಡಳಿತದ ಕಾರಣಕ್ಕಾಗಿ ‘ಭಾರತ’ ಅಂತ ಹಿಡಿದಿಟ್ಟವರು ಬ್ರಿಟಿಷರು.೪೭ರಲ್ಲಿ ಅವರು ಸ್ವಾತಂತ್ರ್ಯ ಕೊಟ್ಟು ಹೊರಡುವಾಗ ಇಲ್ಲಿ ೫೫೦ಕ್ಕು ಹೆಚ್ಚು ಸಣ್ಣ ಪುಟ್ಟ ರಾಜ ಸಂಸ್ಥಾನಗಳಿದ್ದವು. ಅವೆಲ್ಲ ಪಟೇಲರ ಮಂತ್ರದಂಡಕ್ಕೆ ತಲೆಬಾಗಿ ಭಾರತದ ಒಕ್ಕೊಟವನ್ನ ಸೇರಿಕೊಂಡವು.





